ಇತ್ತೀಚೆಗೆ ತೆರೆಕಂಡು ಗೆದ್ದ ಈ 5 ಕನ್ನಡ ಚಿತ್ರಗಳನ್ನು ಯೂಟ್ಯೂಬ್‌ನಲ್ಲಿ ನೋಡಿ

ಕಾಲ ಬದಲಾದಂತೆ ಸಿನಿಮಾ ಮೇಕಿಂಗ್ ಶೈಲಿ ಬದಲಾಗಿದೆ. ಅಷ್ಟೇ ಅಲ್ಲ ಸಿನಿಮಾವನ್ನು ನೋಡುವ ಜಾಗವೂ ಬದಲಾಗುತ್ತಿದೆ. ಮೊದಲೆಲ್ಲಾ ಚಿತ್ರಮಂದಿರಕ್ಕೆ ಹೋಗಿ ಸಿನಿಮಾಗಳನ್ನು ನೋಡಬೇಕಿತ್ತು. ಬಳಿಕ ಟಿವಿ ಬಂದು ಮನೆಯಲ್ಲೇ ಕೂತು ಸಿನಿಮಾ ನೋಡುವಂತಾಯಿತು. ಈಗ ಓಟಿಟಿ ಪ್ಲಾಟ್‌ಫಾರ್ಮ್‌ಗಳ ಟ್ರೆಂಡ್ ನಡೀತಿದೆ.

ಆನ್‌ಲೈನ್‌ನಲ್ಲಿ ಸಿನಿಮಾ ನೋಡಲು ಸಾಕಷ್ಟು ವೇದಿಕೆಗಳಿವೆ. ಅದರಲ್ಲಿ ಯೂಟ್ಯೂಬ್ ಕೂಡ ಒಂದು. ಯೂಟ್ಯೂಬ್‌ನಲ್ಲಿ ಬರೀ ಹಾಡು, ಚಿತ್ರದ ತುಣುಕುಗಳು ಮಾತ್ರವಲ್ಲ ಉಚಿತವಾಗಿ ಇಡೀ ಸಿನಿಮಾಗಳನ್ನು ನೋಡುವ ಅವಕಾಶವಿದೆ. ಸಾಮಾನ್ಯವಾಗಿ ಹಳೇ ಸಿನಿಮಾಗಳನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗುತ್ತಿದೆ. ಆದರೆ ಇತ್ತೀಚೆಗೆ ಹೊಸ ಹೊಸ ಸಿನಿಮಾಗಳು ಎಂಟ್ರಿ ಕೊಡುತ್ತಿವೆ.

Top 5 latest kannada hit movies on Youtube right now

ಓಟಿಟಿಯಲ್ಲಿ ಚಂದಾದಾರರು ಮಾತ್ರ ಸಿನಿಮಾ ವೀಕ್ಷಿಸಲು ಅವಕಾಶವಿದೆ. ಆದರೆ ಯೂಟ್ಯೂಬ್‌ನಲ್ಲಿ ಯಾವುದೇ ಹಣವಿಲ್ಲದೇ ಉಚಿತವಾಗಿ ಸಿನಿಮಾಗಳನ್ನು ನೋಡಬಹುದು. ಇತ್ತೀಚೆಗೆ ಕನ್ನಡದಲ್ಲಿ ಪ್ರೇಕ್ಷಕರ ಮನಗೆದ್ದ ಸಿನಿಮಾಗಳು ಯೂಟ್ಯೂಬ್‌ಗೆ ಅಪ್‌ಲೋಡ್‌ ಆಗಿದೆ. ಅಂತಹ 5 ಹೊಸ ಸಿನಿಮಾಗಳ ಬಗ್ಗೆ ಮುಂದೆ ಓದಿ.

1. ಧೂಮಂ

ಫಹಾದ್ ಫಾಸಿಲ್ ನಟನೆಯ 'ಧೂಮಂ' ಚಿತ್ರವನ್ನು ಪವನ್ ಕುಮಾರ್ ಕಟ್ಟಿಕೊಟ್ಟಿದ್ದರು. ಹೊಂಬಾಳೆ ಸಂಸ್ಥೆ ಹಣ ಹೂಡಿತ್ತು. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಸೋತಿತ್ತು. ಆದರೂ ಕೆಲವರಿಗೆ ಸಿನಿಮಾ ಇಷ್ಟವಾಗಿತ್ತು. ಮಲಯಾಳಂನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬಂದಿತ್ತು. ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್‌ ಚಾನಲ್‌ನಲ್ಲೇ ಕಂಪ್ಲೀಟ್ ಸಿನಿಮಾ ನೋಡಬಹುದು.

2. ಟಗರು ಪಲ್ಯ

ಡಾಲಿ ಧನಂಜಯ್ ನಿರ್ಮಾಣದ 'ಟಗರು ಪಲ್ಯ' ಸಿನಿಮಾ ಕಳೆದ ವರ್ಷ ತೆರೆಗೆ ಬಂದಿತ್ತು. ನಾಗಭೂಷಣ್, ರಂಗಾಯಣ ರಘು ಹಾಗೂ ಅಮೃತಾ ಪ್ರೇಮ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಮನೆ ದೇವರಿಗೆ ಕುರಿಯನ್ನು ಬಲಿ ಕೊಡುವ ಘಟನೆಯ ಸುತ್ತಾ ಸುತ್ತುವ ಕಥೆ ಚಿತ್ರದಲ್ಲಿತ್ತು. ತಕ್ಕ ಮಟ್ಟಿಗೆ ಗೆದ್ದ ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗಿತ್ತು. ಇದೀಗ ಡಾಲಿ ಪಿಕ್ಚರ್ಸ್ ಯೂಟ್ಯೂಬ್‌ ಚಾನಲ್‌ನಲ್ಲಿ ಲಭ್ಯವಿದೆ.

Top 5 latest kannada hit movies on Youtube right now

3. ಹೊಂದಿಸಿ ಬರೆಯಿರಿ

ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ 'ಹೊಂದಿಸಿ ಬರೆಯಿರಿ' ಸಿನಿಮಾ ಕೂಡ ಪ್ರೇಕ್ಷಕರ ಮನಗೆದ್ದಿತ್ತು. ಈ ಚಿತ್ರ ಕೂಡ ಯೂಟ್ಯೂಬ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಪ್ರವೀಣ್ ತೇಜ್, ನವೀಶ್ ಶಂಕರ್, ಐಶಾನಿ ಶೆಟ್ಟಿ ಚಿತ್ರದ ತಾರಾಗಣದಲ್ಲಿದ್ದಾರೆ. ಸಂಡೇ ಸಿನಿಮಾಸ್ ಚಾನಲ್‌ನಲ್ಲಿ ನೀವು ನೋಡಬಹುದು.

4. ಡೇರ್ ಡೆವಿಲ್ ಮುಸ್ತಾಫಾ

ಶಶಾಂಕ ಸೋಗಾಲ್ ನಿರ್ದೇಶನದ 'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾ ಕೂಡ ಭರ್ಜರಿ ಯಶಸ್ಸು ಕಂಡಿತ್ತು. ಹೊಸ ಪ್ರತಿಭೆಗಳೇ ಸೇರಿ ಮಾಡಿದ್ದ ಚಿತ್ರವನ್ನು ಸಿಎಂ ಸಿದ್ದರಾಮಯ್ಯ ಸಹ ಮೆಚ್ಚಿಕೊಂಡಿದ್ದರು. ಪೂರ್ಣಚಂದ್ರ ತೇಜಸ್ವಿ ಸಣ್ಣ ಕಥೆ ಆಧರಿಸಿ ಸಿನಿಮಾ ಮೂಡಿ ಬಂದಿತ್ತು. ಪೂರ್ಣಚಂದ್ರ ತೇಜಸ್ವಿ ಅವರ ಓದುಗರೇ ಸೇರಿ ಚಿತ್ರ ನಿರ್ಮಿಸಿದ್ದರು. ಧನಂಜಯ್ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದರು. ಇದೀಗ ಡಾಲಿ ಪಿಕ್ಚರ್ಸ್ ಯೂಟ್ಯೂಬ್‌ ಚಾನಲ್‌ನಲ್ಲೇ ಸಿನಿಮಾ ನೋಡಬಹುದು.

5. ಓಲ್ಡ್ ಮಾಂಕ್

ಶ್ರೀನಿ ನಿರ್ದೇಶಿಸಿ ನಟಿಸಿರುವ ಕಾಮಿಡಿ ಎಂಟರ್‌ಟ್ರೈನರ್ 'ಓಲ್ಡ್‌ ಮಾಂಕ್' ಸಿನಿಮಾ ಕೂಡ ಓಟಿಟಿಯಲ್ಲಿದೆ. ಓಟಿಟಿ ಸಂಸ್ಥೆಗಳು ಇತ್ತೀಚೆಗೆ ಕನ್ನಡ ಸಿನಿಮಾಗಳನ್ನು ಕೊಳ್ಳಲು ಹಿಂದು ಮುಂದು ನೋಡುತ್ತಿವೆ. ಇಂತಹ ಸಮಯದಲ್ಲಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡುವುದು ಹೊಸ ಪ್ರತಿಭೆಗಳಿಗೆ ಉತ್ತಮ ಮಾರ್ಗ ಎನ್ನಲಾಗ್ತಿದೆ.

More from Filmibeat

English summary
Including Daredevil Musthafa latest kannada Movies To Watch For Free On YouTube;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X