ಹಿಂದಿಯಲ್ಲಿ ದೊಡ್ಡ ಓಪನಿಂಗ್ ಕಂಡ ಸೌತ್ ಇಂಡಿಯನ್ ಸಿನಿಮಾಗಳ ಪಟ್ಟಿ: ಕೆಜಿಎಫ್‌ಗೆ ಎಷ್ಟನೇ ಸ್ಥಾನ?
ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಟ ಪ್ರಭಾಸ್ ಕಾಂಬಿನೇಷನ್‌ನ 'ಸಲಾರ್: ಭಾಗ 1 - ಕದನ ವಿರಾಮ'ವು ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಮೊದಲ ದಿನವೇ ಸಕತ್ ಕಮಾಯಿ ಮಾಡಿದೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ 'ಸಲಾರ್' ಹಿಂದಿಯಲ್ಲಿಯೂ ದೊಡ್ಡ ಓಪನಿಂಗ್ ಪಡೆದಿದೆ.
ಈ ಹಿಂದೆಯೂ ಹಿಂದಿಗೆ ಡಬ್ ಆಗಿರುವ ಹಲವು ಸಿನಿಮಾಗಳು ಒಳ್ಳೆ ಓಮನಿಂಗ್ ಪಡೆದುಕೊಂಡಿವೆ ಅದರ ಸಾಲಿಗೆ ಇದು ಸೇರಿಕೊಂಡಿದೆ. Sacnilk.com ಪ್ರಕಾರ, ಹಿಂದಿಯಲ್ಲಿ ಅತಿದೊಡ್ಡ ಓಪನಿಂಗ್ ಪಡೆದ ಟಾಪ್ ಐದು ಸಿನಿಮಾಗಳ ಪಟ್ಟಿ ಇಲ್ಲಿದೆ. ಸಲಾರ್ ಚಿತ್ರದ ಮೂಲಕ ಪ್ರಭಾಸ್ ಹೊಸ ದಾಖಲೆ ಕೂಡ ಬರೆದಿದ್ದಾರೆ.

ಹಿಂದಿಯಲ್ಲಿ ಅತಿ ದೊಡ್ಡ ಓಪನಿಂಗ್ಸ್ ಪಡೆದ ಟಾಪ್ 5 ಸೌತ್ ಸಿನಿಮಾಗಳು
ಯಶ್ ನಟನೆಯ ಕೆಜಿಎಫ್ - ಅಧ್ಯಾಯ 2: ಪ್ರಶಾಂತ್ ನೀಲ್ ಬರೆದು ನಿರ್ದೇಶಿಸಿದ ಮತ್ತು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ 2022 ರ ಕನ್ನಡ ಸಿನಿಮಾ ಮೊದಲ ಸ್ಥಾನದಲ್ಲಿದೆ. ಇದು 2018 ರ KGF ಚಿತ್ರದ ಸೀಕ್ವೇಲ್ ಆಗಿತ್ತು. ಈ ಚಿತ್ರದಲ್ಲಿ ಯಶ್ ನಾಯಕರಾಗಿದ್ದರು. ಬಾಲಿವುಡ್ ನಟರಾದ ಸಂಜಯ್ ದತ್ ಮತ್ತು ರವೀನಾ ಟಂಡನ್ ಕೂಡ ನಟಿಸಿದ್ದರು. ಈ ಸಿನಿಮಾ ಹಿಂದಿಯಲ್ಲಿ ಮೊದಲ ದಿನವೇ 53.95 ಕೋಟಿ ರೂಪಾಯಿ ಗಳಿಸಿತ್ತು.
ಬಾಹುಬಲಿ 2: ದಿ ಕನ್‌ಕ್ಲೂಷನ್: 2017 ರ ತೆಲುಗು ಸಿನಿಮಾ ಬಾಹುಬಲಿ 2: ದಿ ಕನ್‌ಕ್ಲೂಷನ್‌ಗೆ ಎಸ್‌ಎಸ್ ರಾಜಮೌಳಿ ಆಕ್ಷನ್ ಕಟ್ ಹೇಳಿದ್ದಾರೆ. ಇದರಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣ, ಸತ್ಯರಾಜ್, ನಾಸರ್ ಮತ್ತು ಸುಬ್ಬರಾಜು ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಬಾಹುಬಲಿ: ದಿ ಬಿಗಿನಿಂಗ್ ಮುಂದುವರಿದ ಭಾಗವಾಗಿದೆ. ಇದು ಹಿಂದಿಯಲ್ಲಿ ಮೊದಲ ದಿನ 41 ಕೋಟಿ ಬಾಚಿಕೊಂಡಿತ್ತು.

2.0: ಎಸ್ ಶಂಕರ್ ನಿರ್ದೇಶನದ 2018 ರ ತಮಿಳು ಸೈನ್ಸ್-ಫ್ಯಾಂಟಸಿ ಆಕ್ಷನ್ ಚಿತ್ರ 2.0 ಮೂರನೇ ಸ್ಥಾನದಲ್ಲಿದೆ. ಎಂಥಿರಾನ್ ಚಲನಚಿತ್ರ ಸರಣಿಯ ಎರಡನೇ ಕಂತಾಗಿ, 2.0 ಎಂಥಿರನ್ (2010) ಬಂದಿತ್ತು. ಇದರಲ್ಲಿ ವಸೀಗರನ್, ಚಿಟ್ಟಿ ದಿ ರೋಬೋಟ್ ಮತ್ತು ಕುಟ್ಟಿಯಾಗಿ ತ್ರಿಪಾತ್ರದಲ್ಲಿ ರಜನಿಕಾಂತ್, ಪಕ್ಷಿ ರಾಜನ್ ಆಗಿ ಅಕ್ಷಯ್ ಕುಮಾರ್ ಜೊತೆಗೆ ಮತ್ತು ನೀಲಾ ಪಾತ್ರದಲ್ಲಿ ಆಮಿ ಜಾಕ್ಸನ್ ನಟಿಸಿದ್ದರು. ಹಿಂದಿಯಲ್ಲಿ ಫಸ್ಟ್ ಡೇ 20.25 ಕೋಟಿ ಗಳಿಸಿತ್ತು.
ಆರ್‌ಆರ್‌ಆರ್: ಎಸ್‌ಎಸ್ ರಾಜಮೌಳಿ ನಿರ್ದೇಶನದ 2022 ರ ತೆಲುಗು ಸಿನಿಮಾ ಆರ್‌ಆರ್‌ಆರ್ (RRR) ಚಿತ್ರವು 4 ನೇ ಸ್ಥಾನದಲ್ಲಿದೆ. ಚಿತ್ರದಲ್ಲಿ ಜೂನಿಯರ್ ಎನ್ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್, ಶ್ರಿಯಾ ಸರಣ್, ಸಮುದ್ರಕನಿ ನಟಿಸಿದ್ದಾರೆ. ಈ ಸಿನಿಮಾ ಮೊದಲ ದಿನ 20.07 ಕೋಟಿ ಬಾಚಿಕೊಂಡಿತ್ತು.
ಸಲಾರ್: ಭಾಗ 1 - ಕದನ ವಿರಾಮ: ಪ್ರಶಾಂತ್ ನೀಲ್ ಬರೆದು ನಿರ್ದೇಶಿಸಿರುವ ತೆಲುಗು ಆಕ್ಷನ್ ಚಲನಚಿತ್ರದಲ್ಲಿ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ. ಇದರಲ್ಲಿ ಶ್ರುತಿ ಹಾಸನ್, ಜಗಪತಿ ಬಾಬು, ಬಾಬಿ ಸಿಂಹ, ಟಿನ್ನು ಆನಂದ್, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮತ್ತು ರಾಮಚಂದ್ರರಾಜು ಇದ್ದಾರೆ. ಸಲಾರ್ ಹಿಂದಿಯಲ್ಲಿ 15.75 ಕೋಟಿ ಗಳಿಸಿ ಉತ್ತಮ ಓಪನಿಂಗ್ ಪಡೆದಿದೆ.


Click it and Unblock the Notifications










