For Quick Alerts
  ALLOW NOTIFICATIONS  
  For Daily Alerts

  ಅಬ್ಬಬ್ಬಾ! ಬಾಲಿವುಡ್ ಸ್ಟಾರ್ಸ್ ಬಾಡಿಗಾರ್ಡ್ಸ್ ಸಂಬಳ ಕೋಟಿ ಕೋಟಿ, ಯಾರು ಹೆಚ್ಚು?

  |

  ಸಿನಿಮಾ ಸ್ಟಾರ್ ಗಳು ಮನೆಯಿಂದ ಹೊರಗೆ ಬಂದರೆ, ನೂರಾರೂ ಜನರು ಮುತ್ತಿಕೊಳ್ಳುತ್ತಾರೆ. ತೆರೆ ಮೇಲೆ ನೋಡುತ್ತಿದ್ದ ಸ್ಟಾರ್ ಗಳು ರೋಡ್ ನಲ್ಲಿ ಸಿಕ್ಕರೆ ಜನ ಸುಮ್ಮನಿರುತ್ತಾರೆಯೇ. ಸರ್ ಒಂದು ಸೆಲ್ಫಿ... ಮೇಡಮ್ ಒಂದು ಫೋಟೋ...ಹೀಗೆ ಪೀಡಿಸುತ್ತಾರೆ.

  ಒಬ್ಬರು ಇಬ್ಬರಾದರೆ ಪರವಾಗಿಲ್ಲ. ನೂರಾರು ಜನರು ಈ ರೀತಿ ಹೇಳಿದರೆ.. ಅಡ್ಡ ನಿಂತರೆ... ಸ್ಟಾರ್ ಗಳು ಏನು ಮಾಡಬೇಕು. ಹೀಗಾಗಿ ಸ್ಟಾರ್ ಗಳು ತಮ್ಮ ರಕ್ಷಣೆಗಾಗಿ ಬಾಡಿಗಾರ್ಡ್ಸ್ ಗಳನ್ನು ನೇಮಕ ಮಾಡಿಕೊಳ್ಳುತ್ತಾರೆ. ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋಗಬೇಕು ಅಂದರೂ, ಬಾಡಿಗಾರ್ಡ್ಸ್ ಗಳು ಅವರ ಜೊತೆಗೆ ಇರುತ್ತಾರೆ.

  ಪ್ರಶಸ್ತಿಗಳ ಬಗ್ಗೆ ಅಮೀರ್ ಖಾನ್ ಬೇಸರಗೊಳ್ಳಲು ಈ ಘಟನೆಯೇ ಕಾರಣ!ಪ್ರಶಸ್ತಿಗಳ ಬಗ್ಗೆ ಅಮೀರ್ ಖಾನ್ ಬೇಸರಗೊಳ್ಳಲು ಈ ಘಟನೆಯೇ ಕಾರಣ!

  ಗಂಟೆ ಎಷ್ಟಾಯ್ತು ಎಂದು ನೋಡದೆ... ಯಾವಾಗಲೂ ಸ್ಟಾರ್ ಗಳ ಜೊತೆಗೆ, ಅವರ ನೆರಳಿನ ಹಾಗೆ ನಿಂತು ಬಾಡಿಗಾರ್ಡ್ಸ್ ಅವರ ರಕ್ಷಣೆ ಮಾಡುತ್ತಾರೆ. ಇಂತಹ ಬಾಡಿಗಾರ್ಡ್ಸ್ ಗಳಿಗೆ ಸಿಗುವ ಸಂಬಳ ಕೇಳಿದರೆ ನಿಜಕ್ಕೂ ಅಚ್ಚರಿ ಆಗುತ್ತದೆ. ಬಾಲಿವುಡ್ ಸ್ಟಾರ್ ಗಳು ತಮ್ಮ ಬಾಡಿಗಾರ್ಡ್ಸ್ ಗಳಿಗೆ ಕೋಟಿ ಕೋಟಿ ಹಣವನ್ನು ಸಂಭಾವನೆಯಾಗಿ ನೀಡುತ್ತಾರೆ...

  ದೀಪಿಕಾ ಬಾಡಿಗಾಡ್ ಸಂಬಳ 80 ಲಕ್ಷ

  ದೀಪಿಕಾ ಬಾಡಿಗಾಡ್ ಸಂಬಳ 80 ಲಕ್ಷ

  ಬಾಲಿವುಡ್ ನಂಬರ್ ಒನ್ ಹೀರೋಯಿನ್ ದೀಪಿಕಾ ಪಡುಕೋಣೆ. ದೀಪಿಕಾ ಜೊತೆಗೆ ಬಾಡಿಗಾಡ್ ಆಗಿ ಕೆಲಸ ಮಾಡುತ್ತಿರುವವರ ಹೆಸರು ಜಲಾಲ್. ಜಲಾಲ್ ವರ್ಷಕ್ಕೆ 80 ಲಕ್ಷ ರೂಪಾಯಿ ಪಡೆಯುತ್ತಾರೆ. ಅಂದರೆ, ಅವರ ತಿಂಗಳ ಸಂಬಳ 6 ಲಕ್ಷದ 66 ಸಾವಿರ ರೂಪಾಯಿ ಇದೆ. ಜಲಾಲ್ ರನ್ನು ದೀಪಿಕಾ ಸಹೋದರನ ರೀತಿ ನೋಡುತ್ತಾರೆ. ರಕ್ಷಾ ಬಂಧನದ ದಿನ ಅವರಿಗೆ ರಾಕಿ ಕಟ್ಟಿದ್ದರು.

  ಯುವರಾಜ್ ಗೆ ಅಮೀರ್ ನೀಡುವ ಸಂಬಳ 2 ಕೋಟಿ

  ಯುವರಾಜ್ ಗೆ ಅಮೀರ್ ನೀಡುವ ಸಂಬಳ 2 ಕೋಟಿ

  ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ ಅಮೀರ್ ಖಾನ್ ಯುವರಾಜ್ ಎಂಬ ಬಾಡಿಗಾಡ್ ರನ್ನು ನೇಮಕ ಮಾಡಿಕೊಂಡಿದ್ದಾರೆ. ಯುವರಾಜ್ ತಿಂಗಳಿಗೆ 16 ಲಕ್ಷ ಸಂಬಳವಾಗಿ ಪಡೆಯುತ್ತಾರೆ. ಅಂದರೆ, ವರ್ಷಕ್ಕೆ ಬರೋಬ್ಬರಿ 2 ಕೋಟಿ ಹಣ ನೀಡುತ್ತಾರೆ. ಈ ಹಿಂದೆ ರೋನಿತ್ ರಾಯ್ ಎನ್ನುವವರು ಅಮೀರ್ ಜೊತೆಗೆ ಬಾಡಿಗಾಡ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಬಳಿಕ ಅವರು ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ನಟಿಸಿದರು.

  ಈ 4 ಸ್ಟಾರ್ ಗಳು ನ್ಯಾಷನಲ್ ಲೆವೆಲ್ ಗೆ ಹೋಗಲು ಈ 4 ಸಿನಿಮಾಗಳೆ ಕಾರಣಈ 4 ಸ್ಟಾರ್ ಗಳು ನ್ಯಾಷನಲ್ ಲೆವೆಲ್ ಗೆ ಹೋಗಲು ಈ 4 ಸಿನಿಮಾಗಳೆ ಕಾರಣ

  ಸಲ್ಮಾನ್ ಶೇರಾ ಸಂಬಳ 2 ಕೋಟಿ

  ಸಲ್ಮಾನ್ ಶೇರಾ ಸಂಬಳ 2 ಕೋಟಿ

  ಬಿಗ್ ಬಾಸ್ ಸಲ್ಮಾನ್ ಖಾನ್ ಬಾಡಿಗಾಡ್ ಹೆಸರು ಶೇರಾ. ಶೇರಾಗೆ ವರ್ಷಕ್ಕೆ ಸಲ್ಮಾನ್ 2 ಕೋಟಿ ಸಂಬಳ ಫಿಕ್ಸ್ ಮಾಡಿದ್ದಾರೆ. ಸಲ್ಮಾನ್ ಜೊತೆಗೆ ನೆರಳಿನಂತೆ ಶೇರಾ ಇರುತ್ತಾರೆ. ಟೈಮ್ ನೋಡದೆ ಕೆಲಸ ಮಾಡುತ್ತಾರೆ. ತುಂಬ ವರ್ಷಗಳಿಂದ ಸಲ್ಮಾನ್ ಖಾನ್ ರೊಂದಿಗೆ ಶೇರಾ ಇದ್ದು, ಅವರ ಕುಟುಂಬ ಸದಸ್ಯರಾಗಿ ಬಿಟ್ಟಿದ್ದಾರೆ.

  ಶಾರೂಖ್ ಬಾಡಿಗಾಡ್ ಸ್ಯಾಲರಿ 2.5 ಕೋಟಿ

  ಶಾರೂಖ್ ಬಾಡಿಗಾಡ್ ಸ್ಯಾಲರಿ 2.5 ಕೋಟಿ

  ರವಿ ಸಿಂಗ್ ಎನ್ನುವವರು ಬಾದ್ ಶಾ ಶಾರೂಖ್ ಖಾನ್ ಬಾಡಿಗಾಡ್. ಶಾರೂಖ್ ಖಾನ್ ರಿಗೆ ಹುಡುಗಿಯರ ಕಾಟ ಜಾಸ್ತಿ. ರವಿ ಸಿಂಗ್ ಇದೆಲ್ಲ ಸಮಸ್ಯೆಯನ್ನು ನಿವಾರಿಸುತ್ತಾರೆ. ಎಷ್ಟೇ ಜನ ಸಾಗರ ಇದ್ದರೂ, ಶಾರೂಖ್ ಖಾನ್ ಗೆ ರಕ್ಷಣೆ ನೀಡುತ್ತಾರೆ. ಈ ಕೆಲಸಕ್ಕೆ ವರ್ಷಕ್ಕೆ ರವಿ ಸಿಂಗ್ 2.5 ಕೋಟಿಯನ್ನು ಪಡೆಯುತ್ತಾರೆ. ಇದು ಬಾಲಿವುಡ್ ಸ್ಟಾರ್ ಬಾಡಿಗಾಡ್ ಗಳ ಪೈಕಿ ಅತಿ ಹೆಚ್ಚು ಸಂಬಳ.

  ಈ ನಿರ್ದೇಶಕರ ಬದುಕನ್ನು ಬದಲಿಸಿದ್ದು ಈ 5 ಸಿನಿಮಾಗಳುಈ ನಿರ್ದೇಶಕರ ಬದುಕನ್ನು ಬದಲಿಸಿದ್ದು ಈ 5 ಸಿನಿಮಾಗಳು

  ಅಕ್ಷಯ್ ಕುಮಾರ್ ಬಾಡಿಗಾಡ್ ಸಂಬಳ 1.2 ಕೋಟಿ

  ಅಕ್ಷಯ್ ಕುಮಾರ್ ಬಾಡಿಗಾಡ್ ಸಂಬಳ 1.2 ಕೋಟಿ

  ಅಕ್ಷಯ್ ಕುಮಾರ್ ಜೊತೆಗೆ ಬಾಡಿಗಾಡ್ ಆಗಿ ಕೆಲಸ ಮಾಡುತ್ತಿರುವವರು ಶ್ರೇಯ್ಸೆ ತೆಲೆ. ಶ್ರೇಯ್ಸೆ ಒನ್ ಮ್ಯಾನ್ ಆರ್ಮಿ ಇದ್ದ ಹಾಗೆ. ಅವರ ಹಾರ್ಡ್ ವರ್ಕ್ ಅಕ್ಷಯ್ ಕುಮಾರ್ ಗೆ ಬಹಳ ಇಷ್ಟ. ಶ್ರೇಯ್ಸೆ 1.2 ಕೋಟಿ ಹಣವನ್ನು ವರ್ಷಕ್ಕೆ ಪಡೆಯುತ್ತಾರೆ. ಅಗತ್ಯ ಇದ್ದರೆ ಡ್ರೈವರ್ ಆಗಿಯೂ ಕೆಲಸ ಮಾಡುತ್ತಾರೆ.

  ಅಮಿತಾಭ್ ಬಚ್ಚನ್ ಬಾಡಿಗಾಡ್ ಸಂಬಳ 1.5 ಕೋಟಿ

  ಅಮಿತಾಭ್ ಬಚ್ಚನ್ ಬಾಡಿಗಾಡ್ ಸಂಬಳ 1.5 ಕೋಟಿ

  ಬಿಗ್ ಬಿ ಬಾಡಿಗಾಡ್ ಹೆಸರು ಜಿತೇಂದ್ರ ಸಿಂಧೆ. ಒಂದು ವರ್ಷಕ್ಕೆ ಬಚ್ಚನ್ 1.5 ಕೋಟಿಯನ್ನು ಜಿತೇಂದ್ರಗೆ ನೀಡುತ್ತಾರೆ. ಮನೆ ಸಂಸಾರ ಬಿಟ್ಟು ಯಾವಾಗಲೂ ಬಚ್ಚನ್ ರಕ್ಷಣೆಗೆ ಜಿತೇಂದ್ರ ನಿಲ್ಲುತ್ತಾರೆ. ತುಂಬ ವರ್ಷದಿಂದ ಇವರ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಅಂದಹಾಗೆ, ದೊಡ್ಡ ದೊಡ್ಡ ಕಂಪನಿಯಲ್ಲಿ ಸಿಗುವ ಸಂಬಳಕ್ಕಿಂತ ಹೆಚ್ಚು ಸಂಬಳವನ್ನು ಬಾಲಿವುಡ್ ಸ್ಟಾರ್ ಬಾಡಿಗಾಡ್ ಗಳು ಪಡೆಯುತ್ತಾರೆ.

  English summary
  Top bollywood stars bodyguard salary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X