'ಟ್ವಿಟ್ಟರ್'ನಲ್ಲಿ ಅತಿ ಹೆಚ್ಚು ಬಳಕೆಯಾಗಿರುವ 'ಹ್ಯಾಷ್ ಟ್ಯಾಗ್' ಈ ಸಿನಿಮಾದ್ದು!

2019ನೇ ಸಾಲಿನಲ್ಲಿ ಅತಿ ಹೆಚ್ಚು ಬಳಕೆಯಾಗಿರುವ ಹ್ಯಾಷ್ ಟ್ಯಾಗ್ ಯಾವುದು ಎಂಬುದನ್ನ ಟ್ವಿಟ್ಟರ್ ಇಂಡಿಯಾ ಪ್ರಕಟ ಮಾಡಿದೆ. ರಾಜಕೀಯ, ಸಿನಿಮಾ, ವಿವಾದ, ಕ್ರೀಡೆ ಎಲ್ಲ ಕ್ಷೇತ್ರಗಳನ್ನು ಒಳಗೊಂಡಂತೆ ಯಾವ ವಿಷಯದ ಬಗ್ಗೆ ಅತಿ ಹೆಚ್ಚು ಹ್ಯಾಷ್ ಟ್ಯಾಗ್ ಬಳಕೆಯಾಗಿದೆ ಎಂಬ ಪಟ್ಟಿ ಬಹಿರಂಗವಾಗಿದೆ.

ಅಚ್ಚರಿ ಅಂದ್ರೆ, ಟಾಪ್ ಹತ್ತರ ಪಟ್ಟಿಯಲ್ಲಿ ಸೌತ್ ಇಂಡಿಯಾದ ಸಿನಿಮಾ ಸ್ಥಾನ ಪಡೆದುಕೊಂಡಿದೆ. ಈ ಸಿನಿಮಾ ಬಿಟ್ಟರೆ ಭಾರತದ ಯಾವ ಚಿತ್ರಗಳ ಹ್ಯಾಷ್ ಟ್ಯಾಗ್ ಕೂಡ ಟಾಪ್ 10ರ ಪಟ್ಟಿಯಲ್ಲಿಲ್ಲ.

ಹಾಗಿದ್ರೆ, ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗಿರುವ ಹ್ಯಾಷ್ ಟ್ಯಾಗ್ ಯಾವುದು? ಮತ್ತು ಆ ಸಿನಿಮಾದ ಹ್ಯಾಷ್ ಟ್ಯಾಗ್ ಎಷ್ಟನೇ ಸ್ಥಾನದಲ್ಲಿದೆ?

ವಿಜಯ್ ಸಿನಿಮಾ 'ಬಿಗಿಲ್'

ವಿಜಯ್ ಸಿನಿಮಾ 'ಬಿಗಿಲ್'

ಈ ವರ್ಷದಲ್ಲಿ ಬಹುದೊಡ್ಡ ಯಶಸ್ಸು ಕಂಡಿರುವ ಬಿಗಿಲ್ ಸಿನಿಮಾದ ಹ್ಯಾಷ್ ಟ್ಯಾಗ್, ಟಾಪ್ ಹತ್ತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. #bigil ಹ್ಯಾಷ್ ಟ್ಯಾಗ್ ಆರನೇ ಸ್ಥಾನದಲ್ಲಿದ್ದು, ಭಾರತೀಯ ಚಿತ್ರಗಳ ಪೈಕಿ ಟಾಪ್ ಹತ್ತರ ಬಳಗದಲ್ಲಿರುವುದು ಇದೊಂದೆ.

ಕಲೆಕ್ಷನ್ ನಲ್ಲಿ ದಾಖಲೆ

ಕಲೆಕ್ಷನ್ ನಲ್ಲಿ ದಾಖಲೆ

ದೀಪಾವಳಿ ಹಬ್ಬದ ಪ್ರಯುಕ್ತ ತೆರೆಕಂಡ ಈ ಚಿತ್ರದಲ್ಲಿ ವಿಜಯ್ ದ್ವಿಪಾತ್ರದಲ್ಲಿ ನಟಿಸಿದ್ದರು. ನಯನತಾರ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಅಟ್ಲಿ ನಿರ್ದೇಶನ ಮಾಡಿದ್ದರು. ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಬಿಸಿನೆಸ್ ಮಾಡಿರುವ ಈ ಸಿನಿಮಾ ಸುಮಾರು 300 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ.

ಅವೆಂಜರ್ ಎಂಡ್ ಗೇಮ್

ಅವೆಂಜರ್ ಎಂಡ್ ಗೇಮ್

ಬಿಗಿಲ್ ಸಿನಿಮಾ ಬಿಟ್ಟರೆ ಭಾರತದ ಬೇರೆ ಯಾವ ಚಿತ್ರದ ಹ್ಯಾಷ್ ಟ್ಯಾಗ್ ಟಾಪ್ 10ರ ಪಟ್ಟಿಯಲ್ಲಿಲ್ಲ. ಆದರೆ, ಹತ್ತನೇ ಸ್ಥಾನದಲ್ಲಿ #avengersendgame ಹ್ಯಾಷ್ ಟ್ಯಾಗ್ ಸ್ಥಾನ ಪಡೆದುಕೊಂಡಿದೆ. ಏಪ್ರಿಲ್ 26 ರಂದು ಅವೆಂಜರ್ ಎಂಡ್ ಗೇಮ್ ಸಿನಿಮಾ ತೆರೆಕಂಡಿತ್ತು.

ಅತಿ ಹೆಚ್ಚು ಬಳಕೆಯಾದ ಹ್ಯಾಷ್ ಟ್ಯಾಗ್ ಯಾವುದು?

ಅತಿ ಹೆಚ್ಚು ಬಳಕೆಯಾದ ಹ್ಯಾಷ್ ಟ್ಯಾಗ್ ಯಾವುದು?

ಟಾಪ್ ಹತ್ತರಲ್ಲಿ ಯಾವ ಹ್ಯಾಷ್ ಟ್ಯಾಗ್ ಇದೆ ಎಂದು ನೋಡುವುದಾರೇ, #loksabhaelection2019 ಹ್ಯಾಷ್ ಟ್ಯಾಗ್ ಮೊದಲ ಸ್ಥಾನದಲ್ಲಿದೆ. #chandrayaan2, #cwc19, #pulwama, #article370, #bigil, #diwali, #avengersendgame #ayodhyaverdict, #eidmubarak ಹ್ಯಾಷ್ ಟ್ಯಾಗ್ ಗಳು ಟಾಪ್ ಹತ್ತರ ಪಟ್ಟಿಯಲ್ಲಿ ಕ್ರಮವಾಗಿ ಸ್ಥಾನ ಪಡೆದುಕೊಂಡಿದೆ.

More from Filmibeat

English summary
From chandrayaan2, to diwali and eidmubarak 2019 was a year for celebrations on Twitter in India. Here are the top most Tweeted about hashtags in 2019.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X