Toxic vs Dhurandhar -2: ಪೈಪೋಟಿ ಇದ್ರೆ ಆಟ ಮಜಾ, ಅಡೆತಡೆ ಮೀರಿ ಗೆದ್ದಾಗ್ಲೇ ಬೆಲೆ- ಯಶ್ ವಿಡಿಯೋ ವೈರಲ್

ಮಾರ್ಚ್ 19ಕ್ಕೆ ಬಾಕ್ಸಾಫೀಸ್‌ನಲ್ಲಿ ಭಾರೀ ಕದನ ನಡೆಯಲಿದೆ. 'ಟಾಕ್ಸಿಕ್' ಹಾಗೂ 'ಧುರಂಧರ್-2' ಚಿತ್ರಗಳು ಏಕಕಾಲಕ್ಕೆ ತೆರೆಗಪ್ಪಳಿಸುತ್ತಿದೆ. ಇದು ದಶಕದ ಬಾಕ್ಸಾಫೀಸ್ ಕ್ಲ್ಯಾಶ್ ಎಂದೇ ಹೇಳಲಾಗ್ತಿದೆ. ಎರಡೂ ಸಿನಿಮಾಗಳು ಅಷ್ಟರಮಟ್ಟಿಗೆ ಹೈಪ್ ಕ್ರಿಯೇಟ್ ಮಾಡಿದ್ದು ಯಾವ ಸಿನಿಮಾ ಈ ಪೈಪೋಟಿಯಲ್ಲಿ ಗೆಲ್ಲುತ್ತದೆ ಎನ್ನುವ ಚರ್ಚೆ ನಡೀತಿದೆ. ಎರಡೂ ಸಿನಿಮಾಗಳ ನಡುವೆ ಜಿದ್ದಿಜಿದ್ದಿನ ಸೆಣಸಾಟ ಶುರುವಾಗಿದೆ.

'ಧುರಂಧರ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿ ಸೀಕ್ವೆಲ್ ಬಗ್ಗೆ ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿದೆ. ಮತ್ತೊಂದು ಕಡೆ 'ಕೆಜಿಎಫ್- 2' ಬಳಿಕ ಯಶ್ ನಟನೆಯ ಸಿನಿಮಾ ಎನ್ನುವ ಕಾರಣಕ್ಕೆ 'ಟಾಕ್ಸಿಕ್' ನಿರೀಕ್ಷೆ ಮೂಡಿಸಿದೆ. ಈಗಾಗಲೇ ಟೀಸರ್ ರಿಲೀಸ್ ಆಗಿ ಹೈಪ್ ಕ್ರಿಯೇಟ್ ಮಾಡಿದೆ. ಯಾವುದಾದರೂ ಒಂದು ಸಿನಿಮಾ ರಿಲೀಸ್ ಡೇಟ್ ಬದಲಾಗಬಹುದು ಎಂದು ಕೆಲವರು ಭಾವಿಸಿದ್ದಾರೆ. ಆದರೆ ಸದ್ಯಕ್ಕೆ ಎರಡೂ ಚಿತ್ರತಂಡಗಳಿಗೂ ಆ ಆಲೋಚನೆ ಇದ್ದಂತೆ ಕಾಣ್ತಿಲ್ಲ.

Toxic vs Dhurandhar-2 March 19 Box Office Clash Heats Up as Yash s Old videos Go Viral

ಈದ್ ವೀಕೆಂಡ್ ಸಾಲು ಸಾಲು ರಜೆ ಇರುವುದರಿಂದ ದೊಡ್ಡ ಸಿನಿಮಾಗಳ ಬಿಡುಡಗೆ ಇದಕ್ಕಿಂತ ಒಳ್ಳೆ ಸಮಯ ಸಿಗಲ್ಲ ಎನ್ನುವುದು ಲೆಕ್ಕಾಚಾರ. ಒಂದೂವರೆ ವರ್ಷದ ಹಿಂದೆ 'ಟಾಕ್ಸಿಕ್' ಚಿತ್ರತಂಡ ರಿಲೀಸ್ ಡೇಟ್ ಫಿಕ್ಸ್ ಮಾಡಿತ್ತು. ಆದರೆ ಎರಡು ತಿಂಗಳ ಹಿಂದೆ ಇದ್ದಕ್ಕಿದಂತೆ ಪೈಪೋಟಿಗೆ 'ಧುರಂಧರ್' ಸೀಕ್ವೆಲ್ ಎಂಟ್ರಿ ಕೊಟ್ಟಿದೆ. ಒಂದು ವಾರ ತಡವಾಗಿ ಬಿಡುಗಡೆಗೆ ಮುಂದಾಗಿದ್ದ ತೆಲುಗಿನ 'ಪೆದ್ದಿ' ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.

ಮಾರ್ಚ್ 19ಕ್ಕೆ 'ಡಕೈತ್' ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ 'ಟಾಕ್ಸಿಕ್' ಹಾಗೂ 'ಧುರಂಧರ್- 2' ಸಿನಿಮಾ ರಿಲೀಸ್ ಡೇಟ್ ಬದಲಾಗಲ್ಲ ಎಂದು ಖಚಿತವಾಗುತ್ತಿದ್ದಂತೆ ಹೆದರಿ 'ಡಕೈತ್' ರಿಲೀಸ್ ಡೇಟ್ ಪೋಸ್ಟ್ ಪೋನ್ ಮಾಡಿದ್ದಾರೆ. ಹಾಗಾಗಿ ವಾರ್ ಈಗ ಧುರಂಧರ್ ಹಾಗೂ ರಾಯನ ನಡುವೆ ಎನ್ನುವಂತಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ಧುರಂಧರ್'-2 ಚಿತ್ರ ತೆರೆಗೆ ಬರ್ತಿದೆ. ಇತ್ತೀಚೆಗೆ ಟೀಸರ್ ಕೂಡ ಬಂದು ಸದ್ದು ಮಾಡ್ತಿದೆ.

ಒಂದೂವರೆ ವರ್ಷದ ಹಿಂದೆ 'ಟಾಕ್ಸಿಕ್' ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಿಸಿದ್ದರು. ಹಾಗಾಗಿ ಯಶ್ ಹಾಗೂ ಚಿತ್ರತಂಡದ ತಪ್ಪಿಲ್ಲ. ಪೈಪೋಟಿಗೆ ಬಂದಿರುವುದು 'ಧುರಂಧರ್'-2 ಸಿನಿಮಾ. ಬೇಕಿದ್ದರೆ ಆ ಸಿನಿಮಾ ರಿಲೀಸ್ ಡೇಟ್ ಬದಲಿಸಲಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಉತ್ತರ ಭಾರತದಲ್ಲಿ ಕೂಡ 'ಟಾಕ್ಸಿಕ್' ಸಿನಿಮಾ ಬಗ್ಗೆ ಕ್ರೇಜ್ ಜೋರಾಗಿದೆ. ಈ ಬಾಕ್ಸಾಫೀಸ್‌ ಕ್ಲ್ಯಾಶ್ ಬಗ್ಗೆ ಎರಡೂ ಚಿತ್ರತಂಡಗಳು ಈವರೆಗೆ ಮಾತನಾಡಿಲ್ಲ.

ಬಾಕ್ಸಾಫೀಸ್ ಕ್ಲ್ಯಾಶ್ ಬಗ್ಗೆ ಅಥವಾ ಸ್ಪರ್ಧೆಯ ಬಗ್ಗೆ ನಟ ಯಶ್ ಹಳೇ ಸಂದರ್ಶನಗಳಲ್ಲಿ ಮಾತನಾಡಿದ್ದ ವಿಡಿಯೋಗಳು ವೈರಲ್ ಆಗುತ್ತಿದೆ. ಹಳೇ ಸಂದರ್ಶನವೊಂದರಲ್ಲಿ ಸ್ಪರ್ಧೆಯ ಬಗ್ಗೆ ಯಶ್ ಮಾತನಾಡಿರುವ ವಿಡಿಯೋ ವೈರಲ್ ಆಗ್ತಿದೆ. 'ಟಾಕ್ಸಿಕ್' ಹಾಗೂ ಧುರಂಧರ್- 2' ಚಿತ್ರಗಳ ಬಾಕ್ಸಾಫೀಸ್ ಕ್ಲ್ಯಾಶ್ ಚರ್ಚೆ ನಡುವೆ ಇದು ಚರ್ಚೆ ಹುಟ್ಟಾಕ್ಕಿದೆ. ಯಶ್‌ಗೆ ತಮ್ಮ ಸಿನಿಮಾ ಮೇಲೆ ನಂಬಿಕೆ ಇದೆ. ಅದೇ ಕಾರಣಕ್ಕೆ ಈ ಸಾಹಸ ಮಾಡುತ್ತಿದ್ದಾರೆ. ಅವರ ಮೇಲೆ ನಂಬಿಕೆ ಇಡಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

"ಎದುರಾಳಿಗಳು ಇಲ್ಲ ಅಂದ್ರೆ, ಅಥವಾ ಬೇರೆ ಆಟಗಾರರು ನಿಮ್ಮನ್ನು ತಡೆಯಲು ಯತ್ನಿಸದೇ ಇದ್ದರೆ ಏನು ಮಜಾ ಇರಲ್ಲ.. 11 ಜನ ಆಟಗಾರರು ನಿಮ್ಮನ್ನ ತಡೆಯಲು ಯತ್ನಿಸುತ್ತಿದ್ದರೆ ಒಬ್ಬ ಗೋಲ್ ಪೋಸ್ಟ್ ಬಳಿ ತಡೆಯಲು ನಿಂತಿದ್ದಾಗ ನೀವು ಗೋಲ್ ಹೊಡೆದರೆ, ಜನ ನಿಮಗೆ ಗೌರವ ಕೊಡ್ತಾರೆ, ಸೆಲೆಬ್ರೇಟ್ ಮಾಡ್ತಾರೆ. ಜೀವನ ಕೂಡ ಹಂಗೆ" ಎಂದು ಯಶ್ ಹಳೇ ಸಂದರ್ಶನದಲ್ಲಿ ಹೇಳಿದ್ದರು. ಹಾಗಾಗಿ ಈ ಬಾಕ್ಸಾಫೀಸ್ ಕ್ಲ್ಯಾಶ್ ಅನ್ನು ರಾಕಿಂಗ್ ಸ್ಟಾರ್ ಬಹಳ ಸ್ಪೋರ್ಟೀವ್ ಆಗಿ ತಗೊಂಡಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಮತ್ತೊಂದು ಸಂದರ್ಶನದಲ್ಲಿ ನಟ ಯಶ್ ನೇರವಾಗಿ ಬಾಕ್ಸಾಫೀಸ್ ಕ್ಲ್ಯಾಶ್ ಬಗ್ಗೆ ಮಾತನಾಡಿದ್ದರು. "ರಕ್ಷಣಾತ್ಮಕ ಆಟದಲ್ಲಿ ನಂಗೆ ನಂಬಿಕೆ ಇಲ್ಲ. ಬೇರೆ ಸಿನಿಮಾಗಳು ಬರ್ತಿವೆ ಅಂತ ಹೆದರೋದಲ್ಲ. ಬೇರೆ ಭಾಷೆಯವರು ಇಲ್ಲಿ ಬಂದು ಸಿನಿಮಾ ರಿಲೀಸ್ ಮಾಡಲು ಹೆದರಬೇಕು. ಅದೇ ರೀತಿ ಬೇರೆ ಭಾಷೆಗೆ ನಮ್ಮ ಸಿನಿಮಾ ಬಿಟ್ರು ಧೈರ್ಯವಾಗಿ ನಮ್ಮ ಸಿನಿಮಾ ಅಂತ ಎದೆ ತಟ್ಟಿಕೊಂಡು ಹೇಳುವಂತಾಗಬೇಕು. ನನಗೆ ನುಗ್ಗಿ ಹೊಡೆಯೋದ್ರಲ್ಲಿ ನಂಬಿಕೆ ಜಾಸ್ತಿ" ಎಂದು ಹೇಳಿದ್ದರು. ಆ ವೀಡಿಯೋ ಸಹ ಸಖತ್ ಸದ್ದು ಮಾಡ್ತಿದೆ.

More from Filmibeat

Read more about: yash ranveer singh toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X