ರಶ್ಮಿಕಾ ಮಂದಣ್ಣರನ್ನು ರಿಪ್ಲೇಸ್ ಮಾಡಿ 'ನ್ಯಾಷನಲ್ ಕ್ರಶ್' ಆದ ನಟಿ ತೃಪ್ತಿ ದಿಮ್ರಿ ಬಗ್ಗೆ ಆಸಕ್ತಿಕರ ವಿಷಯಗಳು
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸಿನಿಮಾ 'ಅನಿಮಲ್' ಇಡೀ ದೇಶದಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಪರ- ವಿರೋಧ ಚರ್ಚೆಗಳ ನಡುವೆಯೇ ಸಿನಿಮಾವನ್ನು ಗಲ್ಲಾ ಪೆಟ್ಟಿಗೆಯಲ್ಲಿ ಕಮಾಲ್ ಮಾಡುವಂತೆ ಮಾಡಿದೆ. ಸಿನಿಮಾದಲ್ಲಿ ರಣಬೀರ್ ಕಪೂರ್‌ಗೆ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಆದರೆ, ಎಲ್ಲರ ಗಮನ ಸೆಳೆಯುತ್ತಿರುವುದು ಮಾತ್ರ ಮತ್ತೊಬ್ಬ ನಟಿ.
ಎಸ್...ಅನಿಮಲ್ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ 'ಜೋಯಾ' ಪಾತ್ರದಲ್ಲಿ ನಟಿಸಿರುವ ನಟಿಯ ಮೇಲೆ ಕ್ರಶ್ ಆಗಿದೆ. ನಟಿಯ ಬಗ್ಗೆ ವಿವರಗಳನ್ನು ಹುಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಫ್ಯಾನ್ಸ್ ಫಾಲೋವಿಂಗ್ ಹೆಚ್ಚಾಗುತ್ತಿದೆ. ಸದ್ಯ ಇವರು ನಟಿ ರಶ್ಮಿಕಾ ಮಂದಣ್ಣ ಅವರನ್ನು ರಿಪ್ಲೇಸ್ ಮಾಡಿ ನ್ಯಾಶನಲ್ ಕ್ರಶ್ ಎಂಬ ಹೆಸರು ಪಡೆದಿದ್ದಾರೆ. ಅವರೇ ನಟಿ ತೃಪ್ತಿ ದಿಮ್ರಿ.

'ಅನಿಮಲ್' ಸಿನಿಮಾದ ಜೋಯಾ ಪಾತ್ರದಲ್ಲಿ ನಟಿ ತೃಪ್ತಿ ದಿಮ್ರಿ
ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್ ಜೊತೆ ಬೆತ್ತಲೆ ಮತ್ತು ಇಂಟಿಮೇಟ್ ಸೀನ್‌ಗಳಿಂದ ಹೆಡ್‌ಲೈನ್‌ನಲ್ಲಿರುವ ನಟಿ ತೃಪ್ತಿ ದಿಮ್ರಿ. ಸದ್ಯ ನ್ಯಾಷನಲ್ ಕ್ರಶ್ ಎಂದು ಬಿರುದು ಪಡೆದುಕೊಂಡಿದ್ದಾರೆ. ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಇದ್ದರೂ ಕೂಡ ತೃಪ್ತಿ ದಿಮ್ರಿ ಸಕತ್ ಹೆಸರು ಪಡೆದಿದ್ದಾರೆ. ಹಾಗಾದರೇ ಆಕೆಯ ಬಗ್ಗೆ ಕೆಲವು ವಿಚಾರಗಳು ಇಲ್ಲಿವೆ.
ರಣಬೀರ್ ಕಪೂರ್ ಅಭಿನಯದ ಸಿನಿಮಾದಲ್ಲಿ 'ಜೋಯಾ' ಎಂಬ ಪಾತ್ರ ಮಾಡಿದ್ದಾರೆ. ಈಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಖ್ಯಾತಿ ಗಳಿಸುತ್ತಿರುವ ಅವರು, ಈ ಹಿಂದೆಯೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಗುರುತಿಸಿಕೊಂಡ ಇವರಿಗೆ 'ಅನಿಮಲ್' ಹೆಸರು ತಂದುಕೊಟ್ಟಿದೆ. ರಣಬೀರ್ ಕಪೂರ್ ಅವರ ಜೊತೆಗಿನ ಬೋಲ್ಡ್ ದೃಶ್ಯಗಳಿಂದ ಹೆಚ್ಚು ಟ್ರೋಲ್ ಕೂಡ ಆಗುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಮುನ್ನ ಇನ್‌ಸ್ಟಾಗ್ರಾಮ್‌ನಲ್ಲಿ 600k ಫಾಲೋವರ್ಸ್ ಇದ್ದ ಇವರಿಗೆ ಈಗಾಗಲೇ 2.4 ಮಿಲಿಯನ್‌ಗೆ ಹೆಚ್ಚಿದೆ.
ಯಾರು ಈ ತೃಪ್ತಿ ದಿಮ್ರಿ..?
1994 ರಲ್ಲಿ ಉತ್ತರಾಖಂಡ್‌ನಲ್ಲಿ ಜನಿಸಿದ ತೃಪ್ತಿ ದಿಮ್ರಿ ಬಾಲಿವುಡ್‌ಗೆ ಬಂದಿದ್ದು 2017 ರಲ್ಲಿ. ನಟಿ ಶ್ರೀದೇವಿಯ ಅವರ ಕೊನೆಯ ಚಿತ್ರ 'ಮಾಮ್'ನಲ್ಲಿ ಪೋಷಕ ಪಾತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ನಟಿ ಸಜಲ್ ಅಲಿ ಅವರ ಸ್ನೇಹಿತರಲ್ಲಿ ಒಬ್ಬರಾಗಿ ನಟಿಸಿದ್ದಾರೆ. ನಟಿ ಅದೇ ವರ್ಷ ಪೋಸ್ಟರ್ ಬಾಯ್ಸ್‌ನಲ್ಲಿ ಸ್ವಲ್ಪ ದೊಡ್ಡ ಪಾತ್ರವನ್ನು ಮಾಡಿದರು.

ಆದರೆ, 2018 ರ ಬಿಡುಗಡೆಯಾದ 'ಲೈಲಾ ಮಜ್ನು' ಸಿನಿಮಾದಿಂದ ಹೆಚ್ಚು ಗಮನ ಸೆಳೆದರು. ಅದಾದ ನಂತರ ತೃಪ್ತಿ ದಿಮ್ರಿ ನೆಟ್‌ಫ್ಲಿಕ್ಸ್ ಸಿನಿಮಾ' ಬುಲ್‌ಬುಲ್' ಮತ್ತು 'ಕ್ವಾಲಾ'ದಲ್ಲಿ ಕಾಣಿಸಿಕೊಂಡರು. ಎರಡನ್ನೂ ಅನ್ವಿತಾ ದತ್ ನಿರ್ದೇಶಿಸಿದ್ದಾರೆ. ಎರಡೂ ಸಿನಿಮಾಗಳಲ್ಲಿ ನಟಿಯ ಪಾತ್ರವನ್ನು ಹೆಚ್ಚು ಮೆಚ್ಚಲಾಯಿತು. ಸಿನಿಪ್ರೇಕ್ಷಕರು ಆಕೆಯನ್ನು ಗಮನಿಸಲು ಪ್ರಾರಂಭಿಸಿದರು. ಬುಲ್‌ಬುಲ್ ಸಿನಿಮಾದ ಅಭಿನಯಕ್ಕಾಗಿ ನಟಿ ತನ್ನ ಮೊದಲ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದರು.
ಯುವ ನಟಿ ತೃಪ್ತಿ ದಿಮ್ರಿ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದು, ಇನ್ನೆರಡು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. ಇವೆರಡೂ 2024 ರಲ್ಲಿ ತೆರೆಗೆ ಬರಲಿವೆ. ಮೊದಲನೆಯದು ವಿಕ್ಕಿ ಕೌಶಲ್ ಜೊತೆಗಿನ ಮೇರೆ ಮೆಹಬೂಬ್ ಮೇರೆ ಸನಮ್, ನಂತರ ರಾಜ್‌ಕುಮಾರ್ ರಾವ್ ಅವರ ಜೊತೆಗೆ ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ತೆರೆಗೆ ಬರಲಿವೆ.


Click it and Unblock the Notifications











