'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಖ್ಯಾತರಾದ ನಟ ಯಾರು ಗೊತ್ತಾ?

By ಪೂರ್ವ

ತುಳುನಾಡಿನ ಅನೇಕ ಕಲಾವಿದರು ರಂಗಭೂಮಿಯಲ್ಲಿ ಕೆಲಸ ಮಾಡಿದ ಬಳಿಕ ಕನ್ನಡ ಕಿರುತೆರೆ ಹಿರಿತೆರೆಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ ಅದರಲ್ಲಿ ಅಮಿತ್ ರಾವ್ ಕೂಡ ಒಬ್ಬರು. ಇವರು ಹುಟ್ಟಿದ್ದು ಮಂಗಳೂರಿನಲ್ಲಿ ಆದರೆ ಇವರು ಬೆಳೆದಿದ್ದು ಬೆಂಗಳೂರಿನ ಮಹಾನಗರದಲ್ಲಿ.

ಅಮಿತ್ ಚಿಕ್ಕ ವಯಸ್ಸಿನಿಂದಲೂ ಅಭಿನಯದಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದರು. ಮೊದಲು ರಂಗಭೂಮಿ ಕಲಾವಿದರಾಗಿ ಎಲ್ಲರನ್ನು ನಗಿಸುತ್ತಿದ್ದರು. ವಿಲನ್ ಪಾತ್ರದಲ್ಲಿ ಕೂಡ ಜನರ ಮನಗೆಲ್ಲುತ್ತಿದ್ದರು. ಮೊದಲು ಅಮಿತ್ ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು, ಆದರೆ ಚಿತ್ರರಂಗದಲ್ಲಿ ಅಷ್ಟಾಗಿ ಜನಮನ್ನಣೆ ದೊರೆಯದ ಕಾರಣ ಕಿರುತೆರೆಗೆ ಆಗಮಿಸಿದರು.

2016ರಲ್ಲಿ ರಾಜೇಶ್ ಬ್ರಹ್ಮಾವರ್ ನಿರ್ಮಿಸಿದ ರಂಜಿತ್ ಸುವರ್ಣ ನಿರ್ದೇಶನದ 'ಡೊಂಬರಾಟ' ಎಂಬ ಚಲನಚಿತ್ರದ ಮೂಲಕ ಇವರು ಬೆಳ್ಳಿತೆರೆಗೆ ಪ್ರವೇಶವನ್ನು ಮಾಡುತ್ತಾರೆ. ಬಳಿಕ ತೆಲುಗು ಚಿತ್ರ 'ಪಾಸಿಬಲ್‌'ನಲ್ಲಿ ನಟಿಸಿದರು. ಟಾಲಿವುಡ್ ಚಲನಚಿತ್ರಗಳು, ತೆಲುಗು ಟೀವಿ ಶೋಗಳು, ಕಿರುಚಿತ್ರಗಳಲ್ಲಿ ಅವರು ಸಾಕಷ್ಟು ತೊಡಗಿಸಿಕೊಂಡಿದ್ದರು.

ಅನೇಕರು ಚಪ್ಪಾಳೆ ತಟ್ಟಿದ್ದಾರೆ

ಅನೇಕರು ಚಪ್ಪಾಳೆ ತಟ್ಟಿದ್ದಾರೆ

'ಅಗ್ನಿಸಾಕ್ಷಿ' ಧಾರವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿ ಎಲ್ಲರ ಮನೆ ಮಾತಾಗಿದ್ದ ಅಮಿತ್ ರಾವ್, ಕಿಶೋರ್ ಎಂದೇ ಖ್ಯಾತರಾಗಿದ್ದರು. ಅದೆಷ್ಟು ಜನ ಇವರನ್ನು ಬೈದುಕೊಂಡಿದ್ದಾರೋ ಗೊತ್ತಿಲ್ಲ, ಹಾಗೆಯೇ ಇವರ ಅಭಿನಯಕ್ಕೆ ಎಲ್ಲರೂ ಚಪ್ಪಾಳೆ ತಟ್ಟಿದ್ದೂ ಇದೆ.

ಅವಕಾಶ ಕೊಟ್ಟ ವಿನು ಬಳಂಜ

ಅವಕಾಶ ಕೊಟ್ಟ ವಿನು ಬಳಂಜ

ಕಿರುತೆರೆಯಲ್ಲಿ ಖ್ಯಾತಿಯನ್ನು ಹೊಂದಿದ್ದ ವಿನು ಬಳಂಜ ಇವರು ಅಮಿತ್ ಅವರಿಗೆ ಕರೆ ಮಾಡಿ ಚಿಟ್ಟೆ ಹೆಜ್ಜೆ ಎಂಬ ಧಾರವಾಹಿಯಲ್ಲಿ ಅಭಿನಯಿಸುತ್ತೀರ ಎಂದು ಕೇಳಿದರು ಇದಕ್ಕೆ ಅಮಿತ್ ಒಪ್ಪಿದರು. ಇಲ್ಲಿಂದ ಅಮಿತ್ ಕಿರುತೆರೆಯ ಜೀವನ ಶುರುವಾಗುತ್ತದೆ. ಅಮಿತ್ ರಾವ್ ಅವರು ಸಕಲಕಲ ವಲ್ಲಭ. ಇವರಿಗೆ ಯಾವುದೇ ಅಭಿನಯ ಕೊಡಲಿ ಅದಕ್ಕೆ ನ್ಯಾಯ ಒದಗಿಸುತ್ತಾರೆ. ಅಮಿತ್ ನಟನೆ ನೋಡಿ ಅನೇಕರು ಖುಷಿಪಟ್ಟಿದ್ದಾರೆ. 'ಚಿಟ್ಟೆ ಹೆಜ್ಜೆ' ಧಾರವಾಹಿಯಲ್ಲಿ ಅದ್ಭುವಾಗಿ ನಟಿಸಿದ ಅಮಿತ್‌ರಾವ್‌ಗೆ ಇನ್ನೊಂದು ಧಾರವಾಹಿಯಲ್ಲಿ ನಟಿಸಲು ಅವಕಾಶ ಅರಸಿಕೊಂಡು ಬಂದಿತು. ಅದುವೇ 'ಅಗ್ನಿಸಾಕ್ಷಿ'.

ವಜ್ರಮುನಿಗೆ ಹೋಲಿಸುವ ಅಭಿಮಾನಿಗಳು

ವಜ್ರಮುನಿಗೆ ಹೋಲಿಸುವ ಅಭಿಮಾನಿಗಳು

'ಅಗ್ನಿ ಸಾಕ್ಷಿ' ಧಾರವಾಹಿಯಲ್ಲಿ ನಟಿಸಿದ ಬಳಿಕ ಅಮಿತ್ ಅವರನ್ನು ಎಲ್ಲರೂ ಕಿಶೋರ್ ಎಂದೇ ಗುರುತಿಸುತ್ತಾರೆ. ಈ ಪಾತ್ರದಿಂದ ಅಮಿತ್‌ಗೆ ಅಭಿಮಾನಿ ವರ್ಗವನ್ನೂ ಗಳಿಸಿಕೊಟ್ಟಿದೆ. 'ವಜ್ರಮುನಿ ಸರ್ ಅಭಿನಯ ಮಾಡಿದ ಹಾಗೆ ಮಾಡುತ್ತೀರಿ' ಎಂದೆಲ್ಲಾ ಕಾಂಪ್ಲಿಮೆಂಟ್‌ ಅನ್ನು ಅವರ ಅಭಿಮಾನಿಗಳು ನೀಡಿದ್ದಾರಂತೆ. ಆ ಬಳಿಕ 'ಸ್ವಾತಿ ಮುತ್ತು' ಎಂಬ ಚಿತ್ರದಲ್ಲಿ ಅಮಿತ್ ರಾವ್ ಮೂಕನ ಪಾತ್ರದಲ್ಲಿ ನಟನೆ ಮಾಡುತ್ತಾರೆ ಬಳಿಕ 'ಮೈನಾ' ಎಂಬ ಧಾರವಾಹಿಯಲ್ಲೂ ಸೈಕೋ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ನಿರ್ದೇಶನ ಸಹ ಮಾಡಿರುವ ಅಮಿತ್

ನಿರ್ದೇಶನ ಸಹ ಮಾಡಿರುವ ಅಮಿತ್

ಅಮಿತ್ ಇದೀಗ ಜನಪ್ರಿಯ ನಟನಾಗಿ ಹೊರಹೊಮ್ಮಿದ್ದು ನಟ ಹಾಗೂ ನಿರ್ದೇಶಕನಾಗಿಯೂ ಕೆಲಸ ಮಾಡುತ್ತಿದ್ದಾರೆ. 'ದೇಯಿ ಬೈದೇತಿ', 'ಪಾಸಿಬಲ್', ಹೀಗೆ ಅನೇಕ ಸಿನಿಮಾಗಳಲ್ಲಿ ಅಮಿತ್ ನಟಿಸಿದ್ದಾರೆ. ಅಮಿತ್ ರಾವ್ ನಿರ್ದೇನದಲ್ಲಿ 'ಹವಾಲ: ರೈಸ್ ಆಫ್ ಎ ಗ್ಯಾಂಗ್ ಸ್ಟರ್' ಎಂಬ ಸಿನಿಮಾ ತೆರೆಗೆ ಬರುತ್ತಿದೆ.

More from Filmibeat

English summary
Kannada serial actor Amith Rao is acted in some Tulu movies and dramas. Here is his life journey.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X