ತಮ್ಮ ವೃತ್ತಿ ಜೀವನದಲ್ಲಿ ಅಣ್ಣಾವ್ರು ಮಾಡಿದ 12 ತಪ್ಪುಗಳು: ಮಾನವೀಯ ಗುಣಗಳೇ ತಪ್ಪಾಗಿದ್ದೇಗೆ?

By ಫಿಲ್ಮಿಬೀಟ್ ಡೆಸ್ಕ್

ಡಾ.ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಹೆಮ್ಮೆ. ಅವರಿಗೆ ಇರುವ ಅಪಾರ ಅಭಿಮಾನಿಗಳ ಬಳಗವೇ ಇದಕ್ಕೆ ಸಾಕ್ಷಿ. ಅದಕ್ಕೆ ಸಿನಿಪ್ರಿಯರು ಅವರನ್ನು ಅಣ್ಣಾವ್ರು ಎಂದು ಕರೆದಿದ್ದಾರೆ. ತಮ್ಮ ವೃತ್ತಿ ಬದುಕಿನಲ್ಲಿ ಯುಗ ಯುಗಗಳೇ ಕಳೆದರೂ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಸಿನಿಮಾಗಳನ್ನು ಕೊಟ್ಟಿದ್ದಾರೆ. ಹೀಗಿದ್ದರೂ ಅಣ್ಣಾವ್ರನ್ನು ದ್ವೇಷಿಸುವ ಮನಸ್ಸುಗಳಿತ್ತು. ಅವರ ತಪ್ಪುಗಳನ್ನು ಹುಡುಕು ಮನಸ್ಥಿತಿ ಕೆಲವರಲ್ಲಿ ಇತ್ತು. ಕನ್ನಡ ಭಾಷೆಗೆ, ಚಿತ್ರರಂಗಕ್ಕೆ ದುಡಿದ ಅಣ್ಣಾವ್ರನ್ನು ಎಂದೆಂದಿಗೂ ನೆನಪಿಸಿಕೊಳ್ಳಬೇಕು.

"ರಾಜ್‌ಕುಮಾರ್ ಅವರು ಪ್ರಶ್ನಾತೀಥರೇನು ಅಲ್ಲ. ಅವರು ಮನುಷ್ಯರೇ. ಎಷ್ಟು ತಪ್ಪು ಮಾಡಿರಬಹುದು ಅಂತ ಹುಡುಕುತ್ತಾ ಹೋದೆವು. ನನಗೆ ಕಂಡುಬಂದ ಕೆಲವು ತಪ್ಪುಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ." ಎಂದು ಡಾ.ರಾಜ್‌ಕುಮಾರ್ ಅವರು ಮಾಡಿರುವ 12 ತಪ್ಪುಗಳ ಮೇಲೆ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಹಿರಿಯರ ಪತ್ರಕರ್ತ ಹರಿಹರಪುರ ಮಂಜುನಾಥ್ ಹೇಳಿಕೊಂಡಿದ್ದಾರೆ. ಹಾಗಂತ ಇದು ಅಪರಾಧವಲ್ಲ. ಈ ತಪ್ಪುಗಳನ್ನು ಮಾಡದೆ ಇದ್ದಿದ್ದರೆ, ಅಣ್ಣಾವ್ರ ಬದುಕು ಇನ್ನೂ ಚೆನ್ನಾಗಿ ಇರುತ್ತಿತ್ತು ಎಂದರ್ಥ.

Twelve mistakes made by Dr Rajkumar in his career listed by senior journalist Hariharapura Manjunath

ಮೊದಲನೇ ತಪ್ಪು

"1958ರಲ್ಲಿ ಕೃಷ್ಣಗಾರುಡಿ ಸಿನಿಮಾದ ಸಂದರ್ಭದಲ್ಲಿ ರಾಜ್‌ಕುಮಾರ್ ಮಾಡುತ್ತಿದ್ದ ಅರ್ಜುನನ ಪಾತ್ರಕ್ಕೆ ಮೇಕಪ್ ಮಾಡುವುದಕ್ಕೆ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಬರುತ್ತಾರೆ. ಅವರ ಹೆಸರು ದೊರೆಸ್ವಾಮಿ ನಾಯ್ಡು ಅಂತ. ಅವರು ಅದೇ ಮೊದಲ ಬಾರಿಗೆ ರಾಜ್‌ಕುಮಾರ್ ಅವರಿಗೆ ಮೇಕಪ್ ಮಾಡುತ್ತಾರೆ. ಆಗ ರಾಜ್‌ಕುಮಾರ್ ಅವರಿಗೆ ತುಂಬಾನೇ ಸಂತೋಷವಾಗುತ್ತೆ. ಆಗ ರಾಜ್‌ಕುಮಾರ್ ಕೈ ಮುಗಿದು ನೀವು ನನ್ನ ಜೊತೆಯಲ್ಲಿಯೇ ಇರಬೇಕು ಕೇಳಿಕೊಳ್ಳುತ್ತಾರೆ. ಹೃದಯಕ್ಕೆ ತೆಗೆದುಕೊಂಡ ದೊರೆಸ್ವಾಮಿ ನಾಯ್ದು ಜೀವನದುದ್ದಕ್ಕೂ ಜೊತೆಯಲ್ಲಿಯೇ ಇರುತ್ತಾರೆ. ಇವರು ತಮ್ಮ 81ನೇ ವಯಸ್ಸಿನಲ್ಲಿ ಲೇಖನವೊಂದರಲ್ಲಿ ರಾಜ್‌ಕುಮಾರ್ ಕರುನಾಡಿನಲ್ಲಿ ಹುಟ್ಟಬಾರದಿತ್ತು. ಬೇರೆ ರಾಜ್ಯದಲ್ಲಿ ಹುಟ್ಟಿದ್ದರೆ, ದೇವರು ಅಂತ ಪೂಜೆ ಮಾಡುತ್ತಿದ್ದರು ಎಂದು ಹೇಳುತ್ತಾರೆ. ಯಾಕಂದ್ರೆ ಈ ಮಾತು ಆಡುವಾಗ ಕನ್ನಡ ನಾಡಿನಲ್ಲಿ ರಾಜ್‌ಕುಮಾರ್‌ ಬಗ್ಗೆ ವಿರೋಧವಿತ್ತು. ಅದಕ್ಕೆ ಆ ಮಾತನ್ನು ಹೇಳುತ್ತಾರೆ" ಎನ್ನುತ್ತಾರೆ ಹರಿಹರಪುರ ಮಂಜುನಾಥ್.

ಎರಡನೇ ತಪ್ಪು

"ಎರಡನೇ ತಪ್ಪು ಏನಂದೆ, ಅಣ್ಣಾವ್ರಿಗೆ ಎರಡನೇ ಚಿತ್ರವೇ ತೆಲುಗಿನಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿತ್ತು. ಬೇಡರ ಕಣ್ಣಪ್ಪ ಚಿತ್ರದ ತೆಲುಗು ಅವತರಣಿಕೆ ಅದು. 'ಕಾಳಹಸ್ತಿ ಮಹಾತ್ಯಂ' ಸಿನಿಮಾದಲ್ಲಿ ಅದ್ಭುತ ಪಾತ್ರವನ್ನು ಮಾಡಿರುತ್ತಾರೆ. ಆಗ ಬೇರೆ ಚಿತ್ರರಂಗದಲ್ಲೂ ಅವಕಾಶ ಸಿಗುತ್ತೆ. ಆದರೂ ಎರಡನೇ ಚಿತ್ರ 'ಸೋದರಿ' ಸಿನಿಮಾದ ವೇಳೆ ಜನರ ಪ್ರೀತಿಯನ್ನು ಕಂಡು ಇವರನ್ನು ಕಳೆದುಕೊಳ್ಳಬಾರದು ಎಂದು ನಿರ್ಧರಿಸುತ್ತಾರೆ. ಅವತ್ತು ಕನ್ನಡದಲ್ಲಿಯೇ ಉಳಿಯಬೇಕು ನಿರ್ಧರಿಸಿದ್ದು ಎರಡನೇ ತಪ್ಪು." ಎನ್ನುತ್ತಾರೆ.

ಮೂರನೇ ತಪ್ಪು

"ಮೂರನೇ ತಪ್ಪು, ಕನ್ನಡ ಚಿತ್ರರಂಗ ತಮಿಳುನಾಡಿನಲ್ಲಿ ನೆಲೆಯೂರಿತ್ತು. ಆ ವೇಳೆ ಭಾಷೆಯೇ ಬಾರದ ಅಣ್ಣಾವ್ರು ಕನ್ನಡ ಚಿತ್ರರಂಗದಕ್ಕಾಗಿ ಅಲ್ಲಿಗೆ ಹೋಗಿ ನೆಲೆಸಿದ್ದು ಕೂಡ ತಪ್ಪು ಎಂದು ಅನಿಸುತ್ತೆ." ಎಂದು ಅಭಿಪ್ರಾಯ ಪಟ್ಟಿದ್ದಾರೆ.

Twelve mistakes made by Dr Rajkumar in his career listed by senior journalist Hariharapura Manjunath

ನಾಲ್ಕನೇ ತಪ್ಪು

"ನಾಲ್ಕನೆ ತಪ್ಪು ಕಲಾವಿದರ ಸಂಘವನ್ನು ಕಟ್ಟಿತ್ತು. ಅಣ್ಣಾವ್ರಿಗೆ ನಾಯಕತ್ವದ ಗುಣ ಕೂಡ ಇತ್ತು. ಅವರು ಕಲಾವಿದರ ಸಂಘವನ್ನು ಕಟ್ಟಿದರು. ಈ ಸಂಘದಿಂದ ನಾಟಕಗಳನ್ನು ಮಾಡುತ್ತಾ ಸುಮಾರು 40 ಕುಟುಂಬಗಳ ಜೀವನ ನಿರ್ವಹಣೆಯಾಗುತ್ತಿತ್ತು. ಬಿಎಸ್ ರಂಗ ಅವರು ಬಂದು ಮಹಿಷಾಸುರ ಮರ್ದಿನಿ ಸಿನಿಮಾಗೆ ಬುಕ್ ಮಾಡಿದ್ದರು. ಆಗ ನನ್ನ ನಂಬಿಕೊಂಡು 40 ಕುಟುಂಬಗಳಿಗೆ ನಾಟಕಗಳನ್ನು ಮುಗಿಸಿ ಬರುತ್ತೇನೆ ಎಂದಿದ್ದರು. ಈ ರೀತಿಯ ಸೌಜನ್ಯ ತೋರಿಸಿದ್ದು ಬಹುಶ: ಮಾಡಿದಂತಹ ತಪ್ಪು ಅನಿಸುತ್ತೆ" ಎನ್ನುತ್ತಾರೆ.

ಐದನೇ ತಪ್ಪು

"ಐದನೇ ತಪ್ಪು, ಅಣ್ಣಾವ್ರು ಅಪಾಯ ಹಾಗೂ ಆರೋಗ್ಯ ಇವೆರನ್ನೂ ಲೆಕ್ಕಿಸದೆ ಚಿತ್ರಗಳ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದರು. 102 ಡಿಗ್ರಿ ಜ್ವರ ಇದ್ದರೂ ಶೂಟಿಂಗ್‌ಗೆ ಹೋಗಿದ್ದು, ಗಂಟೆಗಟ್ಟಲೆ ನೀರಿನಲ್ಲಿ ನಿಲ್ಲಿಸಿದ್ದರೂ ಕೂಡ ಸಿನಿಮಾಗೆ ತೊಂದರೆ ಆಗಾಬಾರದು ಅಂತ ನಿಂತಿದ್ದು, ಇವೆಲ್ಲವೂ ರಾಜ್‌ಕುಮಾರ್ ಮಾಡಿದ್ದು ತಪ್ಪು ಅನಿಸುತ್ತೆ" ಎಂದು ರಾಜ್‌ಕುಮಾರ್ ಅವರನ್ನು ವಿರೋಧಿಸಿದವರ ವಿರುದ್ಧ ಬೇಸರ ಹೊರ ಹಾಕಿದ್ದಾರೆ.

ಆರನೇ ತಪ್ಪು

"ಸಹಜವಾಗಿ ಅಭಿಮಾನಿಗಳು ಹೆಚ್ಚಾದರು. ಆ ವೇಳೆ ಅವರಿಗಾಗಿ ದೇಹವನ್ನು ಚೆನ್ನಾಗಿಯೇ ರೂಡಿ ಮಾಡಿಕೊಂಡಿದ್ದರು. ಈ ವೇಳೆ ಯೋಗ, ವ್ಯಾಯಾಮ ಮಾಡಿ ದೇಹವನ್ನು ದಂಡಿಸಿದ್ದರು. ಸಾಕಷ್ಟು ಹೆಸರು ಮಾಡಿದ ಮೇಲೂ ವಿಶ್ರಾಂತಿ ತೆಗೆದುಕೊಂಡು ಆರಾಮಾಗಿರಬಹುದಾಗಿದ್ದ ಕಾಲದಲ್ಲಿ ದೇಹವನ್ನು ದಂಡಿಸಿದ ತ್ಯಾಗ ಮಾಡಿದ್ದು ತಪ್ಪು ಅನಿಸುತ್ತೆ." ಎನ್ನುತ್ತಾರೆ.

Twelve mistakes made by Dr Rajkumar in his career listed by senior journalist Hariharapura Manjunath

ಏಳನೇ ತಪ್ಪು

"ಬೇರೆಯವರು ರಾಜಕೀಯ ಆಸಕ್ತಿ ಬೆಳೆಸಿಕೊಂಡಿದ್ದರೂ ಸಹ, ರಾಜ್‌ಕುಮಾರ್ ರಾಜಕೀಯದಿಂದ ದೂರ ಉಳಿದಿದ್ದರು. ಆದರೆ ಕನ್ನಡ ಕೆಲಸದಿಂದ ಅವರು ಯಾವತ್ತೂ ದೂರ ಉಳಿದಿರಲಿಲ್ಲ. ಬರ ಪರಿಹಾರ ನಿಧಿಗಾಗಲಿ, ರಕ್ಷಣಾ ನಿಧಿಗೆ ವಂತಿಕೆ ಸಂಗ್ರಹಿಸುವುದಕ್ಕಾಗಲಿ, ಗೋಕಾಕ್ ಚಳುವಳಿಯಾಗಲಿ, ಡಬ್ಬಿಂಗ್ ಸಿನಿಮಾಗಳ ಹಾವಳಿ ಇಂತಹದ್ದರ ಬಗ್ಗೆ ಯೋಚನೆ ಮಾಡದೆ. ಓಡೋಡಿ ಬರುತ್ತಿದ್ದರಲ್ಲ, ಬಹುಶ: ಅದೂ ಕೂಡ ಅವರು ಮಾಡಿದ ತಪ್ಪು." ಎಂದು ಹೇಳುತ್ತಾರೆ.

ಎಂಟನೇ ತಪ್ಪು

"ಇನ್ನು ರಾಜ್‌ಕುಮಾರ್ ಅವರಿಗಾಗಿಯೇ ಚಿತ್ರರಂಗ ಬೆಳೆಯುತ್ತಿತ್ತು. ನಿರ್ಮಾಪಕರು ಬದುಕುತ್ತಿದ್ದರು. ಇಷ್ಟಾದರೂ ಕೂಡ ತಮ್ಮ ನಿರ್ಮಾಪಕರನ್ನು ಅನ್ನದಾತರು ಅಂತ ಕರೆದಿದ್ದು. ಕರೆದಿದ್ದಷ್ಟೇ ಅಲ್ಲ. ಅದೇ ರೀತಿ ನಡೆದುಕೊಂಡಿದ್ದರು. ನಿರ್ಮಾಪಕರು ಹಣ ಸಮಸ್ಯೆ ಎದ್ದಾಗ ನಟಿಸಿದ್ದು, ಬಳಿಕದ ಅದೇ ನಿರ್ಮಾಪಕರು ನಷ್ಟ ಆಯ್ತು ಅಂತ ಇವರ ಬಳಿ ಬಂದಾಗ ಫ್ರೀ ಕಾಲ್‌ಶೀಟ್ ಕೊಟ್ಟಿದ್ದು ಇನ್ನೊಂದು ತಪ್ಪು." ಎನ್ನುತ್ತಾರೆ.

ಒಂಬತ್ತಲೇ ತಪ್ಪು

"ಒಂಬತ್ತನೇ ತಪ್ಪು ಏನಪ್ಪಾ ಅಂದರೆ, ತಮ್ಮ ವಿರುದ್ಧ ಏನೇ ಪಿತೂತರಿಗಳು ನಡೆಯುತ್ತಿದ್ದರೂ ಸಹ ಅದ್ಯಾವುದನ್ನೂ ಗಮನಿಸದೆ ತಮ್ಮ ಕೆಲಸವನ್ನು ತಾವು ಮಾಡಿಕೊಂಡು ಹೋಗುತ್ತಿದ್ದಿದ್ದು ಅವರು ಮಾಡಿದ ಮತ್ತೊಂದು ತಪ್ಪು"

ಹತ್ತನೇ ತಪ್ಪು

"ಯಾರಿವನು ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಅವರ ಮೇಲೆ ತಮಿಳು ಭಾಷಿಕರಿಂದ ಹಲ್ಲೆ ನಡೆಯುತ್ತೆ. ಆ ಹಲ್ಲೆ ನಡೆದಾಗ ಯಾವುದೇ ಉದ್ವೇಗಕ್ಕೆ ಒಳಗಾಗದೇ ದೇವರ ದಯೆಯಿಂದ ಬಚಾವ್ ಆಗಿ ಬರುತ್ತಾರೆ. ಅಷ್ಟೊತ್ತಿಗಾಗಲೇ ದೊಡ್ಡ ನಟನಾಗಿರುತ್ತಾರೆ. ಅಷ್ಟಾಗಿಯೂ ಯಾವುದೇ ರೀತಿಯ ವಿವಾದವನ್ನು ಸೃಷ್ಟಿಸಲಿಲ್ಲ." ಇಷ್ಟು ಒಳ್ಳೆಯವರಾಗಿದ್ದು ಕೂಡ ತಪ್ಪು ಎನ್ನುತ್ತಾರೆ.

ಹನ್ನೊಂದನೇ ತಪ್ಪು

"ಯಾವುದೇ ಪ್ರಶಸ್ತಿ ತಮ್ಮನ್ನು ಅರಸಿ ಬಂದಾಗ, ಬಂತಲ್ಲ ಅಂತ ಹೇಳಿ, ಅದನ್ನು ತೆಗೆದುಕೊಂಡು ಸುಮ್ಮನೇ ಇರೋದು ಬಿಟ್ಟು, ನಾನು ಈ ಪ್ರಶಸ್ತಿಗೆ ಯೋಗ್ಯನೇ ಅಂತ ಯೋಚಿಸುತ್ತಿದ್ದರಲ್ಲ, ಅದೂ ಕೂಡ ಅವರು ಮಾಡಿದ ತಪ್ಪು. ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸರ್ಕಾರ ಕೊಡುತ್ತೆ. ಆಗ ಒಂದು ಮಾತು ಹೇಳುತ್ತಾರೆ. ಕನ್ನಡಕ್ಕಾಗಿ ಕೆಲಸ ಮಾಡಿದವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುತ್ತೀರಿ. ಬೇಕಾದಷ್ಟು ಜನ ಹಿರಿಯರು ಇದ್ದಾರೆ. ಕುವೆಂಪು ಅಂತಹವರಿಗೆ ಆ ಪ್ರಶಸ್ತಿ ಸಲ್ಲಬೇಕು ನಾನು ತುಂಬಾ ಕಿರಿಯ. ನಾನೇನು ಮಾಡಿದ್ದೇನೆ ಎಂದು ವಿನೀತರಾಗಿ ಹೇಳುತ್ತಾರೆ. ಕೊನೆಗೆ ಕುವೆಂಪು ಅವರಿಗೂ, ರಾಜ್‌ಕುಮಾರ್ ಅವರಿಗೂ ಈ ಪ್ರಶಸ್ತಿಯನ್ನು ಒಟ್ಟಾಗಿ ಕೊಡುತ್ತಾರೆ. ಆ ವೇಳೆ ಕುವೆಂಪು ಅವರು ನನ್ನ ವಿಶ್ವಮಾನವ ಸಂದೇಶವನ್ನು ಪ್ರಪಂಚಕ್ಕೆ ಸಾರಿವ ಏಕೈಕ ವ್ಯಕ್ತಿ ರಾಜ್‌ಕುಮಾರ್" ಎನ್ನುತ್ತಾರೆ.

ಹನ್ನೆರಡನೇ ತಪ್ಪು

"ಅವರು ಚಿತ್ರರಂಗದಲ್ಲಿ ಇದ್ದಷ್ಟು ಕಾಲ. ಈ ಚಿತ್ರರಂಗದ ಎಲ್ಲಾ ಆಗು ಹೋಗುಗಳು ತನಗೆ ಸಂಬಂಧಪಟ್ಟಿದ್ದು, ನಾನಿದಕ್ಕೆ ಜವಾಬ್ದಾರ. ನಾನಿದ್ನನು ಸರಿಪಸಬೇಕು ಅಂತ ಜವಾಬ್ದಾರಿಯನ್ನು ತೆಗೆದುಕೊಂಡು ಮುನ್ನುಗ್ಗುತ್ತಿದ್ದರಲ್ಲ. ಇದು ರಾಜ್‌ಕುಮಾರ್ ಅವರು ಮಾಡಿದ ಹನ್ನೆರಡನೆಯ ತಪ್ಪು." ಎಂದು ಅಣ್ಣಾವ್ರ ಸ್ವಭಾವದ ಬಗ್ಗೆ ಹೇಳಿದ್ದಾರೆ.

"ನಾನು ಇದೂವರೆಗೂ ರಾಜ್‌ಕುಮಾರ್ ಅವರನ್ನು ಅಧ್ಯಯನ ಮಾಡಿದ ರೀತಿಯಲ್ಲಿ ನನಗೆ ಕಂಡು ಬಂದತಹ 12 ತಪ್ಪುಗಳನ್ನು ನಿಮ್ಮ ಮುಂದೆ ಪಟ್ಟಿ ಮಾಡಿ ಇಲ್ಲಿ ಇಟ್ಟಿದ್ದೀನಿ. ರಾಜ್‌ಕುಮಾರ್ ಅಂತ ವ್ಯಕ್ತಿ ನಮ್ಮ ನಾಡಿನಲ್ಲಿ ಜನಿಸಿದ್ದು ನಮ್ಮ ಪುಣ್ಯ. ಅಂತಹ ಒಂದು ವ್ಯಕ್ತಿತ್ವ ನಮ್ಮ ನಡುವೆ ಇತ್ತಿಲ್ಲ. ಅವರಿಗೆ ಗೌರವ ಸೂಚಿಸೋಣ." ಅಂತ ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಕೊನೆಯಲ್ಲಿ ಹೇಳಿಕೊಂಡಿದ್ದಾರೆ.

More from Filmibeat

English summary
Twelve mistakes made by Dr.Rajkumar in his career listed by senior journalist Hariharapura Manjunath
Read more about: rajkumar actor sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X