2021ರ ಸಾಲಿನಲ್ಲಿ ಟ್ವಿಟ್ಟರ್​ನಲ್ಲಿ ಅತಿ ಹೆಚ್ಚು ಟ್ರೆಂಡ್​ ಆದ ದಕ್ಷಿಣ ಭಾರತದ ಟಾಪ್​ 10 ನಟ-ನಟಿಯರ ಪಟ್ಟಿ!

ಇಯರ್ ಎಂಡ್ ಬರುತ್ತಿದೆ. ಇನ್ನೇನು ಎಲ್ಲರೂ 2021ನ್ನು ದಾಟಿ 2022ಕ್ಕೆ ಕಾಲಿಡುವ ಸಮಯ ಹತ್ತಿರದಲ್ಲಿದೆ. ಹೊಸವರ್ಷದ ಆಚರಣೆಗೆ ಎಲ್ಲರೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರತೀ ವರ್ಷದಂತೆ ಟ್ವಿಟ್ಟರ್ ಸಂಸ್ಥೆ ಸಾಕಷ್ಟು ಪಟ್ಟಿಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಟ್ವಿಟ್ಟರ್‌ನಲ್ಲಿ ಮೋಸ್ಟ್ ಸರ್ಚ್‌ಡ್ ಸೆಲೆಬ್ರೆಟಿಗಳ ಪಟ್ಟಿಯನ್ನು ಹೊರತಂದಿದೆ. ಇದರಲ್ಲಿ ಸಾಕಷ್ಟು ಕಲಾವಿದರ ಹೆಸರುಗಳು ಇದ್ದು, ಅಭಿಮಾನಿಗಳು ಈ ಪಟ್ಟಿಯಲ್ಲಿ ತಮ್ಮ ನೆಚ್ಚಿನ ನಟರು ಸ್ಥಾನ ಪಡೆದುಕೊಂಡಿದ್ದಾರಾ ಎಂದು ನೋಡುತ್ತಿದ್ದಾರೆ. ಹಾಗಾದರೆ ಟ್ವಿಟ್ಟರ್ ರಿಲೀಸ್ ಮಾಡಿರುವ ಪಟ್ಟಿಯಲ್ಲಿ ಯಾವ ಯಾವ ಕಲಾವಿದರ ಹೆಸರು ಇದೆ ಅಂತ ಮುಂದೆ ಓದಿ.

ಈ ವರ್ಷ ಹೆಚ್ಚು ಟ್ರೆಂಡಿಂಗ್‌ನಲ್ಲಿದ್ದ ದಕ್ಷಿಣ ಭಾರತದ ಸೆಲೆಬ್ರೆಟಿಗಳ ಪಟ್ಟಿ ಈಗ ರಿಲೀಸ್ ಆಗಿದ್ದು, ನಟಿಯರ ಪೈಕಿ ಸೌತ್ ನಟಿ ಕೀರ್ತಿ ಸುರೇಶ್ ಮತ್ತು ನಟರ ಪೈಕಿ ತಮಿಳು ನಟ ವಿಜಯ್ ಸೇತುಪತಿ ನಂ 1 ಸ್ಥಾನದಲ್ಲಿದ್ದಾರೆ.ಇನ್ನು ನಟಿಯರ ಪಟ್ಟಿಯಲ್ಲಿ ಯಾವ ಯಾವ ನಟಿಯರು ಎಷ್ಟನೇ ಸ್ಥಾನ ಪಡೆದುಕೊಂಡಿದ್ದಾರೆ ಅನ್ನೋದನ್ನ ಗಮಿಸೋದಾದರೇ.

1) ಕೀರ್ತಿ ಸುರೇಶ್​

2) ಪೂಜಾ ಹೆಗ್ಡೆ

3) ಸಮಂತಾ

4) ಕಾಜಲ್​ ಅಗರ್​ವಾಲ್​

5) ಮಾಳವಿಕಾ ಮೋಹನನ್

6) ರಾಕುಲ್​ ಪ್ರೀತ್​ ಸಿಂಗ್​

7) ಸಾಯಿ ಪಲ್ಲವಿ

8) ತಮನ್ನಾ ಭಾಟಿಯಾ

9) ಅನುಷ್ಕಾ ಶೆಟ್ಟಿ

10) ಅನುಪಮಾ ಪರಮೇಶ್ವರನ್​

 Twitter India releases 2021 most tweeted about south Indian actor and actress

ಇದಿಷ್ಟು ನಟಿಯರು ಟಾಪ್ 10 ಸ್ಥಾನವನ್ನು ಅಲಂಕರಿಸಿದ್ದಾರೆ. ಟ್ವಿಟ್ಟರ್‌ನ ಈ ವರದಿಗೆ ಈ ನಟಿಯರ ಅಭಿಮಾನಿಗಳು ಖುಷಿಯಾಗಿದ್ದು, ಸಂತಸಗೊಂಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದು ನೆಚ್ಚಿನ ನಟಿಯರಿಗೆ ಈ ಟ್ವಿಟ್ಟರ್ ವರದಿಯನ್ನು ಟ್ಯಾಗ್ ಮಾಡಿ ಖುಷಿ ಪಡುತ್ತಿದ್ದಾರೆ. ಆದರೆ ಈ ಟಾಪ್ 10 ನಟಿಯರ ಪೈಕಿ ಕನ್ನಡದ ಯಾವೊಬ್ಬ ನಟಿಯೂ ಇಲ್ಲ ಎಂಬುವುದು ಕನ್ನಡಿಗರಿಗೆ ಕೊಂಚ ನಿರಾಸೆಯಾಗಿದೆ. ಇನ್ನು ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿ ಇರುವ ನಟಿ ರಶ್ಮಿಕಾ ಮಂದಣ್ಣ ಹೆಸರು ಕೂಡ ಈ ಬಾರಿಯ ಟಾಪ್ 10 ನಟಿಯರ ಪಟ್ಟಿಯಲ್ಲಿ ಇಲ್ಲದೇ ಇರೋದು ಗಮನಾರ್ಹವಾಗಿದೆ.

ಇನ್ನು ಟಾಪ್ 10 ಸ್ಥಾನದಲ್ಲಿ ಸಾಕಷ್ಟು ನಟರು ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಆ ನಟರ ಪಟ್ಟಿಯನ್ನು ಗಮನಿಸೋದಾದರೇ ...

1) ದಳಪತಿ ವಿಜಯ್​

2) ಪವನ್​ ಕಲ್ಯಾಣ್​

3) ಮಹೇಶ್​ ಬಾಬು

4) ಸೂರ್ಯ

5) ಜ್ಯೂ. ಎನ್​ಟಿಆರ್​

6) ಅಲ್ಲು ಅರ್ಜುನ್​

7) ರಜನಿಕಾಂತ್​

8) ರಾಮ್​ ಚರಣ್​

9) ಧನುಶ್​

10) ಅಜಿತ್​ ಕುಮಾರ್​

ಟಾಪ್ 10 ನಟರ ಪಟ್ಟಿಯಲ್ಲಿಯೂ ಕನ್ನಡದ ಯಾವೊಬ್ಬ ನಟರ ಹೆಸರು ಕೂಡ ಇಲ್ಲ. ಇದು ಕೂಡ ಸಾಕಷ್ಟು ಅಭಿಮಾನಿಗಳಿಗೆ ನಿರಾಸೆಯಾಗಿದೆ. ಕೇವಲ ತಮಿಳು ಮತ್ತು ತೆಲುಗು ನಟರ ಹೆಸರಷ್ಟೇ ಇಲ್ಲಿ ದಾಖಲಾಗಿದ್ದು, ವಿಜಯ್ ದಳಪತಿ ನಂ 1 ಸ್ಥಾನವನ್ನು ಅಲಂಕರಿಸಿದ್ದಾರೆ. ಹೀಗಾಗಿ ವಿಜಯ್ ಅಭಿಮಾನಿಗಳು ಸಂಭ್ರಮದಲ್ಲಿದ್ದು, ನೆಚ್ಚಿನ ನಟನಿಗೆ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ.

 Twitter India releases 2021 most tweeted about south Indian actor and actress

ಹೀಗೆ ಟ್ವಿಟ್ಟರ್‌ನಲ್ಲಿ ಈ ವರ್ಷ ಸೌಂಡು ಮಾಡಿದ ಸಾಕಷ್ಟು ವಿಚಾರಗಳ ಬಗ್ಗೆ ಮಾಹಿತಿಯನ್ನು ಹೊರಹಾಕುತ್ತಿದೆ. ಪ್ರತೀವರ್ಷದಂತೆ ಈ ವರ್ಷವು ಈ ಪಟ್ಟಿಗಳು ರಿಲೀಸ್ ಆಗುತ್ತಿದ್ದು, ಸಿನಿಮಾ ಅಭಿಮಾನಿಗಳು ಸಾಕಷ್ಟು ಕುತೂಹಲ ಭರಿತರಾಗಿ ಈ ಅಪ್‌ಡೇಟ್ಸ್‌ಗಾಗಿ ಕಾಯುತ್ತಿದ್ದಾರೆ.

ಹಾಗೇ 2021 ರಲ್ಲಿ ಜನವರಿ 1 ರಿಂದ ನವೆಂಬರ್ 15ರವರೆಗೆ ಸಿನಿಮಾಗಳ ಬಗ್ಗೆ ಅತೀ ಹೆಚ್ಚು ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಲಾದ ಸಿನಿಮಾಗಳ ಪಟ್ಟಿಯನ್ನು ಟ್ಟಿಟ್ಟರ್ ರಿಲೀಸ್ ಮಾಡಿದೆ. ಇದರಲ್ಲಿ ನಂ 1 ಸ್ಥಾನದಲ್ಲಿ ವಿಜಯ್ ದಳಪತಿ ಅಭಿನಯದ ಮಾಸ್ಟರ್ ಸಿನಿಮಾ ಮೊದಲ ಸ್ಥಾನದಲ್ಲಿದ್ದು, ತಮಿಳು ನಟ ಅಜಿತ್ ನಟಿಸುತ್ತಿರುವ ಸಿನಿಮಾ 'ವಲಿಮೈ' 2ನೇ ಸ್ಥಾನದಲ್ಲಿದೆ. ವಿಜಯ್ ಅಭಿನಯದ ಸಿನಿಮಾ 'ಬೀಸ್ಟ್' ಮೂರನೇ ಸ್ಥಾನದಲ್ಲಿದೆ.

ಹಾಗೇ ಸೂರ್ಯ ಅಭಿನಯದ 'ಜೈ ಭೀಮ್' ನಾಲ್ಕನೇ ಸ್ಥಾನದಲ್ಲಿದೆ. ಹಾಗೇ ಟಾಲಿವುಡ್ ಪವರ್‌ಸ್ಟಾರ್ ಪವನ್ ಕಲ್ಯಾಣ್ ನಟಿಸಿದ 'ವಕೀಲ್ ಸಾಬ್' 2021ರಲ್ಲಿ ಅತೀ ಹೆಚ್ಚು ಟ್ವೀಟ್ ಮಾಡಿದ ಮೊದಲ ತೆಲುಗು ಸಿನಿಮಾ ಆಗಿದೆ. ಹಾಗೇ ದಕ್ಷಿಣ ಭಾರತದ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. 6ನೇ ಸ್ಥಾನದಲ್ಲಿ ಆರ್ ಆರ್ ಆರ್ ಸಿನಿಮಾ, 7ನೇ ಸ್ಥಾನದಲ್ಲಿ ಸರ್ಕಾರು ವಾರಿ ಪಾಟ, 8ನೇ ಸಿನಿಮಾದಲ್ಲಿ ಪುಷ್ಪ, 9ನೇ ಸ್ಥಾನದಲ್ಲಿ ಡಾಕ್ಟರ್, ಮತ್ತು 10ನೇ ಸ್ಥಾನದಲ್ಲಿ ಕನ್ನಡದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಸ್ಥಾನ ಪಡೆದುಕೊಂಡಿದೆ.

More from Filmibeat

English summary
Twitter India releases 2021 most tweeted about south Indian actor and actress top 10 list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X