Don't Miss!
- News
ದೆಹಲಿ; ವಿಷಾನೀಲ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ತಾಯಿ, ಇಬ್ಬರು ಮಕ್ಕಳು
- Sports
ಮುಂಬೈ ವಿರುದ್ಧ ಸೋಲು; ಪಂತ್ ನಾಯಕತ್ವದ ಬಗ್ಗೆ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದೇನು?
- Education
CUET 2022 Registration : ಪರೀಕ್ಷೆಗೆ ನೊಂದಾಯಿಸಿಕೊಳ್ಳಲು ಇಂದು ಕೊನೆಯ ದಿನ
- Automobiles
ಕೆಟಿಎಂ ಡ್ಯೂಕ್ 390 ಪ್ರತಿಸ್ಪರ್ಧಿ 2022ರ ಕಿಮ್ಕೊ ಕೆ ರೈಡರ್ 400 ಬೈಕ್ ಅನಾವರಣ
- Finance
ಟಾಪ್ 10 ಕಂಪನಿಗಳ ಪೈಕಿ 5 ಕಂಪನಿ ಮೌಲ್ಯ 1.78 ಲಕ್ಷ ಕೋಟಿ ಏರಿಕೆ
- Lifestyle
ಮೇ 22ರಿಂದ ರಿಂದ ಮೇ 28ರ ವಾರ ಭವಿಷ್ಯ: ಈ ರಾಶಿಯ ಉದ್ಯೋಗಿಗಳು ಯಾವುದೇ ಕೆಲಸದಲ್ಲೂ ನಿರ್ಲಕ್ಷ್ಯ ಮಾಡಬೇಡಿ
- Technology
ಟ್ರೂಕಾಲರ್ ಮಾದರಿಯ ಹೊಸ ಕಾಲರ್ ಐಡಿ ಫೀಚರ್ಸ್ ಪರಿಚಯಿಸಲು ಟ್ರಾಯ್ ಸಿದ್ಧತೆ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2021ರಲ್ಲಿ ಅತೀ ಹೆಚ್ಚು ಟ್ವೀಟ್ ಆಗಿದ್ದು ಕನ್ನಡದ ಒಂದೇ ಒಂದು ಸಿನಿಮಾ: ಯಾವುದು ಆ ಸಿನಿಮಾ?
2021ರಲ್ಲಿ ಎರಡನೇ ಅಲೆಯ ಅಬ್ಬರಕ್ಕೆ ರಿಲೀಸ್ ಆಗಬೇಕಿದ್ದ ಬಿಗ್ ಬಜೆಟ್ ಸಿನಿಮಾಗಳ ಬಿಡುಗಡೆ ಮುಂದಕ್ಕೆ ಹೋಗಿತ್ತು. ಆದರೂ, ಸೆಲೆಬ್ರೆಟಿಗಳು ಹಾಗೂ ಅವರ ಅಭಿಮಾನಿಗಳು ಬಹುನಿರೀಕ್ಷಿತ ಸಿನಿಮಾಗಳ ಬಗ್ಗೆ ಟ್ವೀಟ್ ಮಾಡುವುದನ್ನು ಮಾತ್ರ ನಿಲ್ಲಿಸಿರಲಿಲ್ಲ. 2021 ರಲ್ಲಿ ಜನವರಿ 1 ರಿಂದ ನವೆಂಬರ್ 15ರವರೆಗೆ ಸಿನಿಮಾಗಳ ಬಗ್ಗೆ ಅತೀ ಹೆಚ್ಚು ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಲಾದ ಸಿನಿಮಾಗಳ ಪಟ್ಟಿಯನ್ನು ಟ್ಟಿಟ್ಟರ್ ರಿಲೀಸ್ ಮಾಡಿದೆ.
2021 ಭಾರತೀಯ ಸಿನಿಪ್ರಿಯರನ್ನು ಡೋಲಾಯಮಾನ ಸ್ಥಿತಿಗೆ ತಲುಪಿಸಿತ್ತು. ಯಾವ ಸಿನಿಮಾ ರಿಲೀಸ್ ಆಗುತ್ತೆ. ಯಾವ ಬಿಡುಗಡೆ ಆಗುವುದಿಲ್ಲ ಅನ್ನುವುದೇ ದೊಡ್ಡ ಸವಾಲಾಗಿತ್ತು. ಈ ವೇಳೆ ತಮ್ಮ ನೆಚ್ಚಿನ ಸಿನಿಮಾಗಳ ಬಗ್ಗೆ ಜನರು ತಮ್ಮ ಕೌತುಕವನ್ನು ವ್ಯಕ್ತಪಡಿಸಿದ್ದರು. ಪ್ರೀತಿ ತೋರಿದ್ದರು. ಬಿಡುಗಡೆಯಾದ ಸಿನಿಮಾಗಳ ವಿಮರ್ಶೆಯನ್ನೂ ಮಾಡಿದ್ದರು. ಇವೆಲ್ಲವುಗಳನ್ನು ಆಧರಿಸಿ, ಅತೀ ಹೆಚ್ಚು ಟ್ವೀಟ್ ಮಾಡಲಾದ ದಕ್ಷಿಣ ಭಾರತದ ಸಿನಿಮಾಗಳ ಪಟ್ಟಿಯನ್ನು ಟ್ವಿಟರ್ ರಿಲೀಸ್ ಮಾಡಿದ್ದು, ಕನ್ನಡ ಒಂದೇ ಒಂದು ಸಿನಿಮಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ನಂ 1 ಸ್ಥಾನದಲ್ಲಿ 'ಮಾಸ್ಟರ್'
ದಳಪತಿ ವಿಜಯ್ ಅಭಿನಯದ 'ಮಾಸ್ಟರ್' ಸಿನಿಮಾ 2020ರಲ್ಲೇ ರಿಲೀಸ್ ಆಗಬೇಕಿತ್ತು. ಆದರೆ, ಈ ಸಿನಿಮಾ ಕೊರೊನಾ ಕಾರಣದಿಂದಾಗಿ ಬಿಡುಗಡೆಯಾಗಿರಲಿಲ್ಲ. 2021ರ ಆರಂಭದಲ್ಲಿ 'ಮಾಸ್ಟರ್' ಬಿಡುಗಡೆ ದಿನವನ್ನು ಘೋಷಣೆ ಮಾಡುತ್ತಿದ್ದಂತೆ, ಅಭಿಮಾನಿಗಳು ಅತೀ ಹೆಚ್ಚು ಟ್ವೀಟ್ ಮಾಡಿದ್ದರು. ಸಿನಿಮಾ ಬಿಡುಗಡೆ ಹಾಗೂ ಮ್ಯೂಸಿಕ್ ಬಗ್ಗೆ ಹೆಚ್ಚು ಟ್ವೀಟ್ ಮಾಡಿದ್ದರು. ಹೀಗಾಗಿ 'ಮಾಸ್ಟರ್' ಈ ವರ್ಷ ಅತ್ಯಧಿಕ ಟ್ವೀಟ್ ಮಾಡಲಾದ ಸಿನಿಮಾ ಆಗಿದೆ.

ನಂ 2 ಸ್ಥಾನದಲ್ಲಿ ವಲಿಮೈ
ತಮಿಳು ನಟ ಅಜಿತ್ ನಟಿಸುತ್ತಿರುವ ಸಿನಿಮಾ 'ವಲಿಮೈ' ಇನ್ನೂ ಚಿತ್ರೀಕರಣದ ಹಂತದಲ್ಲಿಯೇ ಇದೆ. ಈ ಸಿನಿಮಾ ಅಂದುಕೊಂಡಂತೆ ಆಗಿದ್ದರೆ, ಈ ವರ್ಷ ಬಿಡುಗಡೆ ಆಗಬೇಕಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ವಲಿಮೈ ಸಿನಿಮಾದ ಪ್ರೋಮೊ ಬಗ್ಗೆ ಅಜಿತ್ ಅಭಿಮಾನಿಗಳು ಟ್ವೀಟ್ ಮಾಡಿದ್ದರು. ಈ ಸಿನಿಮಾವನ್ನು ಹಿಂದಿಯಲ್ಲೂ ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಅತೀ ಹೆಚ್ಚು ಟ್ವೀಟ್ ಮಾಡಿದ ದಕ್ಷಿಣ ಭಾರತದ ಸಿನಿಮಾಗಳಲ್ಲಿ 'ವಲಿಮೈ' ಎರಡನೇ ಸ್ಥಾನದಲ್ಲಿದೆ.

ನಂ 3 ಸ್ಥಾನದಲ್ಲಿ 'ಬೀಸ್ಟ್'
ದಳಪತಿ ವಿಜಯ್ ಅಭಿಮಾನಿಗಳು ಈ ವರ್ಷ ಟ್ವೀಟ್ ಮಾಡುವುದರಲ್ಲಿ ಹೆಚ್ಚು ಬ್ಯುಸಿಯಾಗಿದ್ದರು. 'ಮಾಸ್ಟರ್' ಸಕ್ಸಸ್ ಕಂಡ ಬಳಿಕ ಮತ್ತೊಂದು ಸಿನಿಮಾ 'ಬೀಸ್ಟ್' ಘೋಷಣೆಯಾಗಿತ್ತು. ಈ ಸಿನಿಮಾ ಬಗ್ಗೆನೂ ಅತೀ ಹೆಚ್ಚು ಟ್ವೀಟ್ ಮಾಡಿದ್ದರು. ವಿಜಯ್ ಅಭಿನಯದ ಸಿನಿಮಾ 'ಬೀಸ್ಟ್' ಮೂರನೇ ಸ್ಥಾನದಲ್ಲದೆ.

ನಂ 4 ಸ್ಥಾನದಲ್ಲಿ 'ಜೈ ಭೀಮ್'
2021 ಕೇವಲ ಥಿಯೇಟರ್‌ಗಳಲ್ಲಿ ಬಿಡುಗಡೆಗೊಂಡ ಸಿನಿಮಾಗಳಿಗಷ್ಟೇ ಸೀಮಿತವಾಗಿರಲಿಲ್ಲ. ಓಟಿಟಿಯಲ್ಲಿ ಬಿಡುಗಡೆಗೊಂಡ ಸಿನಿಮಾಗಳೂ ಕೂಡ ಹೆಚ್ಚು ಪ್ರಸಿದ್ಧಿಯಲ್ಲಿತ್ತು. ಆ ಸಿನಿಮಾಗಳ ಪೈಕಿ ಸೂರ್ಯ ಅಭಿನಯದ 'ಜೈ ಭೀಮ್' ನಾಲ್ಕನೇ ಸ್ಥಾನದಲ್ಲಿದೆ. ವಿವಾದಕ್ಕೂ ಸಿಲುಕಿದ್ದ 'ಜೈ ಭೀಮ್' ಸಿನಿಮಾ ಬಗ್ಗೆ ಟ್ವಿಟ್ಟರ್‌ನಲ್ಲಿ ಹೆಚ್ಚು ಪ್ರಶಂಸೆಗೆ ಒಳಗಾಗಿತ್ತು.

ನಂ 5 ಸ್ಥಾನದಲ್ಲಿ 'ವಕೀಲ್ ಸಾಬ್'
ಟಾಲಿವುಡ್ ಪವರ್‌ಸ್ಟಾರ್ ಪವನ್ ಕಲ್ಯಾಣ್ ನಟಿಸಿದ 'ವಕೀಲ್ ಸಾಬ್' 2021ರಲ್ಲಿ ಅತೀ ಹೆಚ್ಚು ಟ್ವೀಟ್ ಮಾಡಿದ ಮೊದಲ ತೆಲುಗು ಸಿನಿಮಾ ಆಗಿದೆ. ಹಾಗೇ ದಕ್ಷಿಣ ಭಾರತದ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. 'ವಕೀಲ್ ಸಾಬ್' ಹಿಂದಿಯ ಪಿಂಕ್ ಸಿನಿಮಾದ ರಿಮೇಕ್ ಆಗಿದ್ದು, ತೆಲುಗು ಸಿನಿಪ್ರಿಯರ ಮನಗೆದ್ದಿತ್ತು.

ನಂ 6 ಸ್ಥಾನದಲ್ಲಿ RRR
ರಾಜಮೌಳಿ ನಿರ್ದೇಶನದ ಮೆಗಾ ಸಿನಿಮಾ RRR ಬಿಡುಗಡೆಗೆ ಸಜ್ಜಾಗಿದೆ. ಆದರೆ, ಈ ಸಿನಿಮಾ 2021ರ ಜುಲೈ ತಿಂಗಳಲ್ಲಿಯೇ ಬಿಡುಗಡೆಯಾಗಬೇಕಿತ್ತು. ಆಗ ಜೂ.ಎನ್‌ಟಿಆರ್, ರಾಮ್ ಚರಣ್, ಆಲಿಯಾ ಭಟ್ ಅಭಿನಯದ ಈ ಸಿನಿಮಾ ಬಗ್ಗೆ ಟ್ವೀಟ್ ಮಾಡಲಾಗಿತ್ತು. ಸಿನಿಮಾ ನೋಡುವುದಕ್ಕೆ ಕಾದು ಕೂತಿದ್ದ ಅಭಿಮಾನಿಗಳು ಟ್ವಿಟರ್‌ನಲ್ಲಿ RRR ಬಗ್ಗೆ ಹೆಚ್ಚು ಟ್ವೀಟ್ ಮಾಡಿದ್ದರು.

ನಂ 7 ಸ್ಥಾನದಲ್ಲಿ 'ಸರ್ಕಾರು ವಾರಿ ಪಾಟ'
'ಸರ್ಕಾರು ವಾರಿ ಪಾಟ' ಅತೀ ಹೆಚ್ಚು ಟ್ವೀಟ್ ಮಾಡಿದ ಮೂರನೇ ತೆಲುಗು ಸಿನಿಮಾ. ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ನಟಿಸಿದ ಈ ಸಿನಿಮಾ ವರ್ಷದ ಆರಂಭದಿಂದಲೇ ಸುದ್ದಿಯಲ್ಲಿತ್ತು. ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ಜೋಡಿ, ಥಮನ್ ಸಂಗೀತದ ಬಗ್ಗೆ ಅಭಿಮಾನಿಗಳಿಗೆ ಚಿತ್ರತಂಡ ಮಾಹಿತಿ ನೀಡುತ್ತಿತ್ತು. ಈ ವಿಚಾರವಾಗಿ ಅಭಿಮಾನಿಗಳು ಹೆಚ್ಚು ಟ್ವೀಟ್ ಮಾಡಿದ್ದರು.

ನಂ 8 ಸ್ಥಾನದಲ್ಲಿ 'ಪುಷ್ಪ'
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟಿಸಿರುವ ಸಿನಿಮಾ 'ಪುಷ್ಪ' ಬಿಡುಗಡೆಗೆ ಸಜ್ಜಾಗಿದೆ. ಡಿಸೆಂಬರ್ 17ರಂದು ತೆಲುಗು, ತಮಿಳು, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ವರ್ಷದ ಆರಂಭದಿಂದಲೇ ಈ ಸಿನಿಮಾದ ಬಗ್ಗೆ ಟ್ವಿಟರ್‌ನಲ್ಲಿ ಚರ್ಚೆಯಾಗುತ್ತಿತ್ತು. ಅದರಲ್ಲೂ 'ಪುಷ್ಪ' ಸಿನಿಮಾದ 'ದಾಕ್ಕು ದಾಕ್ಕು ಮೆಕಾ' ಹಾಡು ಬಿಡುಗಡೆಯಾದಲ್ಲಿಂದ ಈ ಚಿತ್ರದ ಬಗ್ಗೆ ಟ್ವಿಟರ್‌ನಲ್ಲಿ ಹೆಚ್ಚು ಚರ್ಚೆಯಾಗಿದೆ.

ನಂ 9 ಸ್ಥಾನದಲ್ಲಿ 'ಡಾಕ್ಟರ್'
'ಡಾಕ್ಟರ್' ಪದೇ ಪದೇ ವಿಳಂಬ ಕಂಡ ತಮಿಳು ಸಿನಿಮಾ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿದ ಈ ಸಿನಿಮಾ ಬಿಡುಗಡೆ ವಿಚಾರಕ್ಕೆ ಹೆಚ್ಚು ಚರ್ಚೆಯಲ್ಲಿತ್ತು. ಓಟಿಟಿಯಲ್ಲಿ ರಿಲೀಸ್ ಆಗುತ್ತೆ ಅನ್ನುವ ವಿಚಾರದಿಂದ ಹಿಡಿದು ಕೊನೆಗೆ ಥಿಯೇಟರ್‌ನಲ್ಲಿ ಬಿಡುಗಡೆಯಾಗುವವರೆಗೆ ಟ್ವಿಟರ್‌ನಲ್ಲಿ ಚರ್ಚೆಯಾಗಿತ್ತು. ಈ ಸಿನಿಮಾ 9ನೇ ಸ್ಥಾನದಲ್ಲಿದೆ.

10ನೇ ಸ್ಥಾನದಲ್ಲಿ 'KGF ಚಾಪ್ಟರ್ 2'
2021ರಲ್ಲಿ ಅತೀ ಹೆಚ್ಚು ಟ್ಚೀಟ್ ಆದ ದಕ್ಷಿಣ ಭಾರತದ ಸಿನಿಮಾಗಳ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಸಿನಿಮಾ 'KGF 2'. 'ಕೆಜಿಎಫ್ 2' ರಿಲೀಸ್‌ಗಾಗಿ ಸಿನಿಪ್ರಿಯರು ಕಾದು ಕೂತಿದ್ದಾರೆ. WWF ಕುಸ್ತಿಪಟು ವಿಲ್ಲೀ ಮ್ಯಾಕ್ 'ಕೆಜಿಎಫ್ 2' ಸಿನಿಮಾ ನೋಡಲು ಕಾದು ಕೂತಿರುವುದಾಗಿ ಟ್ವೀಟ್ ಮಾಡಿದ್ದರು. ಇದರೊಂದಿಗೆ 'KGF 2' ಸಿನಿಮಾ ಕೂಡ ಜುಲೈ 16ರಿಂದ ಏಪ್ರಿಲ್ 14ಕ್ಕೆ ಮುಂದೂಡಲ್ಪಟ್ಟಿತ್ತು. ಹೀಗಾಗಿ ಈ ವರ್ಷ 'ಕೆಜಿಎಫ್2' ಸಿನಿಮಾ ಬಗ್ಗೆ ಯಶ್ ಅಭಿಮಾನಿಗಳು ಅತೀ ಟ್ವೀಟ್ ಮಾಡಿದ್ದರು. ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಟ್ವೀಟ್ ಮಾಡದ ಸಿನಿಮಾಗಳ ಪೈಕಿ ಇರುವ ಏಕೈಕ ಕನ್ನಡ ಸಿನಿಮಾ.