Milana vs Googly: 'ಮಿಲನಾ' ಅಥವಾ 'ಗೂಗ್ಲಿ' ಯಾವ್ದು ಬೆಸ್ಟ್? ಚರ್ಚೆಗೆ Grok ಎಳೆದು ತಂದ ಫ್ಯಾನ್ಸ್

ಸೋಶಿಯಲ್ ಮೀಡಿಯಾದಲ್ಲಿ ಯಾವ ಫೋಟೊ, ವಿಡಿಯೋ ಯಾವಾಗ ವೈರಲ್ ಆಗುತ್ತೆ? ಯಾವ ವಿಚಾರ ಯಾವಾಗ ಚರ್ಚೆಗೆ ಬರುತ್ತೆ ಎಂದು ಹೇಳೋಕ್ಕಾಗಲ್ಲ. ಅಭಿಮಾನಿಗಳು ಸುಖಾಸುಮ್ಮನೆ ಏನೇನೋ ಕ್ಯಾತೆ ತೆಗೆದು ಇಲ್ಲ ಸಲ್ಲದ ಚರ್ಚೆ ಹುಟ್ಟುಹಾಕುತ್ತಾರೆ. ಟ್ವಿಟರ್‌ನಲ್ಲಿ ಇದ್ದಕ್ಕಿದಂತೆ 'ಮಿಲನಾ' ಅಥವಾ 'ಗೂಗ್ಲಿ' ಯಾವ ಸಿನಿಮಾ ಗ್ರೇಟ್ ಎನ್ನುವ ಚರ್ಚೆ ಮುನ್ನಲೆಗೆ ಬಂದಿದೆ.

ಪುನೀತ್ ರಾಜ್‌ಕುಮಾರ್‌ ನಟನೆಯ 'ಮಿಲನಾ' ಚಿತ್ರಕ್ಕಿಂತ ಯಶ್ ನಟನೆಯ 'ಗೂಗ್ಲಿ' ಚೆನ್ನಾಗಿದೆ ಎಂದು ನೆಟ್ಟಿಗರೊಬ್ಬರು ಮಾಡಿದ ಟ್ವೀಟ್ ಇಂತಾದೊಂದು ಚರ್ಚೆಗೆ ಕಾರಣವಾಗಿದೆ. ಪ್ರಕಾಶ್ ನಿರ್ದೇಶನದ ಮಿಲನಾ ಹಾಗೂ ಪವನ್ ಒಡೆಯರ್ ಸಾರಥ್ಯದ 'ಗೂಗ್ಲಿ' ಸಿನಿಮಾಗಳು ಹಿಟ್ ಲಿಸ್ಟ್ ಸೇರಿದ್ದು ಗೊತ್ತೇಯಿದೆ. ಎರಡೂ ಚಿತ್ರಗಳಿಗೆ ಪ್ರೇಕ್ಷಕರ ರೆಸ್ಪಾನ್ಸ್ ಚೆನ್ನಾಗಿತ್ತು. ಫ್ಯಾಮಿಲಿ ಎಂಟರ್‌ಟೈನರ್ 'ಮಿಲನಾ' ಸತತ ಒಂದು ವರ್ಷ ಪ್ರದರ್ಶನ ಕಂಡು ದಾಖಲೆ ಬರೆದಿತ್ತು.

Twitter War Erupts Between Fans Over Puneeth Rajkumar s Milana vs Yash s Googly

ಅಪ್ಪು ಹಾಗೂ ಪಾರ್ವತಿ ಮೆನನ್ ಜೋಡಿಯ 'ಮಿಲನಾ' ಚಿತ್ರವನ್ನು ಮರೆಯೋಕೆ ಸಾಧ್ಯವಿಲ್ಲ. ಅದಾಗಲೇ ಒಮ್ಮೆ ಪ್ರೀತಿಯಲ್ಲಿ ಸೋತ ಆಕಾಶ್(ಪುನೀತ್ ರಾಜ್‌ಕುಮಾರ್) ಹಾಗೂ ಅಂಜಲಿ(ಪಾರ್ವತಿ) ಪೋಷಕರ ಒತ್ತಾಯಕ್ಕೆ ಮಣಿದು ಮದುವೆ ಆಗುತ್ತಾರೆ. ಇಬ್ಬರಿಗೂ ಈ ಮದುವೆ ಜೀವನ ಇಷ್ಟವಿರುವುದಿಲ್ಲ. ಒಂದು ಹಂತಕ್ಕೆ ಇದು ಡಿವೋರ್ಸ್ ಹಂತಕ್ಕೆ ಹೋಗುತ್ತದೆ. ಆದರೆ ಕೊನೆಗೆ ಇಬ್ಬರೂ ಒಂದಾಗುತ್ತಾರೆ. ಸಿಂಪಲ್ ಕಥೆಯನ್ನು ಬಹಳ ಸೊಗಸಾಗಿ ತೆರೆಗೆ ತಂದು ಚಿತ್ರತಂಡ ಗೆದ್ದಿತ್ತು. ಮನೋಮೂರ್ತಿ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್.

ನಟ ಯಶ್ ಸಿನಿಜೀವನದ ಬಹಳ ಮುಖ್ಯವಾದ ಸಿನಿಮಾ 'ಗೂಗ್ಲಿ'. ಒಂದೊಳ್ಳೆ ಕಥೆ, ಚಿತ್ರಕಥೆ, ಹಾಡುಗಳು ಸೇರಿಸಿ ಮಾಡಿದ್ದ ಸಿನಿಮಾ ಯುಜ ಜನತೆಯ ಮನಗೆದ್ದಿತ್ತು. ಇವತ್ತಿಗೂ 'ಗೂಗ್ಲಿ' ಶರತ್ ಆಗಿ ಯಶ್ ಅವರ ಅಭಿನಯವನ್ನು ಅಭಿಮಾನಿಗಳು ಮರೆತ್ತಿಲ್ಲ. ಈ ಚಿತ್ರಕ್ಕೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. 'ಮಿಲನಾ' ಹಾಗೂ 'ಗೂಗ್ಲಿ' ಎರಡೂ ಫೀಲ್ ಗುಡ್ ಸಿನಿಮಾಗಳೇ. ಅದರಲ್ಲಿ ದೂಸ್ರಾ ಮಾತಿಲ್ಲ.

ಇದ್ದಕ್ಕಿದಂತೆ ಟ್ವಿಟ್ಟರ್‌ನಲ್ಲಿ 'ಮಿಲನಾ' ವರ್ಸಸ್ 'ಗೂಗ್ಲಿ' ಚರ್ಚೆ ಕಾವೇರಿದೆ. ಸಾಕಷ್ಟು ವಿಚಾರಗಳಲ್ಲಿ ಪುನೀತ್ ನಟನೆಯ 'ಮಿಲನಾ' ಸಿನಿಮಾ ಎತ್ತರದ ಸ್ಥಾನದಲ್ಲಿ ನಿಲ್ಲುತ್ತದೆ. 'ಗೂಗ್ಲಿ' ಚಿತ್ರವೂ ಚೆನ್ನಾಗಿದೆ. ಆದರೆ ಯಶ್ ಅಭಿಮಾನಿಗಳು 'ಗೂಗ್ಲಿ' ಗ್ರೇಟ್ ಎಂದರೆ ಅಪ್ಪು ಅಭಿಮಾನಿಗಳು ತಿರುಗೇಟು ನೀಡುತ್ತಿದ್ದಾರೆ. ಪ್ರೇಕ್ಷಕರ ಬೆಂಬಲ, ಬಾಕ್ಸಾಫೀಸ್ ಕಲೆಕ್ಷನ್ ಹೀಗೆ ಯಾವುದೇ ವಿಚಾರದಲ್ಲಿ 'ಮಿಲನಾ' ಚಿತ್ರಕ್ಕಿಂತ 'ಗೂಗ್ಲಿ' ಬಹಳ ದೂರದಲ್ಲಿ ನಿಲ್ಲುತ್ತದೆ ಎಂದು ತಿಳಿ ಹೇಳುತ್ತಿದ್ದಾರೆ. 'ಗೂಗ್ಲಿ' ಸಿನಿಮಾ ಹಿಂದಿಗೆ ಡಬ್ ಆಗಿ ಯೂಟ್ಯೂಬ್‌ನಲ್ಲಿ ಹೆಚ್ಚು ವೀವ್ಸ್ ಸಾಧಿಸಿದೆ ಎಂದು ಯಶ್ ಫ್ಯಾನ್ಸ್ ವಾದ ಮುಂದಿಡುತ್ತಿದ್ದಾರೆ.

'ಎಕ್ಸ್'(ಟ್ವಿಟ್ಟರ್) ವೇದಿಕೆಯಲ್ಲಿ ಪೋಸ್ಟ್ ಆಗುವ ಸಾಕಷ್ಟು ಪೋಸ್ಟ್‌ಗಳ ಸತ್ಯಾ ಸತ್ಯತೆ ತಿಳಿಯರು ನೆಟ್ಟಿಗರು 'ಗ್ರೋಕ್ ಎಐ' ಚಾಟ್‌ಬಾಟ್ ಬಳಸುತ್ತಾರೆ. ಸದ್ಯ ನೆಟ್ಟಿಗರು 'ಮಿಲನಾ' ವರ್ಸಸ್ 'ಗೂಗ್ಲಿ' ಫೈಟ್ ಬಗ್ಗೆ 'ಗ್ರೋಕ್'(grok) ಅಭಿಪ್ರಾಯ ಕೇಳಿದ್ದಾರೆ. 'ಗ್ರೋಕ್' ಕೂಡ 'ಮಿಲನಾ' ಸಿನಿಮಾ ಎಲ್ಲಾ ವಿಧದಲ್ಲೂ ಬೆಸ್ಟ್ ಎಂದು ಹೇಳಿದೆ.

ಇನ್ನು 'ಗೋಕುಲ' ಎಂಬ ಚಿತ್ರದಲ್ಲಿ ನಟ ಯಶ್ ನಟಿಸಿದ್ದರು. ಹಾಡೊಂದರಲ್ಲಿ 'ಮಿಲನಾ' ಚಿತ್ರದ ಪೋಸ್ಟರ್ ರೆಫರೆನ್ಸ್ ಇದೆ. ಅದನ್ನು ತೋರಿಸಿ ಇಡೀ ಚರ್ಚೆಗೆ ಪುನೀತ್ ಫ್ಯಾನ್ಸ್ ಬ್ರೇಕ್ ಹಾಕಿದ್ದಾರೆ. 'ಗೂಗ್ಲಿ' ಸಿನಿಮಾ ಮಾಡಬೇಕು ಎನ್ನುವುದು ಯಶ್ ಅಭಿಮಾನಿಗಳ ಆಸೆ. ಈ ಬಗ್ಗೆ ಯಶ್ ಹಾಗೂ ಪವನ್ ಒಡೆಯರ್ ಮುಂದೆ ಕೂಡ ಪ್ರಶ್ನೆ ಎದುರಾಗಿತ್ತು. 'KGF' ಸಿನಿಮಾ ಮಾಡಿ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟರು. ಬಳಿಕ ಚಿಕ್ಕ ಸಿನಿಮಾಗಳನ್ನು ಮಾಡಲು ಹಿಂದೇಟು ಹಾಕುತ್ತಿದ್ದಾರೆ.

More from Filmibeat

English summary
Whether Puneeth Rajkumar’s classic Milana or Yash’s youthful hit Googly is the better film
Read more about: puneeth rajkumar yash sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X