ನಶೆ ಏರಿದಾಗ ಕಥೆ ಬರೆಯಲು ಸ್ಫೂರ್ತಿ ಸಿಗುತ್ತಂತೆ; ತಮ್ಮ ಬ್ರ್ಯಾಂಡ್ ಯಾವ್ದು ಎಂದು ಹೇಳಿದ್ರು ನೀಲ್

ಭಾರತೀಯ ಚಿತ್ರರಂಗದ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದಿದ್ದರೂ ಯಾರ ಬಳಿಯೂ ಸಹಾಯಕರಾಗಿ ಕೆಲಸ ಮಾಡದೇ ಏಕಾಏಕಿ ಬಂದು ಸಿನಿಮಾ ಮಾಡಿ ಗೆದ್ದವರು. 'ಉಗ್ರಂ' ಸಿನಿಮಾ ಮಾಡಿ ಗೆದ್ದ ನೀಲ್ ಬಳಿಕ 'KGF' ಸರಣಿ ಮೂಲಕ ಸಂಚಲನ ಸೃಷ್ಟಿಸಿದರು.

ಸಾಮಾನ್ಯವಾಗಿ ಸಿನಿಮಾ ನಟ, ನಟಿಯರು, ತಂತ್ರಜ್ಞರು ತಾವು ಮದ್ಯ ಸೇವಿಸುವುದನ್ನು ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಇದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ ಆಗುತ್ತದೆ ಎಂದೇ ಅಂದುಕೊಳ್ಳುತ್ತಾರೆ. ಅಭಿಮಾನಿಗಳು ಇದನ್ನು ಅನುಸರಿಸಬಹುದು ಎನ್ನುವ ಭಯ ಇರುತ್ತದೆ. ಆದರೆ ನಿರ್ದೇಶಕ ಪ್ರಶಾಂತ್ ನೀಲ್ ಮಾತ್ರ ತಮ್ಮ ಚಟದ ಬಗ್ಗೆ ಬಹಿರಂಗವಾಗಿಯೇ ಮಾತನಾಡುತ್ತಾರೆ. ಮದ್ಯ ಸೇವಿಸುವ ಅಭ್ಯಾಸದಿಂದಲೇ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ ಕಥೆ, ಸೀನ್ಸ್ ಬರೆಯುವುದಾಗಿ ಹೇಳಿಕೊಂಡಿದ್ದಾರೆ.

Ugramm Director Prasanth Neel Reveals His Favorite Alcohol Brand: Find Out Which One?

ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಒಂದು ಷರತ್ತಿನ ಮೇಲೆ ಈ ವಿಷಯ ಹೇಳುತ್ತಿದ್ದೇನೆ. ನೀವು ಇದನ್ನು ಕಟ್ ಮಾಡುವಂತಿದ್ದರೆ ಮಾಡಿ, ಅಥವಾ ಹಾಕುವಂತಿದ್ದರೆ ಹಾಕಿ ಸಾಮಾನ್ಯವಾಗಿ ನಾನು ಎಣ್ಣಿ ಹೊಡೆದು ಕಥೆ ಬರೆದುಕೊಳ್ಳುತ್ತೇನೆ. ಬೆಳಿಗ್ಗೆ ಎದ್ದಾಗಲೂ ಅದು ಅಷ್ಟೇ ಮಜಾ ಕೊಟ್ಟರೆ ಮಾತ್ರದ ಅದನ್ನು ಉಳಿಸಿಕೊಳ್ಳುತ್ತೇನೆ" ಎಂದಿದ್ದರು.

ಬೇರೆ ಸಂದರ್ಶನಗಳಲ್ಲಿ ಕೂಡ ನಾನು ಮದ್ಯ ಸೇವಿಸಿ ನಾನು ಸಿನಿಮಾ ಕಥೆ, ಸನ್ನಿವೇಶಗಳನ್ನು ಬರೆಯುತ್ತೇನೆ ಎಂದು ಹೇಳಿದ್ದರು. ಪ್ರಶಾಂತ್ ನೀಲ್ ಎಲಿವೇಷನ್ಸ್ ಸೀನ್ಸ್‌ಗೆ ದೊಡ್ಡ ಅಭಿಮಾನಿ ಬಳಗವಿದೆ. 'ಬಾಹುಬಲಿ'ಯನ್ನು ಮೀರಿಸುವಂತಹ ಎಲಿವೇಷನ್ಸ್ ಸೀನ್ಸ್‌ 'KGF' ಸರಣಿ ಸಿನಿಮಾಗಳಲ್ಲಿ ಇದೆ ಎಂದು ಸಾಕಷ್ಟು ಜನ ಮೆಚ್ಚಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ತಮಾಷೆಯಾಗಿ ಕೆಲವರು ಕಾಮೆಂಟ್ ಮಾಡುತ್ತಿರುತ್ತಾರೆ. ಅದ್ಯಾವ ಬ್ರ್ಯಾಂಡ್ ಎಣ್ಣೆ ಹಾಕಿ ಕಥೆ ಬರೆಯುತ್ತೀರಾ ಹೇಳಿ? ಎಂದು ಕೇಳುವವರು ಇದ್ದಾರೆ.

ಅಂತೂ ಇಂತೂ ಪ್ರಶಾಂತ್ ನೀಲ್ ತಮ್ಮ ಬ್ರ್ಯಾಂಡ್ ಯಾವುದು? ಎಂದು ಬಹಿರಂಗಪಡಿಸಿದ್ದಾರೆ. 'ಉಗ್ರಂ' ಸಿನಿಮಾ 10 ವರ್ಷ ಪೂರೈಸಿದೆ. ಶ್ರೀಮುರಳಿ ನಟನೆಯ ಈ ಆಕ್ಷನ್ ಎಂಟರ್‌ಟ್ರೈನರ್ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಈ ಚಿತ್ರಕ್ಕಾಗಿ ಪ್ರಶಾಂತ್ ನೀಲ್ ನಿರ್ದೇಶಕನಾಗಿ, ನಿರ್ಮಾಪಕರಾಗಿ ಸಾಕಷ್ಟು ಶ್ರಮಿಸಿದ್ದರು. ಅದಕ್ಕೆ ತಕ್ಕ ಫಲ ಸಿಕ್ಕಿತ್ತು. ಬಾಕ್ಸಾಫೀಸ್‌ನಲ್ಲಿ ದೊಡ್ಡಮಟ್ಟದಲ್ಲಿ ಗೆಲ್ಲದಿದ್ದರೂ ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಒಳ್ಳೆ ಹೆಸರು ತಂದುಕೊಟ್ಟಿತ್ತು.

Ugramm Director Prasanth Neel Reveals His Favorite Alcohol Brand: Find Out Which One?

ಸಿನಿಮಾ ಎಬಿಸಿಡಿ ಗೊತ್ತಿಲ್ಲದೇ ಸಿನಿಮಾ ಮಾಡುವ ಕನಸು ಕಂಡು 'ಉಗ್ರಂ' ಎನ್ನುವ ಸಾಹಸಕ್ಕೆ ಪ್ರಶಾಂತ್ ನೀಲ್ ಕೈ ಹಾಕಿದ್ದರು. ತಾವೇ ನಿರ್ಮಾಪಕರಾಗಿ ಸಾಲ ಮಾಡಿ ಮನೆ ಮಾರಿ ಸಿನಿಮಾ ಮಾಡಿದ್ದರು. ಅಷ್ಟು ಕಷ್ಟಪಟ್ಟು ಮಾಡಿದ್ದ ಸಿನಿಮಾವನ್ನು ಇಂಡಸ್ಟ್ರಿಯಲ್ಲಿ ಯಾರು ಮೆಚ್ಚಲಿಲ್ಲ. ವಿತರಣೆ ಮಾಡಲು ಮುಂದೆ ಬರಲಿಲ್ಲ. ಕೊನೆಗೆ ನಟ ದರ್ಶನ್ ತಮ್ಮ ತೂಗುದೀಪ ಬ್ಯಾನರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಿಕೊಟ್ಟಿದ್ದರು ಎಂದು ಹೇಳಿದ್ದಾರೆ.

'ಉಗ್ರಂ' ದಶಕದ ಸಂಭ್ರಮದಲ್ಲಿ ಅನುಶ್ರೀ ಯೂಟ್ಯೂಬ್‌ ಚಾನಲ್‌ ವಿಶೇಷ ಸಂದರ್ಶನದಲ್ಲಿ ಚಿತ್ರತಂಡ ಭಾಗಿ ಆಗಿತ್ತು. ಈ ವೇಳೆ 'ಉಗ್ರಂ' ಸಿನಿಮಾ ಮೇಕಿಂಗ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮೊದಲಿಗೆ 'ನಂದೇ' ಎನ್ನುವ ಹೆಸರಿನಲ್ಲಿ 'ಉಗ್ರಂ' ಸಿನಿಮಾ ಶುರುವಾಗಿತ್ತು. ಬಳಿಕ ಸಾಕಷ್ಟು ಬದಲಾವಣೆಗಳಾಗಿ ಕೊನೆಗೆ 'ಉಗ್ರಂ' ಆಗಿ ತೆರೆಗೆ ಬಂದಿತ್ತು. ಇನ್ನು ಸಾಕಷ್ಟು ಬಾರಿ ರೀಶೂಟ್ ಮಾಡಿ ಕೊನೆಗೆ ಆ ಚಿತ್ರವನ್ನು ತೆರೆಗೆ ತಂದು ಚಿತ್ರತಂಡ ಗೆದ್ದಿತ್ತು.

'ಉಗ್ರಂ' ಸಿನಿಮಾ ವೇಳೆ 'ಮ್ಯಾನ್ಷನ್ ಹೌಸ್' ಬ್ರ್ಯಾಂಡ್ ಮದ್ಯ ಸೇವಿಸುತ್ತಿದ್ದೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ. ಸದ್ಯ ಪ್ರಶಾಂತ್ ನೀಲ್ ಹೇಳಿಕೆ ವೈರಲ್ ಆಗುತ್ತಿದೆ.

More from Filmibeat

English summary
Prashanth neel revelead his drinks brand name;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X