ಸಿನಿ ಜಗತ್ತಿನ ಅನಿಶ್ಚಿತತೆ; ಈ ಸ್ಟಾರ್ ನಟರು ಸೂಪರ್ ಹಿಟ್‌ಗಿಂತ ಫ್ಲಾಪ್ ಸಿನಿಮಾಗಳನ್ನು ಕೊಟ್ಟಿದ್ದೇ ಹೆಚ್ಚು
ನಟನೆ, ಸಿನಿಮಾ ಕಿರುತೆರೆ ಹೀಗೆ ಬಣ್ಣದ ಲೋಕಕ್ಕೆ ಕಾಲಿಟ್ಟು ಮಿಂಚುವ ಕನಸು ಹೊತ್ತಿರುವ ಹತ್ತಾರು, ನೂರಾರು ಮಂದಿ ಕನಸುಗಾರರು ಸೂಪರ್ ಫೇಮಸ್ ಆಗುವ ಕನಸು ಕಾಣುತ್ತಿರಬಹುದು. ಆದರೆ, ತೆರೆಯಲ್ಲಿ ಮಿಂಚುವ ಅದೆಷ್ಟೋ ನಟ ನಟಿಯರ ತೆರೆ ಹಿಂದಿನ ಕಷ್ಟ ಸವಾಲು ಹಾಗೂ ಸೋಲುಗಳು ಹೇಳ ತೀರದು.
ಬಾಲಿವುಡ್‌ನ ಅದೆಷ್ಟೋ ಸ್ಟಾರ್ ನಟರು ತೆರೆಯಲ್ಲಿ ಮಿಂಚುವುದಕ್ಕಿಂತ ಸಿನಿಮಾಗಳಲ್ಲಿ ಫ್ಲಾಪ್ ಆಗಿದ್ದೇ ಹೆಚ್ಚು. ಇಂದು ಅದೇ ನಟರನ್ನು ನಾವು ಸೂಪರ್ ಸ್ಟಾರ್‌ಗಳು ಎಂದು ಆರಾಧಿಸುತ್ತೇವೆ. ಆದರೆ, ಅವರದ್ದು ಸೂಪರ್ ಹಿಟ್ ಸಿನಿಮಾಗಳ ಜೊತೆ ಜೊತೆಗೆ ಫ್ಲಾಪ್ ಸಿನಿಮಾಗಳ ದೊಡ್ಡ ಲಿಸ್ಟೇ ಇದೆ. ಇದೀಗ ಬಾಲಿವುಡ್‌ನ ಸೂಪರ್ ಹಿಟ್ ನಟರ ಸಿನಿಮಾ ಸ್ಟೇಟಸ್ ನೋಡೋಣ ಬನ್ನಿ!

ನಟ ಅನಿಲ್ ಕಪೂರ್ ಬಾಲಿವುಡ್‌ನ ಅತಿ ದೊಡ್ಡ ಸ್ಟಾರ್. ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡ ಇವರು ಇದೀಗ ಹಿರಿಯ ನಟರಾಗಿ ಕೆಲಸಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ 'ಅನಿಮಲ್' ಸಿನಿಮಾ ಬಹಳ ಫೇಮಸ್ ಆಗಿದೆ. ಅಸಲಿಗೆ ಈ ಹಿರಿಯ ನಟ ಅನಿಲ್ ಕಪೂರ್ ಅವರು ನಟಿಸಿರುವ ನೂರಾರು ಸಿನಿಮಾಗಳಲ್ಲಿ ಬರೋಬ್ಬರಿ 55 ಸಿನಿಮಾಗಳು ಫ್ಲಾಪ್ ಆಗಿವೆ. ಕೇವಲ 28 ಸಿನಿಮಾಗಳು ಮಾತ್ರ ಯಶಸ್ಸನ್ನು ಕಂಡಿದೆ. ಆದರೆ, ಅದೇ 28 ಸಿನಿಮಾ ಇವರಿಗೆ ಬಹಳಷ್ಟು ಹೆಸರು ಹಾಗೂ ಹಣ ತಂದುಕೊಟ್ಟಿದೆ.
ಹಿರಿಯ ನಟ ದಿವಂಗತ ರಿಷಿ ಕಪೂರ್ ಬಾಲಿವುಡ್‌ನಲ್ಲಿ ಬಹಳ ಹೆಸರು ಮಾಡಿದ್ದಾರೆ. ಅಸಲಿ ವಿಚಾರವೆಂದರೆ, ಇವರ ಇಡೀ ಸಿನಿಮಾ ಕೆರಿಯರ್‌ನಲ್ಲಿ 76 ಸಿನಿಮಾಗಳು ಹೀನಾಯ ಸೋಲು ಕಂಡಿದ್ದವು. 34 ಸಿನಿಮಾಗಳು ಸೂಪರ್ ಹಿಟ್ ಆಗಿ ಇವರನ್ನು ಎವರ್ ಗ್ರೀನ್ ನಟನನ್ನಾಗಿ ಮಾಡಿದೆ.
ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ನಟ ಅಕ್ಷಯ್ ಕುಮಾರ್ ಅವರದ್ದು ಸಿನಿಮಾಗಳ ದೊಡ್ಡ ಲಿಸ್ಟೇ ಇದೆ. ಆದರೆ ಇವರು ನಟಿಸಿರುವ ಸಿನಿಮಾಗಳಲ್ಲಿ ಹೆಚ್ಚುಕಮ್ಮಿ 40 ಸಿನಿಮಾಗಳು ಹಿಟ್ ಆಗಿವೆ. ಅದೇ ರೀತಿ 56 ಸಿನಿಮಾ ಫ್ಲಾಪ್ ಆಗಿದೆ.
ನಟ ಸಂಜಯ್ ದತ್ ತಮ್ಮ ಸಿನಿಮಾ ಕೆರಿಯರ್ ನಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದು ಹೆಚ್ಚು. ವಿಚಾರವೆಂದರೆ ಇವರದ್ದು 26 ಸಿನಿಮಾಗಳು ಹಿಟ್ ಆದರೆ, ಬರೋಬ್ಬರಿ 60 ಸಿನಿಮಾಗಳು ಪ್ಲಾಪ್ ಆಗಿವೆ.

200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟ ಅಮಿತಾಭ್ ಬಚ್ಚನ್ ಹೆಚ್ಚು ಕಮ್ಮಿ 56 ಸಿನಿಮಾಗಳಲ್ಲಿ ಬಹಳ ಯಶಸ್ಸನ್ನು ಕಂಡಿದ್ದಾರೆ. 67ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹೀನಾಯ ಸೋಲು ಕಂಡಿದ್ದಾರೆ.
ಖಡಕ್ ವಾಯ್ಸ್‌ನ ಬಾಲಿವುಡ್ ಸಿಂಗಂ ಖ್ಯಾತಿಯ ನಟ ಅಜಯ್ ದೇವಗನ್ ಹೆಚ್ಚುಕಮ್ಮಿ 100 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ 40 ಸಿನಿಮಾಗಳು ಅಟ್ಟರ್ ಫ್ಲಾಪ್ ಆಗಿವೆ. 24 ಸಿನಿಮಾಗಳು ಯಶಸ್ಸು ಕಂಡು, ಉಳಿದವರು ಸಾಧಾರಾಣ ಯಶಸ್ಸು ಕಂಡಿದೆ. ಆದರೆ, ಗೆದ್ದ ಸಿನಿಮಾಗಳಲ್ಲೇ ಬಾಲಿವುಡ್‌ನ ಅತ್ಯುತ್ತಮ ನಟ ಎಂದು ಸಾಬೀತು ಮಾಡಿದ್ದಾರೆ.
ಬಾಲಿವುಡ್‌ನ ಮತ್ತೊಬ್ಬ ಸ್ಟಾರ್ ನಟ ಗೋವಿಂದ ಅವರ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ 75 ಸಿನಿಮಾಗಳು ಫ್ಲಾಪ್. ಆದರೆ ಬರೀ 28 ಸಿನಿಮಾಗಳು ಯಶಸ್ಸು ಕಂಡಿವೆ. ಬಾಲಿವುಡ್‌ನ ಹಿರಿಯ ಕಲಾವಿದ ನಟ ಧರ್ಮೇಂದ್ರ ಅವರು 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಹೆಚ್ಚು ಕಮ್ಮಿ 74 ಸಿನಿಮಾಗಳು ಬರೋಬ್ಬರಿ ಯಶಸ್ಸು ಕಂಡರೆ. 99 ಸಿನಿಮಾಗಳು ಅಟ್ಟರ್ ಫ್ಲಾಪ್ ಎನಿಸಿಕೊಂಡಿವೆ.
ಧರ್ಮೇಂದ್ರ ಅವರ ಪುತ್ರ ಸನ್ನಿ ಡಿಯೋಲ್ ಅವರ ಸಿನಿಮಾಗಳ ಸಂಖ್ಯೆ ದೊಡ್ಡದೇ ಇದೆ. ಆದರೆ 44 ಸಿನಿಮಾಗಳು ಸೋಲನ್ನು ಕಂಡರೆ, ಬರೀ 22 ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡಿವೆ. ಈ ಎಲ್ಲಾ ನಟರ ಸಿನಿಮಾ ಯಶಸ್ಸು ಹಾಗೂ ಸೋಲು ಸಿನಿ ಜಗತ್ತಿನ ಅನಿಶ್ಚಿತತೆಯನ್ನು ಎತ್ತಿ ಹಿಡಿಯುತ್ತದೆ. ಜೊತೆಗೆ ಇದೇ ನಟರ ಆತ್ಮಸ್ಥೈರ್ಯ ಹಾಗೂ ಗೆಲುವಿನ ಛಲ ಯುವ ನಟರಿಗೆ ಮಾದರಿ ಎಂದರೆ ತಪ್ಪಾಗಲ್ಲ.


Click it and Unblock the Notifications











