For Quick Alerts
  ALLOW NOTIFICATIONS  
  For Daily Alerts

  ಅಪರೂಪದ ಜೋಡಿಗಳು ನಟಿಸುತ್ತಿರುವ ನಿರೀಕ್ಷೆಯ ಚಿತ್ರಗಳು

  |

  ಸಿನಿಮಾ ಇಂಡಸ್ಟ್ರಿಯಲ್ಲಿ ಎರಡು ಟ್ರೆಂಡ್ ಇದೆ. ಒಂದು ಸಲ ಹಿಟ್ ಜೋಡಿ ಮತ್ತೆ ಮತ್ತೆ ಒಟ್ಟಿಗೆ ಚಿತ್ರದಲ್ಲಿ ನಟಿಸುವುದು. ಒಂದು ಸಿನಿಮಾ ಫ್ಲಾಪ್ ಆದ್ಮೇಲೆ ಮತ್ತೆ ಆ ಜೋಡಿ ಒಟ್ಟಿಗೆ ನಟಿಸುವುದಿಲ್ಲ. ಇನ್ನು ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಹೆಚ್ಚಾದ ಮೇಲೆ 'ಫ್ರೆಶ್ ಪೇರ್' ಎನ್ನುವುದು ಪ್ರಮುಖವಾಗಿದೆ. ಇದರ ಪರಿಣಾಮ ಬಾಲಿವುಡ್‌ ಕಲಾವಿದರು ಸೌತ್ ಇಂಡಸ್ಟ್ರಿಗೆ ಬರ್ತಾರೆ. ದಕ್ಷಿಣ ಕಲಾವಿದರ ಬಾಲಿವುಡ್‌ಗೆ ಹೋಗ್ತಿದ್ದಾರೆ.

  ಇತ್ತೀಚಿನ ದಿನಗಳಲ್ಲಿ ಕನ್ನಡ ನಟ-ನಟಿಯರು ತಮಿಳು, ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ತಮಿಳು ಹಾಗೂ ತೆಲುಗಿನವರು ಕನ್ನಡದಲ್ಲಿ ಹೆಚ್ಚಾಗಿ ಅಭಿನಯಿಸುತ್ತಿದ್ದಾರೆ. ಹೀಗೆ, ಭಾರತೀಯ ಸಿನಿಲೋಕದಲ್ಲಿ ಬೇರೆ ಬೇರೆ ಇಂಡಸ್ಟ್ರಿಯ ನಟ-ನಟಿಯರು ಮೊದಲ ಸಲ ಕಾಣಿಸಿಕೊಳ್ಳುತ್ತಿರುವ ನಿರೀಕ್ಷೆಯ ಚಿತ್ರಗಳ ವಿವರ ಇಲ್ಲಿದೆ. ಮುಂದೆ ಓದಿ...

  ಕೆಜಿಎಫ್ ಚಾಪ್ಟರ್ 2 ವಿಳಂಬವಾಗಲು ಕಾರಣ ಇದೇನಾ? ಕೆಜಿಎಫ್ ಚಾಪ್ಟರ್ 2 ವಿಳಂಬವಾಗಲು ಕಾರಣ ಇದೇನಾ?

  ಶಾರೂಖ್ ಖಾನ್-ನಯನತಾರ

  ಶಾರೂಖ್ ಖಾನ್-ನಯನತಾರ

  ದಕ್ಷಿಣದ ಲೇಡಿ ಸೂಪರ್ ಸ್ಟಾರ್ ನಯನತಾರ ಮೊದಲ ಸಲ ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳು ನಿರ್ದೇಶಕ ಅಟ್ಲಿ ಹಾಗೂ ಶಾರೂಖ್ ಖಾನ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಶಾರೂಖ್ ಮತ್ತು ನಯನತಾರ ಮೊದಲ ಸಲ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

  ಜಾಲಿ ರೆಡ್ಡಿ ಬಳಿಕ ಭನ್ವರ್ ಸಿಂಗ್ ಶೇಖಾವತ್ ದರ್ಶನ: 'ಪುಷ್ಪ' ಸಿನಿಮಾದ ಫಹಾದ್ ಲುಕ್ ರಿವೀಲ್ಜಾಲಿ ರೆಡ್ಡಿ ಬಳಿಕ ಭನ್ವರ್ ಸಿಂಗ್ ಶೇಖಾವತ್ ದರ್ಶನ: 'ಪುಷ್ಪ' ಸಿನಿಮಾದ ಫಹಾದ್ ಲುಕ್ ರಿವೀಲ್

  ಪ್ರಭಾಸ್-ದೀಪಿಕಾ ಪಡುಕೋಣೆ

  ಪ್ರಭಾಸ್-ದೀಪಿಕಾ ಪಡುಕೋಣೆ

  ದೀಪಿಕಾ ಪಡುಕೋಣೆ ಮತ್ತೊಮ್ಮೆ ಸೌತ್ ಇಂಡಸ್ಟ್ರಿ ಕಡೆ ಹೆಜ್ಜೆ ಹಾಕುತ್ತಿದ್ದಾರೆ. 2014ರಲ್ಲಿ ರಜನಿಕಾಂತ್ ಜೊತೆ ಆನಿಮೇಷನ್ ಚಿತ್ರ 'ಕೊಚಾಡಿಯನ್' ಮಾಡಿದ್ದರು. ಈಗ ಪ್ರಭಾಸ್ ಜೊತೆ ಇನ್ನು ಹೆಸರಿಡದ ಚಿತ್ರದಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ಪ್ರಭಾಸ್ ಅವರ 21ನೇ ಪ್ರಾಜೆಕ್ಟ್ ಇದಾಗಿದ್ದು, ನಾಗ್ ಅಶ್ವಿನ್ ನಿರ್ದೇಶಿಸುತ್ತಿದ್ದಾರೆ. ಅಮಿತಾಭ್ ಬಚ್ಚನ್ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಜೋಡಿಯನ್ನು ತೆರೆಮೇಲೆ ನೋಡಬಹುದು.

  ಅನನ್ಯ ಪಾಂಡೆ-ವಿಜಯ್ ದೇವರಕೊಂಡ

  ಅನನ್ಯ ಪಾಂಡೆ-ವಿಜಯ್ ದೇವರಕೊಂಡ

  ಅರ್ಜುನ್ ರೆಡ್ಡಿ ಚಿತ್ರದೊಂದಿಗೆ ನ್ಯಾಷನಲ್ ಸ್ಟಾರ್ ಎನಿಸಿಕೊಂಡಿದ್ದ ವಿಜಯ್ ದೇವರಕೊಂಡ ಈಗ ಪೂರಿ ಜಗನ್ನಾಥ್ ನಿರ್ದೇಶನದಲ್ಲಿ 'ಲೈಗರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಚೆಲುವೆ ಅನನ್ಯ ಪಾಂಡೆ ನಾಯಕಿಯಾಗಿದ್ದಾರೆ. ತೆಲುಗು ಮತ್ತು ಹಿಂದಿಯಲ್ಲಿ ತಯಾರಾಗುತ್ತಿರುವ ಈ ಚಿತ್ರ ಅನನ್ಯ ಹಾಗೂ ದೇವರಕೊಂಡ ಜೋಡಿಯ ವಿಚಾರಕ್ಕೆ ವಿಶೇಷವಾಗಿದೆ.

  ಪ್ರಭಾಸ್-ಕೃತಿ ಸನೂನ್

  ಪ್ರಭಾಸ್-ಕೃತಿ ಸನೂನ್

  ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟಿಸುತ್ತಿರುವ ಮತ್ತೊಂದು ಮೆಗಾ ಚಿತ್ರ ಆದಿಪುರುಷ್. ಓಂ ರಾವತ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ. ಸೀತೆ ಪಾತ್ರದಲ್ಲಿ ಕೃತಿ ಸನೂನ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಪ್ರೇಮಿಗಳ ಮಟ್ಟಿಗೆ ಪ್ರಭಾಸ್-ಕೃತಿ ಸನೂನ್ ಜೋಡಿಯೂ ಹೊಸತು.

  ರಶ್ಮಿಕಾ ಮಂದಣ್ಣ-ಸಿದ್ಧಾರ್ಥ್ ಮಲ್ಹೋತ್ರ

  ರಶ್ಮಿಕಾ ಮಂದಣ್ಣ-ಸಿದ್ಧಾರ್ಥ್ ಮಲ್ಹೋತ್ರ

  ಸೌತ್ ಇಂಡಿಯಾ ಕ್ರಶ್ ರಶ್ಮಿಕಾ ಮಂದಣ್ಣ ಮೊದಲ ಸಲ ಬಾಲಿವುಡ್‌ನಲ್ಲಿ ಸಿನಿಮಾ ಮಾಡ್ತಿದ್ದಾರೆ. ನಟ ಸಿದ್ಧಾರ್ಥ್ ಮಲ್ಹೋತ್ರ ಅಭಿನಯದ ಮಿಷನ್ ಮಜ್ನು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಮೂಲಕ ಸಿದ್ಧಾರ್ಥ್ ಹಾಗೂ ರಶ್ಮಿಕಾ ಜೋಡಿ ಬಾಲಿವುಡ್‌ಗೆ ಹೊಸತು.

  ಸಾರಾ ಅಲಿ ಖಾನ್-ಧನುಶ್

  ಸಾರಾ ಅಲಿ ಖಾನ್-ಧನುಶ್

  ತಮಿಳು ನಟ ಧನುಶ್ ಮತ್ತೊಮ್ಮೆ ಹಿಂದಿ ಚಿತ್ರದಲ್ಲಿ ನಟಿಸಿದ್ದಾರೆ. ಆನಂದ್ ಎಲ್ ರೈ ನಿರ್ದೇಶನದ ಅತ್ರಂಗಿ ರೇ ಸಿನಿಮಾದಲ್ಲಿ ಧನುಶ್ ಮತ್ತು ಸಾರಾ ಅಲಿ ಖಾನ್ ಜೋಡಿಯಾಗಿ ಅಭಿನಯಿಸಿದ್ದಾರೆ. ಅಕ್ಷಯ್ ಕುಮಾರ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಕುತೂಹಲ ಹೆಚ್ಚಿಸಿದೆ.

  ಸಂಜಯ್ ದತ್ vs ಯಶ್

  ಸಂಜಯ್ ದತ್ vs ಯಶ್

  ಕೆಲವು ರೊಮ್ಯಾಂಟಿಕ್ ಜೋಡಿಗಳಂತೆ ಕೆಲವು ಡೆಡ್ಲಿ ಕಾಂಬಿನೇಷನ್ ಸಹ ಹೆಚ್ಚು ಸದ್ದು ಮಾಡ್ತಿದೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಎದುರಾಳಿಯಾಗಿ ನಟಿಸಿದ್ದಾರೆ. ರಾಕಿ ಭಾಯ್ vs ಅಧೀರನ ಕಾಳಗ ಪಾರ್ಟ್ 2ರ ಪ್ರಮುಖ ಆಕರ್ಷಣೆ.

  ಅಲ್ಲು ಅರ್ಜುನ್-ಫಾಹದ್ ಫಾಸಿಲ್

  ಅಲ್ಲು ಅರ್ಜುನ್-ಫಾಹದ್ ಫಾಸಿಲ್

  ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಡಿಸೆಂಬರ್ ತಿಂಗಳಲ್ಲಿ ತೆರೆಗೆ ಬರ್ತಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ಎದುರಾಳಿಯಾಗಿ ಮಲಯಾಳಂ ಸ್ಟಾರ್ ನಟ ಫಾಹದ್ ಫಾಸಿಲ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ಧನಂಜಯ್ ಸಹ ಸಾಥ್ ಕೊಟ್ಟಿದ್ದಾರೆ. ಈ ಡೆಡ್ಲಿ ಕಾಂಬಿನೇಷನ್ ಚಿತ್ರಪ್ರೇಮಿಗಳ ಕುತೂಹಲ ಹೆಚ್ಚು ಮಾಡಿದೆ.

  English summary
  Upcoming Cross Pairings From Different Film Industries; Here is the List.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X