ಯಾಕೋ ನಮ್ಮಿಬ್ಬರಿಗೂ ಸೆಟ್ ಆಗಲ್ಲ ಅಂತ ಬ್ರೇಕಪ್ ಆಗಿತ್ತು.. ಬಳಿಕ...; ಪ್ರಿಯಾಂಕ ಉಪೇಂದ್ರ

ನಟ ಉಪೇಂದ್ರ ಹಾಗೂ ನಟಿ ಪ್ರಿಯಾಂಕಾ ಪ್ರೀತಿಸಿ ಮದುವೆ ಆಗಿದ್ದು ಗೊತ್ತೇಯಿದೆ. 23 ವರ್ಷಗಳ ಸುಖೀ ದಾಂಪತ್ಯ ಜೀವನ ನಡೆಸಿದ್ದಾರೆ. ದಂಪತಿ ಇಬ್ಬರೂ ಮಕ್ಕಳಿದ್ದಾರೆ. ಅವರಿಬ್ಬರು ಚಿತ್ರರಂಗದಲ್ಲಿ ಕೂಡ ಚಿತ್ರರಂಗದ ಗುರ್ತಿಸಿಕೊಳ್ಳುತ್ತಿದ್ದಾರೆ. ಪ್ರಿಯಾಂಕಾ ಉಪೇಂದ್ರ ಕೂಡ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ಆಕೆ ನಟಿಸಿರುವ 'ಸೆಪ್ಟೆಂಬರ್ 21' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.

ಬರಹಗಾರರಾಗಿ ಚಿತ್ರರಂಗಕ್ಕೆ ಬಂದ ಉಪೇಂದ್ರ ಬಳಿಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. 'ಎ' ಸಿನಿಮಾ ಮೂಲಕ ಮುಂದೆ ಹೀರೊ ಕೂಡ ಆಗಿದ್ದರು. ಅದೇ ಸಮಯದಲ್ಲಿ ತೆಲುಗು ಚಿತ್ರಗಳಲ್ಲಿ ಕೂಡ ನಟಿಸಿದ್ದರು. 'ರಾ' ಎಂಬ ಚಿತ್ರದಲ್ಲಿ ಉಪ್ಪಿ ಜೊತೆ ಬೆಂಗಾಲಿ ಬೆಡಗಿ ಪ್ರಿಯಾಂಕಾ ನಾಯಕಿಯಾಗಿ ಮಿಂಚಿದ್ದರು. ಆಗ ಶುರುವಾದ ಪರಿಚಯ, ಸ್ನೇಹ, ಪ್ರೀತಿ 23 ವರ್ಷ ಬದುಕಿನ ಬಂಡಿ ಎಳೆಯುವಂತೆ ಮಾಡಿದೆ.

Upendra and Priyanka Nearly Broke Up Before Marriage How Distance Strengthened

'ರಾ' ಬಳಿಕ ಕನ್ನಡದ 'H2O' ಚಿತ್ರದಲ್ಲಿ ಉಪೇಂದ್ರ ಹಾಗೂ ಪ್ರಿಯಾಂಕ ಒಟ್ಟಿಗೆ ನಟಿಸಿದ್ದರು. ಇದೇ ಸಮಯದಲ್ಲಿ ಇಬ್ಬರ ಮಧ್ಯೆ ಲವ್ ಆಗಿತ್ತು. ಅದು ಮೊಬೈಲ್ ವಾಟ್ಸಪ್, ವೀಡಿಯೋ ಕಾಲ್ ಇಲ್ಲದ ಕಾಲ. ಇಬ್ಬರೂ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುತ್ತಿದ್ದರು. ಆಗೊಮ್ಮೆ ಈಗೊಮ್ಮೆ ಲ್ಯಾಂಡ್‌ಲೈನ್ ಫೋನ್ ಅಲ್ಲಿ ಕರೆ ಮಾಡಿ ಮಾತುಕತೆ ನಡೀತಿತ್ತು. ಅದೇ ಸಮಯದಲ್ಲಿ ಯಾರೋ ಇಬ್ಬರಿಗೂ ಸೆಟ್ ಆಗಲ್ಲ, ಬ್ರೇಕಪ್ ಮಾಡಿಕೊಳ್ಳೋಣ ಎಂದು ನಿರ್ಧರಿಸಿದ್ದರಂತೆ. ಈ ಬಗ್ಗೆ Rayane Mithun ಯೂಟ್ಯೂಬ್ ಚಾನಲ್ ಪಾಡ್‌ಕಾಸ್ಟ್‌ನಲ್ಲಿ ಸ್ವತಃ ಪ್ರಿಯಾಂಕ ಉಪೇಂದ್ರ ಮಾತನಾಡಿದ್ದಾರೆ.

'ರಾ' ಚಿತ್ರದಲ್ಲಿ ನಮ್ಮಿಬ್ಬರ ಭೇಟಿ ಆಗಿತ್ತು. ಆಗ ಇಬ್ಬರೂ ಬರೀ ಸ್ನೇಹಿತರಾಗಿದ್ದೆವು. 'H2O' ಚಿತ್ರದ ಸಮಯದಲ್ಲಿ ಬಹಳ ಕ್ಲೋಸ್ ಆಗಿದ್ವಿ ಎಂದು ಪ್ರಿಯಾಂಕ ಉಪೇಂದ್ರ ನೆನಪಿಸಿಕೊಂಡಿದ್ದಾರೆ.. "ಮೊಬೈಲ್ ಆಗಷ್ಟೆ ಶುರುವಾಗಿತ್ತು, ಸೋಶಿಯಲ್ ಮೀಡಿಯಾ ಇರಲಿಲ್ಲ, ವೀಡಿಯೋ ಕಾಲ್ ಕೂಡ ಇರಲಿಲ್ಲ. ನಾನು ಮುಂಬೈನಲ್ಲಿ ಇರ್ತಿದ್ದೆ.. ಕೊಲ್ಕತ್ತಾ, ಫಾರಿನ್ ಅಂತೆಲ್ಲಾ ಚಿತ್ರೀಕರಣಕ್ಕೆ ಹೋಗ್ತಿದ್ದೆ. ಉಪ್ಪಿ ಅವರ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ರು.. ಇಬ್ಬರ ಭೇಟಿ ಕೂಡ ಅಷ್ಟು ಸುಲಭ ಇರಲಿಲ್ಲ. ಫೋನ್ ಕಾಲ್ ಇಲ್ಲದೇ ಕೆಲ ದಿನ ಸುಮ್ಮನಿದ್ದೆವು. ಯಾಕೊ ಇದು ಸೆಟ್ ಆಗಲ್ಲ.. ಹೀಗಾದರೆ ಕಷ್ಟ.. ನಾವಿಬ್ಬರು ಬೇರೆ ಬೇರೆ ಊರಿನವ್ರು.. ಹಾಗಾಗಿ ಬ್ರೇಕಪ್ ಎಂದುಕೊಂಡೆವು" ಎಂದಿದ್ದಾರೆ.

ಅದೊಂದು ಕಾಲ್ ಮತ್ತೆ ನಮ್ಮಿಬ್ಬರ ನಡುವೆ ಪ್ರೀತಿ ಮುಂದುವೆಯುವಂತೆ ಮಾಡಿತ್ತು ಎಂದು ಪ್ರಿಯಾಂಕ ತಿಳಿಸಿದ್ದಾರೆ. "ಆಗ ಉಪೇಂದ್ರ ಆಸ್ಟೇಲಿಯಾ, ನ್ಯೂಜಿಲೆಂಡ್‌ನಲ್ಲಿ ಸಿನಿಮಾ ಚಿತ್ರೀಕರಣದಲ್ಲಿದ್ದರು.. ನಾವಿಬ್ಬರು ಬಹಳ ದಿನ ಸಂಪರ್ಕದಲ್ಲಿ ಇರಲಿಲ್ಲ. ಒಂದು ದಿನ ನಾನು ನಮ್ಮ ಅಮ್ಮನ ಮನೆಯಲ್ಲಿದ್ದೆ. ದಿಢೀರನೆ ಲ್ಯಾಂಡ್‌ಲೈನ್ ಫೋನ್‌ಗೆ ಕರೆ ಬಂತು.. ನಾನು ಅಲ್ಲೇ ಇದ್ದೆ.. ಫೋನ್ ರಿಸೀವ್ ಮಾಡ್ತಿದ್ದಂತೆ, ನಾನು ಉಪ್ಪಿ ಅಂದ್ರು.. ನಿನಗೆ ಹೇಗೆ ನಂಬರ್ ಸಿಕ್ತು ಅಂದೆ.. ಯಾವ್ದೋ ಡೈರಿಯಲ್ಲಿ ಸಿಕ್ತು.. ನಿನ್ನ ಜೊತೆ ಮಾತನಾಡಬೇಕಿತ್ತು.. ಈಗ ಆಸ್ಟ್ರೇಲಿಯಾದಲ್ಲಿದ್ದೀನಿ, ನಿನ್ನನ್ನು ಬಹಳ ಮಿಸ್ ಮಾಡಿಕೊಳ್ತಿದ್ದೀನಿ ಅಂದ್ರು.. ಬಳಿಕ ಮತ್ತೆ ಪ್ರೀತಿ ಮುಂದುವರೆಯಿತು" ಎಂದು ವಿವರಿಸಿದ್ದಾರೆ.

ಅವತ್ತು ನಾನು ಮನೆಯಲ್ಲಿ ಇರದೇ ಇದ್ದಿದ್ದರೆ, ನನ್ನ ಬದ್ಲು ಬೇರೆ ಯಾರಾದರೂ ಕರೆ ಸ್ವೀಕರಿಸಿದ್ದರೆ, ಉಪ್ಪಿ ಸುಮ್ಮನಾಗಿಬಿಡ್ತಿದ್ರೋ ಏನೋ ಗೊತ್ತಿಲ್ಲ ಎಂದು ಪ್ರಿಯಾಂಕಾ ನಕ್ಕಿದ್ದಾರೆ.. ವಿಧಿ ಲಿಖಿತ ಅನ್ನಿಸುತ್ತೆ ಎಂದಿದ್ದಾರೆ. ಮದುವೆ ಬಳಿಕ ಸಾಕಷ್ಟು ಪಾಠ ಕಲಿತ್ತಿದ್ದೀನಿ.. ಆರಂಭದ 5 ವರ್ಷ ಬಹಳ ಮುಖ್ಯವಾಗಿತ್ತು.. ಗಂಡ, ಹೆಂಡತಿ ಇಬ್ಬರಲ್ಲಿ ಒಂದು 100%ರಷ್ಟು ಮನೆಗೆ ಅಂಕಿತರಾಗಬೇಕು. 50% - 50% ಅನ್ನೋದು ಸರಿಯಲ್ಲ.. ಉಪ್ಪಿ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾಗ ನಾನು ಮನೆ ಜವಾಬ್ದಾರಿ ನೋಡಿಕೊಳ್ಳುತ್ತಿದ್ದೆ.. ಮಕ್ಕಳ ಜೊತೆ ಇರುತ್ತಿದ್ದೆ.. ಬಳಿಕ ನಾನು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದಾಗ ಅವ್ರು ಇರ್ತಿದ್ರು.. ಎಂದು ತಮ್ಮ ಸುಖೀ ದಾಂಪತ್ಯ ಜೀವನದ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X