"ಪ್ರಶಾಂತ್ ನೀಲ್ ಬಹಳ ಗ್ರೇಟ್.. ಅವ್ರು ನನ್ನ ಬಗ್ಗೆ ಮಾತನಾಡುವುದು ದೊಡ್ಡ ವಿಷಯ": ಉಪೇಂದ್ರ

ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ' ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಸದ್ದು ಮಾಡಲು ಸಜ್ಜಾಗುತ್ತಿದೆ. ಸದ್ಯ ಚಿತ್ರದ ಟ್ರೋಲ್ ಸಾಂಗ್‌ ಬಿಡುಗಡೆ ಆಗಿ ವೈರಲ್ ಆಗುತ್ತಿದೆ. ಟ್ರೋಲ್, ಮೀಮ್ ಪದಗಳನ್ನೆಲ್ಲಾ ಬಳಸಿ ಸಖತ್ ಮಜವಾಗಿ ಹಾಡನ್ನು ಕಟ್ಟಿಕೊಡಲಾಗಿದೆ.

ಸಾಂಗ್ ರಿಲೀಸ್‌ಗಾಗಿ ಮುಂಬೈ ಯೂಟ್ಯೂಬ್‌ ಆಫೀಸ್‌ನಲ್ಲಿ ಉಪೇಂದ್ರ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ವಿಶೇಷ ಸಂದರ್ಶನ ನೀಡಿದ್ದಾರೆ. ಸಿನಿಮಾ ಹಾಗೂ ಟ್ರೋಲ್ ಸಾಂಗ್ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಪ್ರಶಾಂತ್ ನೀಲ್ ತಮ್ಮ ನೆಚ್ಚಿನ ನಿರ್ದೇಶಕ ಉಪೇಂದ್ರ ಎಂದಿದ್ದರು. ಅದಕ್ಕೆ ಕಾರಣವನ್ನು ಕೊಟ್ಟಿದ್ದರು. ಈ ವಿಚಾರದ ಬಗ್ಗೆಯೂ ಉಪ್ಪಿ ಇದೀಗ ಪ್ರತಿಕ್ರಿಯಿಸಿದ್ದಾರೆ.

Upendra thanked Prashanth neel for praising his direction

ಸಂದರ್ಶನದಲ್ಲಿ ಪ್ರಶಾಂತ್ ನೀಲ್ ಮೆಚ್ಚುಗೆ ಮಾತುಗಳ ಬಗ್ಗೆ ಕೇಳಿದ್ದಕ್ಕೆ ಉಪೇಂದ್ರ ಮಾತನಾಡಿ "ಪ್ರಶಾಂತ್ ನೀಲ್ ಬಹಳ ಗ್ರೇಟ್. ಇಡೀ ಭಾರತಕ್ಕೆ ಅವರ ಬಗ್ಗೆ ಗೊತ್ತು. ಅಂತಹ ದೊಡ್ಡ ನಿರ್ದೇಶಕರು ನನ್ನ ಬಗ್ಗೆ ಮಾತನಾಡುವುದು ದೊಡ್ಡ ವಿಷಯ. ಅದನ್ನು ಕೇಳಿ ಮನತುಂಬಿ ಬಂತು. ಧನ್ಯವಾದ ನೀಲ್ ಸರ್" ಎಂದಿದ್ದಾರೆ.

ಪ್ಯಾನ್ ಇಂಡಿಯಾ ಟ್ರೆಂಡ್ ಬಗ್ಗೆ ಮಾತನಾಡಿರುವ ಉಪೇಂದ್ರ "ಮೊದಲೆಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಸಿನಿಮಾ ಮಾಡುತ್ತಿದ್ದೆವು. ಬಳಿಕ ಡಬ್ಬಿಂಗ್, ರೀಮೆಕ್ ಮಾಡುತ್ತಿದ್ದರು. ಈಗ ಅದು ಇಲ್ಲ. ಯಾಕಂದರೆ ಓಟಿಟಿ ಜಮಾನದಲ್ಲಿ ಅದು ಸಾಧ್ಯವಿಲ್ಲ. ಏಕಕಾಲಕ್ಕೆ ಎಲ್ಲಾ ಭಾಷೆಗಳಲ್ಲಿ ಬಿಡುಗಡೆ ಮಾಡುವಂತೆ ಆಗುತ್ತಿದೆ."

"ಒಂದು ವಿಧದಲ್ಲಿ ಪ್ಯಾನ್ ಇಂಡಿಯಾ ಟ್ರೆಂಡ್ ಚೆನ್ನಾಗಿದೆ. ನಾನು ಈ ರೀತಿ ಎಲ್ಲಾ ಕಡೆ ಬಂದು ಮಾತನಾಡುವಂತಾಗಿದೆ. ನನ್ನ ಸಿನಿಮಾ ಶೈಲಿ ಎಲ್ಲರಿಗೂ ಗೊತ್ತಾಗುವಂತಾಗಿದೆ. ಇದನ್ನು ಎಂಜಾಯ್ ಮಾಡುತ್ತಿದ್ದೇನೆ" ಎಂದಿದ್ದಾರೆ. ನಿಮ್ಮ ಬಗ್ಗೆ ಮೊದಲಿನಿಂದಲೂ ನಮಗೆಲ್ಲಾ ಗೊತ್ತು. ನೀವು ಈಗಾಗಲೇ ಸಾಕಷ್ಟು ಭಾಷೆಗಳಲ್ಲಿ ಕೆಲಸ ಮಾಡಿದ್ದೀರಾ ಎಂದಿದ್ದಕ್ಕೆ "ಹೌದು ಅದು ಮೊದಲಿನಿಂದ ಇದೆ. ಆದರೆ ಈಗ 5 ಭಾಷೆಗಳಲ್ಲಿ ಒಟ್ಟಿಗೆ ಸಿನಿಮಾ ಮಾಡುವಂತಾಗಿದೆ. 5 ಭಾಷೆಗಳಲ್ಲಿ ಒಟ್ಟಿಗೆ ಡಬ್ಬಿಂಗ್, ರೀರೆಕಾರ್ಡಿಂಗ್, ಮಿಕ್ಸಿಂಗ್ ಮಾಡಬೇಕಾಗಿದೆ" ಎಂದಿದ್ದಾರೆ.

Upendra thanked Prashanth neel for praising his direction

'ಉಗ್ರಂ' ದಶಕದ ಸಂಭ್ರಮದಲ್ಲಿ ಚಿತ್ರತಂಡ ಅನುಶ್ರೀ ಯೂಟ್ಯೂಬ್ ಚಾನಲ್‌ಗೆ ವಿಶೇಷ ಸಂದರ್ಶನ ನೀಡಿತ್ತು. ಈ ಸಂದರ್ಶದಲ್ಲಿ ಪ್ರಶಾಂತ್ ನೀಲ್ ತಮ್ಮ ನೆಚ್ಚಿನ ನಿರ್ದೇಶಕ ಉಪೇಂದ್ರ ಎಂದು ಹೇಳಿದ್ದರು. "ನನ್ನ ನೆಚ್ಚಿನ ನಿರ್ದೇಶಕ ಉಪೇಂದ್ರ ಸರ್. ಅದಕ್ಕೆ ಕಾರಣ ಕೂಡ ಇದೆ. ಕನ್ನಡ ಕಾರ್ಯಕ್ರಮ ಎನ್ನುವ ಕಾರಣಕ್ಕೆ ಹೇಳುತ್ತಿಲ್ಲ. ಇಡೀ ಪ್ರಪಂಚದಲ್ಲಿ ಯಾರೂ 'ಶ್', 'ತರ್ಲೆ ನನ್ಮಗ', 'ಓಂ' ರೀತಿಯ ಬೇರೆ ಬೇರೆ ಜಾನರ್ ಸಿನಿಮಾ ಮಾಡೋಕೆ ಸಾಧ್ಯವಿಲ್ಲ"

"ಮೂರು ಕೂಡ ಒಂದಕ್ಕಿಂತ ಒಂದು ಭಿನ್ನ. 'ಉಪೇಂದ್ರ', 'ಎ' ಬಿಡಿ ಹೇಗಿದ್ರು ಮಾಡೋಕ್ಕಾಗಲ್ಲ. ಇನ್ನು ಈ 3 ಜಾನರ್ ಮಾಡೋದು ಕಷ್ಟ" ಎಂದಿದ್ದರು. ಪ್ರಶಾಂತ್ ನೀಲ್ ಹೊಗಳಿಕೆಗೆ ಇದೀಗ ರಿಯಲ್ ಸ್ಟಾರ್ ಉಪೇಂದ್ರ ಧನ್ಯವಾದ ತಿಳಿಸಿದ್ದಾರೆ. ಸದ್ಯ 'ಯುಐ' ಸಿನಿಮಾ ಕೆಲಸಗಳಲ್ಲಿ ಉಪ್ಪಿ ಬ್ಯುಸಿಯಾಗಿದ್ದಾರೆ. ಗ್ರಾಫಿಕ್ಸ್ ಕೆಲಸಗಳು ಜಾಸ್ತಿ ಇರುವುದರಿಂದ ಸಿನಿಮಾ ರಿಲೀಸ್ ತಡವಾಗುತ್ತಿದೆ. ಅದಕ್ಕೂ ಮುನ್ನ ಚಿತ್ರದ ಇನ್ನು 4 ಹಾಡು ಹಾಗೂ ಟ್ರೈಲರ್ ರಿಲೀಸ್ ಬಾಕಿಯಿದೆ.

More from Filmibeat

English summary
Upendra reacts after Prashanth neel praises his Films;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X