Valentine's Day Special: ಸಿನಿಮಾವನ್ನೇ ಉಸಿರಾಗಿಸಿಕೊಂಡ ಜೀವಿತಾ–ಜೀವನ್ ಪ್ರೇಮ ಕಾವ್ಯ!

By ಮಮತಾ ಎಂ.

ಪ್ರೀತಿ.. ಈ ಪದವೇ ಒಂದು ಆಹ್ಲಾದ.. ಕಂಗೆಟ್ಟ ಮನಸ್ಸಿಗೆ ತಂಗಾಳಿ ಬೀಸಿದಂತೆ.. ಮರುಭೂಮಿಯಲ್ಲಿ ನೀರಿಗಾಗಿ ಅಲೆಯುತ್ತಿದ್ದ ಮನಸ್ಸಿಗೆ ಓಯಸಿಸ್ ಸಿಕ್ಕಂತೆ.. ಜಿಟಿ ಜಿಟಿ ಮಳೆಯ ನಡುವೆ ಸಿಕ್ಕ ಬಿಸಿ ಬಿಸಿ ಚಹಾದಂತೆ.. ಹೌದು, ಪ್ರೀತಿಯೆಂದರೇ ಹಾಗೆ.. ಹೇಳದೇ ಬರುವ ಮಳೆಯಂತೆ. ಮಳೆ.. ತಂಗಾಳಿಯಂತೆಯೇ ಈ ಪ್ರೀತಿ ಮತ್ತು ಸಿನಿಮಾಗೆ ತೀವ್ರವಾದ ನಂಟಿದೆ.

ಪ್ರೀತಿಯಿಲ್ಲದ ಸಿನಿಮಾವಿಲ್ಲ...ಹಾಗೇಯೇ ಸಿನಿಮಾಗಳಿಂದಲೇ ಮೂಡಿದ ಪ್ರೇಮ ಪ್ರಕರಣಗಳ ಸಂಖ್ಯೆಯೂ ಕಡಿಮೆಯಿಲ್ಲ. ನಾನಿವತ್ತು ಹೇಳಲು ಹೊರಟಿರುವುದು ಕೂಡ ಇಂತಹದ್ದೇ ಸಿನಿಮಾ ಲವ್.. ಅರೇ, ಸಿನಿಮಾ ಲವ್ ಅಂದರೇ ಸಿನಿಮಾ ಮೇಲಿನ ಪ್ರೀತಿಯಲ್ಲ.. ಸಿನಿಮಾ ನೋಡುತ್ತಾ..ಸಿನಿಮಾವನ್ನು ತಮ್ಮೊಳಗೆ ಇಳಿಸಿಕೊಳ್ಳುತ್ತಾ ಅದೇ ಥಿಯೇಟರ್‌ಗಳ ಬಳಿ ಹುಟ್ಟಿದ ಅಪರೂಪದ ಪ್ರೇಮಕಥೆ.

ಜೀವಿತಾ ಆಗ ತಾನೇ ಪದವಿಗಾಗಿ ಕಾಲೇಜು ಸೇರಿದ ಯುವತಿ. ಚಿಕ್ಕ ವಯಸ್ಸಿನಿಂದ ನಟಿಯಾಗಬೇಕು ಎಂಬ ಕನಸು ಕಂಡವಳು. ಈಗೀನ ಕಾಲದ ಹುಡುಗಿಯರಂತೆ ಬಾಲಿವುಡ್ ಹೀರೊಯಿನ್‌ಗಳ ಹಿಂದೆ ಬಿದ್ದವಳಲ್ಲ. ಆಕೆ ನಟಿ ಸರಿತಾ ಅವರ ಅಪ್ಪಟ ಅಭಿಮಾನಿ. ಸೌಂದರ್ಯದ ಹಂಗು ತೊರೆದು ಪ್ರಸಿದ್ಧ ನಟಿಯಾಗಿ ಬೆಳೆದ ಸರಿತಾ ಆಕೆಯ ಪಾಲಿಗೆ ಸ್ಪೂರ್ತಿ. ಸರಿತಾ ಸಿನಿಮಾಗಳ ಹುಚ್ಚು ಆಕೆಯನ್ನು ಟಿವಿಗಳಿಂದ ಥಿಯೇಟರ್‌ಗೆ ಕರೆ ತಂದಿತ್ತು. ಅಲ್ಲಿ ಸಿಕ್ಕವನೇ ಜೀವನ್.

Valentines Day Special: Jeevitha And Jeevan Cinema Lovers Love Story

ಜೀವನ್ ಓದು ಬಿಟ್ಟು ಚಿಕ್ಕ ಕೆಲಸ ಮಾಡುತ್ತಾ, ಜೀವನ ನಡೆಸುತ್ತಿರುವ ಯುವಕ. ದುಡಿದ ಹಣದಲ್ಲಿ ಕಾಲು ಭಾಗವನ್ನು ಸಿನಿಮಾಗಳಿಗೆ ಮಿಸಲಿಟ್ಟವನು. ದೊಡ್ಡ ನಿರ್ದೇಶಕನಾಗುವ ಕನಸು ಕಾಣುತ್ತಾ ಸಿನಿಮಾ ಮಂದಿರಗಳಿಗೆ ಬಂದ ಈತನ ಕನಸಲ್ಲಿ ಬಂದು ನಿದ್ದೆ ಕದ್ದವಳು ಇದೇ ಜೀವಿತಾ.

ಇವರ ಪ್ರೀತಿ ಶುರುವಾಗಿದ್ದೂ ಕೂಡ ಟಿಕೆಟ್ ಗಲಾಟೆಯಲ್ಲೇ. ಅಂದು ವಿದ್ಯಾಪೀಠ ಸರ್ಕಲ್ ಬಳಿಕ ಚಂದ್ರೋದಯ ಥಿಯೇಟರ್‌ಗೆ ಬಂದಿದ್ದ ಇಬ್ಬರು, ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿದ್ದರು. ಇಬ್ಬರ ದುರಾದೃಷ್ಟಕ್ಕೆ ಇದ್ದದ್ದು ಒಂದೇ ಟಿಕೆಟ್. ಇಬ್ಬರಿಗೂ ಸಿನಿಮಾ ಅಂದರೆ ಪ್ರಾಣ. ಟಿಕೆಟ್ ಬಿಟ್ಟುಕೊಡಲು ಯಾರಿಗೂ ಮನಸ್ಸಿಲ್ಲ. ಹಿಂಗೆ ಯೋಚಿಸುತ್ತಿರುವಾಗಲೇ ಟಿಕೆಟ್ ಮತ್ತೊಬ್ಬರ ಪಾಲಾಯಿತು. ಇದರಿಂದ ಬೇಸರಗೊಂಡವರು ತಮ್ಮನ್ನು ತಾವು ಸಮಾಧಾನ ಮಾಡಿಕೊಳ್ಳಲು ಪಕ್ಕದ ಟೀ ಅಂಗಡಿಯಲ್ಲಿ ಕುಳಿತರು. ಅದು ಆರಂಭ ಮಾತ್ರ.

ಇಲ್ಲಿಂದ ಸಿನಿಮಾ ಮಾತುಕತೆ ಮೂಲಕ ಪರಸ್ಪರ ವಿಷಯಗಳನ್ನು ಹಂಚಿಕೊಳುತ್ತಾ ಸ್ನೇಹಿತರಾದರು. ಒಟ್ಟಿಗೆ ಸಿನಿಮಾಗೆ ಬರುವುದು ಅಭ್ಯಾಸವಾಗಿತ್ತು. ಆಕೆ ಕಲಾವಿದರ ನಟನೆ ಬಗ್ಗೆ ಮಾತನಾಡಿದರೇ, ಆತ ನಿರ್ದೇಶಕರ ಬಗ್ಗೆ ಕಾಮೆಂಟ್ ಮಾಡುತ್ತಾ ಇರುತ್ತಿದ್ದ. ಹೀಗೇ ಸ್ನೇಹ, ಪ್ರೇಮವಾಗಿ ತಿರುಗಿತ್ತು. ಸಿನಿಮಾ ಹುಚ್ಚು ಪ್ರೇಮದ ಹುಚ್ಚಾಗಿ ಬದಲಾಯಿತು.

Valentines Day Special: Jeevitha And Jeevan Cinema Lovers Love Story

ಪ್ರೇಮ ಪಕ್ಷಿಗಳಂತೆ ಹಾರಾಡುತ್ತಿದ್ದ ಇಂತವರ ಬಾಳಿನಲ್ಲಿ ವಿಲನ್ ಆಗಿ ಬಂದದ್ದು, ಜೀವನ್ ಬಡತನ. ಓದು ಬಿಟ್ಟು ಚಿಕ್ಕ ಚಿಕ್ಕ ಕೆಲಸದಲ್ಲಿ ದುಡಿಯುತ್ತಿದ್ದ ಅವನಿಗೆ ಬರುತ್ತಿದ್ದದ್ದು ಅಲ್ಪಸ್ವಲ್ವ ಹಣ ಮಾತ್ರ. ತಾನೇ ಬದುಕಲು ಕಷ್ಟ ಪಡುತ್ತಿದ್ದವನಿಗೆ ಜೀವಿತಾ ಸಿಕ್ಕಿದ್ದಳು. ಕಷ್ಟದಲ್ಲಿ ಇದ್ದಾರೆಂದು ಪ್ರೇಮ ಅರಳದೇ ಇರುತ್ತದೆಯೇ..? ಇಬ್ಬರ ನಡುವಿನ ಆಪ್ತತೆ ಗಾಢವಾಗುತ್ತಿದ್ದಂತೆ ಜೀವನ್‌ಗೆ ಭಯ ಶುರುವಾಗಿತ್ತು. ಜವಾಬ್ದಾರಿಗಳನ್ನು ತಕ್ಷಣವೇ ಹೆಗಲೇರಿಸಿಕೊಂಡು ಶ್ರೀಮಂತನಾಗಲು ಇದು ಸಿನಿಮಾವಲ್ಲ ಎಂಬುದು ಅರ್ಥವಾಗಿತ್ತು. ಆದರೆ, ಜೀವಿತಾಳನ್ನು ಬಿಟ್ಟಿರಲು ಆಗದ ಸ್ಥಿತಿ ಆತನದ್ದಾಗಿತ್ತು.

ಒಮ್ಮೆ ಸಿನಿಮಾ ಥಿಯೇಟರ್‌ನಲ್ಲಿ ಕುಳಿತು ಮಾತಾಡುವಾಗ ಜೀವಿತಾಳ ಕುಟುಂಬದವರ ಕಣ್ಣಿಗೆ ಬಿದ್ದು ದೊಡ್ಡ ರಾದ್ಧಾಂತವೇ ನಡೆಯಿತು. ಅರ್ಹತೆ ಬಗ್ಗೆ ಮಾತಾಡುತ್ತಿದ್ದ ಕುಟುಂಬಗಳಿಗೆ ಇವರ ಪ್ರೀತಿ ಅರ್ಥವಾಗುತ್ತಿರಲಿಲ್ಲ. ಅಲ್ಲಿಂದ ಕದ್ದು ಮುಚ್ಚಿ ಭೇಟಿಯಾಗುವುದು ನಡೆಯಿತು. ಕೊನೆಗೊಂದು ದಿನ ಒಳ್ಳೆ ಹೆಸರು ಸಂಪಾದನೆ ಮಾಡಿ, ಹಣ ಗಳಿಸಿ, ನಿನ್ನನ್ನು ನನ್ನ ಮನೆತುಂಬಿಸಿಕೊಳ್ಳುತ್ತೇನೆ ಎಂದು ಪ್ರಮಾಣ ಮಾಡಿ ಜೀವನ್ ಊರು ಬಿಟ್ಟ.

ಜೀವನ್‌ಗೆ ಕಾಯುತ್ತಿದ್ದ ಜೀವಿತಾ ತನ್ನ ಪದವಿ ಮುಗಿಸಿ, ಉತ್ತಮ ಕೆಲಸಕ್ಕೆ ಸೇರಿಕೊಂಡಳು. ಇಬ್ಬರ ನಡುವೆ ಯಾವ ಸಂಪರ್ಕವೂ ಇರಲಿಲ್ಲ. ಆಗೊಮ್ಮೆ ಈಗೊಮ್ಮೆ ಒಂದೊಂದು ಪತ್ರ ಬರೆಯುತ್ತಿದ್ದ ಜೀವನ್‌, ತಾನು ಎಲ್ಲಿದ್ದಿನಿ ಎಂಬುದನೂ ಹೇಳಿರಲಿಲ್ಲ. ಬಳಿಕ ಅದೂ ನಿಂತು ಹೋಗಿತ್ತು.

ನಾಲ್ಕು ವರ್ಷಗಳ ಬಳಿಕ ತನ್ನೂರಿಗೆ ವಾಪಸ್ ಬಂದ ಜೀವನ್ ಬಳಿ ಹಣ, ಆಸ್ತಿ ಜೊತೆಗೆ ಮೊಗೆದಷ್ಟು ಕೊಡುವ ಪ್ರೀತಿಯನ್ನು ಹೊತ್ತು ತಂದಿದ್ದ. ಆದರೆ, ಜೀವಿತಾಗೆ ಮದುವೆ ಮಾಡಿರುತ್ತಾರೆ ಎಂಬ ಭಯದಲ್ಲೇ ಬಂದ ಆತನಿಗೆ ದೊಡ್ಡ ಆಶ್ಚರ್ಯ ಕಾದಿತ್ತು. ಆಕೆಯ ಮನೆಯಲ್ಲಿ ಜೀವಿತಾ ಇರಲಿಲ್ಲ!. ಊರೆಲ್ಲಾ ಹುಡುಕಾಡಿ ಕಣ್ಣೀರು ಹಾಕುತ್ತಾ ಹೋಗುತ್ತಿದ್ದವನಿಗೆ ಚಿಕ್ಕ ಯೋಚನೆ ಬಂದಿತ್ತು. ಅದು ಆಕೆ ಕೆಲಸ ಮಾಡುತ್ತಿದ್ದ ಕಚೇರಿ.

ಹೌದು, ಮನೆಯವರ ಒತ್ತಾಯಕ್ಕೆ ಮಣಿಯದ ಜೀವಿತಾ ಮನೆ ತೊರೆದಿದ್ದಳು. ಕೆಲಸ ಮಾಡುತ್ತಿದ್ದ ಕಚೇರಿ ಪಕ್ಕದಲ್ಲಿ ಪುಟ್ಟ ಬಾಡಿಗೆ ಕೊಠಡಿ ಹಿಡಿದು ಜೀವನ್‌ ಬರುವಿಕೆಗಾಗಿ ಕಾಯುತ್ತಿದ್ದಳು. ಆತನ ನೆನಪಾದಾಗಲೆಲ್ಲಾ ಸಿನಿಮಾ ನೋಡಲು ಒಬ್ಬಳೇ ಹೋಗುತ್ತಿದ್ದಳು. ಆತನ ಸಂಪರ್ಕ ನಿಂತರೂ ಆತನನ್ನು ಆರಾಧಿಸುವುದನ್ನು ಆಕೆ ಬಿಟ್ಟಿರಲಿಲ್ಲ. ಸಿನಿಮಾ ಮಂದಿರದಲ್ಲಿ ಹುಟ್ಟಿದ ಪ್ರೀತಿ ಎರಡೂವರೆ ಗಂಟೆ ಸಿನಿಮಾ ಮುಗಿದ ಮಾತ್ರಕ್ಕೆ ಸತ್ತುಹೋಗಿರಲಿಲ್ಲ.

ಜೀವನ್‌ನನ್ನು ಕಂಡು ಜೀವಿತಾ ಮೂಕವಿಸ್ಮಿತಳಾಗಿದ್ದಳು. ಆದರೆ, ಜೀವಿತಾಳ ಬಗ್ಗೆ ಕೆಲವು ನಿಮಿಷ ತಪ್ಪಾಗಿ ಆಲೋಚನೆ ಮಾಡಿದ್ದ ಜೀವಿತ್‌ಗೆ ತನ್ನ ತಪ್ಪಿನ ಅರಿವಾಯಿತು. ತಕ್ಷಣ ಆಕೆಯನ್ನು ಬರಸೆಳೆದು ಅಪ್ಪಿಕೊಂಡ ಆತ ಆಕೆಯ ಕೈ ಹಿಡಿದು ಸೀದಾ ಸಿನಿಮಾ ಮಂದಿರಕ್ಕೆ ಎಳೆದೊಯ್ದಿದ್ದ. ಥಿಯೇಟರ್‌ನಲ್ಲಿ ನಿಲ್ಲಿಸಿಕೊಂಡು, ಸಿನಿಮಾವನ್ನೇ ಸಾಕ್ಷಿಯಾಗಿಟ್ಟುಕೊಂಡು ತನ್ನ ಜೊತೆಯಲ್ಲಿ ತಂದಿದ್ದ ಮಾಂಗಲ್ಯ ಕಟ್ಟಿ ಆಕೆಯನ್ನು ತನ್ನ ಮನೆ, ಮನಸ್ಸು ಎರಡಕ್ಕೂ ಯಜಮಾನಿಯನ್ನಾಗಿಸಿದ.

ಸರಿತಾಳಂತೆ ನಟಿಯಾಗಬೇಕು ಅನ್ನೋ ಜೀವಿತಾ ಕನಸು ಮಾಸಿತ್ತು. ನಿರ್ದೇಶಕನಾಗಬೇಕು ಅನ್ನೋ ಜೀವನ್ ಆಸೆ ಮುದುಡಿತ್ತು. ಆದರೆ, ಅವರಿಗೆ ಅರಿವಿಲ್ಲದಂತೇ ಇವರಿಬ್ಬರ ಪ್ರೇಮ ಸಿನಿಮಾ ಮಾಡಬಹುದಾದಾ ಲವ್ ಸ್ಟೋರಿಯಾಗಿತ್ತು.

More from Filmibeat

English summary
Valentine's Day Special: Jeevitha And Jeevan Cinema Lovers Love Story,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X