ಮೊದಲ ಮುತ್ತಿನ ಸಿಹಿ ಅನುಭವ ಹಂಚಿಕೊಂಡ ನಟಿಯರು!

ಪ್ರೇಮಿಗಳ ದಿನ ಬಂದೇ ಬಿಟ್ಟಿದೆ. ವಿಶ್ವವೇ ಪ್ರೇಮವನ್ನು ಸಂಭ್ರಮಿಸುವ ವಿಶೇಷ ದಿನವಿದು. ಪ್ರೇಮಿಗಳ ದಿನದ ಮುಂಚಿನ ಒಂದು ವಾರವನ್ನು ವಿವಿಧ 'ಡೇ' ಗಳಾಗಿ ಆಚರಿಸುವುದು ರೂಡಿ. ಇದರಲ್ಲಿ 'ಪ್ರಾಮಿಸ್ ಡೇ', 'ಕಿಸ್ ಡೇ','ಹಗ್‌ ಡೇ' ಇತರೆಗಳು ಇವೆ.

ಪ್ರೇಮಿಗಳ ದಿನಾಚಾರಣೆಯಂದು ಭಾರತದಲ್ಲಿ ಅಲ್ಲಿಲ್ಲಿ ಗೊಂದಲದ ಸನ್ನಿವೇಶಗಳು ಉಂಟಾಗುವುದು ಸಾಮಾನ್ಯ. ಭಜರಂಗ ದಳ ಸೇರಿದಂತೆ ಇತರೆ ಬಲಪಂಥೀಯ ದಳಗಳ ಯುವಕರು ಪ್ರೇಮಿಗಳನ್ನು ಹಿಡಿದು ಹಲ್ಲೆ ಮಾಡಿದ ಘಟನೆಗಳು, ಮದುವೆ ಆಗುವಂತೆ ಒತ್ತಾಯ ಮಾಡಿದ ಘಟನೆಗಳು ಹಿಂದೆ ಹಲವು ಬಾರಿ ನಡೆದಿವೆ.

ಪ್ರೇಮಿಗಳ ದಿನಕ್ಕೆ ವಿರೋಧ ಇದೆ ಎಂಬ ಕಾರಣಕ್ಕೆ ಈ ವಿಶೇಷ ದಿನದ ಆಚರಣೆಯೇನು ನಿಂತಿಲ್ಲ. ನಡೆಯುತ್ತಲೇ ಇದೆ. ಹಲವು ಸೆಲೆಬ್ರಿಟಿಗಳು ಈ ವಿಶೇಷ ದಿನದಂದು ತಮ್ಮ ಪತಿಯೊಂದಿಗೆ, ಪತ್ನಿಯೊಂದಿಗೆ, ಪ್ರೇಮಿಯೊಂದಿಗೆ ಚಿತ್ರಗಳನ್ನು ಹಂಚಿಕೊಂಡು ಪ್ರೇಮಿಗಳ ದಿನದ ಶುಭಾಶಯ ಹೇಳುತ್ತಾರೆ. ಪ್ರೇಮಿಗಳ ದಿನವನ್ನು ನೆವವಾಗಿಟ್ಟುಕೊಂಡು ಕೆಲವು ನಟಿಯರು ಹಾಗೂ ನಟರು 'ಫಿಲ್ಮಿಬೀಟ್' ಜೊತೆ ತಮ್ಮ ಮೊದಲ ಮುತ್ತಿನ ವಿಷಯ ಹಂಚಿಕೊಂಡಿದ್ದಾರೆ.

ಅಚಾನಕ್ಕಾಗಿ ಬಂದು ಮುತ್ತು ಕೊಟ್ಟ: ಪಾಯಲ್ ಘೋಷ್

ಅಚಾನಕ್ಕಾಗಿ ಬಂದು ಮುತ್ತು ಕೊಟ್ಟ: ಪಾಯಲ್ ಘೋಷ್

ಕನ್ನಡದ 'ವರ್ಷಧಾರೆ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಪಾಯಲ್ ಘೋಷ್ ತಮ್ಮ ಮೊದಲ ಮುತ್ತಿನ ಮತ್ತಿನ ಬಗ್ಗೆ ವರ್ಣಿಸಿದ್ದಾರೆ. ''ನಾನು ಆಗ ಎಂಟನೇ ತರಗತಿಯಲ್ಲಿದ್ದೆ. ಆಗಷ್ಟೆ 11ನೇ ತರಗತಿಗೆ ಒಬ್ಬ ಹುಡುಗ ಸೇರಿಕೊಂಡಿದ್ದ ಆತ ಬಹಳ ಸ್ಮಾರ್ಟ್ ಆಗಿ ಹ್ಯಾಂಡ್ಸಮ್ ಆಗಿಯೂ ಇದ್ದ. ಎಲ್ಲ ಹುಡುಗಿಯರಿಗೂ ಅವನೆಂದರೆ ಇಷ್ಟ. ಆದರೆ ನಾನು ಆ ಸ್ಕೂಲ್‌ನ ರಾಣಿಯಾಗಿದ್ದೆ. ನನಗೆ ಬಹಳ ಆಟಿಟ್ಯೂಡ್ ಇತ್ತು. ಹಾಗಾಗಿ ನಾನು ಅವನ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ನಂತರ ಒಮ್ಮೆ ಫ್ಯಾನ್ಸಿ ಡ್ರೆಸ್ ಕಾಂಪಿಟೇಶನ್‌ಗೆ ಬಾರ್ಬಿ ಗರ್ಲ್ ವೇಷ ಧರಿಸಿದ್ದೆ. ಆಗ ಅವನು ಬಂದು ನನಗೆ ಮುತ್ತು ಕೊಟ್ಟ. ನಾನು ಸಿಟ್ಟಾದೆ. ಆಗ ಅವನು, ಗೆಳೆಯರೊಟ್ಟಿಗೆ ಸವಾಲು ಹಾಕಿದ್ದರಿಂದ ಮುತ್ತುಕೊಟ್ಟೆ. ಆದರೆ ನನಗೆ ನೀನು ಇಷ್ಟ, ನನ್ನ ಗರ್ಲ್‌ಫ್ರೆಂಡ್ ಆಗು ಎಂದು ಕೇಳಿಕೊಂಡ. ನಾನೂ ಒಪ್ಪಿಕೊಂಡೆ. ಸ್ಕೂಲ್‌ನಲ್ಲಿ ಇರುವಷ್ಟು ದಿನ ಅವನನ್ನು ಡೇಟ್ ಮಾಡಿದೆ'' ಎಂದಿದ್ದಾರೆ ಪಾಯಲ್ ಘೋಷ್.

ಪಾರ್ಕಿಂಗ್ ಲಾಟ್‌ನಲ್ಲಿ ಮೊದಲ ಮುತ್ತು

ಪಾರ್ಕಿಂಗ್ ಲಾಟ್‌ನಲ್ಲಿ ಮೊದಲ ಮುತ್ತು

ನಟಿ ಕನೀಶಾ ಅವಸ್ಥಿ ಆ ವಯಸ್ಸಿನಲ್ಲಿಯೇ ಕಿಸ್ ಮಾಡಿದ್ದರಂತೆ. ''ಆಗಿನ್ನೂ ನಾನು ಐದನೇ ತರಗತಿ ಓದುತ್ತಿದ್ದೆ. ನನ್ನ ತರಗತಿಯ ಹುಡುಗನಿಗೆ ನಾನೆಂದರೆ ಇಷ್ಟವಿರಲಿಲ್ಲ. ನನಗೂ ಅಷ್ಟೆ. ಆದರೆ ನಂತರ ನಾವು ಸ್ನೇಹಿತರಾದೆವು. ಬಳಿಕ ಅವನೇ ನನ್ನ ಬಾಯ್‌ಫ್ರೆಂಡ್ ಆದ. ನಂತರ ನಮ್ಮ ಆ ಸಂಬಂಧವನ್ನು ಖಾತ್ರಿ ಪಡಿಸಲು ಅವನು ನನ್ನಿಂದ ಮುತ್ತು ಕೇಳಿದ. ನಾನು ಹೆದರಿಕೊಂಡು ನಮ್ಮ ಬಿಲ್ಡಿಂಗ್ ಪಾರ್ಕಿಂಗ್ ಜಾಗದಲ್ಲಿ ಅವನಿಗೆ ಮುತ್ತು ಕೊಟ್ಟೆ. ಅದು ನನ್ನ ಮೊದಲ ಮುತ್ತಾಗಿತ್ತು . ಆ ದಿನ ನನಗೆ ಇಂದಿಗೂ ನೆನಪಿದೆ'' ಎಂದಿದ್ದಾರೆ ಕನೀಶಾ.

ತರಗತಿಯಲ್ಲೇ ಕೊಟ್ಟ ಮೊದಲ ಮುತ್ತು

ತರಗತಿಯಲ್ಲೇ ಕೊಟ್ಟ ಮೊದಲ ಮುತ್ತು

ನಟಿ ಮಾಳ್ವಿ ಮಲ್ಹೋತ್ರಾ ಸಹ ತಮ್ಮ ಮೊದಲ ಮುತ್ತನ್ನು ಶಾಲೆಯ ದಿನಗಳಲ್ಲೇ ಕೊಟ್ಟರಂತೆ. ನಾನು ಆಗಿನ್ನೂ ಶಾಲೆಯಲ್ಲಿದ್ದೆ. ಆತನೂ ಶಾಲೆಯಲ್ಲಿದ್ದ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು. ನಾವು ಲಂಚ್‌ ಬ್ರೇಕ್ ಸಮಯದಲ್ಲಿ ಮಾತ್ರವೇ ಭೇಟಿ ಆಗುತ್ತಿದ್ದೆವು. ನಮಗೆ ಮಾತನಾಡಲು ಸಹ ಬಹಳ ಕಡಿಮೆ ಸಮಯ ಸಿಗುತ್ತಿತ್ತು. ಒಂದು ವರ್ಷ ಪ್ರೀತಿ ಮಾಡಿದ ಬಳಿಕ ಒಮ್ಮೆ ತರಗತಿಯಲ್ಲಿಯೇ ನಾವು ಕಿಸ್ ಮಾಡಿದೆವು. ಆ ನೆನಪು ಸತತವಾಗಿ ಒಂದು ವಾರ ನನ್ನ ತಲೆಯಲ್ಲಿಯೇ ಇತ್ತು. ಆ ಮುತ್ತು ನನ್ನ ಪಾಲಿಗೆ ಬಹಳ ಸ್ಪೆಷಲ್ ಆಗಿತ್ತು'' ಎಂದಿದ್ದಾರೆ.

ಕೌಥುಕಪೂರ್ಣ ಮೇಘನಾ ಕೌಶಿಕ್‌ ಕತೆ

ಕೌಥುಕಪೂರ್ಣ ಮೇಘನಾ ಕೌಶಿಕ್‌ ಕತೆ

ಆ ಸಂಜೆ ನನ್ನ ಜೀವನದಲ್ಲಿ ಬಹಳ ವಿಶೇಷವಾದುದು. ನಾನು ಹಾಗೂ ನನ್ನ ಬಾಯ್‌ಫ್ರೆಂಡ್‌ ಬೆಳಿಗಿನಿಂದಲೂ ಸಾಕಷ್ಟು ಸುತ್ತಾಡಿದ್ದೆವು. ಸಿನಿಮಾಕ್ಕೆ ಹೋಗಿದ್ದೆವು, ಒಳ್ಳೆಯ ರೆಸ್ಟೊರೆಂಟ್‌ನಲ್ಲಿ ಊಟ ಮಾಡಿದ್ದೆವು. ಈಗ ಆತ ನನ್ನನ್ನು ನನ್ನ ಹಾಸ್ಟೆಲ್‌ಗೆ ವಾಪಸ್ ಕರೆದುಕೊಂಡು ಹೋಗುತ್ತಿದ್ದ. ದೆಹಲಿಯ ಚಳಿಯ ಸಮಯ ಅದು. ಒಂದು ಮರದ ಕೆಳಗೆ ನಿಲ್ಲಿಸಿ ತನ್ನ ಹಳೆಯ ಫೋಟೊಗಳನ್ನು ತೋರಿಸುತ್ತಿದ್ದ. ನಾನೂ ಸಹ ಈ ರೀತಿಯ ಸಮಯಕ್ಕಾಗಿ ಬಹಳ ಸಮಯದಿಂದ ಕಾದಿದ್ದೆ. ನಾನು ಮುತ್ತಿಗಾಗಿ ಮುಂದುವರೆದೆ, ಆರಂಭದಲ್ಲಿ ಅವನು ಸ್ವಲ್ಪ ಗಾಬರಿಯಾದ ಆದರೆ ನಂತರ ನಾವಿಬ್ಬರೂ ಪರಸ್ಪರ ಮುತ್ತುಕೊಟ್ಟುಕೊಂಡೆವು ಅದು ನನ್ನ ಮೊದಲ ಮುತ್ತಾಗಿತ್ತು. ಅದನ್ನು ಎಂದಿಗೂ ನಾನು ಮರೆಯುವುದಿಲ್ಲ ಎಂದಿದ್ದಾರೆ ಮೇಘನಾ ಕೌಶಿಕ್.

More from Filmibeat

English summary
Valentines day 2022: Actress Malvi Malhotra, Meghana Koushik, Payal Gosh, Kenisha Awasti and other actress share their first kiss experience.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X