Valentine's Day: ನಿಮ್ಮ ಸಂಗಾತಿ ಸಿನಿಮಾ ಪ್ರೇಮಿಯೇ? ಪ್ರೇಮಿಗಳ ದಿನ ನೀವು ಕೊಡಬಹುದಾದ 5 ಗಿಫ್ಟ್‌ಗಳು ಇಲ್ಲಿವೆ
ಪ್ರತಿ ವರ್ಷ ಪ್ರೇಮಿಗಳ ದಿನ ಬಂದೇ ಬರುತ್ತೆ. ಚಾಕಲೇಟ್, ರೆಡ್ ರೋಸ್ ಕೊಟ್ಟು ಕೊಟ್ಟ ಸಾಗಿರುತ್ತೆ. ಹೊರಗಡೆ ಡಿನ್ನರ್‌ಗೆ ಕರೆದುಕೊಂಡು ಹೋಗಿ ಬೋರ್ ಆಗಿರುತ್ತೆ. ಒಂದು ವೇಳೆ ನಿಮ್ಮ ಪ್ರೇಮಿ ಅಥವಾ ಸಂಗಾತಿ ಸಿನಿಮಾ ಪ್ರೇಮಿಯಾಗಿದ್ದರೆ, ವಿಶೇಷವಾದ ಉಡುಗೊರೆಗಳನ್ನು ಕೊಟ್ಟು ಖುಷಿ ಪಡಿಸಬಹುದು. ನಿಮ್ಮ ಮೂವಿ ಲವರ್‌ಗಳಿಗೆ ಸರ್ಪ್ರೈಸ್ ಕೊಡಬಹುದು.
ಕೆಲವರಿಗೆ ಸಿನಿಮಾ ನೋಡುವುದಕ್ಕೆ ಇಷ್ಟ. ಮತ್ತೆ ಕೆಲವರಿಗೆ ಸಿನಿಮಾಗೆ ಸಂಬಂಧಿಸಿದ ವಸ್ತುಗಳು ಇಷ್ಟ. ಸಿನಿಮಾಗೆ ಸಂಬಂಧಿಸಿದ ವಿಷಯಗಳಿರುವ ಕಾಫಿ ಮಗ್, ಪುಸ್ತಕಗಳು, ಸಿನಿಮಾ ಇವೆಲ್ಲ ಬೋರ್ ಹೊಡಿಸಿದ್ದರೆ, ಹೊಸ ಹೊಸ ಗಿಫ್ಟ್‌ಗಳನ್ನು ಟ್ರೈ ಮಾಡಬಹುದು. ಇದು ನಿಮ್ಮ ಲವರ್ ಹಾಗೂ ಸಂಗಾತಿಗೆ ಇಷ್ಟ ಆಗಬಹುದು. ಅಂತಹ ಸ್ಪೆಷಲ್ ಗಿಫ್ಟ್‌ಗಳು ಯಾವುವು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ..

ಮಿನಿ ಪ್ರೊಜೆಕ್ಟರ್
ಕೆಲವರಿಗೆ ಸಿನಿಮಾ ನೋಡುವುದು ಹಾವ್ಯಾಸವಾಗಿರುತ್ತೆ. ಪ್ರತಿ ದಿನ ಸಿನಿಮಾ ನೋಡದೆ ಇದ್ದರೆ ಚಡಪಡಿಸಿಬಿಡುತ್ತಾರೆ. ಸಿನಿಮಾ ಇಲ್ಲವೇ ವೆಬ್ ಸೀರಿಸ್ ಅನ್ನು ನೋಡಲೇಬೇಕು. ಇಲ್ಲದೆ ಇದ್ದರೆ ನಿದ್ದೆನೇ ಬರೋದಿಲ್ಲ. ಅಂತಹವರಿಗೆ ಮಿನಿ ಪ್ರೊಜೆಕ್ಟರ್ ಅನ್ನು ಗಿಫ್ಟ್ ಮಾಡಬಹುದು. ನಿಮ್ಮ ಮನೆಯ ಗೋಡೆ ಮೇಲೆ, ಹೋಮ್ ಥಿಯೇಟರ್, ಅಂಗಳದಲ್ಲಿ ಸಿನಿಮಾವನ್ನು ನೋಡಬಹುದು. ಈ ಪ್ರೊಜೆಕ್ಟರ್ ಜೊತೆನೇ ಮಿನಿ ಸ್ಪೀಕರ್ ಕೂಡ ಇರುತ್ತೆ. ಹೀಗಾಗಿ ಇದೊಂದು ಒಳ್ಳೆ ಗಿಫ್ಟ್ ಆಗುತ್ತೆ. ಎಲ್ಲಾ ಶಾಪಿಂಗ್ ಸೈಟ್‌ನಲ್ಲಿ ಆರಾಮಾಗಿ ಸಿಗುತ್ತವೆ.
ಕಪಲ್ ಮೂವಿ ಪೋಸ್ಟರ್
ಈ ಗಿಫ್ಟ್ ನಿಮ್ಮ ಪ್ರೇಮಿಗೆ ಇಷ್ಟ ಆಗಬಹುದು. ಕಪಲ್ ಮೂವಿ ಪೋಸ್ಟರ್ ಅನ್ನು ನೀವೇ ರೆಡಿ ಮಾಡಿಕೊಳ್ಳಬಹುದು. ನಿಮಗೆ ಇಷ್ಟ ಬಂದ ಸಿನಿಮಾದ ಪೋಸ್ಟರ್‌ನಲ್ಲಿ ನಿಮ್ಮಿಬ್ಬರ ಫೋಟೊಗಳನ್ನು ಕೂರಿಸಬಹುದು. ನೀವು ಇಷ್ಟ ಪಟ್ಟ ಸಿನಿಮಾದ ನಾಯಕ-ನಾಯಕಿಯರ ಜಾಗದಲ್ಲಿ ನಿಮ್ಮ ಫೋಟೊಗಳನ್ನು ಇಟ್ಟು ಅದಕ್ಕೊಂದು ಫ್ರೇಮ್ ಹಾಕಿಸಿ ನಿಮ್ಮ ಸಂಗಾತಿ ಗಿಫ್ಟ್ ಮಾಡಬಹುದು.

ಟೇಬಲ್ ಟಾಪ್ ವೈನ್ ಮೂವಿ ಸ್ಟ್ಯಾಂಡ್
ಆನ್‌ಲೈನ್ ಶಾಪಿಂಗ್ ಮಾಡುವವರಿಗೆ ಟೇಬಲ್ ಟಾಪ್ ವೈನ್ ಮೂವಿ ಸ್ಟ್ಯಾಂಡ್ ಆರಾಮಾಗಿ ಕಣ್ಣಿಗೆ ಬೀಳುತ್ತೆ. ಪ್ರೇಮಿಗಳ ದಿನ ಅಂದ್ಮೇಲೆ ಇಬ್ಬರೇ ಕೂಡ ಸ್ಪೆಷಲ್ ಡಿನ್ನರ್ ಮಾಡಬಹುದು. ಆ ವೇಳೆ ಕೆಲವರು ವೈನ್ ತೆಗೆದುಕೊಳ್ಳುತ್ತಾರೆ. ಇದನ್ನು ಇಡುವುದಕ್ಕೆ ಸಿನಿಮಾ ಕಾಂಸೆಪ್ಟ್‌ನಲ್ಲಿ ವೈನ್ ಮೂವಿ ಸ್ಟ್ಯಾಂಡ್ ಅನ್ನು ಖರೀದಿ ಮಾಡಬಹುದು. ಇದನ್ನು ನಿಮ್ಮ ಪ್ರೇಮಿಗೆ ಕೊಡಬಹುದು. ಇದೂ ಕೂಡ ಆನ್‌ಲೈನ್ ಶಾಪಿಂಗ್ ಸೈಟ್‌ಗಳಲ್ಲಿ ಲಭ್ಯವಿದೆ.
ಮೂವೀ ಟಿ ಶರ್ಟ್
ಸಿನಿಮಾ ಇಷ್ಟ ಪಡುವರಿಗೆ ಟಿ ಶರ್ಟ್ ಅನ್ನು ಉಡುಗೊರೆಯಾಗಿ ಕೊಡಬಹುದು. ನಿಮ್ಮ ಸಂಗಾತಿಯ ಅಚ್ಚು ಮೆಚ್ಚಿನ ಸಿನಿಮಾ, ಹೀರೊ, ಹೀರೊಯಿನ್, ಶೂಟಿಂಗ್ ಸ್ಪಾಟ್ ಹೀಗೆ ಫೋಟೊಗಳನ್ನು ಪ್ರಿಂಟ್ ಮಾಡಿಸಿ, ಕ್ರಿಯೇಟಿವ್ ಆಗಿ ಪದಗಳನ್ನು ಪೋಣಿಸಿ ಕೊಡಬಹುದು. ಇದು ಹುಡುಗರಿಗೆ ಹೆಚ್ಚಾಗಿ ಇಷ್ಟ ಆಗುತ್ತೆ. ಪ್ರೇಮಿಗಳ ದಿನ ಇದೊಂದು ರೊಮ್ಯಾಂಟಿಕ್ ಗಿಫ್ಟ್ ಆಗುವ ಎಲ್ಲಾ ಸಾಧ್ಯತೆನೂ ಇದೆ.
ಓದುವ ಹವ್ಯಾಸ ಇರೋರಿಗೆ ಪುಸ್ತಕಗಳು
ಕೆಲವರಿಗೆ ಸಿನಿಮಾಗೆ ಸಂಬಂಧಿಸಿದ ವಿಷಯಗಳನ್ನು ಓದುವ ಆಸಕ್ತಿ ಇರುತ್ತೆ. ಹೀಗಾಗಿ ಸಿನಿಮಾ ಮೇಕಿಂಗ್‌ಗೆ ಸಂಬಂಧಿಸಿದ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬಹುದು. ಅದರಲ್ಲೂ ಹಾಲಿವುಡ್ ಸಿನಿಮಾ ಇಷ್ಟ ಪಡುವವರಿಗೆ 'ಕ್ವಿರ್ಕ್ ಬುಕ್ಸ್ ಸಿನಿಮ್ಯಾಪ್ಸ್: ಎನ್ ಅಟ್ಪಾಸ್ ಆಫ್ 35 ಮೂವೀಸ್'(Quirk Books Cinemaps: An Atlas of 35 Great Movies), 'ಅನ್‌ಕಾಮನ್ ಗೂಡ್ಸ್ ಈಟ್ ವಾಟ್ ಯು ವಾಚ್: ಎ ಕುಕ್‌ಬುಕ್ ಫಾರ್ ಸಿನಿಮಾ ಲವರ್ಸ್' (Uncommon Goods Eat What You Watch: A Cookbook for Movie Lovers) ಇಂತಹದ್ದೇ ಒಂದು ಬುಕ್‌ಗಳು ಆನ್‌ಲೈನ್ ಶಾಪಿಂಗ್ ಸೈಟ್‌ಗಳಲ್ಲಿ ಲಭ್ಯವಿದೆ. ಚೆಕ್ ಮಾಡಿ ಗಿಫ್ಟ್ ಮಾಡಬಹುದು.


Click it and Unblock the Notifications











