Valentine's Day:ಈ ತಾರಾ ಜೋಡಿಯ ರಾಶಿ ಹೊಂದಾಣಿಕೆ ಹೇಗಿದೆ? ಪ್ರೀತಿಸಿ ಮದ್ವೆ ಆದ ಜೋಡಿಯ ಹೇಗಿದ್ದಾರೆ?
ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ. ಇಂತಹದ್ದೊಂದು ಜನಪ್ರಿಯ ನಂಬಿಕೆ ಭಾರತದಲ್ಲಿ ಇದೆ. ನಮ್ಮ ಹಿರಿಯರು ಯಾವುದಾದರೂ ಜೋಡಿಯನ್ನು ನೋಡಿದರೆ, ಜನರು ಇಂತಹದ್ದೊಂದು ಮಾತನ್ನು ಹೇಳಿಯೇ ಹೇಳುತ್ತಾರೆ. ಆದರೆ, ಪ್ರೀತಿಸಿ ಮದುವೆ ಆದ ಜೋಡಿಗಳು ಈ ಹೇಳಿಕೆಯನ್ನು ಉಲ್ಟಾ ಮಾಡಿದ್ದೂ ಇದೆ. ಅದರಲ್ಲೂ ತಾರಾ ಜೋಡಿಯನ್ನು ನೋಡಿದರೆ, ಈ ಜೋಡಿಯ ಭೇಟಿ ಸ್ವರ್ಗದಲ್ಲಿ ಅಲ್ಲ ಭೂಮಿ ಮೇಲೆ ಆಗಿದ್ಯಾ ಅನ್ನೋ ಅನುಮಾನ ಮೂಡುತ್ತೆ.
ಮದುವೆ ಆಗಬೇಕು ಅಂದರೆ, ಒಬ್ಬರ ರಾಶಿಗಳು ಇನ್ನೊಬ್ಬರ ರಾಶಿಗಳೊಂದಿಗೆ ಹೊಂದಾಣಿಕೆಯಾಗಬೇಕು. ಆಗಲೇ ನಿಶ್ಚಿತಾರ್ಥ, ಮದುವೆ ಅಂತ ಮುಂದಕ್ಕೆ ಹೋಗೋದು. ಆದರೆ, ಪ್ರೀತಿಯಲ್ಲಿ ಬಿದ್ದವರಿಗೆ ಇದ್ಯಾವುದಕ್ಕೂ ಬೇಕಿಲ್ಲ. ಕೆಲವರು ನಂಬುವುದೂ ಇಲ್ಲ. ಆದರೂ, ಇಬ್ಬರ ಜ್ಯೋತಿಷಗಳು ಕೆಲವರ ರಾಶಿಚಕ್ರ ಹೊಂದಾಣಿಕೆಯನ್ನು ಉಲ್ಲೇಖ ಮಾಡಿದ್ದಾರೆ. ಇಂತಹ ಬಾಲಿವುಡ್ ಜೋಡಿಯ ರಾಶಿಗಳ ಬಗ್ಗೆ ಮಾಹಿತಿ ಇಲ್ಲಿದೆ.

ರಣ್‌ವೀರ್ ಸಿಂಗ್-ದೀಪಿಕಾ ಪಡುಕೋಣೆ
ಬಾಲಿವುಡ್‌ನ ಹಾಟ್ ಕಪಲ್ ರಣ್‌ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ. ವಿವಾಹದ ಬಳಿಕ ಈ ಜೋಡಿ ಅನ್ಯೋನ್ಯವಾಗಿದ್ದಾರೆ. ರಣ್‌ವೀರ್ ಸಿಂಗ್ ಜುಲೈ 6, 1985ರಲ್ಲಿ ಜನಿಸಿದ್ದು, ಇವರ ರಾಶಿ ಕಟಕ. ಹಾಗೇ ದೀಪಿಕಾ ಪಡುಕೋಣೆ ಜನಿಸಿದ್ದು, ಜನವರಿ 5, 1986. ಇವರದ್ದು ಮಕರ ರಾಶಿ. ಇಲ್ಲಿ ರಣ್‌ವೀರ್ ಸಿಂಗ್ ಕಟಕ ರಾಶಿಯವರಾಗಿದ್ದರಿಂದ ಮನೆಯಲ್ಲಿ ಇರುವುದಕ್ಕೆ ಹೆಚ್ಚು ಇಷ್ಟ ಪಡುತ್ತಾರೆ. ಅದೇ ದೀಪಿಕಾ ಪಡುಕೋಣೆ ವೃತ್ತಿ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಕಟಕ ರಾಶಿಯ ರಣ್‌ವೀರ್ ಸಿಂಗ್‌ರನ್ನು ಮಕರರಾಶಿಯ ದೀಪಿಕಾ ಪಡುಕೋಣೆ ಹೆಚ್ಚು ಕೇರ್ ಮಾಡುತ್ತಾರೆ. ಹೀಗಾಗಿ ಈ ಜೋಡಿಯಲ್ಲಿ ಹೊಂದಾಣಿಕೆ ಇದೆ.
ವಿರಾಟ್-ಅನುಷ್ಕಾ
ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿಯದ್ದು ವೃಶ್ಚಿಕ ರಾಶಿ. ಇವರಉ ಹುಟ್ಟಿದ್ದು, ನವೆಂಬರ್ 5, 1988. ಅದೇ ಅನುಷ್ಕಾ ಶರ್ಮಾ ಅವರದ್ದು ವೃಷಭ ರಾಶಿ. ಇವರು ಹುಟ್ಟಿದ್ದು ಮೇ 1, 1988. ಇವರಿಬ್ಬರದ್ದೂ ವೈರುಧ್ಯ ರಾಶಿಗಳಾಗಿದ್ದರಿಂದ ಇವರ ಸಂಬಂಧ ಗಟ್ಟಿಯಾಗಿರುತ್ತೆ. ಆದರೂ ಇಬ್ಬರೂ ಸಾಕಷ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಇಲ್ಲಿ ದೀಪಿಕಾ ವೃಷಭ ರಾಶಿಯವರಾಗಿದ್ದರಿಂದ ವೃಶ್ಚಿಕ ರಾಶಿಯ ಸ್ವಭಾವದೊಂದಿಗೆ ಹೆಚ್ಚು ಆಕರ್ಷಿತರಾಗುತ್ತಾರೆ.

ಕರೀನಾ ಕಪೂರ್-ಸೈಫ್ ಅಲಿ ಖಾನ್
ಇಲ್ಲಿ ಸೈಫ್ ಅಲಿಖಾನ್‌ರದ್ದು ಸಿಂಹರಾಶಿ. ಹಾಗೇ ಹುಟ್ಟಿದ ದಿನಾಂಕ ಆಗಸ್ಟ್ 16, 1970. ಕರೀನಾ ಕಪೂರ್ ಖಾನ್‌ರದ್ದು ಕನ್ಯಾರಾಶಿ. ಹುಟ್ಟಿದ್ದು, ಸೆಪ್ಟೆಂಬರ್ 21, 1980. ಇವರಿಬ್ಬರ ರಾಶಿಯವರಿಗೂ ಉತ್ತಮವಾಗಿ ಬ್ಯಾಲೆನ್ಸ್ ಮಾಡಿಕೊಳ್ಳುವ ಗುಣವಿದೆ. ಹೀಗಾಗಿ ಇಬ್ಬರೂ ತಮ್ಮ ಸಂಬಂಧವನ್ನು ಕಟ್ಟಿಯಾಗಿ ಇಟ್ಟುಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಾರೆ. ರೊಮ್ಯಾನ್ಸ್ ವಿಷಯಕ್ಕೆ ಬಂದರೆ, ಇಬ್ಬರೂ ಆದರ್ಶ ಜೋಡಿ ಎನ್ನಲಾಗಿದೆ.
ಶಾರುಖ್ ಖಾನ್ -ಗೌರಿ
ಇನ್ನು ಬಾಲಿವುಡ್‌ನ ಪವರ್‌ಫುಲ್ ಜೋಡಿ ಶಾರುಖ್ ಖಾನ್‌ರದ್ದು ವೃಶ್ಚಿಕ ರಾಶಿ. ಇವರು ಹುಟ್ಟಿದ್ದು ನವೆಂಬರ್ 2, 1965. ಹಾಗೇ ಗೌರಿ ಖಾನ್‌ರದ್ದು ತುಲಾ ರಾಶಿ. ಗೌರಿ ಜನಿಸಿದ್ದು ಅಕ್ಟೋಬರ್ 8, 1970. ವೃಶ್ಚಿಕ ರಾಶಿ ಹಾಗೂ ತುಲಾ ರಾಶಿಯವರು ಅದ್ಭುತ ಜೋಡಿ ಎಂದು ಹೇಳಲಾಗುತ್ತೆ. ಇದು ಶಾರುಖ್ ಖಾನ್ ಹಾಗೂ ಗೌರಿ ಖಾನ್ ವಿಚಾರದಲ್ಲೂ ಸಾಬೀತಾಗಿದೆ. ವೃಶ್ಚಿಕ ರಾಶಿಯ ಶಾರುಖ್ ಖಾನ್ ಸೂಕ್ಷ್ಮ ಸ್ವಭಾವದ ವ್ಯಕ್ತಿ. ಅದೇ ತುಲಾ ರಾಶಿಯ ಗೌರಿ ಖಾನ್‌ರದ್ದು ಆಕರ್ಷಕ ವ್ಯಕ್ತಿತ್ವವಿದೆ.
ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ
ಬಾಲಿವುಡ್‌ನಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಜೋಡಿ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಇಬ್ಬರೂ ವಿಚ್ಚೇದನದ ವದಂತಿಗಳು ಸಿಕ್ಕಾಪಟ್ಟೆ ಸದ್ದು ಮಾಡಿದ್ದವು. ಅಭಿಷೇಕ್ ಬಚ್ಚನ್‌ರದ್ದು ಕುಂಭ ರಾಶಿ, ಹುಟ್ಟಿದ್ದು, ಫೆಬ್ರವರಿ 5, 1976. ಅದೇ ಐಶ್ವರ್ಯಾ ರೈರದ್ದು ವೃಶ್ಚಿಕ ರಾಶಿ. ಇವರು ಹುಟ್ಟಿದ್ದು, ನವೆಂಬರ್ 1, 1973. ಇಬ್ಬರ ಹೊಂದಾಣಿಕೆ ಕೊಂಚ ಮಟ್ಟಿಗೆ ಚಾಲೆಂಜಿಂಗ್ ಅಂತ ಅನಿಸುತ್ತೆ. ಆದರೆ, ಅಭಿಷೇಕ್ ಬಚ್ಚನ್ ಜಾಲಿ ಸ್ವಭಾವ ಇಬ್ಬರ ಸಂಬಂಧವನ್ನು ಕಾಪಾಡಿಕೊಂಡು ಹೋಗುತ್ತೆ ಎನ್ನುತ್ತಾರೆ.
ಅಕ್ಷಯ್ ಕುಮಾರ್-ಟ್ವಿಂಕಲ್ ಖನ್ನಾ
ಬಾಲಿವುಡ್‌ನ ಮತ್ತೊಂದು ಪವರ್‌ಫುಲ್ ಜೋಡಿ ಅಕ್ಷಯ್ ಕುಮಾರ್ ಹಾಗೂ ಟ್ವಿಂಕಲ್ ಖನ್ನಾ. ಅಕ್ಷಯ್ ಕುಮಾರ್‌ರದ್ದು ಕನ್ಯಾರಾಶಿ. ಹುಟ್ಟಿದ ದಿನಾಂಕ ಸೆಪ್ಟೆಂಬರ್ 9, 1967. ಅದೇ ಟ್ವಿಂಕಲ್ ಖನ್ನಾರದ್ದು ಮಕರ ರಾಶಿ. ಇವರು ಹುಟ್ಟಿದ್ದು, ಡಿಸೆಂಬರ್ 29, 1974. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕನ್ಯಾರಾಶಿ ಹಾಗೂ ಮಕರ ರಾಶಿ ಹೊಂದಿರುವ ಜೋಡಿ ಸಿಕ್ಕಾಪಟ್ಟೆ ಹಾರ್ಡ್ ವರ್ಕಿಂಗ್ ಹಾಗೂ ಪ್ರಾಕ್ಟಿಕಲ್ ಆಗಿರುತ್ತಾರೆ. ಇಬ್ಬರೂ ವೃತ್ತಿ ಮೇಲೆ ಹೆಚ್ಚು ಫೋಕಸ್ ಮಾಡುತ್ತಾರೆ. ಇಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತಾರೆ.


Click it and Unblock the Notifications











