"ಮದ್ವೆ ಮೇಲೆ ನಂಬಿಕೆ ಕಮ್ಮಿ ಆಗಿದೆ.. ಅದ್ಕೆ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಸಂಸ್ಕೃತಿ ಹೆಚ್ಚಾಗ್ತಿದೆ": ಡಿಸ್ಕೋ ಶಾಂತಿ

ಚಿತ್ರರಂಗದ ಕಾಸ್ಟಿಂಗ್ ಕೌಚ್ ಸಂಸ್ಕೃತಿ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ನಟಿಯರು ಹೆಚ್ಚು ಮಾತನಾಡುತ್ತಿದ್ದಾರೆ. ಹಿರಿಯ ನಟಿಯರು ಸಹಿತ ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವದ ಬಗ್ಗೆ ಮೌನ ಮುರಿಯುತ್ತಿದ್ದಾರೆ. ಇದೀಗ ಹಿರಿಯ ನಟಿ ಡಿಸ್ಕೋ ಶಾಂತಿ ಈ ವಿಚಾರದ ಬಗ್ಗೆ ವಿಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮ್ಮ ಕಾಲದಲ್ಲಿ ಇದೆಲ್ಲ ಇರಲಿಲ್ಲ, ಈಗ ಕಾಣಿಸ್ತಿದೆ ಎಂದಿದ್ದಾರೆ.

ದಶಕಗಳ ಹಿಂದೆ ಬಹುಬೇಡಿಕೆಯ ಐಟಂ ಡ್ಯಾನ್ಸರ್ ಆಗಿ ಡಿಸ್ಕೋ ಶಾಂತಿ ಹೆಸರು ಮಾಡಿದ್ದರು. ತುಂಡು ಬಟ್ಟೆಯಲ್ಲಿ ಮೈಮಾಟ ಪ್ರದರ್ಶಿಸುತ್ತಾ ಐಟಂ ಸಾಂಗ್‌ಗಳಲ್ಲಿ ಹೆಜ್ಜೆ ಹಾಕಿದ್ದರು. ತಮಿಳು ನಟ ಸಿ.ಎಲ್.ಆನಂದನ್ ಮಗಳಾದ ಡಿಸ್ಕೋ ಶಾಂತಿ 80, 90 ದಶಕದಲ್ಲಿ ಚಿತ್ರರಂಗದಲ್ಲಿ ಮೆರೆದರು. ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ, ಓರಿಯಾ ಭಾಷೆಯ ಸಿನಿಮಾಗಳಲ್ಲಿ ಬಿಂದಾಸ್‌ ಆಗಿ ಕುಣಿದು ಪ್ರೇಕ್ಷಕರನ್ನು ರಂಜಿಸಿದ್ದರು. 900ಕ್ಕೂ ಅಧಿಕ ಸಿನಿಮಾಗಳಲ್ಲಿ ಆಕೆ ಬಣ್ಣ ಹಚ್ಚಿದ್ದಾರೆ. ತೆಲುಗು ನಟ ಶ್ರೀಹರಿ ಕೈ ಹಿಡಿದ ನಂತರ ಆಕೆ ಸಿನಿಮಾಗಳಿಗೆ ಗುಡ್‌ಬೈ ಹೇಳಿದ್ದರು.

Veteran actress Disco Shanti revealed her opinion about the casting couch

ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ವಿಷ್ಣುವರ್ಧನ್, ಅಂಬರೀಶ್, ಶಂಕರ್‌ನಾಗ್‌ರಂತಹ ಸ್ಟಾರ್‌ಗಳ ಸಿನಿಮಾಗಳಲ್ಲಿ ಡಿಸ್ಕೋ ಶಾಂತಿ ಕುಣಿದಿದ್ದಾರೆ. ಆಕೆಯ ಹುಟ್ಟು ಹೆಸರು ಶಾಂತ ಕುಮಾರಿ. ಸಿನಿಮಾಗಳಲ್ಲಿ ಆಕೆಯ ಡ್ಯಾನ್ಸ್ ನೋಡಿ ಕೆಲವರು ಡಿಸ್ಕೋ ಶಾಂತಿ ಎಂದು ಕರೆಯಲು ಆರಂಭಿಸಿದರು. ಅದೇ ಮುಂದೆ ಬ್ಯ್ರಾಂಡ್ ಆಯಿತು. ಇತ್ತೀಚಿಗೆ ಇಂಡಿಯಾಗ್ಲಿಟ್ಸ್ ತಮಿಳು ಯೂಟ್ಯೂಬ್‌ ಚಾನಲ್‌ಗೆ ಡಿಸ್ಕೋ ಶಾಂತಿ ಸಂದರ್ಶನ ನೀಡಿದ್ದಾರೆ. ಮತ್ತೊಬ್ಬ ನಟಿ ಕುಟ್ಟಿ ಪದ್ಮಿಣಿ ಸಂದರ್ಶನ ಮಾಡಿದ್ದಾರೆ. ಈ ವೇಳೆ ಸಾಕಷ್ಟು ಸಂಗತಿಗಳನ್ನು ಶಾಂತಿ ಹಂಚಿಕೊಂಡಿದ್ದಾರೆ.

ಕೆಸರಲ್ಲಿ ಕಲ್ಲು ಹಾಕುವುದು ತಪ್ಪು

"ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕರಿಗೆ ಸಹಕರಿಸಿದರೆ ಮಾತ್ರ ಅವಕಾಶ ಸಿಗುತ್ತದೆ ಅನ್ನೋದು ಸುಳ್ಳು. ಕೆಸರಿನಲ್ಲಿ ಕಲ್ಲು ಹಾಕಿದರೆ ನಮ್ಮ ಮೇಲೆ ಸಿಡಿಯುತ್ತದೆ. ಕೆಸರು ಪಕ್ಕ ಇದ್ದಾಗ ಸುಮ್ಮನೆ ಹೋದರೆ ಏನು ಆಗುವುದಿಲ್ಲ. ಚಿತ್ರರಂಗದಲ್ಲಿ ಇಂತಹದ್ದೆಲ್ಲಾ ಇದೆ ಅನ್ನೋದನ್ನು ನಾನಂತೂ ಕಣ್ಣಾರೆ ನೋಡಿಲ್ಲ. ಹೊರಗಡೆ ಜನ ಮಾತನಾಡುತ್ತಾರಷ್ಟೆ. ಇಂಡಸ್ಟ್ರಿ ಬಗ್ಗೆ ಅಂತಾದೊಂದು ಕೆಟ್ಟ ಅಭಿಪ್ರಾಯ ಇದೆ. ಆದರೆ ಎಲ್ಲಾ ನಾಯಕಿಯರು ತಪ್ಪು ಮಾಡಿ ಬಂದಿದ್ದಾರೆ. ಎಲ್ಲಾ ನಟ, ನಿರ್ದೇಶಕರು, ನಿರ್ಮಾಪಕರು ಹಾಗೆ ಮಾಡ್ತಾರೆ ಅನ್ನೋದು ಸುಳ್ಳು. ಯಾರೋ ಒಂದಿಬ್ಬರು ಈ ರೀತಿ ಮಾಡಿರಬಹುದು.

ಮದುವೆ ಮೇಲೆ ನಂಬಿಕೆ ಕಮ್ಮಿ ಆಗಿದೆ

"ಈಗ ಟ್ರೆಂಡ್ ಬದಲಾಗಿದೆ. ಮದುವೆ ಮೇಲೆ ಯಾರಿಗೂ ನಂಬಿಕೆ ಇಲ್ಲ. ಲಿವಿಂಗ್‌ಟು ಗೆದರ್ ಹೆಚ್ಚಾಗಿದೆ. ಮೊದಲೆಲ್ಲಾ ಹೈ ಕ್ಲಾಸ್ ಜನ ಮಾತ್ರ ಲಿವಿಂಗ್‌ಟು ಗೆದರ್ ಎನ್ನುತ್ತಿದ್ದರು. ಆದರೆ ಈಗ 40, 50 ರೂಪಾಯಿ ಸಂಪಾದಿಸುವವರು ಇದೇ ರೀತಿ ಇದ್ದಾರೆ. ಹಳ್ಳಿಯಲ್ಲಿ ಇರುವವರು ಚೆನ್ನಾಗಿ ಓದುತ್ತಾರೆ. ಆದರೆ ಸಾಕಷ್ಟು ಹೆಣ್ಣುಮಕ್ಕಳು ನಗರಗಳಿಗೆ ಬಂದು ಹಾಳಾಗುತ್ತಿದ್ದಾರೆ. ನಗರದಲ್ಲಿ ಮತ್ತೊಬ್ಬರನ್ನು ನೋಡಿ ಹೀಗಾಗುತ್ತಿದೆ. ಗಂಡು, ಹೆಣ್ಣು ಸೇರಿ ಒಂದೇ ಮನೆಯಲ್ಲಿ ವಾಸಿಸುವಂತಾಗಿದೆ. ಅವರಿಗೆ ಈಗ ಎಲ್ಲವೂ ಸುಲಭವಾಗಿದೆ. ಮುತ್ತು ಕೊಟ್ಟರೆ ತಪ್ಪಿಲ್ಲ, ತಬ್ಬಿಕೊಂಡರೆ ತಪ್ಪಿಲ್ಲ ಎನ್ನುವಂತಾಗಿದೆ"

Veteran actress Disco Shanti revealed her opinion about the casting couch

ಆರಂಭದಲ್ಲಿ ಕೊಂಚ ಹಿನ್ನಡೆ

"ನಾವು ಒಂದು ಗೆರೆ ಎಳೆದುಕೊಂಡು ಅದನ್ನು ಮೀರಲ್ಲ ಎಂದು ಇದ್ದರೆ ಯಾರು ಏನು ಮಾಡೋಕೆ ಆಗಲ್ಲ. ರಾಣಿ ತರ ಇರ್ತೀವಿ. ಆರಂಭದಲ್ಲಿ 2 ವರ್ಷ ನನಗೆ ಹಿನ್ನಡೆ ಆಯಿತು. ಡ್ಯಾನ್ಸರ್ ಆಗಿ ಡ್ಯಾನ್ಸ್ ಗೊತ್ತಿರಲಿಲ್ಲ. ಡ್ಯಾನ್ಸ್ ಕಲಿತಮೇಲೆ ಯಾರಿಗೂ ಹೆದರಲಿಲ್ಲ. ಒಂದಿಬ್ಬರಿಗೆ ಹೊಡೆದುಬಿಟ್ಟಿದ್ದೀನಿ. ಇಂಡಸ್ಟ್ರಿಯಲ್ಲಿ ಬಹಳ ಜನಕ್ಕೆ ಗೊತ್ತು ಇದೆ. ಆ ರೀತಿ ಹೋದರೆ ಮಾತ್ರ ಚೀಪ್ ಆಗುತ್ತೀವಿ. ನನ್ನ ಲಿಮಿಟ್ಸ್‌ನಲ್ಲಿ ನಾನಿದ್ದೆ." ಎಂದು ಡಿಸ್ಕೋ ಶಾಂತಿ ವಿವರಿಸಿದ್ದಾರೆ."

ಮಕ್ಕಳ ಜೊತೆ ಜೀವನ

1996ರಲ್ಲಿ ತೆಲುಗು ನಟ ಶ್ರೀಹರಿ ಜೊತೆ ಡಿಸ್ಕೋ ಶಾಂತಿ ಮದುವೆ ಆಯಿತು. ದಂಪತಿಗೆ ಮೂವರು ಮಕ್ಕಳು. ಮದುವೆ ನಂತರ ಸಂಪೂರ್ಣವಾಗಿ ಶಾಂತಿ ಚಿತ್ರರಂಗದಿಂದ ದೂರಾಗಿ ಹೌಸ್‌ ವೈಫ್ ಆಗಿ ಜೀವನ ಸಾಗಿಸುತ್ತಿದ್ದಾರೆ. 10 ವರ್ಷಗಳ ಹಿಂದೆ ಶ್ರೀಹರಿ ನಿಧನರಾದರು. ಆ ನಂತರ ಮಕ್ಕಳ ಜೊತೆ ಶಾಂತಿ ಜೀವನ ಸಾಗಿಸುತ್ತಿದ್ದಾರೆ. ತಮ್ಮ ದುಡಿಮೆಯ ಜೊತೆ ಶ್ರೀಹರಿ ಕೂಡಿದ್ದ ಆಸ್ತಿ, ಹಣದಿಂದ ಮಕ್ಕಳನ್ನು ಸಾಕಿ ಬೆಳೆಸಿದ್ದಾರೆ. ಒಂದಷ್ಟು ಆಸ್ತಿ ಮಾರಾಟ ಮಾಡಿ ಈಗ ಬಾಡಿಗೆ ಬರುವಂತೆ ಮಾಡಿಕೊಂಡಿರುವುದಾಗಿ ಇದೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

More from Filmibeat

English summary
Veteran actress Disco Shanti revealed her opinion about the casting couch. She says Don't blame everyone in the film industry. I have never faced casting couch. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X