ಅಯ್ಯೋ ದುರ್ವಿಧಿ ; ಬದುಕಿನ ಸಂಧ್ಯಾಕಾಲದಲ್ಲಿ ವೃದ್ರಾಶ್ರಮದ ಮೊರೆ ಹೋದ ಹಿರಿಯ ನಟಿ..!

ಸಿನಿಮಾರಂಗವೇ ಹಾಗೆ.. ಇಲ್ಲಿ ಚಾಲ್ತಿಯಲ್ಲಿದ್ದರಷ್ಟೇ ಬೆಲೆ. ಬಣ್ಣ ಮಾಸಿದ ಮೇಲೆ ಇಲ್ಲಿ ಎಲ್ಲವೂ ದೂರ. ಇದಕ್ಕೆ ಮತ್ತೊಂದು ಉದಾಹರಣೆ ಪಾವಲಾ ಶ್ಯಾಮಲಾ.

ಹೌದು, ಪಾವಲಾ ಶ್ಯಾಮಲಾ, ಒಂದ್ಕಾಲದಲ್ಲಿ ಬಿಡುವಿರದ ನಟಿ. ಆ ಕಾಲಕ್ಕೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರನ್ನ ಮಾಡಿದವರು ಇವರು. ಮೆಗಾ ಸ್ಟಾರ್ ಚಿರಂಜೀವಿ, ಬಾಲಕೃಷ್ಣ, ವೆಂಕಟೇಶ್ ಸಿನಿಮಾಗಳಲ್ಲಿ ಖಾಯಂ ನಟಿಯಾಗಿದ್ದವರು ಇವರು. ಇಷ್ಟೇ ಯಾಕೆ ಈ ಕಾಲದ ಜ್ಯೂ.ಎನ್.ಟಿ.ಆರ್, ನಾನಿ, ಗೋಪಿಚಂದ್, ರವಿತೇಜಾ ಅವರ ಸಿನಿಮಾಗಳಲ್ಲಿಯೂ ಅಭಿನಯಿಸಿದವರು ಪಾವಲಾ ಶ್ಯಾಮಲಾ.

Veteran Actress Pavala Syamala Need Help From Industry

ಇಂಥ ಪಾವಲಾ ಶ್ಯಾಮಲಾ ಅವರಿಗೆ ಈಗ 73ರ ಪ್ರಾಯ. ವಿಪರ್ಯಾಸ ಎಂದರೆ ಜೀವನದ ಸಂಧ್ಯಾಕಾಲದಲ್ಲಿ ಇರುವ ಈ ಹಿರಿಯ ನಟಿ ವೃದ್ದಾಶ್ರಮದಲ್ಲಿ ಇದ್ದಾರೆ. ಕಷ್ಟಕರವಾದ ಜೀವನವನ್ನ ನಡೆಸುತ್ತಿದ್ದಾರೆ. ಆರ್ಥಿಕ ಸಮಸ್ಯೆಯ ಜೊತೆ ದೈಹಿಕ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ಹಾಗಂಥ ಇವರಿಗೆ ನೆರವು ಬೇಡ. ಬೇಕಿರುವುದು ಚಿತ್ರರಂಗದ ಪ್ರೀತಿಯಷ್ಟೇ.

ಹೌದು. ಇತ್ತೀಚೆಗಷ್ಟೇ ಮಹಿಳಾ ದಿನಾಚರಣೆ ಪ್ರಯುಕ್ತ ಟಿವಿ ವಾಹಿನಿಯೊಂದು ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪಾವಲಾ ಶ್ಯಾಮಲಾ ಭಾಗವಹಿಸಿದ್ದರು. ಇದೇ ವೇಳೆ ಮಾತನಾಡುತ್ತಾ ಭಾವುಕರಾದರು. ಅಲ್ಲಿದ್ದ ಎಲ್ಲರ ಕಣ್ಣಿನಲ್ಲಿಯೂ ನೀರನ್ನ ತರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪಾವಲಾ ಶ್ಯಾಮಲಾ 'ಬಹುತೇಕ ಎಲ್ಲ ಹೀರೋಗಳ ಜೊತೆ ನಾನು ತೆರೆ ಹಂಚಿಕೊಂಡಿದ್ದೇನೆ. ಎಲ್ಲ ಹಿಟ್ ಸಿನಿಮಾಗಳಲ್ಲೂ ನಾನಿದ್ದೇನೆ. ಆದರೆ ಕೊನೆಗೂ ನನ್ನ ಬದುಕು ಹೀಗಾಗುತ್ತೆ ಎಂದು ಕನಸು ಮನಸಿನಲ್ಲಿಯೂ ಊಹಿಸಿಕೊಂಡಿರಲಿಲ್ಲ ಎಂದಿದ್ದಾರೆ. ನಾನು ಇಲ್ಲಿ ನನ್ನ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದಿಲ್ಲ. ನಿಮ್ಮನ್ನೆಲ್ಲ ನೋಯಿಸಲು ಬಂದಿಲ್ಲ. ಮತ್ತೆ ನಿಮ್ಮನ್ನೆಲ್ಲ ನೋಡುವ ಅವಕಾಶ ನನಗೆ ಸಿಗುತ್ತಾ ಇಲ್ಲವಾ ಎಂಬ ಭಯದಲ್ಲಿ ನಾನು ಇಲ್ಲಿ ಬಂದಿದ್ದೇನೆ ಅಂದಿದ್ದಾರೆ. ಯಾವ ಕ್ಷಣದಲ್ಲಾದರೂ ನನ್ನ ಪ್ರಾಣ ಪಕ್ಷಿ ಹಾರಿ ಹೋಗಬಹುದು ಎಂದು ಬಿಕ್ಕಿದ್ದಾರೆ ಈ ಹಿರಿಯ ನಟಿ

Veteran Actress Pavala Syamala Need Help From Industry

ಸಮಾಧಾನದ ಸಂಗತಿಯೆಂದರೆ ಪಾವಲಾ ಶ್ಯಾಮಲಾ ಅವರ ಈ ಮನದ ಮಾತು, ಅಲ್ಲಿನ ಚಿತ್ರರಂಗಕ್ಕೆ ತಲುಪಿದೆ. ಹಿರಿಯ ಜೀವಕ್ಕೆ ನೆರವು ಸಿಗುತ್ತಿದೆ. ನಟಿ ಕಾದಂಬರಿ, ಕಿರಣ್ ಮನಂ ಫೌಂಡೇಶನ್ ಮೂಲಕ 25 ಸಾವಿರ ಸಹಾಯವನ್ನ ಮಾಡಿದ್ದಾರೆ. ಇನ್ನೂ ಮೆಗಾ ಸ್ಟಾರ್ ಚಿರಂಜೀವಿ ಕೂಡ ಹಿರಿಯ ನಟಿ ದಯನೀಯ ಸ್ಥಿತಿ ಕಂಡು ಮಮ್ಮಲ ಮರುಗಿದ್ದಾರೆ. ಸಹಾಯದ ಹಸ್ತವನ್ನೂ ಚಾಚಿದ್ದಾರೆ.

ಅಂದ್ಹಾಗೇ ಇದಕ್ಕೂ ಮುನ್ನ ಪಾವಲಾ ಶ್ಯಾಮಲಾ ಬಾಡಿಗೆ ಮನೆಯಲ್ಲಿಯೇ ವಾಸವಾಗಿದ್ದರು. ಆದರೆ ಇವರನ್ನ ನೋಡಿಕೊಳ್ಳಲು ಯಾರೆಂದರೆ ಯಾರು ಇಲ್ಲ. ಹೀಗಾಗಿ ಸದ್ಯಕ್ಕೆ ವೃದ್ಧಾಶ್ರಮದಲ್ಲಿ ತಮ್ಮ ಬದುಕಿನ ದಿನಗಳನ್ನ ದೂಡುತ್ತಿದ್ದಾರೆ ಈ ಹಿರಿಯ ನಟಿ

ಒಟ್ಟಿನಲ್ಲಿ ಈ ಚಿತ್ರರಂಗದಲ್ಲಿ ಎಂತೆಂಥವರೋ ಹೇಗೇಗೋ ಬದುಕುತ್ತಿರುತ್ತಾರೆ. ಸಿನಿಮಾವನ್ನೇ ಉಸಿರಾಗಿಸಿಕೊಂಡವರಿಗೇ ಕೆಲವೊಮ್ಮೆ ಸಂಕಟಗಳು ಒದ್ದುಕೊಂಡು ಬರುತ್ತವೆ ಅನ್ನುವುದಕ್ಕೆ ಪಾವಲಾ ಶ್ಯಾಮಲಾ ಬದುಕೇ ಸಾಕ್ಷಿ

More from Filmibeat

English summary
Veteran Actress Pavala Syamala, Who worked with many stars in telugu film industry recently break down on stage. i may die any time says actress.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X