ಸ್ವಿಜರ್‌ಲ್ಯಾಂಡ್‌ನಲ್ಲಿ ದರ್ಶನ್ ಕಳೆದುಕೊಂಡ ಹಣ ಎಷ್ಟು? ನಮ್ಮ ಅದೃಷ್ಟ ಎಂದು 'ಪೊರ್ಕಿ' ಹೇಳಿದ್ದೇಕೆ?
ತಾನು ಬೆಳೆಯುವ ಜೊತೆ ತನ್ನವರನ್ನು ಬೆಳೆಸುವ ದೊಡ್ಡ ಗುಣ ಎಲ್ಲರಿಗೂ ಬರುವುದಿಲ್ಲ. ಕನ್ನಡ ಚಿತ್ರರಂಗದಲ್ಲಿ ಇಂತಹ ಸತ್ಕಾರ್ಯವನ್ನು ಆರಂಭದಿಂದಲೂ ಮಾಡುತ್ತಾ ಬರುತ್ತಿರುವ ಕೆಲವೇ ಕೆಲವರಲ್ಲಿ ದರ್ಶನ್ ಕೂಡ ಒಬ್ಬರು. ತನ್ನವರ ಜೊತೆ ಚಿತ್ರರಂಗಕ್ಕೆ ಬರುವ ಬಹುತೇಕ ಹೊಸಬರಿಗೆ ತನ್ನ ಕೈಲಾದಷ್ಟು ನೆರವಾಗುತ್ತಾ ಬಂದಿರುವ ದರ್ಶನ್ ಇಲ್ಲಿಯವರೆಗೆ ಅನೇಕ ಹೊಸಬರನ್ನು ದಡ ಸೇರಿಸಿದ್ದಾರೆ. ಹೊಸ ತಂಡದ ಗೆಲುವಲ್ಲಿ ಮಹತ್ತರ ಪಾತ್ರವನ್ನು ಕೂಡ ನಿರ್ವಹಿಸಿದ್ದಾರೆ.
ಇಂಥಾ ದರ್ಶನ್ ಹಿಂದೊಮ್ಮೆ ಸ್ವಿಜರ್‌ಲ್ಯಾಂಡ್‌ನಲ್ಲಿ ಹಣ ಕಳೆದುಕೊಂಡ ವಿಚಾರ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಈಗ ಈ ಅಪರೂಪದ ವಿಚಾರ ಜಗಜ್ಜಾಹೀರಾಗಿದೆ. ಹೌದು, ಕನ್ನಡ ಚಿತ್ರರಂಗದ ಆಗು ಹೋಗುಗಳಿಗೆ ಅನೇಕ ವರ್ಷಗಳಿಂದ ಸಾಕ್ಷಿಯಾಗುತ್ತಾ ಬಂದಿರುವ ಕನ್ನಡದ ಅನುಭವಿ ಮತ್ತು ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ದರ್ಶನ್ ಅವರ ಕುರಿತು ಕೆಲ ಆಸಕ್ತಿಕರ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಆ ಪೈಕಿ ಟಿವಿ9 ಕನ್ನಡಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಗಣೇಶ್ ಕಾಸರಗೋಡು ಪೊರ್ಕಿ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸ್ವಿಜರ್‌ಲ್ಯಾಂಡ್‌ನಲ್ಲಿ ಆದ ಒಂದು ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ. ದರ್ಶನ್ ಹೃದಯ ವೈಶ್ಯಾಲತೆಗೆ ಕೈಗನ್ನಡಿ ಹಿಡಿದಿದ್ದಾರೆ. ನಾನು ಕಂಡ ದರ್ಶನ್ ಅಪ್ಪಟ ಬಂಗಾರ ಎಂದು ಹೇಳಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿರುವ ಗಣೇಶ್ ಕಾಸರಗೋಡು ಬೇರೆಯವರಿಗೆ ದರ್ಶನ್ ಕಾಲ್‌ಶೀಟ್ ಸಿಗುವುದು ಕಷ್ಟವೆನ್ನುವಂತಹ ದಿನಗಳವು ಆ ದಿನಗಳಲ್ಲಿ ದರ್ಶನ್ ನನಗೋಸ್ಕರ ಪೋರ್ಕಿ ಚಿತ್ರಕ್ಕೆ ಕಾಲ್ ಶೀಟ್ ನೀಡಿದ್ದರು. ಕೇವಲ ಎರಡೇ ತಿಂಗಳಿನಲ್ಲಿ ಚಿತ್ರದ ಚಿತ್ರೀಕರಣವನ್ನು ಕೂಡ ಮುಗಿಸಿ ಕೊಟ್ಟರು ಎಂದು ಹೇಳಿದ್ದಾರೆ. ಮುಂದುವರೆದು ಎರಡು ಹಾಡುಗಳ ಚಿತ್ರೀಕರಣವನ್ನು ಸ್ವಿಜರ್‌ಲ್ಯಾಂಡ್‌ನಲ್ಲಿ ಪ್ಲ್ಯಾನ್ ಮಾಡಲಾಗಿತ್ತು.
ಹೀಗಾಗಿ ನಾವೆಲ್ಲ ಸ್ವಿಜರ್‌ಲ್ಯಾಂಡ್‌ಗೆ ಹೋದೆವು ಆಗ ದರ್ಶನ್ ಅವರ ಜೊತೆ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್ ಕೂಡ ಬಂದಿದ್ದರು ಎಂದಿರುವ ಗಣೇಶ್ ಕಾಸರಗೋಡು ಅದೊಂದು ದಿನ ವಿಜಯಲಕ್ಷ್ಮಿ ಹೋಟೆಲ್‌ನಲ್ಲಿ ಬ್ಯಾಗ್ ಇಟ್ಟಿದ್ದರು ಆ ಬ್ಯಾಗ್‌ನಲ್ಲಿ ಮೂರು ಲಕ್ಷ ಬೆಲೆ ಬಾಳುವ ಚಿನ್ನದ ಒಡವೆ ಇತ್ತು ಎಂದು ಹೇಳಿದ್ದಾರೆ. ಆ ಒಡವೆಯನ್ನು ಬೇರೆ ದೇಶದಿಂದ ಬಂದಿದ್ದ ಪ್ರವಾಸಿಯೊಬ್ಬ ಎಗರಿಸಿಕೊಂಡು ಹೋಗಿದ್ದ ಎಂದು ಹೇಳಿದ್ದಾರೆ.
ಚಿನ್ನದ ಒಡವೆ ಕಳ್ಳತನವಾದ ವಿಚಾರ ಗೊತ್ತಾಗುತ್ತಿದ್ದಂತೆಯೇ ಚಿತ್ರದ ನಿರ್ಮಾಪಕರು ಹಣ ಕೊಡಲು ಮುಂದೆ ಬಂದರು, ನಮ್ಮ ಚಿತ್ರದ ಚಿತ್ರೀಕರಣದಲ್ಲಿ ಇಂತಹ ಘಟನೆಯಾಗಿದೆ ಎಂದು ನೊಂದುಕೊಂಡು ಹಣ ತೆಗೆದುಕೊಳ್ಳುವಂತೆ ದರ್ಶನ್ ಅವರಿಗೆ ಹೇಳಿದರು. ಆದರೆ ದರ್ಶನ್ ಮಾತ್ರ ಇದಕ್ಕೆ ಸುತಾರಾಂ ಒಪ್ಪಲಿಲ್ಲ ಎಂದಿರುವ ಗಣೇಶ್ ಕಾಸರಗೋಡು ಬ್ಯಾಗ್ ಸಿಕ್ಕರೆ ನಮ್ಮ ಅದೃಷ್ಟ ಇಲ್ಲಾ ಅಂದರೆ ಬಿಟ್ಟು ಬಿಡೋಣ ಎಂದು ದರ್ಶನ್ ಹೇಳಿದರು ಎಂದು ಹೇಳಿದ್ದಾರೆ. ಅವತ್ತು ದರ್ಶನ್ ಒಂದು ಪೈಸೆಯನ್ನು ಕೂಡ ನಿರ್ಮಾಪಕರಿಂದ ತೆಗೆದುಕೊಳ್ಳಲಿಲ್ಲ ಎಂದು ಆ ದಿನವನ್ನು ನೆನಪು ಮಾಡಿಕೊಂಡಿದ್ದಾರೆ. ಎಷ್ಟು ಹುಡುಕಾಡಿದರೂ ಆ ಬ್ಯಾಗ್ ಕೊನೆಗೂ ಸಿಗಲಿಲ್ಲ ಎಂದು ಹೇಳಿದ್ದಾರೆ.
ಹೀಗೆ ದರ್ಶನ್ ಅವರ ಉದಾತ್ತ ಮನೋಭಾವದ ಕುರಿತು ಹಿರಿಯ ಪರ್ತಕರ್ತರಾದ ಗಣೇಶ್ ಕಾಸರಗೋಡು ಮಾತನಾಡಿದ್ದು ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದರ್ಶನ್ ಅವರ ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಿದೆ. ಇನ್ನುಳಿದಂತೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಿಂದ ಜಾಮೀನಿನ ಮೇಲೆ ಹೊರ ಬಂದಿರುವ ದರ್ಶನ್ ಸದ್ಯ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ರಾಜಸ್ಥಾನದಲ್ಲಿ ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಮತ್ತೆ ಬೆಂಗಳೂರಿಗೆ ಮರಳಿದ್ದಾರೆ.
ಇನ್ನು ಇದರ ನಡುವೆ ಆಶ್ರಯ ಇಲ್ಲದೆ ವೃದ್ದಾಶ್ರಮವನ್ನು ಸೇರಿದ ಕನ್ನಡ ಚಿತ್ರರಂಗದ ಹಿರಿಯ ನಟಿ ಶೈಲಶ್ರೀ ಅವರಿಗೆ ಕೂಡ ದರ್ಶನ್ ನೆರವಾಗಿದ್ದು 50.000 ರೂಪಾಯಿಯ ಧನ ಸಹಾಯವನ್ನು ಮಾಡಿದ್ದಾರೆ. ಬಾಡಿಗೆ ಮನೆಯಲ್ಲಿ ಇರಲು ಮನಸು ಮಾಡಿದರೆ ಅದಕ್ಕೂ ಕೂಡ ಸಹಾಯ ಮಾಡುವುದಾಗಿ ಭರವಸೆಯನ್ನು ಕೂಡ ದರ್ಶನ್ ನೀಡಿದ್ದಾರೆ. ದರ್ಶನ್ ಅವರ ಈ ದೊಡ್ಡ ಗುಣಕ್ಕೆ ಅವರ ಅಭಿಮಾನಿಗಳು ಮನ ಸೋತಿದ್ದು ಇದೇ ಕಾರಣಕ್ಕೆ ನಮಗೆ ನೀವು ಇಷ್ಟ ಎಂದು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನದ ಪ್ರದರ್ಶನವನ್ನು ಮಾಡುತ್ತಿದ್ಧಾರೆ.


Click it and Unblock the Notifications











