ಅಪ್ಪು ಫೋಟೊಗೆ ಯಶ್ ಅವರ ತಾಯಿ ಪುಷ್ಪಾ ಪೂಜೆ, ವೀಡಿಯೋ ವೈರಲ್

ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅಭಿಮಾನಿಗಳ ಮನಸ್ಸಿನಲ್ಲಿ ಎಂದೆಂದಿಗೂ ಅಮರ. ಅಭಿಮಾನಿಗಳಲ್ಲಿ ಅಪ್ಪು ಅಗಲಿಕೆಯ ನೋವು ಇನ್ನು ಕರಗಿಲ್ಲ. ಸ್ಟಾರ್ ನಟ, ನಟಿಯರೇ ಪವರ್ ಸ್ಟಾರ್ ಅಭಿಮಾನಿಗಳು. ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅವರಿಗೂ ಅಣ್ಣಾವ್ರು, ಅಪ್ಪು ಅಂದ್ರೆ ಅಚ್ಚುಮೆಚ್ಚು.

ಚಿಕ್ಕಂದಿನಲ್ಲೇ ತಂದೆ ಜೊತೆ ಚಿತ್ರರಂಗಕ್ಕೆ ಬಂದ ಪುನೀತ್ ಮುಂದೆ ಹೀರೊ ಆಗಿಯೂ ಗೆದ್ದರು. ತಂದೆ ರೀತಿ ತಮ್ಮ ಸರಳ, ಸಜ್ಜನ ವ್ಯಕ್ತಿತ್ವ, ಸಹಾಯಗುಣದಿಂದಲೂ ಅಪ್ಪು ಎಲ್ಲರಿಗೂ ಮಾದರಿ. ಇದೇ ಕಾರಣಕ್ಕೆ ನಗುವಿನ ಒಡೆಯನನ್ನು ಸಾಕಷ್ಟು ಜನ ಇಂದಿಗೂ ಆರಾಧಿಸುತ್ತಾರೆ. ಕೆಲವರು ತಮ್ಮ ಮನೆಗಳಲ್ಲಿ ಪುನೀತ್ ಫೋಟೊ ಇಟ್ಟು ಪೂಜೆ ಮಾಡುತ್ತಾರೆ.

Video of Yash s mother Pushpa doing pooja for Puneeth Rajkumar s photo goes viral

ನಟ ಯಶ್ ಅವರ ತಾಯಿ ಇತ್ತೀಚಿನ ವರ್ಷಗಳ ಮಾಧ್ಯಮಗಳಿಂದ ದೂರ ಉಳಿದಿದ್ದಾರೆ. ಹಾಸನದಲ್ಲಿ ಯಶ್ ತೋಟ ಖರೀದಿ ಮಾಡಿದ್ದಾರೆ. ಅವರ ತಂದೆ -ತಾಯಿ ಅಲ್ಲೇ ಉಳಿದುಕೊಂಡಿದ್ದಾರೆ. ಅಲ್ಲಿ ಸಾಕಷ್ಟು ಗಿಡ, ಮರಗಳನ್ನು ಬೆಳೆಸಿ ಹಸಿರು ಕ್ರಾಂತಿ ಮಾಡುತ್ತಿದ್ದಾರೆ. 'ನ್ಯೂಸೋ ನ್ಯೂಸು' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಯಶ್ ಅವರ ತಾಯಿ ಪುಷ್ಪಾ ಮಾತನಾಡಿದ್ದಾರೆ. ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಅಣ್ಣಾವ್ರ ಸಿನಿಮಾಗಳನ್ನು ನೋಡುತ್ತಾ ಬೆಳೆದವರು ಪುಷ್ಪಾ. ಮುತ್ತುರಾಜ ದೊಡ್ಡ ಅಭಿಮಾನಿ. ಹಾಗಾಗಿ ಸಾಕಷ್ಟು ಬಾರಿ ಈ ಬಗ್ಗೆ ಅವರು ಮಾತನಾಡಿದ್ದಾರೆ. ಅಣ್ಣಾವ್ರು ಪಟ್ಟ ಪರಿಶ್ರಮ, ಕಷ್ಟದ ಮುಂದೆ ನಿನ್ನದು ಏನೇನು ಅಲ್ಲ ಎಂದು ಮಗನಿಗೆ ಹೇಳುತ್ತಿರುತ್ತಾರಂತೆ. ಸಂದರ್ಶನದಲ್ಲಿ ಮಾತನಾಡಿ ನಮ್ಮ ಕುಟುಂಬದವರು ಅಣ್ಣಾವ್ರು, ಅಂಬರೀಶ್ ಅವರ ಅಭಿಮಾನಿಗಳು ಎಂದು ಹೇಳಿದ್ದಾರೆ.

ಹಾಸನದಲ್ಲಿ ಡಾ. ರಾಜ್‌ಕುಮಾರ್ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ನಾನು ಮುಂದಿನ ಸಾಲಿನಲ್ಲಿ ಕುಂತು ನೋಡಿದ್ದೆ. ಅಣ್ಣಾವ್ರು, ಲಕ್ಷ್ಮಣ್ಣ, ಆಗ ಪುನೀತ್ ಚಿಕ್ಕ ಮಗು ಅವರನ್ನು ನೋಡಿದ್ದೆ. ಆಗ ಏಳೆಂಟು ವರ್ಷದ ಮಗು. ಆದರೆ ಕಾರ್ಯಕ್ರಮ ಮುಗಿದ ಬಳಿಕ ಎಲ್ಲರೂ ಹೊರಟುಹೋದ್ರು. ಹೇಗೆ ಹೋದ್ರು ಗೊತ್ತಿಲ್ಲ. ಅಷ್ಟು ಜನ ಅಭಿಮಾನಿಗಳು ಸೇರಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

Video of Yash s mother Pushpa doing pooja for Puneeth Rajkumar s photo goes viral

ಅಣ್ಣವ್ರು ನಿಧನರಾಗಿದ್ದಾಗ ಅಂತಿಮ ದರ್ಶನ ಮಾಡಲು ಸಾಧ್ಯವಾಗಲಿಲ್ಲ. ಅಷ್ಟು ಜನ. ಮಗಳು ನಂದಿನಿ 2 ದಿನ ಊಟ ಬಿಟ್ಟು ಅತ್ತಿದ್ದಳು. ವಿಷ್ಣುವರ್ಧನ್ ನಿಧನರಾದಾಗ ಅಷ್ಟೇ ದುಃಖಪಟ್ಟಿದ್ದೀವಿ. ಪುನೀತ್ ಅಗಲಿದಾಗ ನಾನು, ಅಪ್ಪಾಜಿ ಬಹಳ ನೋವು ಅನುಭವಿಸಿದೆವು. ಪಾರ್ಥೀವ ಶರೀರದ ದರ್ಶನ ಮಾಡಿದ ಬಳಿಕ 2 ರಾತ್ರಿ ನಿದ್ದೆ ಮಾಡಲಿಲ್ಲ.

ಪುನೀತ್ ನಮ್ಮ ಮನೆಗೆ ಬಂದಿದ್ದರು. ಅದನ್ನು ಮರೆಯೋಕೆ ಸಾಧ್ಯವಿಲ್ಲ. ನಂದಿನಿ ಮದುವೆ ಪತ್ರಿಕೆ ಕೊಡೋಕೆ ಹೋದಾಗ ಪಾರ್ವತಮ್ಮ ಅವರನ್ನು ನೋಡಿ ಮಾತನಾಡಿಸಿದ್ದೆ ಎಂದು ಪುಷ್ಪಾ ಅವರು ಹೇಳಿದ್ದಾರೆ. ಇನ್ನು ಪುನೀತ್ ಫೋಟೋಗೆ ಪುಷ್ಪಾ ಅವರು ಗಂಧದ ಕಡ್ಡಿ ಹಚ್ಚಿ ಪೂಜೆ ಮಾಡಿರುವುದನ್ನು ಈ ಸಂದರ್ಶನದಲ್ಲಿ ನೋಡಬಹುದು.

ಇವತ್ತಿನ ಶಿವಣ್ಣ, ಯಶ್, ದರ್ಶನ್, ಸುದೀಪ್ ಸಿನಿಮಾಗಳ ಬಗ್ಗೆ ಮುಂದಿನ ಕಾಲದವರು ಮಾತನಾಡುತ್ತಾರೆ. ಆದರೆ ನಾವೆಲ್ಲಾ ಅನಂತ್ ನಾಗ್, ರಾಜ್‌ಕುಮಾರ್, ವಿಷ್ಣುವರ್ಧನ್ ಸಿನಿಮಾಗಳನ್ನು ನೋಡಿ ಬೆಳೆದವರು. ನಮಗೆ ಸಿನಿಮಾ ಅಂದ್ರೆ ನಮ್ಮ ಮನೆಯ ಕಥೆ ಎನಿಸುತ್ತಿತ್ತು ಎಂದಿದ್ದಾರೆ. ನಾನು ಅನಂತ್ ನಾಗ್‌ ಅವರ ದೊಡ್ಡ ಅಭಿಮಾನಿ ಎಂದು ಪುಷ್ಪಾ ಅವರು ಹೇಳಿದ್ದಾರೆ.

More from Filmibeat

English summary
KGF actor Yash's mother, Pushpa, is a big fan of Dr. Rajkumar and Puneeth Rajkumar;
Read more about: yash rajkumar puneeth rajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X