ದಶಕದ ಹಿಂದೆ ಚಿತ್ರರಂಗ ಬಿಟ್ಟ ಪವಿತ್ರಾ ಗೌಡ ಈಗ ಏನ್ ಮಾಡ್ತಿದ್ದಾರೆ?
ನಟ ದರ್ಶನ್ ಜೊತೆಗಿನ ರಿಲೇಷನ್‌ಶಿಪ್ ಬಗ್ಗೆ ಮೌನ ಮುರಿದು ನಟಿ ಪವಿತ್ರಾ ಗೌಡ ಸುದ್ದಿಯಲ್ಲಿದ್ದಾರೆ. 10 ವರ್ಷಗಳಿಂದ ನಾವಿಬ್ಬರು ರಿಲೇಷನ್‌ಶಿಪ್‌ನಲ್ಲಿದ್ದೀವಿ ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ವಿಜಯಲಕ್ಷ್ಮಿ ದರ್ಶನ್ ಗರಂ ಆಗಿದ್ದು ಆಕ್ರೋಶ ಹೊರ ಹಾಕಿದ್ದಾರೆ. ಇದೆಲ್ಲದರ ನಡುವೆ ಪವಿತ್ರಾ ಗೌಡ ಯಾರು? ಹಿನ್ನೆಲೆ ಏನು? ಎನ್ನುವ ಪ್ರಶ್ನೆಗೆ ಕೆಲವರನ್ನು ಕಾಡುತ್ತಿದೆ.
ಹಲವು ವರ್ಷಗಳಿಂದ ದರ್ಶನ್ ಹಾಗೂ ಪವಿತ್ರಾ ಗೌಡ ನಡುವೆ ಆತ್ಮೀಯ ಒಡನಾಟವಿದೆ ಎಂದು ಗುಸುಗುಸು ಕೇಳಿಬಂದಿತ್ತು. ಅದಕ್ಕೆ ಸಾಕ್ಷಿ ಎನ್ನುವಂತೆ ಕೆಲ ಫೋಟೊಗಳು ವೈರಲ್ ಆಗಿತ್ತು. ಇನ್ನು ಸ್ವತಃ ಪವಿತ್ರಾ ಗೌಡ, ದರ್ಶನ್ ಜೊತೆಗಿರುವ ಫೋಟೊಗಳನ್ನು ಈ ಹಿಂದೆ ಹಂಚಿಕೊಂಡಿದ್ದು ಇದೆ. ದರ್ಶನ್ ಮಾತ್ರವಲ್ಲ ದರ್ಶನ್ ತಾಯಿ ಹಾಗೂ ಸಹೋದರಿ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದರು. ಆದರೆ ಇದೇ ಮೊದಲ ಬಾರಿಗೆ ರಿಲೇಷನ್‌ಶಿಪ್ ಬಗ್ಗೆ ಮಾತನಾಡಿದ್ದಾರೆ.

ರೂಪದರ್ಶಿ ಆಗಿ ಗುರ್ತಿಸಿಕೊಂಡಿದ್ದ ಪವಿತ್ರಾ ಗೌಡ 'ಅಗಮ್ಯ' ಎನ್ನುವ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ 'ಛತ್ರಿಗಳು ಸಾರ್ ಛತ್ರಿಗಳು', 'ಸಾಗುವ ದಾರಿಯಲ್ಲಿ', 'ಪ್ರೀತಿ ಕಿತಾಬು' ಎನ್ನುವ ಸಿನಿಮಾಗಳಲ್ಲಿ ನಟಿಸಿದ್ದರು. 'ಬತ್ತಾಸ್' ಎನ್ನುವ ಚಿತ್ರಕ್ಕೆ ಆಯ್ಕೆ ಆಗಿದ್ದರು. ಆದರೆ ಆ ಸಿನಿಮಾ ಬಿಡುಗಡೆ ಆಗಲೇಯಿಲ್ಲ. ಆದರೆ ಯಾವುದೇ ಸಿನಿಮಾ ಹಿಟ್ ಆಗಲಿಲ್ಲ. ಬಳಿಕ ಚಿತ್ರಗಳಿಂದ ದೂರಾಗಿದ್ದರು. ಆಗೊಮ್ಮೆ ಈಗೊಮ್ಮೆ ದರ್ಶನ್ ಜೊತೆಗೆ ಹೆಸರು ತಳುಕು ಹಾಕಿಕೊಂಡು ಸುದ್ದಿ ಆಗಿದ್ದರು.
ನಟಿ ಪವಿತ್ರಾ ಗೌಡಗೆ ಒಬ್ಬ ಮಗಳು ಇದ್ದಾಳೆ. ಇನ್ನು ಪತಿಯಿಂದ ದೂರವಾಗಿ ಜೀವನ ಸಾಗಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆಕೆಯ ಪತಿಯ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ಇಲ್ಲ. ಇದೀಗ ವಿಜಯಲಕ್ಷ್ಮಿ ದರ್ಶನ್ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಸಂಜಯ್ ಸಿಂಗ್ ಎಂಬುವವರನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ. "ವ್ಯಕ್ತಿಯೊಬ್ಬ ವಿವಾಹಿತನೆಂದು ತಿಳಿದಿದ್ದರೂ ಕೂಡ ಈಕೆ ತನ್ನ ವೈಯಕ್ತಿಕ ಅಗತ್ಯಗಳಿಗಾಗಿ ಹಾಗೂ ಲಾಭಕ್ಕಾಗಿ ಆತನಿಗೆ ಹತ್ತಿರವಾಗುತ್ತಾಳೆ. ಪವಿತ್ರಾ ಮತ್ತು ಸಂಜಯ್ ಸಿಂಗ್ ಅವರ ಮಗಳು ಖುಷಿ ಗೌಡ ಎಂಬುದನ್ನು ಈ ಚಿತ್ರಗಳು ಸ್ಪಷ್ಟವಾಗಿ ಸಾಬೀತು ಮಾಡುತ್ತವೆ" ಎಂದು ಬರೆದುಕೊಂಡಿದ್ದಾರೆ.

ಫ್ಯಾಷನ್ ಡಿಸೈನಿಂಗ್ ಕಲಿತಿರುವ ಪವಿತ್ರಾ ಗೌಡ ಸದ್ಯ ರಾಜರಾಜೇಶ್ವರಿ ನಗರದಲ್ಲಿ ಬೋಟಿಕ್ ಹೊಂದಿದ್ದಾರೆ. ರೆಡ್ ಕಾರ್ಪೆಟ್ ಸ್ಟುಡಿಯೋ 777 ಎನ್ನುವುದು ಆ ಶಾಪ್ ಹೆಸರು. ಅದರ ಮ್ಯಾಜೇಜಿಂಗ್ ಡೈರೆಕ್ಟರ್ ಆಗಿದ್ದಾರೆ. ಈ ಬೋಟಿಕ್‌ನಲ್ಲಿ ಮಹಿಳೆಯರಿಗೆ ಬೇಕಾದ ಟ್ರೆಡಿಷನಲ್, ವೆಸ್ಟರ್ನ್, ಇಂಡೋ ವೆಸ್ಟರ್ನ್ ಹಾಗೂ ಬ್ರೀಡಲ್ ಕಾಸ್ಟ್ಯೂಮ್ಸ್ ದೊರೆಯುತ್ತವೆ. ಕನ್ನಡ ಸಿನಿಮಾ ನಟಿಯರು ಹಾಗೂ ಕಿರುತೆರೆ ನಟಿಯರು ಈ ಶಾಪ್ ಗ್ರಾಹಕರಾಗಿದ್ದಾರೆ.
ಪವಿತ್ರಾ ಗೌಡ ಡಿಸೈನರ್ ಡ್ರೆಸ್‌ಗಳಿಗೆ ನಟಿಯರಾದ ಮೇಘಾಶೆಟ್ಟಿ ಹಾಗೂ ಸೋನಲ್ ಮಂಥೆರೋ ಮಾಡೆಲ್‌ಗಳಾಗಿದ್ದಾರೆ. ಮೇಘಾ ಹಾಗೂ ಸೋನಲ್ ಆಗಾಗ್ಗೆ 'ರೆಡ್ ಕಾರ್ಪೆಟ್ ಸ್ಟುಡಿಯೋ 777' ಕಾಸ್ಟ್ಯೂಮ್ ತೊಟ್ಟು ಫೋಟೊಗಳನ್ನು ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಹಾಗಾಗಿ ಮೇಘಾ, ಪವಿತ್ರಾ ಆತ್ಮೀಯ ಸ್ನೇಹಿತರಾಗಿದ್ದಾರೆ. 'ರೆಡ್ ಕಾರ್ಪೆಟ್ ಸ್ಟುಡಿಯೋ 777' ವತಿಯಿಂದಲೇ ಕಳೆದ ವರ್ಷ ದರ್ಶನ್ ಹುಟ್ಟುಹಬ್ಬ ಆಚರಿಸಲಾಗಿತ್ತು ಎನ್ನುವ ಮಾತುಗಳು ಕೇಳಿಬಂದಿದ್ದವು.
ಮೇಘಾ ಶೆಟ್ಟಿ ಹಂಚಿಕೊಂಡಿದ್ದ ವಿಡಿಯೋಗೆ ವಿಜಯಲಕ್ಷ್ಮಿ ದರ್ಶನ್ ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದರು. ಬಳಿಕ ಇಬ್ಬರು ತಮ್ಮ ಪೋಸ್ಟ್‌ಗಳಲ್ಲಿ ತೆಗೆದು ಹಾಕಿದ್ದರು.


Click it and Unblock the Notifications











