ವಿನಾಯಕ್ ಜೋಶಿ ದಪ್ಪ ಆಗಿ ಎದುರಿಸಿದ ಅವಮಾನ ಎಂಥದ್ಧು? ದಿಢೀರ್ ತೂಕ ಹೆಚ್ಚಿಸಿಕೊಂಡಿದ್ಯಾಕೆ?

ಬಾಡಿ ಶೇಮಿಂಗ್ ಎನ್ನುವುದು ಬಹುತೇಕರಿಗೆ ಒಂದಲ್ಲ ಒಂದು ಸಮಯದಲ್ಲಿ ಆಗಿರುತ್ತದೆ. ಬಣ್ಣ, ಎತ್ತರ, ದೇಹಾಕಾರ, ತೂಕ ಹೀಗೆ ನಾನಾ ಕಾರಣಕ್ಕೆ ಅವಮಾನ ಎದುರಿಸಿದವರು ಇದ್ದಾರೆ. ಚಿತ್ರರಂಗದಲ್ಲಿ ಕೂಡ ಅದು ಸರ್ವೇ ಸಾಮಾನ್ಯ. ನಟ, ನಟಿಯರು ಈ ವಿಚಾರದಲ್ಲಿ ತಮಗಾದ ಕಹಿ ಅನುಭವ ಹೇಳಿಕೊಂಡಿದ್ದಾರೆ.

ನಟ ವಿನಾಯಕ್ ಜೋಶಿ ತಮಗಾದ ಅವಮಾನಗಳ ಬಗ್ಗೆ ಮಾತನಾಡಿದ್ದಾರೆ. ಬಾಲ ನಟನಾಗಿ ಚಿತ್ರರಂಗಕ್ಕೆ ಬಂದ ವಿನಾಯಕ್ ಜೋಶಿ ಮುಂದೆ 'ನನ್ನ ಕನಸಿನ ಹೂವೆ' ಎಂಬ ಚಿತ್ರದಲ್ಲಿ ಹೀರೊ ಆಗಿ ಕೂಡ ನಟಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. 25ಕ್ಕೂ ಅಧಿಕ ಸಿನಿಮಾಗಳಲ್ಲಿ ಬಾಲ ನಟನಾಗಿ ಬಣ್ಣ ಹಚ್ಚಿದ್ದರು.

Vinayak Joshi Recalls Being Body Shamed In Initial Phase Of Career

ಪುನೀತ್ ರಾಜ್‌ಕುಮಾರ್ ನಟನೆಯ 'ಅಪ್ಪು' ಚಿತ್ರದಲ್ಲಿ ವಿನಾಯಕ್ ಜೋಶಿ ನಟಿಸಿದ್ದರು. ಅಪ್ಪು ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಈ ಸಿನಿಮಾ ಮರುಬಿಡುಗಡೆಗೆ ಸಜ್ಜಾಗಿದೆ. ಇಂತಹ ಸಮಯದಲ್ಲಿ ಸುದ್ದಿಮನೆ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ವಿನಾಯಕ್ ಜೋಶಿ ಮಾತನಾಡಿದ್ದಾರೆ. ಈ ವೇಳೆ ತಮ್ಮ ಸಿನಿಮಾ ಕರಿಯರ್ ಬಗ್ಗೆಯೂ ಸಾಕಷ್ಟು ವಿಚಾರ ಹಂಚಿಕೊಂಡಿದ್ದಾರೆ.

'ನಮ್ಮೂರ ಮಂದಾರೆ ಹೂವೆ' ಚಿತ್ರದಲ್ಲಿ ವಿನಾಯಕ್ ಜೋಶಿ ಬಾಲನಟನಾಗಿ ಮೊದಲಿಗೆ ನಟಿಸಿದ್ದರು. ಅಲ್ಲಿಂದ ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ತಮ್ಮ ತಂದೆ ನಿರ್ಮಾಣದ 'ನನ್ನ ಕನಸಿನ ಹೂವೆ' ಸಿನಿಮಾ ಸೋತಿತ್ತು. ಅವತ್ತಿನ ಕಾಲಕ್ಕೆ 40ರಿಂದ 50 ಲಕ್ಷ ಬಂಡವಾಳದಲ್ಲಿ ನಿರ್ಮಾಣವಾಗಿದ್ದ ಸಿನಿಮಾ ನೆಲಕಚ್ಚಿತ್ತು. ಆ ಸಾಲ, ನೋವಿನಲ್ಲೇ ತಂದೆ ತೀರಿಕೊಂಡಿದ್ದರು. ಬಳಿಕ ಬಹಳ ಕಷ್ಟಪಟ್ಟು ಮತ್ತೆ ವಿನಾಯಕ್ ಜೋಶಿ ಎದ್ದು ಬಂದರು.

"ಎಮೋಷನಲ್ ಆಗಿ ಹೆಚ್ಚು ಹೆಚ್ಚು ತಿನ್ನುತ್ತಿದ್ದೆ. ಹಾಗಾಗಿ ನಡುವೆ ದಿಢೀರನೆ ಬಹಳ ದಪ್ಪ ಆಗಿಬಿಟ್ಟಿದ್ದೆ. ಮನುಷ್ಯನಿಗೆ ಬಹಳ ಬೇಸರ, ಖುಷಿ ಆದಾಗ ಹೆಚ್ಚು ಸ್ವೀಟ್ ತಂತೀವಿ. ಆಗ ತಂದೆ ತೀರಿಕೊಂಡಿದ್ದರು. ಮನೆಯಲ್ಲಿ ಕಷ್ಟ ಇಷ್ಟು, ಆ ನೋವಿನಲ್ಲಿ ಹೆಚ್ಚು ಹೆಚ್ಚು ತಿನ್ನುತ್ತಿದ್ದೆ. ನಮ್ಮ ತಾಯಿಯ ಕಡೆ ಅನುವಂಶಿಯವಾಗಿ ಮೈ ಹಿಡಿಯುತ್ತದೆ. ಚೆನ್ನಾಗಿ ತಿಂದರೆ ದಪ್ಪ ಆಗಿಬಿಡ್ತೀನಿ. ಹಾಗಾಗಿ ಆ ರೀತಿ ದಪ್ಪ ಆಗಿದ್ದೆ. ಡುಮ್ಮಾ ಎನ್ನುತ್ತಿದ್ದರು. ಅಣಕಿಸುತ್ತಿದ್ದರು" ಎಂದು ವಿನಾಯಕ್ ಜೋಶಿ ಹೇಳಿದ್ದಾರೆ.

ಸಿನಿಮಾ ನಟ, ನಟಿ ಅಂದರೆ ತೆಳ್ಳಗೆ ಬೆಳ್ಳಗೆ ಇರಬೇಕು ಎನ್ನುವ ಅಲಿಖಿತ ನಿಯಮ ಇದೆ. 'ನನ್ನ ಕನಸಿನ ಹೂವೆ' ಚಿತ್ರಕ್ಕೆ ವಿನಾಯಕ್ ಜೋಶಿ ಹೀರೊ ಅಂದಾಗಲೂ ಕೆಲವರು ಅದನ್ನು ಒಪ್ಪಿಕೊಳ್ಳಲಿಲ್ಲ. "ನಾನು ಹೀರೊ ಆದಾಗಲೂ ಕೆಲವರು ಅಣಕಿಸಿದರು. ಮಗನ ಸಿನಿಮಾ ಮಾಡಿ ಹೀಗಾಯಿತು ಅಂತೆಲ್ಲಾ ತಂದೆ ಬಗ್ಗೆ ಮಾತನಾಡಿದ್ದರು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸೋತ ಕಡೆಯೇ ಗೆಲ್ಲಬೇಕು ಎಂದು ನಾನು ಗೆದ್ದು ತೋರಿಸಿದೆ. ಸಾಕಷ್ಟು ಜನ ನನಗೆ ಸಹಾಯ ಮಾಡಿದರು. ಹಾಗಾಗಿ ಮೇಲೆ ಎದ್ದು ಬಂದೆ. ದೊಡ್ಮನೆ ಹಾಗೂ ಸುದೀಪ್ ಸರ್ ಕುಟುಂಬದವರು ನನಗೆ ಸಹಾಯ ಮಾಡಿದ್ದರು. ಅದನ್ನು ನಾನು ಎಂದಿಗೂ ಮರೆಯುವುದಿಲ್ಲ. 'ಲವ-ಕುಶ' ಚಿತ್ರದಲ್ಲಿ ನಾನು ನಟಿಸಬೇಕಿತ್ತು. ಅಷ್ಟರಲ್ಲಿ ತಂದೆ ತೀರಿಹೋದರು. ಆದರೂ ನಿರ್ಮಾಪಕ ಪ್ರಭಾಕರ್ ಅವರು ಕರೆದು ಅಡ್ವಾನ್ಸ್ ಕೊಟ್ಟು ಚಿತ್ರದಲ್ಲಿ ನಟಿಸುವಂತೆ ಮಾಡಿದರು ಅವರ ಸಹಾಯ ನಾನು ಮರೆಯುವುದಿಲ್ಲ ಎಂದಿದ್ದಾರೆ.

ವಿನಾಯಕ್ ಜೋಶಿ ಕೊನೆಯದಾಗಿ ನಟಿಸಿದ ಸಿನಿಮಾ 'ವಿರಾಟಪರ್ವ'. ಇನ್ನು 'ಜೋಶೆಲೆ' ಎಂಬ ವೆಬ್ ಸಿರೀಸ್ ನಿರ್ಮಿಸಿ ನಿರ್ದೇಶಿಸಿ ನಟಿಸಿದ್ದರು. ಎರಡ್ಮೂರು ಸಿನಿಮಾಗಳಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಕೆಲಸ ಮಾಡಿದ್ದಾರೆ.

More from Filmibeat

English summary
Actor Vinayak Joshi talked about Body Shaming And Nasty Remark on his weight;
Read more about: sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X