ಕದ್ದು ಮುಚ್ಚಿ ಕನ್ನಡ ತಾರೆಯರು ಮದುವೆ ಆಗಿದ್ದೇಕೆ? ಆ ಗುಟ್ಟು ರಟ್ಟಾಗಿದ್ದೇಗೆ?

ಸಾಮಾನ್ಯವಾಗಿ ಸಿನಿಮಾ ತಾರೆಯರ ಮದುವೆ ಆಡಂಬರ ಜೋರಾಗಿರುತ್ತದೆ. ಅಭಿಮಾನಿಗಳಲ್ಲೂ ನೆಚ್ಚಿನ ನಟ, ನಟಿಯರ ಮದುವೆ ಬಗ್ಗೆ ಸಾಕಷ್ಟು ಕುತೂಹಲ ಇರುತ್ತದೆ. ಆದರೆ ಕೆಲವರು ಸೈಲೆಂಟ್ ಆಗಿ ಮದುವೆ ಆಗಿಬಿಡುತ್ತಾರೆ. ಕೆಲವೊಮ್ಮೆ ಮದುವೆ ಆಗಿದ್ರು ಯಾರಿಗೂ ಗೊತ್ತಾಗದಂತೆ ರಹಸ್ಯ ಕಾಪಾಡುತ್ತಾರೆ. ಇತ್ತೀಚೆಗೆ ನಟ ವಿನೋದ್ ರಾಜ್ 2 ದಶಕಗಳ ಹಿಂದೆ ಮದುವೆ ಆದ ವಿಚಾರ ಬಹಿರಂಗಪಡಿಸಿದ್ದಾರೆ.

ಮದುವೆ ಜೀವನದಲ್ಲಿ ಒಮ್ಮೆ ನಡೆಯುವಂಥದ್ದು. ಅದನ್ನು ಅದ್ಧೂರಿಯಾಗಿ ಮಾಡಿಕೊಳ್ಳಬೇಕು ಅನ್ನುವುದು ಬಹುತೇಕ ಆಸೆ. ಕೆಲವರಿಗೆ ವೈಯಕ್ತಿಕ ವಿಚಾರಗಳನ್ನು ಬಹಿರಂಗ ಪಡಿಸುವ ಮನಸ್ಸು ಇರುವುದಿಲ್ಲ. ಮತ್ತೆ ಕೆಲವರು ಬೇರೆ ಬೇರೆ ಕಾರಣಗಳಿಗೆ ಮದುವೆ ವಿಚಾರವನ್ನು ಹೊರ ಪ್ರಪಂಚಕ್ಕೆ ಹೇಳಲು ಹಿಂಜರಿಯುತ್ತಾರೆ. ಕೇವಲ ಕುಟುಂಬ ಸದಸ್ಯರು, ಆಪ್ತರ ಸಮ್ಮುಖದಲ್ಲಿ ಮದುವೆ ಆಗಿ ಯಾರಿಗೂ ಗೊತ್ತಿಲ್ಲದಂತೆ ಇದ್ದುಬಿಡುತ್ತಾರೆ. ಮದುವೆ ಫೋಟೊಗಳು, ವಿಡಿಯೋಗಳು ಕೂಡ ಹೊರ ಬರದಂತೆ ನೋಡಿಕೊಳ್ಳುತ್ತಾರೆ.

Vinod Raj to Sanjana galrani: Sandalwood celebrities who kept their marriage hidden

ಬಾಲಿವುಡ್‌ನಲ್ಲಿ ಸೀಕ್ರೆಟ್‌ ಮದುವೆಗಳ ಲಿಸ್ಟ್ ದೊಡ್ಡದ್ದಿದೆ. ಸ್ಯಾಂಡಲ್‌ವುಡ್‌ನಲ್ಲೂ ಕೆಲವರು ಸದ್ದಿಲ್ಲದೇ ಮದುವೆ ಆಗಿದ್ದಾರೆ. ಕೆಲವರು ಕೊನೆ ಪಕ್ಷ ಮದುವೆ ನಂತರ ಅದನ್ನು ಬಹಿರಂಗ ಪಡಿಸಿದ್ದಾರೆ. ಇನ್ನು ಕೆಲವರ ಮದುವೆ ಗುಟ್ಟು ಅಚಾನಕ್‌ ಆಗಿ ರಟ್ಟಾದ ಉದಾಹಣೆಗಳಿವೆ. ವಿನೋದ್ ರಾಜ್ ಮದುವೆ ವಿಚಾರದ ಬಗ್ಗೆ ಫ್ಯಾಮಿಲಿ ಫೋಟೊ ಸಮೇತ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಪ್ರಶ್ನೆ ಎತ್ತಿದ್ದರು. ಇದಕ್ಕೆ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿ ನಟಿ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ಸ್ಪಷ್ಟನೆ ನೀಡಿದ್ದರು.

ಲೀಲಾವತಿ ಮಾತನಾಡಿ ಹೌದು ನನ್ನ ಮಗನಿಗೆ ಮದುವೆ ಮಾಡಿದ್ದೇನೆ, ತಿರುಪತಿಯಲ್ಲಿ ಮದುವೆ ಆಯಿತು. ಗ್ರ್ಯಾಂಡ್ ಆಗಿ ಮಾಡಲಿಲ್ಲ ಅದಕ್ಕೆ ಹೇಳಲಿಲ್ಲ ಎಂದಿದ್ದಾರೆ. ವಿನೋದ್ ರಾಜ್‌ ಮಾತನಾಡಿ ಅದು ನಮ್ಮ ವೈಯಕ್ತಿಕ ವಿಚಾರ. ಮದುವೆ ಆಗಿದ್ದೇನೆ? ಏನ್ ಭಯೋತ್ಪಾದನೇ ಮಾಡಿದ್ದೀನಾ? ಎಂದು ತಿರುಗೇಟು ನೀಡಿದ್ದರು.

Vinod Raj to Sanjana galrani: Sandalwood celebrities who kept their marriage hidden

ನಟಿ ಶ್ರುತಿ ಹರನ್ ಮದುವೆ ಆಗಿದ್ದರೂ ಆಗಿಲ್ಲ ಎಂದೇ ಹೇಳುತ್ತಿದ್ದರು. ಆದರೆ ರಿಲೇಷನ್‌ಶಿಪ್‌ ವಿಚಾರವನ್ನು ಒಪ್ಪಿಕೊಂಡಿದ್ದರು. ನಟ ಅರ್ಜುನ್ ಸರ್ಜಾ ವಿರುದ್ಧ ಮೀಟು ಆರೋಪ ಮಾಡಿದ್ದ ಶ್ರುತಿ, 'ವಿಸ್ಮಯ' ಚಿತ್ರದ ಚಿತ್ರೀಕರಣ ವೇಳೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಎಂದು ಆರೋಪಿಸಿದ್ದರು. ಈ ಸಂಬಂಧ 2018ರಲ್ಲಿ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಶ್ರುತಿ ದೂರು ಕೂಡ ದಾಖಲಿಸಿದ್ದರು. ದೂರಿನ ಪ್ರತಿಯಲ್ಲಿ ವೈಫ್ ಆಫ್ ರಾಮ್‍ಕುಮಾರ್ ಎಂದು ನಮೂದಿಸಿದ್ದಾರೆ. ಆಗಲೇ ನಟಿ ಶ್ಉರತಿ ಅವರಿಗೆ ಕೇರಳ ಮೂಲದ ರಾಮ್ ಎಂಬುವವರ ಜೊತೆ ಮದುವೆ ಆಗಿರುವ ವಿಚಾರ ಬೆಳಕಿಗೆ ಬಂದಿತ್ತು.

ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾನಿ ಸಿಸಿಬಿ ವಶದಲ್ಲಿದ್ದ ಸಮಯದಲ್ಲೇ ಆಕೆಯ ಮದುವೆ ಫೋಟೋ ವೈರಲ್ ಆಗಿತ್ತು. ಅದಕ್ಕಿಂತ ಕೆಲ ತಿಂಗಳ ಹಿಂದೆ ವೈದ್ಯರಾದ ಅಜೀಜ್ ಪಾಶಾ ಎಂಬುವವರ ಜೊತೆ ಸರಳವಾಗಿ ಸಂಜನಾ ಮದುವೆ ನಡೆದಿತ್ತು. ಆದರೆ ಆ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದರು. ಮದುವೆ ಫೋಟೊ ಹೊರಬಂದ ಮೇಲೆ ಈ ವಿಚಾರವನ್ನು ಒಪ್ಪಿಕೊಂಡಿದ್ದರು. ಮುಸ್ಲಿಂ ಸಂಪ್ರದಾಯದಂತೆ ಈ ಮದುವೆ ನಡೆದಿತ್ತು. ದಂಪತಿಗೆ ಈಗ ಒಬ್ಬ ಮಗ ಇದ್ದಾನೆ.

ನನ ನೀನಾಸಂ ಸತೀಶ್ ಕೂಡ ಮದುವೆ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದರು. ತುಮಕೂರಿನ ಶಿರಾದ ಹುಡುಗಿ ಸುಪ್ರೀತಾ ಎಂಬುವವರ ಜೊತೆ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಕೆಲವೇ ಆಪ್ತರ ಸಮ್ಮುಖದಲ್ಲಿ ಸತೀಶ್ ಮದುವೆ ನಡೆದಿತ್ತು. ಹೆಣ್ಣು ಮಗುವನ್ನು ಮನೆಗೆ ಸ್ವಾಗತಿಸಿದ ಬಳಿಕ ಸತೀಶ್ ಮದುವೆ ವಿಚಾರವನ್ನು ಮಾಧ್ಯಮವೊಂದಕ್ಕೆ ಹೇಳಿಕೊಂಡಿದ್ದರು. ಮಗಳಿಗೆ 5 ವರ್ಷ ತುಂಬಿದಾಗ ಮಗಳ ಫೋಟೊ ಹಂಚಿಕೊಂಡಿದ್ದರು. ಅದು ಆಕೆಗೆ 1 ವರ್ಷ ಇದ್ದಾಗ ಕ್ಲಿಕ್ಕಿಸಿದ ಫೋಟೊ. ವೈಯಕ್ತಿಕ ವಿಚಾರಗಳನ್ನು ದೊಡ್ಡದಾಗಿ ಹಂಚಿಕೊಳ್ಳಲು ಇಷ್ಟಪಡದೇ ಸತೀಶ್ ಮದುವೆ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದರು.

ನಟಿ ಪ್ರಣೀತಾ ಸುಭಾಷ್ ಕೂಡ ಉದ್ಯಮಿ ನಿತಿನ್ ರಾಜು ಜೊತೆ ಸದ್ದಿಲ್ಲದೇ ಹಸೆಮಣೆ ಏರಿದ್ದರು. ಕೊರೊನಾ ಆರ್ಭಟದ ಸಂಭ್ರಮದಲ್ಲಿ ಖಾಸಗಿ ರೆಸಾರ್ಟ್‌ವೊಂದರಲ್ಲಿ ಕೆಲವೇ ಆಪ್ತರ ಸಮ್ಮುಖದಲ್ಲಿ ಮದುವೆ ಆಗಿದ್ದರು. ಫೋಟೊಗಳು ವೈರಲ್ ಆದ ಮೇಲೆ ಮದುವೆ ವಿಚಾರವನ್ನು ಖಚಿತಪಡಿಸಿದ್ದರು.

ನಟಿ ಅನುಪ್ರಭಾಕರ್ ನಟ ರಘು ಮುಖರ್ಜಿ 2ನೇ ಮದುವೆ ಆಗಿದ್ದರು. ಈ ಮದುವೆ ಕೂಡ ಗುಟ್ಟಾಗಿಯೇ ನಡೆದಿತ್ತು. ಇನ್ನು ನಟಿಯರಾದ ಸಿಂಧು ಲೋಕನಾಥ್, ರಮ್ಯಾ ಬಾರ್ನ ಕೂಡ ಗುಟ್ಟಾಗಿ ಹಸೆಮಣೆ ಏರಿದ್ದರು. ಇನ್ನು ನಟ ಉಪೇಂದ್ರ ಸಹನಟಿ ಪ್ರಿಯಾಂಕ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಕೊಲ್ಕತ್ತಾದಲ್ಲಿ ಸರಳವಾಗಿ ವಿವಾಹ ನಡೆದಿತ್ತು. ನಟ ಗಣೇಶ್ ಕೂಡ ಶಿಲ್ಪಾ ಅವರನ್ನು ಸದ್ದಿಲ್ಲದೇ ಮದುವೆ ಆಗಿದ್ದರು. ಆದರೆ ಇವರಿಬ್ಬರು ಬಹಳ ಕಾಲ ಮದುವೆ ವಿಚಾರ ಮುಚ್ಚಿಡಲಿಲ್ಲ. ಆದರೆ ಮದುವೆ ನಂತರವೇ ಈ ವಿಚಾರ ಅಭಿಮಾನಿಗಳಿಗೆ ಗೊತ್ತಾಗಿತ್ತು.

More from Filmibeat

English summary
Vinod Raj to Sanjana galrani: Sandalwood celebrities who kept their marriage hidden. recently Actress Leelavathi's Son Vinod raj opens up about his secret marriage. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X