"ಯಾರ್ ಬೈದ್ರು ಪರವಾಗಿಲ್ಲ, ನಮಗೆ ಮಕ್ಕಳೇ ಬೇಡ"- ನಟಿ ಸಂಗೀತಾ ಭಟ್
ಇತ್ತೀಚೆಗೆ ಯುವ ಜನತೆ ಮದುವೆ ಹಾಗೂ ಕುಟುಂಬ ನಿರ್ವಹಣೆಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಮದುವೆ ಬೇಡ ಎನ್ನುವವರು ಕೆಲವರು. ಮದುವೆ ಆದರೂ ಮಕ್ಲಳು ಬೇಡ ಇನ್ನುವುದು ಇನ್ನು ಕೆಲವರ ನಿರ್ಧಾರ. ಮದುವೆಯಾಗಿ ವರ್ಷಗಳೇ ಕಳೆದರೂ ಒಂದು ಮಗು ಬೇಕು ಎಂಬ ಹಂಬಲ ಇರುವುದಿಲ್ಲ. ಅಪ್ಪಿ ತಪ್ಪಿ ಗರ್ಭವತಿಯಾದರೂ ಸದ್ಯಕ್ಕೆ ಮಕ್ಕಳು ಬೇಡ ಎಂದು ಅಬಾರ್ಷನ್ ಮಾಡಿಸಿಕೊಳ್ಳುವವರು ಇದ್ದಾರೆ.
ಮದುವೆಯಾಗಿ 10 ವರ್ಷ ಕಳೆದರೂ ಮಕ್ಕಳು ಸದ್ಯಕ್ಕೆ ಬೇಡ ಎನ್ನುವ ಸೆಲೆಬ್ರೆಟಿಗಳು ನಮ್ಮ ನಡುವೆ ಇದ್ದಾರೆ. ಯಾರ್ ಏನೇ ಹೇಳಿದರೂ ಪರವಾಗಿಲ್ಲ, ನಮಗೆ ಮಕ್ಕಳು ಬೇಡವೇ ಎಂದು ಘಂಟಾಘೋಷವಾಗಿ ಹೇಳುವವರು ಇದ್ದಾರೆ. ಸಿಹಿ ಕಹಿ ಚಂದ್ರು ಪುತ್ರಿ ಹಿತಾ ಚಂದ್ರಶೇಖರ್ ಇದೇ ಮಾತನ್ನು ಹೇಳಿದ್ದರು. ಇದೀಗ ನಟ ಸುದರ್ಶನ್ ಹಾಗೂ ನಟಿ ಸಂಗೀತಾ ಭಟ್ ದಂಪತಿ ಕೂಡ ಇದೇ ನಿರ್ಧಾರಕ್ಕೆ ಬಂದಿದ್ದಾರೆ.

ಸಚಿನ್ ಚಲುವರಾಯಸ್ವಾಮಿ, ಸಂಗೀತಾ ಭಟ್ ನಟನೆಯ 'ಕಮಲ್ ಶ್ರೀದೇವಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ಪ್ರಚಾರದಲ್ಲಿ ಸಂಗೀತಾ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಮಾಧ್ಯಮಗಳ ಜೊತೆ ಸುದರ್ಶನ್ ಹಾಗೂ ಸಂಗೀತಾ ಇಬ್ಬರೂ ಮಾತನಾಡಿದ್ದಾರೆ. ಜನ ಎಷ್ಟೇ ಬೈದರು ಪರವಾಗಿಲ್ಲ ನಮಗೆ ಮಕ್ಕಳು ಬೇಡ ಎಂದು ದಂಪತಿ ಹೇಳಿದ್ದಾರೆ. ವಿಶ್ವವಾಣಿ ಯೂಟ್ಯೂಬ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.
"ನಮಗೆ ಸಮಯ ಇಲ್ಲ. ನಮಗೆ ಮೊದಲಿನಿಂದಲೂ ಜವಾಬ್ದಾರಿ ಬೇಡ. ನಾವು ಹೇಳುವುದನ್ನು ಕೇಳಿ ಜನ ಬೈದುಕೊಳ್ಳಬಹುದು. ಜವಾಬ್ದಾರಿ ಬೇಡದಿದ್ದರೆ ಮಕ್ಕಳು ಬೇಡ್ವಾ, ಅನ್ನಬಹುದು. ನಮಗೆ ನಮ್ಮ ಜೀವನದಲ್ಲಿ ನಡೆದ ಘಟನೆಗಳಿಂದ ಮತ್ತೊಂದು ಜೀವವನ್ನು ಈ ಪ್ರಪಂಚಕ್ಕೆ ತರುವುದು ಬೇಡ. ಈಗಿನ ಪ್ರಪಂಚದಲ್ಲಿ ಮಗು ಮಾಡಿಕೊಂಡು ಸಾಕುವುದು ಬಹಳ ದುಬಾರಿ" ಎಂದು ಸಂಗೀತಾ ಭಟ್ ಹೇಳಿದ್ದಾರೆ.

ಮಾತು ಮುಂದುವರೆಸಿರುವ ಸಂಗೀತಾ "ಒಂದು ಮಗು ಮಾಡಿಕೊಂಡು ಅದನ್ನು ಸಾಕಿ ಸಲಹಿ, ಅದಕ್ಕೆ ಬೇಕಾದಂತ ಜೀವನ ಕೊಡುವುದು, ಅದಕ್ಕೆ ನಮ್ಮ ಜೀವನ ತ್ಯಾಗ ಮಾಡುವುದು ಬೇಡವೇ ಬೇಡ. ಸುತ್ತಾಡುವುದು, ಒಳ್ಳೆ ಸಿನಿಮಾ, ಒಳ್ಳೆ ಪಾತ್ರ ಮಾಡುವುದು ಅಂಥದ್ದು ಮಾಡೋಣ. ಮಗುವನ್ನು ಸಾಕಿ ಸಲಹುವುದು ಬೇಡ ಎಂದು ನಿರ್ಧರಿಸಿದ್ದೇವೆ" ಎಂದಿದ್ದಾರೆ.
ಜನ ನಾವು ಮಾತನಾಡಿದ್ದು ನೋಡಿ ನಾಲಾಯಕ್ ಅಂತ ಉಗಿತ್ತಾರೆ. ಕೆಟ್ಟದಾಗಿ ಕಾಮೆಂಟ್ ಮಾಡ್ತಾರೆ. ಜನ ಬೈದರು ಪರವಾಗಿಲ್ಲ, ಇದು ನಮ್ಮ ನಿರ್ಧಾರ ಎಂದು ನಟ ಸುದರ್ಶನ್ ಪತ್ನಿ ಮಾತಿ ದನಿಗೂಡಿಸಿದ್ದಾರೆ. ಸಂಗೀತಾ ಇತ್ತೀಚೆಗೆ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ 'ಭಾಗ್ಯಲಕ್ಷ್ಮಿ' ಧಾರಾವಾಹಿಯ ತಾಂಡವ್ ಪಾತ್ರದಿಂದ ಸುದರ್ಶನ್ ಮನೆ ಮಾತಾಗಿದ್ದಾರೆ. 11 ವರ್ಷಗಳ ಹಿಂದೆ 'ಪ್ರೀತಿ ಗೀತಿ ಇತ್ಯಾದಿ' ಚಿತ್ರದಲ್ಲಿ ಸುದರ್ಶನ್ ಹಾಗೂ ಸಂಗೀತಾ ನಟಿಸಿದ್ದರು.
ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಅದಾಗಲೇ ಇಬ್ಬರೂ ಬೇರೆಯವರ ಜೊತೆ ಪ್ರೀತಿಲಿ ಬಿದ್ದು ಬ್ರೇಕಪ್ ಆಗಿತ್ತು. ಸ್ನೇಹಿತರಾಗಿದ್ದ ಇಬ್ಬರೂ ಮೊದಲಿಗೆ ರಿಲೇಷನ್‌ಶಿಪ್ ಬೇಡ ಎಂದೇ ನಿರ್ಧರಿಸಿದ್ದರು. 3 ವರ್ಷಗಳ ಕಾಲ ಒಟ್ಟಿಗೆ ಸುತ್ತಾಡಿ ಬಳಿಕ ಪೋಷಕರ ಒಪ್ಪಿಗೆ ಪಡೆದು ಮದುವೆ ಆಗಿದ್ದರು.
ಎರಡು ತಿಂಗಳ ಹಿಂದೆ ಸುದರ್ಶನ್ ಹಾಗೂ ಸಂಗೀತಾ ಭಟ್ ದಂಪತಿ ತಮ್ಮ ಹೊಸ ಮನೆಯ ಗೃಹಪ್ರವೇಶ ಮಾಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗಿತ್ತು. ದಂಪತಿ ತಮ್ಮ ಹೊಸ ಮನೆಗೆ 'ಸುಕಾಸ' ಎಂದು ಹೆಸರಿಟ್ಟಿದ್ದಾರೆ. ಸುದರ್ಶನ್ ಸ್ಟ್ಯಾಂಡಪ್ ಕಾಮೆಡಿಯನ್ ಆಗಿಯೂ ಗುರ್ತಿಸಿಕೊಂಡಿದ್ದಾರೆ.


Click it and Unblock the Notifications











