ವೇದಿಕೆ ಮೇಲೆ ಸಹನಟನ ಕೆನ್ನೆಗೆ ಮುತ್ತಿದ್ದ ಮೋಹನ್‌ಲಾಲ್: ನೆಟ್ಟಿಗರು ಕಾಮೆಂಟ್‌ಗಳೇನು

By ಫಿಲ್ಮಿಬೀಟ್ ಡೆಸ್ಕ್

ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಸಿನಿಪ್ರಿಯರಿಗೆ ಚಿರಪರಿಚಿತ. ತೆರೆಮೇಲೆ ಅಷ್ಟೇ ಅಲ್ಲ. ತೆರೆಯ ಹಿಂದಿಯೂ ಮೋಹನ್‌ಲಾಲ್ ನಡೆದುಕೊಳ್ಳುವ ರೀತಿ ಇಷ್ಟ ಆಗುತ್ತೆ. ಮೋಹನ್‌ಲಾಲ್‌ ಅವರನ್ನು ಹತ್ತಿರದಿಂದ ಬಲ್ಲವರಿಗೆ ಅವರ ಸ್ವಭಾವ ಏನು ಅನ್ನೋದು ಚೆನ್ನಾಗಿದೆ. ಅದಕ್ಕೊಂದು ಉದಾಹರಣೆ ಕಾರ್ಯಕ್ರಮವೊಂದರ ವೇದಿಕೆ ಮೇಲೆ ನಡೆದ ಈ ಘಟನೆ.

ಸಿನಿಮಾದಲ್ಲಿ ಬಿಟ್ಟರೆ ರಿಯಲ್ ಲೈಫ್‌ನಲ್ಲಿ ಮೋಹನ್ ಲಾಲ್ ಸದಾ ಕೂಲ್ ಆಗಿ ಕಾಣಿಸಿಕೊಂಡಿದ್ದಾರೆ. ಯಾರ ಮೇಲೂ ಆಕ್ರೋಶ ವ್ಯಕ್ತಪಡಿಸಿದ್ದು ಇಲ್ಲ. ಮೋಹನ್‌ಲಾಲ್ ವೇದಿಕೆ ಮೇಲೆ ಬಂದರೆ ಅವರನ್ನು ನೋಡುವುದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಫ್ಯಾನ್ಸ್ ಸೇರಿಕೊಳ್ಳುತ್ತಾರೆ. ಸರಳ ವ್ಯಕ್ತಿತ್ವದ ನಟನಿಗೆ ವಿಶ್ವದ ಮೂಲೆ ಮೂಲೆಯಲ್ಲೂ ದೊಡ್ಡ ಅಭಿಮಾನಿ ಬಳಗವೇ ಇದೆ.

What did netizens say about Malayalam actor Mohanlal and Indrans kissing each other on stage

ಇದೇ ಆಟಿಟ್ಯೂಡ್ ಇಂದಿಗೂ ಮೋಹನ್‌ಲಾಲ್ ಅವರನ್ನು ಸೂಪರ್‌ಸ್ಟಾರ್ ಆಗಿಯೇ ಇಟ್ಟಿದೆ. ಇವರೊಂದಿಗೆ ಬಂದ ಅದೆಷ್ಟೊ ನಟರು ಇಂದು ತೆರೆಮೇರೆಗೆ ಸರಿದಿದ್ದಾರೆ. ಆದರೆ, ಮೋಹನ್‌ಲಾಲ್ ಮಾತ್ರ ದಿನದಿಂದ ದಿನಕ್ಕೆ ಅಭಿಮಾನಿಗಳ, ಚಿತ್ರರಂಗದ ಪ್ರೀತಿಯನ್ನು ಗಿಟ್ಟಿಸಿಕೊಂಡು ಮುನ್ನುಗ್ಗುತ್ತಲೇ ಇದ್ದಾರೆ. ಇದಕ್ಕೊಂದು ಉದಾಹರಣೆ ಅಂದರೆ, ತನ್ನ ಸಹ ನಟನಿಗೆ ವೇದಿಕೆ ಮೇಲೆ ಮೋಹನ್‌ಲಾಲ್ ಮುತ್ತಿಟ್ಟ ದೃಶ್ಯ.

ಮೋಹನ್‌ಲಾಲ್ ಅವರಂತೆಯೇ ಮಲಯಾಳಂ ಚಿತ್ರರಂಗದ ಮತ್ತೊಬ್ಬ ಹಿರಿಯ ನಟ ಇಂದ್ರನ್ಸ್. ಸರಳತೆ ಹಾಗೂ ವಿನಯದಲ್ಲಿ ಇವರನ್ನು ಮೀರಿಸುವವರು ಇಲ್ಲವೇನೋ. ಕಾಸ್ಟ್ಯೂಮ್ ಡಿಸೈನ್ ಮಾಡುವ ಮೂಲಕ ಚಿತ್ರರಂಗಕ್ಕೆ ಬಂದಿದ್ದ ಇಂದ್ರನ್ಸ್ ಮುಂದಿನ ದಿನಗಳಲ್ಲಿ ನಟನಾಗಿ ಬಡ್ತಿಯನ್ನು ಪಡೆದಿದ್ದರು. ಇವ್ರಿಬ್ಬರೂ ಮಲಯಾಳಿಗಳಿಗೆ ಕೇವಲ ನಟರಾಗಿ ಅಷ್ಟೇ ಅಲ್ಲ ಸ್ವಭಾವದಿಂದಲೂ ಪ್ರೀತಿಗೆ ಪಾತ್ರರಾದವರು.

ಇತ್ತೀಚೆಗೆ ಮಲಯಾಳಂ ಚಿತ್ರರಂಗದ ಸಂಸ್ಥೆ ಅಮ್ಮಾದ ಜನರಲ್ ಬಾಡಿ ಮೀಟಿಂಗ್ ಇತ್ತು. ಈ ಸಾಮಾನ್ಯ ಸಭೆಯಲ್ಲಿ ಮೋಹನ್‌ಲಾಲ್ ಚಲನಚಿತ್ರ ಪ್ರಶಸ್ತಿ ವಿಜೇತರ ಗೌರವಾರ್ಥವಾಗಿ ಇಂದ್ರನ್ಸ್‌ಗೆ ಉಡುಗೊರೆಯನ್ನು ನೀಡಿ ಗೌರವಿಸಿದ್ದರು. ಈ ವೇಳೆ ಮೋಹನ್‌ಲಾಲ್ ಹಾಗೂ ಇಂದ್ರನ್ಸ್ ಇಬ್ಬರೂ ಪರಸ್ಪರ ಕೆನ್ನಗೆ ಚುಂಬಿಸಿಕೊಂಡ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಷ್ಟೇ ಅಲ್ಲದೆ, ನೆಟ್ಟಿಗರು ಇಬ್ಬರು ನಟರ ಬಾಂಧವ್ಯಕ್ಕೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.

ಪ್ರಶಸ್ತಿ ಸ್ವೀಕರಿಸಲು ಪ್ರೀತಿ ತುಂಬಿದ ಕಣ್ಣುಗಳೊಂದಿಗೆ ಹಿರಿಯ ನಟ ಇಂದ್ರನ್ಸ್ ವೇದಿಕೆಗೆ ಬಂದರು. ಆ ವೇಳೆ ಮೋಹನ್‌ಲಾಲ್‌ಗೆ ಚುಂಬಿಸಲು ಯತ್ನಿಸಿದರು. ಆದರೆ, ಅದು ಸಾಧ್ಯವಾಗಲಿಲ್ಲ. ಇದನ್ನು ಗಮನಿಸಿದ ಮೋಹನ್‌ಲಾಲ್ ತನ್ನ ಸಹ ನಟನನ್ನು ಅಪ್ಪಿಕೊಂಡು, ಉಡುಗೊರೆಯನ್ನು ನೀಡಿ, ಅವರ ಕೆನ್ನೆಗೆ ಚುಂಬಿಸಿದರು. ಮೋಹನ್ ಲಾಲ್ ದೈಹಿಕ ಭಾಷೆ ಮತ್ತು ಮುಖದಲ್ಲಿನ ಭಾವ ಇಂದ್ರನ್ಸ್ ಅವರ ಮೇಲಿನ ಪ್ರೀತಿಯನ್ನು ಸ್ಪಷ್ಟವಾಗಿ ಹೇಳುತ್ತಿತ್ತು.

ಬಳಿಕ ಮೋಹನ್‌ಲಾಲ್‌ ಅವರಿಗೆ ಇಂದ್ರನ್ಸ್‌ ಕೂಡ ಚುಂಬಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. " ತುಂಬಾ ಪ್ರೀತಿಸಿದವರಿಗೆ ಉಮ್ಮಾ ಕೊಡುವುದು ಮೋಹನ್‌ಲಾಲ್‌ಗೆ ಹೊಸದೇನು ಅಲ್ಲ." ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ರೆ, ಮತ್ತೊಬ್ಬರು "ಇಂದ್ರನ್ಸ್ ಅಣ್ಣನ ವಿನಯ ಮೋಹನ್‌ಲಾಲ್‌ಗೆ ಗೊತ್ತು" ಅಂತ ಕಾಮೆಂಟ್ ಮಾಡಿದ್ದಾರೆ. ಈ ಹಿಂದೆ ಮೋಹನ್‌ಲಾಲ್ ಹಾಗೂ ಮಮ್ಮುಟ್ಟಿ ವೇದಿಕೆ ಮೇಲೆ ಚುಂಬಿಸಿಕೊಂಡ ದೃಶ್ಯ ವೈರಲ್ ಆಗಿತ್ತು.

More from Filmibeat

English summary
Netizens appreciated Monanlal for kissing co-actor Indrans on stage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X