twitter
    For Quick Alerts
    ALLOW NOTIFICATIONS  
    For Daily Alerts

    ಬಾಕ್ಸ್ ಆಫೀಸ್ ಎಂದರೆ ಏನು? ಇದರ ಲೆಕ್ಕಾಚಾರ ಹೇಗೆ?

    |

    ಸಿನಿಮಾ ವಿಷಯದಲ್ಲಿ 'ಬಾಕ್ಸ್ ಆಫೀಸ್' ಎಂಬುದು ಅತ್ಯಂತ ಬಳಕೆಯ ಪದ. ಸಿನಿಮಾ ಒಂದರ ಬಾಕ್ಸ್ ಆಫೀಸ್‌ ಕಲೆಕ್ಷನ್ ಎಷ್ಟು ಆಗಿದೆ ಎಂಬುದರ ಆಧಾರದ ಮೇಲೆ ಆ ಸಿನಿಮಾ ಗೆದ್ದಿದೆಯೋ-ಸೋತಿದೆಯೋ ಲೆಕ್ಕ ಹಾಕಲಾಗುತ್ತದೆ. ಹಾಗಿದ್ದರೆ ಈ 'ಬಾಕ್ಸ್‌ ಆಫೀಸ್' ಎಂದರೇನು? ಅದರ ಲೆಕ್ಕಾಚಾರ ಹೇಗೆ ಮಾಡಲಾಗುತ್ತದೆ?

    ಬಾಕ್ಸ್ ಆಫೀಸ್‌ಗೆ ಬಹಳ ಸುದೀರ್ಘ ಇತಿಹಾಸವಿದೆ. ಸಿನಿಮಾ ಪ್ರಾರಂಭವಾಗುವ ಮೊದಲೇ 'ಬಾಕ್ಸ್ ಆಫೀಸ್' ಅಥವಾ 'ಬಾಕ್ಸ್' ಪದ ಬಳಕೆಯಲ್ಲಿತ್ತು. 1750 ರ ಸಮಯದಲ್ಲಿ ಒಪೆರಾ ಅಥವಾ ನಾಟಕಗಳನ್ನು ನೋಡಲು ಯಾರೂ ಹಣ ನೀಡಬೇಕಾಗಿರಲಿಲ್ಲ. ಆಗೆಲ್ಲಾ ರಂಗಮಂದಿರ ಅಥವಾ ಥಿಯೇಟರ್‌ಗಳು ತುಂಬಿಯೇ ಇರುತ್ತಿದ್ದವು. ಇದರಿಂದ ರಾಯಲ್ ಕುಟುಂಬದವರಿಗೆ ನಾಟಗಳನ್ನು ನೋಡಲಾಗುತ್ತಿರಲಿಲ್ಲ. ರಾಯಲ್ ಕುಟುಂಬದವರು ಅಥವಾ ಹಣವಂತರು ನಾಟಕಗಳನ್ನು ನೋಡಲೆಂದು ಬಾಕ್ಸ್‌ ರೀತಿಯ ರಚನೆ ಮಾಡಿ ಅದನ್ನು ರಂಗದ ಮುಂದೆ ಎತ್ತರದ ಸ್ಥಾನದಲ್ಲಿ ಇಡಲಾಗುತ್ತಿತ್ತು. ಈ ರೀತಿ 'ರಾಯಲ್ ಬಾಕ್ಸ್‌'ಗಳಲ್ಲಿ ಕೂತು ನಾಟಕ ಅಥವಾ ಒಪೆರಾ ವೀಕ್ಷಿಸಲು ಹಣ ಪಾವತಿ ಮಾಡಬೇಕಾಗಿತ್ತು. ಒಟ್ಟು ಎಷ್ಟು ಬಾಕ್ಸ್ ಮಾರಾಟವಾಗಿದೆ ಎಂಬುದನ್ನು ಲೆಕ್ಕ ಮಾಡಿ ಲಾಭ ಅಳೆಯಲಾಗುತ್ತಿತ್ತು.

    ಮತ್ತೊಂದು ವಾದವೆಂದರೆ, 16ನೇ ಶತಮಾನದಲ್ಲಿ ಎಲಿಜಬೆತೇನ್ ಥಿಯೇಟರ್ ಅಥವಾ ಇಂಗ್ಲಿಷ್ ಥಿಯೇಟರ್‌ನಲ್ಲಿ ನಾಟಕ-ಒಪೆರಾಗಳನ್ನು ನೋಡವ ಜನರ ಮುಂದಿನಿಂದ ಬಾಕ್ಸ್ ಮಾದರಿಯ ಗಾಲಿಯುಳ್ಳ ಸಣ್ಣ ಪೆಟ್ಟಿಗೆಯನ್ನು ಉರುಳಿಸಿಕೊಂಡು ಬರಲಾಗುತ್ತಿತ್ತು. ಜನ ಈ ಪೆಟ್ಟಿಗೆಗೆ ಹಣ ಹಾಕುತ್ತಿದ್ದರು. ಕೊನೆಗೆ ಈ ಪೆಟ್ಟಿಯಲ್ಲಿನ ಹಣವನ್ನು ಒಟ್ಟು 'ಕಲೆಕ್ಷನ್' ಎನ್ನಲಾಗುತ್ತಿತ್ತು.

    1904 ರಲ್ಲಿ ಪ್ರಕಟವಾಯಿತು ಮೊದಲ ಬಾಕ್ಸ್ ಆಫೀಸ್ ಕಲೆಕ್ಷನ್ ವರದಿ

    1904 ರಲ್ಲಿ ಪ್ರಕಟವಾಯಿತು ಮೊದಲ ಬಾಕ್ಸ್ ಆಫೀಸ್ ಕಲೆಕ್ಷನ್ ವರದಿ

    1900 ರ ವೇಳೆಗೆ ಆಗಲೆ ಸಿನಿಮಾಗಳ ಜನಪ್ರಿಯಗೊಳ್ಳಲು ಆರಂಭವಾಗಿದ್ದವು. 1900 ರ ಆರಂಭದಲ್ಲಿ ಟಿಕೆಟ್ ನೀಡಿಕೆ ಪದ್ಧತಿ ಜಾರಿಗೆ ಬಂತು. ಹಣ ಪಡೆದು ಟಿಕೆಟ್ ನೀಡುವ ಸ್ಥಳವನ್ನು ಬಾಕ್ಸ್‌ ಮಾದರಿಯ ರಚನೆ ಮಾಡಲಾಯಿತು. ಇದನ್ನು 'ಬಾಕ್ಸ್ ಆಫೀಸ್' ಎಂದು ಕರೆಯಲಾಯಿತು. 1904 ರಲ್ಲಿ ಮೊದಲ ಬಾರಿಗೆ 'ವೆರೈಟಿ' ಎಂಬ ಮಾಧ್ಯಮ ಸಂಸ್ಥೆಯು ಸಿನಿಮಾವೊಂದರ ಒಟ್ಟು 'ಬಾಕ್ಸ್ ಆಫೀಸ್' ಕಲೆಕ್ಷನ್ ಇಷ್ಟಾಗಿದೆ ಎಂಬ ಲೆಕ್ಕವನ್ನು ಮುದ್ರಿಸಿತು. ಇಲ್ಲಿಂದ ಬಾಕ್ಸ್ ಆಫೀಸ್ ಕಲೆಕ್ಷನ್ ಎಂಬುದು ಸಿನಿಮಾದ ಗೆಲುವು-ಸೋಲಿನ ಮಾನದಂಡವಾಗಿ ಹೋಯಿತು. ವೆರೈಟಿ ಮಾಧ್ಯಮ ಸಂಸ್ಥೆ ಈಗಲೂ ಕಾರ್ಯನಿರ್ವಹಿಸುತ್ತಿದೆ.

    ಭಾರತದಲ್ಲಿ 'ಬಾಕ್ಸ್‌ ಆಫೀಸ್ ಇಂಡಿಯಾ' ಇದೆ

    ಭಾರತದಲ್ಲಿ 'ಬಾಕ್ಸ್‌ ಆಫೀಸ್ ಇಂಡಿಯಾ' ಇದೆ

    ಸಿನಿಮಾ ನಿರ್ಮಿಸುವ ಹಲವು ದೇಶಗಳಲ್ಲಿ ಆ ದೇಶದ ಸಿನಿಮಾಗಳ ಒಟ್ಟು ಗಳಿಕೆ ಲೆಕ್ಕ ಹಾಕಿ ನೀಡುವ ಬಾಕ್ಸ್‌ ಆಫೀಸ್ ವೆಬ್‌ಸೈಟ್‌ಗಳು, ಸಂಸ್ಥೆ ಇವೆ. ಭಾರತದಲ್ಲಿ 'ಬಾಕ್ಸ್‌ಆಫೀಸ್ ಇಂಡಿಯಾ' ಈ ಕಾರ್ಯ ಮಾಡುತ್ತದೆ. ಬಿಡುಗಡೆ ಆದ ಪ್ರಮುಖ ಸಿನಿಮಾದ ಕಲೆಕ್ಷನ್ ಅನ್ನು ತಮ್ಮ ವೆಬ್‌ಸೈಟ್‌ನಲ್ಲಿ ಇದು ಪ್ರಕಟಿಸುತ್ತದೆ. 'ಬಾಲಿವುಡ್ ಹಂಗಾಮಾ' ಎಂಬ ಮಾಧ್ಯಮ ಸಂಸ್ಥೆ ಸಹ ಸಿನಿಮಾದ ಕಲೆಕ್ಷನ್ ಮಾಹಿತಿ ಪ್ರಕಟಿಸಲು ಪ್ರಾರಂಭ ಮಾಡಿದೆ. ಆದರೆ ಈ ಮಾಧ್ಯಮದ ವರದಿ ಬಗ್ಗೆ ಕೆಲವರು ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ.

    ಭಾರತದಲ್ಲಿ ಪ್ರಾರಂಭವಾಗಿದ್ದು 2003 ರಲ್ಲಿ

    ಭಾರತದಲ್ಲಿ ಪ್ರಾರಂಭವಾಗಿದ್ದು 2003 ರಲ್ಲಿ

    ಭಾರತದಲ್ಲಿ ಬಾಕ್ಸ್‌ಆಫೀಸ್ ಇಂಡಿಯಾ ಪ್ರಾರಂಭವಾಗಿದ್ದು 2003 ಜೂನ್ 10 ರಂದು. ಅಂದಿನಿಂದಲೂ ಸಿನಿಮಾಗಳ ಒಟ್ಟು ಗಳಿಕೆಯ ಲೆಕ್ಕವನ್ನು 'ಬಾಕ್ಸ್‌ ಆಫೀಸ್‌ ಇಂಡಿಯಾ' ನೀಡುತ್ತಾ ಬಂದಿದೆ. ವಿದೇಶದಲ್ಲಿ ಬಿಡುಗಡೆ ಆದ ಭಾರತದ ಸಿನಿಮಾಗಳು ಆ ದೇಶದಲ್ಲಿ ಗಳಿಸಿದ ಹಣವೆಷ್ಟು ಎಂಬುದನ್ನೂ ಸಹ ಬಾಕ್ಸ್ ಆಫೀಸ್ ಇಂಡಿಯಾ ಮಾಹಿತಿ ನೀಡುತ್ತಾ ಬಂದಿದೆ. ರಷ್ಯಾ ಮತ್ತು ಕೆಲವು ದೇಶಗಳ ಮಾಹಿತಿಯನ್ನು ಬಾಕ್ಸ್‌ ಆಫೀಸ್ ಇಂಡಿಯಾ ನೀಡುವುದಿಲ್ಲ.

    ಭಾರತದಲ್ಲಿ 14 ವಿತರಕ ವಿಭಾಗಗಳಿವೆ

    ಭಾರತದಲ್ಲಿ 14 ವಿತರಕ ವಿಭಾಗಗಳಿವೆ

    ಭಾರತದಲ್ಲಿ 14 ವಿತರಕ ವಿಭಾಗಗಳನ್ನು ವಿಂಗಡಿಸಲಾಗಿದೆ. ಅವುಗಳೆಂದರೆ, ಮುಂಬೈ, ದೆಹಲಿ, ಉತ್ತರ ಪ್ರದೇಶ, ಪೂರ್ವ ಪಂಜಾಬ್, ಮಧ್ಯ ಭಾರತ, ಕೇಂದ್ರಾಡಳಿತ ಪ್ರದೇಶ, ರಾಜಸ್ಥಾನ, ಬಿಹಾರ, ಪಶ್ಚಿಮ ಬಂಗಾಳ, ನಿಜಾಮ್, ಕರ್ನಾಟಕ, ತಮಿಳುನಾಡು, ಅಸ್ಸಾಂ, ಒಡಿಸ್ಸಾ ಹಾಗೂ ಕೇರಳ. ಪ್ರತಿಯೊಂದು ವಿಭಾಗ ಅಥವಾ ಸರ್ಕ್ಯೂಟ್‌ಗೆ ಒಬ್ಬ ವಿತರಕ, ಪ್ರತಿನಿಧಿ ಆಗಿರುತ್ತಾನೆ. ಇವುಗಳಿಂದಾಗಿ ಬಾಕ್ಸ್ ಆಫೀಸ್ ವರದಿ ಪಡೆಯುವುದು ಹೆಚ್ಚು ಸುಲಭವಾಗಿ ಆಗುತ್ತದೆ.

    ಬಾಕ್ಸ್‌ ಆಫೀಸ್ ಕಲೆಕ್ಷನ್ ಪಕ್ಕಾ ಅಂಕಿ-ಅಂಶ ಒಳಗೊಂಡಿರುವುದಿಲ್ಲ

    ಬಾಕ್ಸ್‌ ಆಫೀಸ್ ಕಲೆಕ್ಷನ್ ಪಕ್ಕಾ ಅಂಕಿ-ಅಂಶ ಒಳಗೊಂಡಿರುವುದಿಲ್ಲ

    ಬಾಕ್ಸ್‌ ಆಫೀಸ್ ಕಲೆಕ್ಷನ್ ರಿಪೋರ್ಟ್‌ ಎಂಬುದು ಸರಾಸರಿ ವರದಿ ಆಗಿರುತ್ತದೆ. ಒಟ್ಟು ಟಿಕೆಟ್ ಮಾರಾಟ ಅಥವಾ ಟಿಕೆಟ್ ಮಾರಾಟದಿಂದ ಬಂದ ಒಟ್ಟು ಹಣದ ಲೆಕ್ಕಾಚಾರವನ್ನು ಬಾಕ್ಸ್‌ ಆಫೀಸ್ ಕಲೆಕ್ಷನ್ ಎನ್ನುತ್ತಾರೆ. ಸಾಮಾನ್ಯವಾಗಿ ಈ ಕಲೆಕ್ಷನ್ ಮೊತ್ತ, ತೆರಿಗೆಗೆ ಮುಂಚಿನದ್ದೇ ಆಗಿರುತ್ತದೆ. ಬೇರೆ-ಬೇರೆ ಚಿತ್ರಮಂದಿರಗಳಲ್ಲಿ ಬೇರೆ-ಬೇರೆ ಬೆಲೆ ಇರುವ ಕಾರಣ ಸರಾಸರಿ ಮೊತ್ತವನ್ನು ಬಾಕ್ಸ್ ಆಫೀಸ್ ಮೊತ್ತವೆಂದು ಪರಿಗಣಿಸಲಾಗುತ್ತದೆ. ಬಾಕ್ಸ್‌ ಆಫೀಸ್ ಕಲೆಕ್ಷನ್‌ ರಿಪೋರ್ಟ್‌ಗಳು ಪಕ್ಕಾ ಅಂಕಿ-ಅಂಶ ಒಳಗೊಂಡಿರುವುದಿಲ್ಲ.

    ಎರಡು ರೀತಿಯ ಬಾಕ್ಸ್ ಆಫೀಸ್ ರಿಪೋರ್ಟ್‌ಗಳು ಇವೆ

    ಎರಡು ರೀತಿಯ ಬಾಕ್ಸ್ ಆಫೀಸ್ ರಿಪೋರ್ಟ್‌ಗಳು ಇವೆ

    'ಬಾಕ್ಸ್ ಆಫೀಸ್', 'ಬಾಕ್ಸ್ ಆಫೀಸ್ ಇಂಡಿಯಾ', 'ಬಾಕ್ಸ್ ಆಫೀಸ್ ಮೋಜೊ', 'ದಿ ನಂಬರ್ಸ್', 'ಎ ಬಾಕ್ಸ್ ಆಫೀಸ್', 'ಶೋಬಿಜ್ ಡಾಟಾ', 'ಕೋಯಿಮೋಯಿ' ಇನ್ನೂ ಹಲವು ಬಾಕ್ಸ್‌ ಆಫೀಸ್ ವರದಿ ನೀಡುವ ಸಂಸ್ಥೆಗಳು ಅಥವಾ ವೆಬ್‌ಸೈಟ್‌ಗಳು ವಿಶ್ವದಾದ್ಯಂತ ಕೆಲವ ಮಾಡುತ್ತಿವೆ. ವೀಕ್ಲಿ ಬಾಕ್ಸ್ ಆಫೀಸ್ ರಿಪೋರ್ಟ್ ಹಾಗೂ ವೀಕೆಂಡ್ ಬಾಕ್ಸ್ ಆಫೀಸ್ ರಿಪೋರ್ಟ್‌ ಎಂಬ ಎರಡು ಬಗೆಯ ರಿಪೋರ್ಟ್ ಇವೆ. ಶುಕ್ರವಾರದಿಂದ ಮುಂದಿನ ಗುರುವಾರದ ವರೆಗೆ ಸಿನಿಮಾ ಗಳಿಸಿದ ಲೆಕ್ಕವನ್ನು ವೀಕ್ಲಿ ಬಾಕ್ಸ್‌ ಆಫೀಸ್‌ ರಿಪೋರ್ಟ್ ಎಂದರೆ. ಶುಕ್ರವಾರ, ಶನಿವಾರ ಗಳಿಸಿದ ಹಣ ಹಾಗೂ ಭಾನುವಾರ ಅದೇ ಸಿನಿಮಾ ಗಳಿಸಬಹುದಾದ ಹಣದ ಅಂದಾಜು ಮೊತ್ತವನ್ನು ಒಟ್ಟು ಮಾಡಿ ನೀಡುವ ವರದಿಯನ್ನು ವೀಕೆಂಡ್ ರಿಪೋರ್ಟ್ ಎನ್ನಲಾಗುತ್ತದೆ. ಇತ್ತೀಚೆಗೆ ಫರ್ಸ್ಟ್ ಡೇ ಬಾಕ್ಸ್‌ ಆಫೀಸ್ ರಿಪೋರ್ಟ್ ಸಹ ಸೇರಿಕೊಂಡಿದೆ.

    English summary
    What is Box Office and how how it is calculated. In India Box Office India giving movies collection reports.
    Friday, January 15, 2021, 15:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X