twitter
    For Quick Alerts
    ALLOW NOTIFICATIONS  
    For Daily Alerts

    'ಐಟಂ ಸಾಂಗ್'ನ ಥಳುಕು-ಬಳುಕಿನ ಹಿಂದೆ ತಿಳಿಯಬೇಕಾದ ವಿಷಯ ಎಷ್ಟೋಂದಿದೆ

    |

    ''ನೀನು *ತ್ರಿ ಅಂತ ಗೊತ್ತವ್ವ, ನಿನ್ನ ಛತ್ರಿ ಆಟ ಬ್ಯಾಡವ್ವ'', ''ನಂದು ನಿಂದು, ನಿಂದು ನಂದು ತುಂಬಾ ಹಳೇದು. ಆಗ್ಲು ಮಾಡ್ತಿದ್ವಿ ಈಗ್ಲೂ ಮಾಡ್ತೀವಿ'', ''ಪ್ರಾಯವೆಂಬ ಪಾನಕ ಕುಡಿಯದಿದ್ರೆ ಏನ್ ಸುಖ. ಆಸೆಯೆಂಬ ಬೆಲ್ಲವ ಅದ್ದಿ-ಅದ್ದಿ ಎತ್ತು ಬಾ'' ಓದಲು ಮುಜುಗರ ತರುವ ಈ ಸಾಲುಗಳು ಕನ್ನಡ ಸಿನಿಮಾಗಳ 'ಐಟಂ' ಹಾಡುಗಳ 'ಸಾಹಿತ್ಯ'.

    ಸಿನಿಮಾದ ಕತೆಗೆ ಎಳ್ಳಷ್ಟೂ ಸಂಬಂಧ ಇಲ್ಲದ. ಮಹಿಳೆಯ ದೇಹದ ಅಂಕುಡೊಂಕುಗಳ ಮೇಲೆ ಕ್ಯಾಮೆರಾ ದೃಷ್ಟಿ ಹಾಯಿಸಿ ನೋಡುಗರನ್ನು ಉದ್ರೇಕಿಸುವ, ಮಹಿಳೆ ಭೋಗದ ವಸ್ತು ಎಂದು ಹೇಳಲು ಸಿನಿಮಾದವರು ಬಳಸುವ 'ಟೂಲ್' ಅನ್ನು 'ಐಟಂ ಹಾಡು' ಎನ್ನಬಹುದು.

    ತಾಂಡಾದಲ್ಲಿ ಹುಟ್ಟಿದ ಸತ್ಯವತಿ, ಮಂಗ್ಲಿ ಆದ ಮುಳ್ಳಿನ ಹಾದಿಯ ಪಯಣತಾಂಡಾದಲ್ಲಿ ಹುಟ್ಟಿದ ಸತ್ಯವತಿ, ಮಂಗ್ಲಿ ಆದ ಮುಳ್ಳಿನ ಹಾದಿಯ ಪಯಣ

    ಮೊದಲಿಗೆ ಚರ್ಚಿಸಬೇಕಾದದ್ದು, ಈ ರೀತಿಯ ಹಾಡುಗಳಿಗೆ 'ಐಟಂ ಸಾಂಗ್' ಎಂದು ಕರೆಯುವುದೇಕೆ? 'ಐಟಂ ಸಾಂಗ್' ಎಂಬುವಲ್ಲಿ 'ಐಟಂ' ಎಂದರೆ ಏನು? ಹಾಡಿನಲ್ಲಿ ಕುಣಿಯವ ಮಹಿಳೆಯನ್ನು ನಾವುಗಳು 'ಐಟಂ' ಎನ್ನುತ್ತಿದ್ದೀವಿ. ಬೀದಿ ಕಾಮುಕರು ಯುವತಿಯರನ್ನು ಛೇಡಿಸಲು ಈ ಪದದ ಬಳಕೆ ಮಾಡುತ್ತಾರೆ. ಹೀಗೆ ಮಹಿಳೆಯನ್ನು 'ಆಬ್ಜೆಕ್ಟಿಫೈ' ಮಾಡುವುದು ಕಾನೂನಿನ ಪ್ರಕಾರ ಅಪರಾಧ! ಆದರೆ ಇಂಥ ಗಂಭೀರ ತಪ್ಪನ್ನು ಸರ್ವೇ ಸಾಮಾನ್ಯ ಎಂಬಂತೆ ಮಾಡಲಾಗುತ್ತಿದೆ.

    'ಐಟಂ ಸಾಂಗ್' ಪದ ಬಳಕೆ ಪ್ರಾರಂಭವಾಗಿದ್ದು ಯಾವಾಗ?

    'ಐಟಂ ಸಾಂಗ್' ಪದ ಬಳಕೆ ಪ್ರಾರಂಭವಾಗಿದ್ದು ಯಾವಾಗ?

    'ಐಟಂ' ಪದ ಬಳಕೆ ಪ್ರಾರಂಭ ಮಾಡಿದ್ದು, ಅದಕ್ಕೆ ಪ್ರಚಾರ ಕೊಟ್ಟಿದ್ದು ಭಾರತೀಯ ಮಾಧ್ಯಮಗಳು. 1999 ರಲ್ಲಿ ಬಿಡುಗಡೆ ಆದ 'ಶೂಲ್' ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ 'ಮೇ ಆಯಿ ಹೂ ಯುಪಿ, ಬಿಹಾರ ಲೂಟನೇ' ಹೆಸರಿನ ಹಾಡಿಗೆ ನರ್ತಿಸಿದ್ದರು. ಹಾಡಿನ ಬಗ್ಗೆ ಮೊದಲ ಬಾರಿಗೆ 'ಐಟಂ ಹಾಡು' ಎಂದು ಪತ್ರಿಕೆಯೊಂದರಲ್ಲಿ ಬಳಸಲಾಯಿತು. ಆ ನಂತರ ಅದು ಬಹಳ ಪ್ರಖ್ಯಾತವಾಯಿತು. ಆ ನಂತರ 'ಐಟಂ ನಂಬರ್', 'ಐಟಂ ಗರ್ಲ್' 'ಐಟಂ ಸಿಂಗರ್' ಮುಂತಾದ ಪದಗಳು ಹುಟ್ಟಿಕೊಂಡವು. ಅದಕ್ಕೂ ಮುನ್ನಾ 'ಕ್ಯಾಬರೇ ಹಾಡು', 'ಕ್ಯಾಬರೇ ಡಾನ್ಸರ್' ಪದಗಳನ್ನು ಆಗಾಗ್ಗೆ ಬಳಸಲಾಗುತ್ತಿತ್ತು.

    ಪ್ರತಿಭಾವಂತ ನಿರ್ದೇಶಕರಿಗೂ ಐಟಂ ಹಾಡು ಬೇಕು!

    ಪ್ರತಿಭಾವಂತ ನಿರ್ದೇಶಕರಿಗೂ ಐಟಂ ಹಾಡು ಬೇಕು!

    ಸಿನಿಮಾಗಳಿಂದ 'ಐಟಂ ಹಾಡು'ಗಳನ್ನು ಇಲ್ಲವಾಗಿಸುವುದು ಅಸಾಧ್ಯ ಎಂಬಂತಾಗಿದೆ. ಎಂಥ ಪ್ರತಿಭಾವಂತ ನಿರ್ದೇಶಕರೂ ತಮ್ಮ ಸಿನಿಮಾದಲ್ಲಿ 'ಐಟಂಸಾಂಗ್' ಇಟ್ಟಿರುತ್ತಾರೆ. ರಾಜಮೌಳಿ, ಸಂಜಯ್ ಲೀಲಾ ಬನ್ಸಾಲಿ ಅವರಂಥ ಪ್ರಸ್ತುತ ಸಿನಿಮಾದ ಅತ್ಯುತ್ತಮ ನಿರ್ದೇಶಕರಿಗೆ ಸಹ 'ಐಟಂ ಹಾಡು'ಗಳ ಬೇಕು. ಸಿನಿಮಾದ ಕತೆಯೊಂದಿಗೆ ಐಟಂ ಹಾಡುಗಳಿಗೆ ಏನೊಂದೂ ಸಂಬಂಧ ಇರುವುದಿಲ್ಲ ಆದರೆ ಇದು ಬೇಕಾಗುವುದು ವಾಣಿಜ್ಯ ಉದ್ದೇಶಕ್ಕಷ್ಟೆ. ಐಟಂ ಹಾಡುಗಳು ಸಿನಿಮಾಕ್ಕೆ ಒಳ್ಳೆಯ ಪ್ರಚಾರ ಒದಗಿಸುತ್ತವೆ. ಕತೆಯಿಂದ ಹೊರಗೆ ಮತ್ತೊಬ್ಬ ಸ್ಟಾರ್ ಗೆ 'ಸ್ಕ್ರೀನ್ ಸ್ಪೇಸ್' ಕೊಟ್ಟು, ಸಿನಿಮಾದ ಒಟ್ಟು ತಾರಾ ಮೌಲ್ಯವನ್ನು ಇನ್ನಷ್ಟು ಹೆಚ್ಚು ಮಾಡಬಹುದು ಎಂಬುದು ಸಹ ನಿರ್ದೇಶಕರ ಐಟಂ ಸಾಂಗ್ ಪ್ರೀತಿಗೆ ಕಾರಣ.

    'ಪೊಗರು' ಹಿನ್ನೆಲೆಯಲ್ಲಿ ಸಿನಿಮಾ ಹಳವಂಡಗಳ ಪಕ್ಷಿನೋಟ'ಪೊಗರು' ಹಿನ್ನೆಲೆಯಲ್ಲಿ ಸಿನಿಮಾ ಹಳವಂಡಗಳ ಪಕ್ಷಿನೋಟ

    ಐಟಂ ಹಾಡಿನ ಸಮಸ್ಯೆ ಅದರ ಸಾಹಿತ್ಯ ಮತ್ತು ಪ್ರಸೆಂಟೇಶನ್‌

    ಐಟಂ ಹಾಡಿನ ಸಮಸ್ಯೆ ಅದರ ಸಾಹಿತ್ಯ ಮತ್ತು ಪ್ರಸೆಂಟೇಶನ್‌

    ಐಟಂ ಹಾಡುಗಳ ಸಮಸ್ಯೆ ಇರುವುದು ಅವುಗಳ ಸಾಹಿತ್ಯ ಮತ್ತು ಪ್ರೆಸೆಂಟೇಶನ್‌ನಲ್ಲಿ. ಹಾಡಿನ ಆರಂಭದಲ್ಲಿ ನೃತ್ಯಗಾರ್ತಿಯ ಮುಖ ತೋರುವುದಕ್ಕೆ ಮುಂಚೆಯೇ ಸೊಂಟ, ಎದೆ ಭಾಗ, ಬೆತ್ತಲೆ ಬೆನ್ನನ್ನು ತೋರಿಸಿದ ನಂತರ ಮುಖದ ದರ್ಶನ ಮಾಡಿಸುತ್ತಾರೆ. ಐಟಂ ಹಾಡಿನ ಸಾಹಿತ್ಯವಂತೂ ಬಹುತೇಕ ಡಬಲ್ ಮೀನಿಂಗ್‌ನದ್ದಾಗಿರುತ್ತದೆ. ಅಥವಾ ಹೆಣ್ಣನ್ನು ಭೋಗ ವಸ್ತು ಎಂದು ಹೇಳುವ ಸಾಲುಗಳೇ ಇರುತ್ತವೆ. ಈ ಎರಡು ಮುಖ್ಯ ಅಂಶಗಳು ಐಟಂ ಹಾಡಿನ ಬಗ್ಗೆ ಅಸಹನೆ ಏಳಲು ಮುಖ್ಯ ಕಾರಣ.

    ಮಹಿಳಾ ಘನತೆ ಬಗ್ಗೆ ಮಾತನಾಡುವ ನಟಿಯರು ಐಟಂ ಹಾಡಿನಲ್ಲಿ!

    ಮಹಿಳಾ ಘನತೆ ಬಗ್ಗೆ ಮಾತನಾಡುವ ನಟಿಯರು ಐಟಂ ಹಾಡಿನಲ್ಲಿ!

    ಇನ್ನು ಬಾಲಿವುಡ್‌ನಲ್ಲಿ 'ಮಹಿಳಾ ಹಕ್ಕು' 'ಮಹಿಳಾ ಘನತೆ' ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ, ಟ್ವೀಟ್‌ಗಳನ್ನು ಮಾಡುವ ನಟಿಯರು ಯಾವುದೇ ಅಳುಕಿಲ್ಲದೆ ಐಟಂ ಹಾಡುಗಳಲ್ಲಿ ನರ್ತಿಸುತ್ತಾರೆ. ಕರೀನಾ ಕಪೂರ್ ನಟಿಸಿರುವ ಐಟಂ ಹಾಡೊಂದರ ಸಾಹಿತ್ಯ ಹೀಗಿದೆ; 'ನಾನಂತೂ ತಂದೂರಿ ಚಿಕನ್, ನನ್ನನ್ನು ಆಲ್ಕೋಹಾಲ್ ಜೊತೆ ಸೇರಿಸಿ ತಿಂದುಬಿಡು'. ನಾಯಕ ನಟರೂ ಕಡಿಮೆ ಇಲ್ಲ. ಹಾಡುಗಳಲ್ಲಿ ಯುವತಿಯರನ್ನು ಬಲವಂತವಾಗಿ ಹಿಡಿದು ಎಳೆದು ಕಾಟ ಕೊಟ್ಟು ನರ್ತಿಸುತ್ತಾರೆ. ಬಚ್ಚನ್ ಅವರ 'ಚುಮ್ಮಾ-ಚುಮ್ಮಾ ದೇ ದೇ ಚುಮ್ಮಾ' ನೆನಪಿರಬೇಕು.

    ನಟಿಯರನ್ನು ನಿರ್ಲಕ್ಷ್ಯ ಮಾಡುತ್ತಿರುವ ಚಿತ್ರರಂಗ: ನೀವೇನಂತೀರಿ?ನಟಿಯರನ್ನು ನಿರ್ಲಕ್ಷ್ಯ ಮಾಡುತ್ತಿರುವ ಚಿತ್ರರಂಗ: ನೀವೇನಂತೀರಿ?

    ಐಟಂ ಹಾಡಿನಲ್ಲಿ ನಟಿಸಲು ಏಕಷ್ಟು ಉತ್ಸಾಹ?

    ಐಟಂ ಹಾಡಿನಲ್ಲಿ ನಟಿಸಲು ಏಕಷ್ಟು ಉತ್ಸಾಹ?

    ಪ್ರತಿಭಾವಂತ ನಾಯಕಿ ನಟಿಯರೂ ಸಹ ಯಾವುದೇ ಹಿಂಜರಿಕೆ ಇಲ್ಲದೆ ಐಟಂ ಹಾಡಿನಲ್ಲಿ ನಟಿಸುತ್ತಾರೆ. ಐಟಂ ಹಾಡಿನಲ್ಲಿ ನರ್ತಿಸುವುದರಿಂದ ಸುಲಭಕ್ಕೆ ಹಣ ದೊರಕುತ್ತದೆ ಮತ್ತು ಶೀಘ್ರ ಜನಪ್ರಿಯತೆಯೂ ದೊರೆಯುತ್ತದೆ. ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀವ್ಸ್‌ ಸಿಕ್ಕಿರುವುದು 'ಐಟಂ ಹಾಡಿ'ನ ವಿಡಿಯೋಗಳಿಗೆ. ಟಿ-ಸೀರೀಸ್ ಯೂಟ್ಯೂಬ್‌ ಚಾನೆಲ್‌ನ ಅತಿ ಹೆಚ್ಚು ಲೈಕ್ಸ್‌ ಹಾಗೂ ವೀವ್ಸ್ ಪಡೆದ ಟಾಪ್ 5 ವಿಡಿಯೋಗಳು ಐಟಂ ಹಾಡಿನ ವಿಡಿಯೋಗಳೇ.

    'ಐಟಂ' ಪದಬಳಕೆ ತುರ್ತಾಗಿ ನಿಲ್ಲಬೇಕಿದೆ

    'ಐಟಂ' ಪದಬಳಕೆ ತುರ್ತಾಗಿ ನಿಲ್ಲಬೇಕಿದೆ

    ಐಟಂ ಹಾಡುಗಳ ಸಾಹಿತ್ಯ ಹಾಗೂ ಮಹಿಳೆಯನ್ನು ಉದ್ದೇಶಪೂರ್ವಕವಾಗಿ ಉದ್ದೀಪನಗೊಳಿಸುವಂತೆ ತೋರಿಸುವ ನಿರ್ದೇಶಕರ ಪ್ರಯತ್ನಕ್ಕೆ ಕತ್ತರಿ ಹಾಕುವ ಕಾರ್ಯವನ್ನು ಸೆನ್ಸಾರ್ ಮಂಡಳಿ ಮಾಡಬೇಕು. ಟಿವಿಗಳನ್ನು ಸಿನಿಮಾ ಪ್ರದರ್ಶಿಸುವಾಗ ಐಟಂ ಹಾಡುಗಳನ್ನು ಪ್ರದರ್ಶಿಸಲಾಗುವುದಿಲ್ಲ ಹಾಗೆಯೇ ಸಿನಿಮಾದಲ್ಲಿಯೂ ಐಟಂ ಹಾಡಿನ ಬಳಕೆ ತಗ್ಗಬೇಕು. ಮಹಿಳೆಯನ್ನು ತುಚ್ಛವಾಗಿ ಬಿಂಬಿಸುವ 'ಐಟಂ' ಪದ ಬಳಕೆ ತುರ್ತಾಗಿ ನಿಲ್ಲಬೇಕಿದೆ.

    English summary
    What is Item song is it necessary in Indian cinema. Item song is objectifying women.
    Tuesday, March 16, 2021, 7:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X