ವಿಜಯಲಕ್ಷ್ಮಿ ಕೈಲಿರೊ D ಅಕ್ಷರದ ಈ ಬ್ಯಾಗ್ ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ..!
ದರ್ಶನ್ ಅಭಿಮಾನಿಗಳ ಪಾಲಿಗಂತೂ ಈಗ ವಿಜಯಲಕ್ಷ್ಮಿ ಅಕ್ಷರಶಃ ದೇವತೆಯೇ ಆಗಿದ್ದಾರೆ. ದರ್ಶನ್ ಕಷ್ಟಕಾಲದಲ್ಲಿ ಹೆಂಡತಿಯಾಗಿ ನಿಂತ ಪರಿಗೆ, ಗಂಡನನ್ನು ಕಾಪಾಡಿಕೊಂಡ ರೀತಿಗೆ ಎಲ್ಲರೂ ಕೊಂಡಾಡುತ್ತಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಅವರನ್ನು ಹೊತ್ತು ಮೆರೆಸುತ್ತಿದ್ದಾರೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ಈಗ ಅದ್ಭುತವಾದ ಜೀವನ ನಡೆಸುತ್ತಿದ್ದಾರೆ. ಎಲ್ಲಿಗೆ ಹೋದರು ಜೊತೆಗೆ ಹೋಗ್ತಾರೆ, ಫೋಟೋ ಹಂಚಿಕೊಳ್ಳುತ್ತಾರೆ.
ಇದೆಲ್ಲವೂ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ವಿಜಯಲಕ್ಷ್ಮಿ ಆಗಲಿ, ದರ್ಶನ್ ಆಗಲಿ ಫೋಟೋ ಹಾಕ್ತಾರೋ ಬಿಡ್ತಾರೋ ಆದರೆ ಅಭಿಮಾನಿಗಳು ಮಾತ್ರ ಫೋಟೋ, ವಿಡಿಯೋಗಳನ್ನು ಸೆರೆಹಿಡಿದು ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಕ್ತಾರೆ. ಅಣ್ಣ ಅತ್ತಿಗೆಗೆ ಯಾರ ಕೆಟ್ಟ ದೃಷ್ಟಿ ಬೀಳದೆ ಇರಲೆಂದೇ ಪ್ರಾರ್ಥಿಸುತ್ತಾರೆ.

ದರ್ಶನ್ ಸದ್ಯಕ್ಕೆ ಮೋಸ್ಟ್ ಅವೈಟಿಂಗ್ ಮೂವಿ ಡೆವಿಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬೆನ್ನು ನೋವಿನ ಸಮಸ್ಯೆ ಇನ್ನು ಹಾಗೆ ಇದೆ ಅನ್ನಿಸುತ್ತೆ. ಆದರೂ ಕೊಟ್ಟಿರುವ ಕಮಿಟ್ಮೆಂಟ್‌ಗೋಸ್ಕರ ಸಿನಿಮಾದ ಶೂಟಿಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಏರ್ಪೋರ್ಟ್‌ನಲ್ಲಿ ಕಂಡಾಗಲೋ, ಇನ್ನೆಲ್ಲೋ ನೋಡಿದಾಗಲೋ ಬೆನ್ನಿನ ಮೇಲೆ ಒಂದು ಕೈ ಇದ್ದೇ ಇರುತ್ತದೆ. ಅಂದರೆ, ಇನ್ನು ಬೆನ್ನು ನೋವು ಇರಬಹುದು ಎಂಬುದನ್ನು ಅದು ತೋರಿಸುತ್ತಿದೆ.
ದರ್ಶನ್ ಕಾವಲಿಗೆ ಈಗ ಸ್ಟ್ರಾಂಗ್ ಆಗಿ ನಿಂತಿರುವುದು ವಿಜಯಲಕ್ಷ್ಮಿ. ದರ್ಶನ್ ಅವರನ್ನು ಸಂಪರ್ಕ ಮಾಡಬೇಕು ಅಂದರು ವಿಜಯಲಕ್ಷ್ಮಿ ಎಂಬ ಸೇತುವೆಯನ್ನು ದಾಟಿಯೇ ಮುಂದೆ ಸಾಗಬೇಕು. ಅವರೇ ಈಗ ದರ್ಶನ್ ಮ್ಯಾನೇಜರ್ ಎಲ್ಲ ಹೌದು. ಜೊತೆ ಜೊತೆಯಾಗಿಯೇ ಸಾಗುತ್ತಿದ್ದಾರೆ. ವಿಜಯಲಕ್ಷ್ಮಿ ದರ್ಶನ್, ಜವಾಬ್ದಾರಿಯುತ ಅಮ್ಮ, ಜವಾಬ್ದಾರಿಯುತ ಹೆಂಡತಿಯಾಗಿಯೂ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಅಷ್ಟೇ ಅಲ್ಲ ಸ್ಟೈಲ್ ಐಕಾನ್ ಕೂಡ.

ವಿಜಯಲಕ್ಷ್ಮಿ ದರ್ಶನ್ ಯಾವುದೇ ಕಾರ್ಯಕ್ರಮಗಳಿಗೆ ಹೋದಾಗಲೋ, ಪ್ರವಾಸಕ್ಕೆ ಹೋದಾಗಲೋ ಅವರು ತೊಡುವ ಉಡುಗೆಗಳು ಸಾಕಷ್ಟು ಗಮನ ಸೆಳೆಯುತ್ತವೆ. ಆದರೆ, ಅದರ ಬೆಲೆಯನ್ನು ಗಮನಿಸಿದರೆ ಮಧ್ಯಮ ವರ್ಗದವರಿಂದ ತೆಗೆದುಕೊಳ್ಳುವುದಕ್ಕೆ ಅಸಾಧ್ಯ ಬಿಡಿ. ವಿಜಯಲಕ್ಷ್ಮಿ ಹಾಕುವ ಸಿಂಪಲ್ ಡ್ರೆಸ್‌ಗಳು ಕೂಡ ಹತ್ತು ಸಾವಿರ ದಾಟುತ್ತವೆ. ಬ್ರಾಂಡೆಡ್ ಅಷ್ಟೇ ಅಲ್ಲ, ಸದಾ ದುಬಾರಿಯಾಗಿರುವ ಡ್ರೆಸ್‌ಗಳನ್ನೇ ಹಾಕಿಕೊಳ್ಳುತ್ತಾರೆ. ಜೊತೆಗೆ ನೇಲ್ ಹಾರ್ಟ್ ಅನ್ನು ಅದ್ಭುತವಾಗಿ ಮಾಡ್ತಾರೆ. ಇದೆಲ್ಲ ಹಾರೈಕೆ, ಸ್ಕಿನ್ ಕೇರ್, ನೇಲ್ ಕೇರ್ ಹೀಗೆ ಸೌಂದರ್ಯದ ದೇವತೆಯಾಗಿದ್ದಾರೆ. ಬ್ಯಾಗ್‌ಗಳ ಕಲೆಕ್ಷನ್ ಏನು ಕಡಿಮೆ ಇಲ್ಲ.
ಇತ್ತೀಚೆಗೆ ಒಂದು ಬ್ಲೂ ಕಲರ್, ತೀರಾ ಸಿಂಪಲ್ ಬ್ಯಾಗ್ ಒಂದನ್ನ ಹಿಡಿದು ಫೋಟೋ ಹಾಕಿದ್ದರು. ಎಲ್ಲರಿಗೂ ನೆನಪಿರಬಹುದು ಈ ಫೋಟೋ. ನೋಡೋಕೆ ಸಿಂಪಲ್ ಆದರೂ ಈ ಬ್ಯಾಗ್‌ನ ಬೆಲೆಯಲ್ಲಿ ಮಧ್ಯಮ ವರ್ಗದವರ ಕೈಗೆಟುಕದಷ್ಟು ಬೆಲೆಯಿದೆ. ಯಾಕಂದ್ರೆ ಅದರ ಬೆಲೆ 3 ಲಕ್ಷದ 80 ಸಾವಿರ ರೂಪಾಯಿ.
ವಿಜಯಲಕ್ಷ್ಮಿ ದರ್ಶನ್ ಬಳಿ ಇರುವ Dior ಬ್ರಾಂಡ್ ಬ್ಯಾಗ್ ಆಗಿದೆ. ಬ್ಯಾಗ್ ಮೇಲೆ D ಅಂತ ಇರೋದು ಅಭಿಮಾನಿಗಳಿಗಂತು ಇನ್ನಿಲ್ಲದ ಖುಷಿ ಕೊಟ್ಟಿದೆ. ಮತ್ತೊಂದು ವಿಶೇಷತೆ ಅಂದ್ರೆ ದರ್ಶನ್ ಅವರು ಇಂದು ಹಾಕಿದ್ದ ರೆಡ್ ಕಲರ್ ಟೀ ಶರ್ಟ್ ಬಗ್ಗೆ. ನಿಮ್ಗೆಲ್ಲಾ ಗೊತ್ತಿರುವಂತೆ ದರ್ಶನ್ ಅವರು ಕೂಡ ಬ್ರಾಂಡೆಂಡ್ ಅಂಡ್ ದುಬಾರಿ ಬಟ್ಟೆಗಳನ್ನೇ ಹಾಕುವುದು. ಇಂದು ಧರಿಸಿದ್ದ ಟೀ ಶರ್ಟ್ ಮಾತ್ರ ಅವರ ಅಭಿಮಾನಿಗಳು ಕೂಡ ಈಸಿಯಾಗಿ ತೆಗೆದುಕೊಳ್ಳಬಹುದು. ಅಂದ್ರೆ ಡೆವಿಲ್ ಸಿನಿಮಾ ಮುಗಿಸಿ, ಬರುವಾಗ ಏರ್ಪೋರ್ಟ್ ನಲ್ಲಿ ಕವರ್ ಆದಂತ ದೃಶ್ಯದಲ್ಲಿ ದರ್ಶನ್ ಹಾಕಿದ್ದ ಡ್ರೆಸ್ ಬೆಲೆ ಕೂಡ ದುಬಾರಿಯಿದೆ.


Click it and Unblock the Notifications











