twitter
    For Quick Alerts
    ALLOW NOTIFICATIONS  
    For Daily Alerts

    ಡಾ ರಾಜ್ ಬಿಡುಗಡೆ ಅಂತಿಮ ಕ್ಷಣದಲ್ಲಿ ಸಹಾಯಕ್ಕೆ ಬಂದ ವೈದ್ಯೆ ಯಾರು?

    |

    ಡಾ ರಾಜ್ ಕುಮಾರ್ ಅವರನ್ನು ಕಿಡ್ನಾಪ್ ಮಾಡಿದ್ದ ವೀರಪ್ಪನ್ ಅಂದಿನ ಸರ್ಕಾರದ ಮುಂದೆ ಹಲವು ಬೇಡಿಕೆ ಇಟ್ಟಿದ್ದನು. ಇದರಲ್ಲಿ ಹಣವೂ ಸೇರಿತ್ತು. ಈ ಕುರಿತು ಎಲ್ಲಿಯೂ ಸ್ಪಷ್ಟ ಮಾಹಿತಿ ಇರಲಿಲ್ಲ. ಇದೀಗ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಬರೆದಿರುವ 'ಸ್ಮೃತಿವಾಹಿನಿ' ಆತ್ಮಕಥೆಯಲ್ಲಿ ಆಪರೇಷನ್ ಅಣ್ಣಾವ್ರು ಬಗ್ಗೆ ಪೂರ್ತಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

    ಎಸ್ ಎಂ ಕೃಷ್ಣ ಆತ್ಮಕಥೆಯಲ್ಲಿ ಡಾ ರಾಜ್ ಕಿಡ್ನಾಪ್ ಪ್ರಕರಣದ ರೋಚಕ ಕಥೆ ಬಹಿರಂಗ ಎಸ್ ಎಂ ಕೃಷ್ಣ ಆತ್ಮಕಥೆಯಲ್ಲಿ ಡಾ ರಾಜ್ ಕಿಡ್ನಾಪ್ ಪ್ರಕರಣದ ರೋಚಕ ಕಥೆ ಬಹಿರಂಗ

    ಈಗಾಗಲೇ ರಾಜ್ ಕುಮಾರ್ ಅಪಹರಣದ ಕುರಿತು ಫಿಲ್ಮಿಬೀಟ್ ಕನ್ನಡದಲ್ಲಿ ಎರಡು ಸ್ಟೋರಿ ಪ್ರಕಟವಾಗಿದೆ. ಈಗ ಮೂರನೇ ಸ್ಟೋರಿ ಇದಾಗಿದ್ದು, ಕಥೆ ಮುಂದುವರಿದಿದೆ. ವೀರಪ್ಪನ್ನಿಂದ ತಪ್ಪಿಸಿಕೊಂಡು ಬಂದ ಆ ವ್ಯಕ್ತಿ ಯಾರು? ಆ ವ್ಯಕ್ತಿ ನೀಡಿದ ಸುಳಿವು ಏನು? ಮುಂದಿನ ಸ್ಲೈಡ್ ಗಳಲ್ಲಿ ತಿಳಿಸಿ....

    ವೀರಪ್ಪನ್ನಿಂದ ತಪ್ಪಿಸಿಕೊಂಡು ಆ ಬಂದ ವ್ಯಕ್ತಿ ನಾಗಪ್ಪ

    ವೀರಪ್ಪನ್ನಿಂದ ತಪ್ಪಿಸಿಕೊಂಡು ಆ ಬಂದ ವ್ಯಕ್ತಿ ನಾಗಪ್ಪ

    ಒಮ್ಮೆ ನಮ್ಮ ಪೊಲೀಸ್ ಡಿ . ಜಿ . ಯವರು ಒಬ್ಬರನ್ನು ಹಿಡಿದುಕೊಂಡು ಬಂದರು ಅವನೇ ನಾಗಪ್ಪ ಮಾರಡಗಿ, ರಾಜಕುಮಾರ್ ಕರೆದುಕೊಂಡು ಹೋಗಿದ್ದ ಇಬ್ಬರಲ್ಲಿ ಅವನೊಬ್ಬ, ಸಹಾಯಕ ನಿರ್ದೇಶಕ, ವೀರಪ್ಪನ್ ಜೊತೆ ಜಗಳ ಮಾಡಿ ರಾತ್ರೋರಾತ್ರಿ ತಪ್ಪಿಸಿಕೊಂಡು ಬಂದುಬಿಟ್ಟಿದ್ದ. ಅವನು ಒಂದಿಷ್ಟು ವಿಚಾರಗಳನ್ನು ಹೇಳಿದ. ವಿಶೇಷವಾಗಿ ಪ್ರತಿನಿತ್ಯ ವೀರಪ್ಪನ್ ತನ್ನ ತಾಣಗಳನ್ನು ಬದಲಾಯಿಸುತ್ತಾನೆ. ಮಾಂಸಾಹಾರ ಬಿಟ್ಟು ಏನೂ ಊಟಕ್ಕೆ ದೊರೆಯುವುದಿಲ್ಲ. ಪ್ರತಿನಿತ್ಯ ನಡೆಯಬೇಕು. ವಯಸ್ಸಾದವರು ಅವನ ಜೊತೆಗಿರುವುದು ಕಷ್ಟ ಎಂದೆಲ್ಲಾ ಹೇಳಿದ.

    50 ಕೋಟಿ ಬೇಡಿಕೆಯಿಟ್ಟಿದ್ದ ವೀರಪ್ಪನ್

    50 ಕೋಟಿ ಬೇಡಿಕೆಯಿಟ್ಟಿದ್ದ ವೀರಪ್ಪನ್

    ವೀರಪನ್ ತನ್ನ ಸಹಚರರು ಬೆಂಗಳೂರು ಜೈಲಿನಲ್ಲಿದ್ದಾರೆ ಅವರನ್ನು ಬಿಡಿ ಅಂತಹ ಕಂಡೀಶನ್ ಹಾಕಿದ. ಅವರಲ್ಲಿ ಅನೇಕರು ಅರಣ್ಯಾಧಿಕಾರಿ ಶ್ರೀನಿವಾಸನ್ ಹತ್ಯೆಯಲ್ಲಿ ಶಾಮೀಲು ಆಗಿದ್ದವರು, ಅವರುಗಳನ್ನು ಬಿಡಲಿಕ್ಕೆ ನ್ಯಾಯಾಲಯ ಹೇಗೆ ಸಮ್ಮತಿಸುತ್ತಿತ್ತು ? ಈ ಮಧ್ಯೆ ಐವತ್ತು ಕೋಟಿ ರೂ ಕೊಡಿ ಅಂತ ಕೇಳಿದ್ದ, ರಾಜಕುಮಾರ್ ಅಪಹರಣಕ್ಕೆ ಸಂಬಂಧಪಡದ ಅನೇಕ ವಿಚಾರಗಳನ್ನು ಆತ ಪ್ರಸ್ತಾಪಿಸಿದ ಸರ್ಕಾರದ ಹಣ ಹಾಗೆ ಕೊಡಲಿಕ್ಕೆ ಬರುತ್ತದೆಯೇ? ಅವನು ಹೇಳಿದಂತೆ ಬೈದಿಗಳಿಗೆ ಪುನರ್‌ವಸತಿ ಕಲ್ಪಿಸಿಕೊಡುವುದಕ್ಕೆ ಸರ್ಕಾರ ಸಿದ್ಧವಿತ್ತು. ಆದರೆ ಆತ ಹಠಮಾರಿ ಧೋರಣೆಯನ್ನು ಪ್ರದರ್ಶಿಸುತ್ತಿದ್ದ. ಆದರೆ ಸರ್ಕಾರ ಮತ್ತೆ ಮತ್ತೆ ತನ್ನ ಪ್ರಯತ್ನವನ್ನು ಹತ್ತಾರು ಕಡೆಯಿಂದ ಮಾಡುತ್ತಿತ್ತು.

    ಎಸ್ ಎಂ ಕೃಷ್ಣಗೆ ಕರೆ ಮಾಡಿದ್ದ ವೀರಪ್ಪನ್ ಕೊಟ್ಟ ಎಚ್ಚರಿಕೆ ಏನಾಗಿತ್ತು?ಎಸ್ ಎಂ ಕೃಷ್ಣಗೆ ಕರೆ ಮಾಡಿದ್ದ ವೀರಪ್ಪನ್ ಕೊಟ್ಟ ಎಚ್ಚರಿಕೆ ಏನಾಗಿತ್ತು?

    ಒಂದು ಪ್ರಸಂಗವನ್ನು ಜ್ಞಾಪಿಸಿಕೊಳ್ಳಬೇಕು

    ಒಂದು ಪ್ರಸಂಗವನ್ನು ಜ್ಞಾಪಿಸಿಕೊಳ್ಳಬೇಕು

    ಈ ಮಧ್ಯೆ ಒಂದು ಪ್ರಸಂಗವನ್ನು ಜ್ಞಾಪಿಸಿಕೊಳ್ಳಬೇಕು. ಬೆಂಗಳೂರಿನಿಂದ ಯಾವುದೋ ಮಾರ್ವಾಡಿಯನ್ನ ಯಾರೋ ಕಿಡ್ನಾಪ್ ಮಾಡಿದರು. ತಕ್ಷಣ ಅದೊಂದು ದೊಡ್ಡ ಸುದ್ದಿಯಾಯಿತು. ರಾತ್ರಿ ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ಫೋನ್ ಮಾಡಿ " ಏನು ಕರ್ನಾಟಕದಲ್ಲಿ ಲಾ ಅಂಡ್ ಆರ್ಡರ್ ಗೆ ಅಷ್ಟೊಂದು ಸಮಸ್ಯೆ ಬಂದಿದೆಯಲ್ಲ. ಮಾರ್ವಾಡಿಯನ್ನ ಹಾಡುಹಗಲೇ ಅಂದರೆ ಎಲ್ಲರು ಓಡಾಡುತ್ತಿರುವಾಗ ಎತ್ತಿಕೊಂಡು ಹೋಗಬೇಕಾದರೆ , ನೀವೇನು ಕೆಲಸ ಮಾಡುತ್ತಿದ್ದೀರಾ ' ಎಂದು ತುಂಬಾ ನಿಷ್ಠುರವಾಗಿಯೇ ಮಾತನಾಡಿದರು. ಸೋನಿಯಾ ಗಾಂಧಿ ಅವರು ಮಾರ್ವಾಡಿಯನ್ನು ವೀರಪ್ಪನ್ ಎತ್ತಿಕೊಂಡು ಹೋಗಿದ್ದಾನೆ ಅಂಥ ಭಾವಿಸಿಕೊಂಡಿದ್ದರು. ಎರಡು ದಿನಗಳಲ್ಲಿ ಮಾರ್ವಾಡಿಯನ್ನು ಕರೆದುಕೊಂಡು ಬರಲಾಯಿತು. ಅದನ್ನು ಅವರಿಗೆ ತಿಳಿಸಿದೆ.

    ರಾಜ್ ಕುಮಾರ್ಗೆ ಮೊದಲೇ ಎಚ್ಚರಿಕೆ ಕೊಡಲಾಗಿತ್ತು

    ರಾಜ್ ಕುಮಾರ್ಗೆ ಮೊದಲೇ ಎಚ್ಚರಿಕೆ ಕೊಡಲಾಗಿತ್ತು

    ಡಾ. ರಾಜಕುಮಾರ್‌ರವರ ಊರು ಗಾಜನೂರು, ತಮಿಳುನಾಡು ವ್ಯಾಪ್ತಿಗೆ ಬರುತ್ತದೆ . ಡಾ. ರಾಜಕುಮಾರ್‌ರವರಿಗೆ ಎರಡು ತಿಂಗಳ ಮುಂಚೆ ನಮ್ಮ ಗೃಹ ಇಲಾಖೆ ಅವರು 'ನೀವು ನಿಮ್ಮ ಊರಿಗೆ ಹೋಗಬೇಕಾದರೆ ತಿಳಿಸಬೇಕು ' ಎಂಬ ಸೂಚನೆ ಕೊಟ್ಟಿದ್ದರು. ಇದು ನಮ್ಮ ಪೊಲೀಸರು ತೆಗೆದುಕೊಂಡ ಮುಂಜಾಗೃತ ಕ್ರಮ. ಅವರು ಅದನ್ನು ತುಂಬಾ ತಾತ್ಸಾರ ಮಾಡಿ 'ನನಗೇನು ಮಾಡುತ್ತಾನೆ ' ಅಂದುಕೊಂಡಿದ್ದರು.

    ಎಲ್ಲವನ್ನೂ ಮುಖ್ಯಮಂತ್ರಿ ಹ್ಯಾಂಡಲ್ ಮಾಡಬೇಕಿತ್ತು

    ಎಲ್ಲವನ್ನೂ ಮುಖ್ಯಮಂತ್ರಿ ಹ್ಯಾಂಡಲ್ ಮಾಡಬೇಕಿತ್ತು

    ರಾಜಕುಮಾರ್‌ ಅಪಹರಣ ಕೇಸು ತಮಿಳುನಾಡಿನಲ್ಲಿ ನೋಂದಣಿಯಾಗಿದ್ದರೂ, ಮುಖ್ಯಮಂತ್ರಿ ಕರುಣನಿಧಿ ಬಿಟ್ಟರೆ ಬೇರೆಯವರು ತಲೆಕೆಡಿಸಿಕೊಳ್ಳಲಿಲ್ಲ. ಕರ್ನಾಟಕ ರಾಜ್ಯಕ್ಕೆ ರಾಜ್ ಕುಮಾರ್ ಅಪಹರಣ ತುಂಬಾ ಪ್ರಮುಖವಾದ ವಿಚಾರ. ಪತ್ರಿಕೆಗಳು, ಸುದ್ದಿವಾಹಿನಿಗಳು, ಜನರ ಪ್ರತಿಭಟನೆಗಳು, ವಿರೋಧಪಕ್ಷದವರು, ಆಡಳಿತಪಕ್ಷದವರು ಹೀಗೆ ಮುಖ್ಯಮಂತ್ರಿ ಒಬ್ಬರೇ ಎಲ್ಲರನ್ನು ಹ್ಯಾಂಡಲ್ ಮಾಡಬೇಕಿತ್ತು. ವಿರೋಧಪಕ್ಷ ನಾಯಕರ ಸಭೆಯನ್ನು ಐದಾರುಸಾರಿ ಕರೆದೆ, ಅವರ ಅಭಿಪ್ರಾಯವನ್ನು ತೆಗೆದುಕೊಂಡು ಮುನ್ನಡೆದೆ. ನನ್ನ ವ್ಯಕ್ತಿತ್ವದ ಭಾಗವಾಗಿರುವ ಸಂಯಮ, ಮೌನ . ಮೇಲೆ ಹಾಗೆಯೇ ನೋವನ್ನು ನುಂಗಿಕೊಳ್ಳುವುದು ಈ ಸಂದರ್ಭದಲ್ಲಿ ನನ್ನನು. ಕಾಪಾಡಿದವು. ಎಂತಹುದೇ ಮಾತಿಗೂ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ.

    ಅಳಿಯನ ಮೂಲಕ ದುಡ್ಡು ಕಳಿಸಿದ ಆರೋಪ

    ಅಳಿಯನ ಮೂಲಕ ದುಡ್ಡು ಕಳಿಸಿದ ಆರೋಪ

    ಆಮೇಲೆ ನನ್ನಿಂದ ಉಪಕೃತರಾದ ನಿವೃತ್ತ ಡಿಐಜಿಯೊಬ್ಬ ಪುಸ್ತಕ ಬರೆದು ರಾಜ ಕುಮಾರ್‌ ಅಪಹರಣದಲ್ಲಿ ಕೃಷ್ಣರವರು ಅಳಿಯನ ಮೂಲಕ ವೀರಪ್ಪನ್ ಗೆ ಹಣ ಕಳುಹಿಸಿದ್ದಾರೆ ಎಂದೆಲ್ಲಾ ಪ್ರಚಾರ ಮಾಡಿದರು. ಈ ಬಗ್ಗೆ ಅವನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ಕೋಟ್ಯಂತರ ರೂ ಗಳನ್ನು ಕಾಡಿಗೆ ಕಳುಹಿಸಲು ಹೇಗೆ ಸಾಧ್ಯ ಎಂಬ ಸಾಮಾನ್ಯ ಜ್ಞಾನ ಕೂಡ ಹಿರಿಯ ಐಪಿಎಸ್ ಅಧಿಕಾರಿಗೆ ಇಲ್ಲದೇ ಇದ್ದರೆ ಏನು ಮಾಡುವುದು.

    ಸಹಾಯ ಬಂದ ಮಹಿಳೆ ವೈದ್ಯೆ

    ಸಹಾಯ ಬಂದ ಮಹಿಳೆ ವೈದ್ಯೆ

    ವೀರಪ್ಪನ್ ಸ್ಥಳೀಯ ಜನರಿಗೆ ಅಂದರೆ ಗೋಪಿನಾಥಂ ಮೊದಲಾದ ಸ್ಥಳಗಳ ಜನರಿಗೆ ಒಂದಿಷ್ಟು ಸಹಾಯ ಮಾಡಿ ಅವರುಗಳನ್ನು ಒಲಿಸಿಕೊಂಡುಬಿಟ್ಟಿದೆ. ಹೀಗಾಗಿ ಅವನನ್ನು ಹಿಡಿಯುವುದು ತುಂಬಾ ಕಷ್ಟವಿತ್ತು. ಕರ್ನಾಟಕದಲ್ಲಿ ಪೊಲೀಸರಿಂದ ಇನ್ನೆಸ್ಟಿಗೇಶನ್ ( Investigation ) ವೇಗ ಹೆಚ್ಚಾಗಿದ್ದರೆ ತಮಿಳುನಾಡಿಗೆ ಹೋಗುತ್ತಿದೆ, ತಮಿಳುನಾಡಿನಲ್ಲಿ ಇನ್ವೆಸ್ಟಿಗೇಶನ್ ವೇಗ ಹೆಚ್ಚಾಗಿದ್ದರೆ ಕರ್ನಾಟಕಕ್ಕೆ ಬರುತ್ತಿದ್ದ ಪೊಲೀಸ್ ಮತ್ತು ಅರಣ್ಯ ಇಲಾಖೆಗಳಿಗೆ ಬಹಳ ದಿನಗಳಿಂದ ಚಳ್ಳೆಹಣ್ಣು ತಿನ್ನಿಸಿದ ಈ ಸಂದರ್ಭದಲ್ಲಿ ವೈದ್ಯೆಯೊಬ್ಬಳು ಸಹಾಯ ಮಾಡಿದರು.

    ಯಾರು ಆ ವೈದ್ಯೆ?

    ಯಾರು ಆ ವೈದ್ಯೆ?

    ಅಣ್ಣಾವ್ರನ್ನು ವೀರಪ್ಪನ್ನಿಂದ ಬಿಡಿಸಲು ಮಹಿಳೆ ವೈದ್ಯೆಯೊಬ್ಬರು ಸಹಾಯ ಮಾಡಿದರು. ಯಾರು ಆಕೆ? ವೀರಪ್ಪನ್ ಗೂ ಆಕೆಗೂ ಏನು ಸಂಬಂಧ ಎಂಬುದನ್ನು ಮುಂದಿನ ಎಪಿಸೋಡ್ನಲ್ಲಿ ಹೇಳುತ್ತೇವೆ?

    ಈ ಹಿಂದಿನ ಸ್ಟೋರಿ ಓದಲು ಈ ಕೆಳಗಿನ ಲಿಂಕ್ ಗಳನ್ನು ಕ್ಲಿಕ್ ಮಾಡಿ....

    ಎಸ್ ಎಂ ಕೃಷ್ಣಗೆ ಕರೆ ಮಾಡಿದ್ದ ವೀರಪ್ಪನ್ ಕೊಟ್ಟ ಎಚ್ಚರಿಕೆ ಏನಾಗಿತ್ತು?ಎಸ್ ಎಂ ಕೃಷ್ಣಗೆ ಕರೆ ಮಾಡಿದ್ದ ವೀರಪ್ಪನ್ ಕೊಟ್ಟ ಎಚ್ಚರಿಕೆ ಏನಾಗಿತ್ತು?

    ಎಸ್ ಎಂ ಕೃಷ್ಣ ಆತ್ಮಕಥೆಯಲ್ಲಿ ಡಾ ರಾಜ್ ಕಿಡ್ನಾಪ್ ಪ್ರಕರಣದ ರೋಚಕ ಕಥೆ ಬಹಿರಂಗ

    English summary
    Karnataka Ex chief minister SM Krishna Wrote his own biography and he revealed Dr Rajkumar kidnap incident in this book.
    Monday, January 6, 2020, 13:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X