twitter
    For Quick Alerts
    ALLOW NOTIFICATIONS  
    For Daily Alerts

    ಮದ್ರಾಸ್‌ ರೈಲ್ವೆ ಸ್ಟೇಷನ್‌ನಲ್ಲಿ ರಜನಿಕಾಂತ್‌ಗೆ ಅಡ್ಡ ಹಾಕಿದ್ದು ಯಾರು? ಏಕೆ?

    |

    1975ರಲ್ಲಿ ತೆರೆಕಂಡ 'ಅಪೂರ್ವ ರಾಗಂಗಳ್' ಚಿತ್ರದ ಮೂಲಕ ರಜನಿಕಾಂತ್ ಮೊದಲ ಸಲ ಸಿನಿಮಾದಲ್ಲಿ ನಟಿಸಿದರು. ಎಲ್ಲರಿಗೂ ತಿಳಿದಿರುವಂತೆ ರಜನಿಕಾಂತ್ ಚಿತ್ರರಂಗಕ್ಕೆ ಬರುವ ಮೊದಲು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದರು. ಕಂಡಕ್ಟರ್ ಕೆಲಸ ಬಿಟ್ಟು ನಟನೆ ಮೇಲೆ ಆಸಕ್ತಿ ಬೆಳಸಿಕೊಂಡ ಶಿವಾಜಿ ಮದ್ರಾಸ್‌ಗೆ ತೆರಳಿದರು.

    ನಂತರ ದಿಗ್ಗಜ ನಿರ್ದೇಶಕ ಬಾಲಚಂದಿರ್ ಪರಿಚಯ ಆಯ್ತು. ರಜನಿ ಮೇಲಿನ ನಂಬಿಕೆಯಿಂದ 'ಅಪೂರ್ವ ರಾಗಂಗಳ್' ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ನಟಿಸಲು ಅವಕಾಶ ಮಾಡಿಕೊಟ್ಟರು. ಇಲ್ಲಿಂದ ಆರಂಭವಾದ ರಜನಿ ದರ್ಬಾರ್ 4 ದಶಕಗಳಿಗೂ ಹೆಚ್ಚು ಸಮಯ ರಜನಿಯನ್ನು ಕಾಪಾಡಿದೆ.

    'ಪಡೆಯಪ್ಪಾ' ಪ್ರದರ್ಶನ ವೇಳೆ ರಮ್ಯಾ ಕೃಷ್ಣನ್ ಮೇಲೆ ಚಪ್ಪಲಿ ಎಸೆದಿದ್ದರಂತೆ'ಪಡೆಯಪ್ಪಾ' ಪ್ರದರ್ಶನ ವೇಳೆ ರಮ್ಯಾ ಕೃಷ್ಣನ್ ಮೇಲೆ ಚಪ್ಪಲಿ ಎಸೆದಿದ್ದರಂತೆ

    ಬೆಂಗಳೂರಿನಲ್ಲಿದ್ದ ಶಿವಾಜಿ ಮದ್ರಾಸ್‌ಗೆ ಹೋದರು ಎಂದು ಗೊತ್ತು. ಆದರೆ. ಸಿಲಿಕಾನ್ ಸಿಟಿಯಿಂದ ಮದ್ರಾಸ್‌ಗೆ ರಜನಿಕಾಂತ್ ಹೋಗಿದ್ದು ಹೇಗೆ, ತಮಿಳರ ನೆಲದಲ್ಲಿ ಹೋಗಿ ಇಳಿದ ಕ್ಷಣದಲ್ಲೇ ರಜನಿಗೆ ಎದುರಾದ ಸಂಕಷ್ಟವೇನು ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಈ ಕುರಿತು ಸ್ವತಃ ರಜನಿ ವೇದಿಕೆಯೊಂದರಲ್ಲಿ ಹೇಳಿಕೊಂಡಿದ್ದರು. ಮುಂದೆ ಓದಿ...

    ಪರೀಕ್ಷೆ ಶುಲ್ಕ ಕಟ್ಟು ಅಂತ ದುಡ್ಡ ಕೊಟ್ಟ ಅಣ್ಣ

    ಪರೀಕ್ಷೆ ಶುಲ್ಕ ಕಟ್ಟು ಅಂತ ದುಡ್ಡ ಕೊಟ್ಟ ಅಣ್ಣ

    ಎಸ್‌ಎಸ್‌ಎಲ್‌ಸಿ ಮುಗಿದ ಮೇಲೆ ರಜನಿಗೆ ಓದಿನ ಮೇಲೆ ಆಸಕ್ತಿಯೇ ಇರಲಿಲ್ಲ. ಓದುವುದು ಬಿಟ್ಟು ಬೇರೆ ಏನಾದರೂ ಮಾಡ್ತಿನಿ ಎಂದು ಮನೆಯಲ್ಲಿ ಹೇಳಿದರು ಇಲ್ಲ ಓದಲೇಬೇಕು ಎಂದು ಒತ್ತಡ ಹಾಕಿ ಪ್ರತಿಷ್ಠಿತ ಸಂಸ್ಥೆಯಲ್ಲಿ ಓದಿಸುತ್ತಿದ್ದರು. ಪರೀಕ್ಷೆ ಸಮಯ ಬಂತು. ಪರೀಕ್ಷೆ ಶುಲ್ಕ ಕಟ್ಟು ಅಂತ ನಮ್ಮಣ್ಣ ಬಹಳ ಕಷ್ಟ ಪಟ್ಟು 120 ರೂಪಾಯಿ ತಂದು ಕೊಟ್ಟರು. ಆದರೆ, ಪರೀಕ್ಷೆ ಶುಲ್ಕ ಕಟ್ಟದೆ ಬೆಂಗಳೂರು ಬಿಟ್ಟು ಬಂದೆ ಎಂದು ರಜನಿ ನೆನಪಿಸಿಕೊಂಡಿದ್ದರು.

    ಬರೆದರೂ ಪಾಸ್ ಆಗಲ್ಲ

    ಬರೆದರೂ ಪಾಸ್ ಆಗಲ್ಲ

    ಅಣ್ಣ ಕಷ್ಟ ಪಟ್ಟು ದುಡ್ಡು ತಂದುಕೊಟ್ಟರು. ನಾನು ಪರೀಕ್ಷೆ ಬರೆದರೂ ಪಾಸ್ ಆಗಲ್ಲ. ಸುಮ್ನೆ ಹಣ ಕಟ್ಟಿ ವ್ಯರ್ಥ ಮಾಡುವುದು ಏಕೆ ಅಂತ ಕಟ್ಟಲಿಲ್ಲ. ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ. ರಾತ್ರಿ ಊಟ ಮಾಡಿ ನೇರವಾಗಿ ಬೆಂಗಳೂರು ರೈಲ್ವೆ ಸ್ಟೇಷನ್‌ಗೆ ಹೋದೆ. ಅಲ್ಲಿ ರೈಲು ಒಂದು ನಿಂತಿತ್ತು. ಅದು ಮದ್ರಾಸ್‌ಗೆ ಹೋಗುತ್ತದೆ ಎಂದು ಅಲ್ಲೊಬ್ಬರು ಹೇಳಿದರು. ಸರಿ ಅಂತ ಟಿಕೆಟ್ ತಗೊಂಡು ರೈಲು ಹತ್ತಿದೆ. ಬೆಳಗ್ಗೆ ಮದ್ರಾಸ್‌ ತಲುಪಿದೆ ಎಂದು ಘಟನೆ ಸ್ಮರಿಸಿದರು.

    1000 ರೂಪಾಯಿಗಾಗಿ ದೊಡ್ಡ ಅವಮಾನ: ಎವಿಎಂ ಸ್ಟುಡಿಯೋ ಕಹಿ ಘಟನೆ ಬಿಚ್ಚಿಟ್ಟ ರಜನಿಕಾಂತ್1000 ರೂಪಾಯಿಗಾಗಿ ದೊಡ್ಡ ಅವಮಾನ: ಎವಿಎಂ ಸ್ಟುಡಿಯೋ ಕಹಿ ಘಟನೆ ಬಿಚ್ಚಿಟ್ಟ ರಜನಿಕಾಂತ್

    ಟಿಕೆಟ್ ಇಲ್ಲ, ಟಿಸಿ ಬಿಡ್ತಿಲ್ಲ

    ಟಿಕೆಟ್ ಇಲ್ಲ, ಟಿಸಿ ಬಿಡ್ತಿಲ್ಲ

    ಬೆಳಗ್ಗೆ ಮದ್ರಾಸ್‌ಗೆ ಬಂದು ತಲುಪಿದೆ. ಟಿಸಿ (ಟಿಕೆಟ್ ಕಲೆಕ್ಟರ್) ಟಿಕೆಟ್ ಪರೀಕ್ಷೆ ಮಾಡ್ತಿದ್ದಾರೆ, ನನ್ನ ಹತ್ರ ಟಿಕೆಟ್ ಕಳೆದು ಹೋಗಿದೆ. ಆಮೇಲೆ ಟಿಸಿ (ಟಿಕೆಟ್ ಕಲೆಕ್ಟರ್) ಬಳಿ ''ಸರ್, ಟಿಕೆಟ್ ತಗೊಂಡೆ, ಆದರೆ ಕಳೆದು ಹೋಗಿದೆ'' ಅಂತ ಕನ್ನಡದಲ್ಲಿ ಹೇಳ್ತಿದ್ದೀನಿ, ನೀನು ಪಕ್ಕಕ್ಕೆ ನಿಲ್ಲು ಅಂತ ನಿಲ್ಲಿಸಿದರು. ಫ್ಲಾಟ್‌ಫಾರಂನಲ್ಲಿ ಎಲ್ಲರೂ ಹೋದರು. ನಾಲ್ಕೈದು ಮಂದಿ ಕೆಲಸ ಮಾಡುವವರು ಬಿಟ್ಟು ಬೇರೆ ಯಾರು ಇಲ್ಲ. ಅಮೇಲೆ ನನ್ನ ಕರೆದು 'ಟಿಕೆಟ್ ತಗೊಂಡಿಲ್ಲ ಫೈನ್ ಕಟ್ಟು' ಎಂದರು. 'ಇಲ್ಲ ನಾನು ಟಿಕೆಟ್ ತಗೊಂಡೆ, ಆದರೆ ಮಿಸ್ ಆಗಿದೆ' ಎಷ್ಟೇ ಕೇಳಿಕೊಂಡರು ಅವರು ಬಿಟ್ಟಿಲ್ಲ.

    ನಂಬಿಕೆ ಬಂದ್ಮೇಲೆ ಬಿಟ್ಟರು

    ನಂಬಿಕೆ ಬಂದ್ಮೇಲೆ ಬಿಟ್ಟರು

    ಕೆಲಸದವರು ನನ್ನ ಸಹಾಯಕ್ಕೆ ಬಂದರು. ಅವರ ಮುಖ ನೋಡಿದ್ರೆ ಸುಳ್ಳು ಹೇಳುವಂತಿಲ್ಲ. ನಿಮಗೇನು ಫೈನ್ ಬೇಕಾ ನಾವೇ ಕೊಡ್ತಿವಿ ಅಂತ ದುಡ್ಡು ತೆಗೆದರು. ಆ ಸಮಯದಲ್ಲಿ, ನನ್ನ ಬಳಿಯೂ ದುಡ್ಡಿದೆ, ಆದರೆ ನಾನು ಟಿಕೆಟ್ ತಗೊಂಡೆ, ಕಳೆದುಹೋಗಿದೆ ಅಂತ ದುಡ್ಡು ತೋರಿಸಿದೆ. ನನ್ನ ಬಳಿ ದುಡ್ಡು ನೋಡಿದ್ಮೇಲೆ ಆ ಟಿಸಿ, ಈಗ ನಿನ್ನ ನಂಬ್ತೀನಿ ಅಂತ ಕಳುಹಿಸಿಕೊಟ್ಟರು.

    Recommended Video

    ಕನ್ನಡದ ಇತಿಹಾಸ ಹೇಳಿ ಕನ್ನಡಿಗರ ಮನಗೆದ್ದ ಚೈತ್ರ | Filmibeat Kannada
    ನಂಬಿಕೆ ಉಳಿಸಿಕೊಂಡಿದ್ದೇನೆ

    ನಂಬಿಕೆ ಉಳಿಸಿಕೊಂಡಿದ್ದೇನೆ

    ''ಆವತ್ತು ನನ್ನನ್ನು ನಂಬಿ ಟಿಸಿ ತಮಿಳುನಾಡಿನ ಒಳಗೆ ಪ್ರವೇಶಿಸಲು ಅವಕಾಶಕೊಟ್ಟರು. ಆಮೇಲೆ ಬಾಲಚಂದಿರ್ ಸರ್ ನನ್ನ ಮೇಲೆ ನಂಬಿಕೆ ಇಟ್ಟು ಸಿನಿಮಾ ಕೊಟ್ಟರು. ಅದಾದ ಮೇಲೆ ನನ್ನ ಜೊತೆ ಸಿನಿಮಾ ಮಾಡಿದ್ರೆ ನಷ್ಟ ಅಗಲ್ಲ ಎಂಬ ನಂಬಿಕೆಯಿಂದ 120ಕ್ಕೂ ಹೆಚ್ಚು ನಿರ್ಮಾಪಕರು ಸಿನಿಮಾ ಮಾಡಿದ್ರು. ಅವರೆಲ್ಲರ ನಂಬಿಕೆಯನ್ನು ನಾನು ಉಳಿಸಿಕೊಂಡಿದ್ದೇನೆ. ನಿಮ್ಮ ನಂಬಿಕೆಗೆ ನಾನು ಎಂದಿಗೂ ಮೋಸ ಮಾಡಲ್ಲ'' ಎಂದು ರಜನಿ ವೇದಿಕೆಯಲ್ಲಿ ಮಾತನಾಡಿದ್ದರು.

    English summary
    What Problems Rajnikanth faced when he went to Madras from Bengaluru for the first time?.
    Friday, June 4, 2021, 13:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X