ದಾವೂದ್ ಇಬ್ರಾಹಿಂಗೂ ಬಾಲಿವುಡ್‌ಗೂ ಸಂಬಂಧವೇನು? ಆತ ಪ್ರೇಮಿಸಿದ ಬೆಡಗಿಯರು ಯಾರು?
ಬಾಲಿವುಡ್ ಎಂದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಾಗುವುದು ಅಲ್ಲಿನ ಅನೈತಿಕ ಸಂಬಂಧಗಳು, ವಿಚ್ಛೇದನದ ಸುದ್ದಿಗಳು, ಡ್ರಗ್ಸ್ ಮಾಫಿಯಾ ಮತ್ತು ನೆಪೊಟಿಸಂ ಕಾರಣಗಳಿಂದಾಗಿ!
ಇವಕ್ಕಿಂತ ದೊಡ್ಡದಾದ ಕರಾಳ ಮುಖವನ್ನು ಬಾಲಿವುಡ್ಡಿಗೆ ಇದೆ, ಅದೇ ಅಂಡರ್ ವರ್ಲ್ಡ್ ಸಂಪರ್ಕ.ಎಪ್ಪತ್ತು ಎಂಬತ್ತರ ದಶಕದಲ್ಲಿ ಬಾಂಬೆ ನಟೋರಿಯಸ್ ಕ್ರಿಮಿನಲ್ ಹಾಜಿ ಮಸ್ತಾನ್ ಅಕ್ಷರಶಃ ಬಾಲಿವುಡ್ ಪಾಲಿಗೆ ಫೈನಾನ್ಸ್ ಮಾಡುತ್ತಿದ್ದ, ಅವನ ಮುಂದೆ ಬಾಲಿವುಡ್ ಹಣಕ್ಕಾಗಿ ತಲೆಬಾಗಿ ನಿಲ್ಲುತ್ತಿತ್ತು. ಅದೇ 90ರ ದಶಕ ಬರುತ್ತಿದ್ದಂತೆ ಮತ್ತೊಬ್ಬ ಅಂಡರ್ ವರ್ಲ್ಡ್ ಸಾಮ್ರಾಜ್ಯ ಸ್ಥಾಪಿಸಿದ ಅವನೇ ದಾವುದ್ ಇಬ್ರಾಹಿಂ. ತೊಂಬತ್ತರ ದಶಕದಲ್ಲಿ ಬಾಲಿವುಡ್ ಇವನ ಕಣ್ಸನ್ನೆಯಲ್ಲೇ ನಡೆಯುತ್ತಿತ್ತು. ಇವನು ಮಾಡುವುದೇ ಅಲ್ಲಿ ಅಂತಿಮ ನಿರ್ಣಯವಾಗುತ್ತಿತ್ತು. ಅಂದಿನ ಬಹುತೇಕ ನಿರ್ಮಾಪಕರು, ನಿರ್ದೇಶಕರು ನಟ -ನಟಿಯರು ಇವನ ಜೊತೆ ಒಳ್ಳೆ ಸಖ್ಯವನ್ನು ಹೊಂದಿದ್ದರು. ಈಗಲೂ ಸಹ ಅವನ ಸಹಚರರ ಕಣ್ಣು ಬಾಲಿವುಡ್ ಮೇಲೆ ಇದೆ.
ಹೌದು, ಬಾಲಿವುಡ್ ದಾವೂದ್ ಇಬ್ರಾಹಿಂ (1993 ರ ಮುಂಬೈ ಸ್ಫೋಟ ಮತ್ತು ಇತರ ಕ್ರಿಮಿನಲ್ ಚಟುವಟಿಕೆಗಳಿಗೆ ಕಾರಣವಾದ ಕ್ರಿಮಿನಲ್) ಜೊತೆ ಸಂಪರ್ಕವನ್ನು ಹೊಂದಿದ್ದು ನಿಜ, ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ನಿರಂತರವಾಗಿ ದಾವೂದ್ ಇಬ್ರಾಹಿಂ ಅವರನ್ನು ಭೇಟಿಯಾಗಿದ್ದಾರೆ ಮತ್ತು ಇತರ ಬಾಲಿವುಡ್ ಸೆಲೆಬ್ರಿಟಿಗಳು ಭೂಗತ ಜಗತ್ತಿನಿಂದ ಬೆದರಿಕೆ ಕರೆಗಳನ್ನು ಸ್ವೀಕರಿಸುವುದಾಗಿ ಕೂಡ ಒಪ್ಪಿಕೊಂಡಿದ್ದಾರೆ. ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಮತ್ತು ರಾಷ್ಟ್ರ ವಿರೋಧಿಗಳಿಗೆ ಭೂಗತ ಜಗತ್ತು ಬಾಲಿವುಡ್ ನಿಂದ ವಸೂಲಿ ಮಾಡಲಾದ ಹಣವನ್ನು ವರ್ಗಾಯಿಸುತ್ತಾ ಬಂದಿದೆ ಎಂಬ ಆರೋಪ ಮೊದಲಿಂದಲೂ ಕೇಳಿಬಂದಿದೆ.

ಭೂಗತ ಜಗತ್ತಿನ ಸಂಬಂಧದಿಂದ ಜೈಲು ಸೇರಿದ ಸಂಜಯ್ ದತ್
ದಾವೂದ್ ಇಬ್ರಾಹಿಂ ಬಾಲಿವುಡ್‌ನೊಂದಿಗಿನ ಸಂಪರ್ಕವು ಎಂದಿಗೂ ರಹಸ್ಯವಾಗಿಲ್ಲ. ಹಲವು ಬಾಲಿವುಡ್ ತಾರೆಯರು ಭೂಗತ ಜಗತ್ತಿನೊಂದಿಗೆ ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ. ದಾವೂದ್ ಇಬ್ರಾಹಿಂನ ಮಾಸ್ಟರ್ ಮೈಂಡ್ 1993 ರ ಮುಂಬೈ ಸ್ಫೋಟದ ನಂತರ ಬಾಲಿವುಡ್ ನಟ ಸಂಜಯ್ ದತ್ ಭೂಗತ ಜಗತ್ತಿನ ಜೊತೆಗಿರುವ ನೆಂಟಿನ ಆರೋಪದ ಮೇಲೆ ಜೈಲಿಗೆ ಕೂಡ ಹೋಗಿ ಬಂದರು. ಶಾರ್ಜಾ ಕಪ್ ಕ್ರಿಕೆಟ್ ಟೂರ್ನಿ ಸಂದರ್ಭದಲ್ಲಿ ನಟ ಅನಿಲ್ ಕಪೂರ್ ಸೇರಿದಂತೆ ಅನೇಕ ನಟರು ದಾವುದ್ ಜೊತೆಯಲ್ಲಿ ಕಾಣಿಸಿಕೊಂಡಿದ್ದರು.

ದಾವೂದ್‌ನ ಪ್ರೇಯಸಿರಿಗೂ ಅಗ್ರತಾಂಬೂಲ
ದಾವೂದ್ ಗ್ಯಾಂಗ್ ಕೇವಲ ಹಣ ಮಾತ್ರ ಬಾಲಿವುಡ್ ಬಾಲಿವುಡ್‌ನಿಂದ ಹಫ್ತಾ ರೂಪದಲ್ಲಿ ಪಡೆಯುತ್ತಿರಲಿಲ್ಲ. ಬದಲಾಗಿ ಅವರು ಸೂಚಿಸುವ ನಟಿಯರನ್ನು ಕೂಡ ನಿರ್ಮಾಪಕರು ತಮ್ಮ ಚಿತ್ರಗಳಲ್ಲಿ ಆಯ್ಕೆ ಮಾಡಿಕೊಳ್ಳಬೇಕಿತ್ತು. ನಟಿ ಮಂದಾಕಿನಿ ದಾವೂದ್ ಇಬ್ರಾಹಿಂ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ಎಂದು ಆಗಿನ ಕಾಲದಲ್ಲಿ ದೊಡ್ಡ ಸುದ್ದಿಯಾಗಿತ್ತು. ಸಂದರ್ಭಗಳಲ್ಲಿ ಕಾಣಿಸಿಕೊಂಡಿದ್ದಳು ಅವನ ಕಾರಣದಿಂದಲೇ ಆಕೆ ಬಾಲಿವುಡ್ ನಲ್ಲಿ ಅನೇಕ ಚಿತ್ರಗಳಲ್ಲಿ ಅವಕಾಶ ಪಡೆದುಕೊಂಡಳು ಅಂತ ಹೇಳಲಾಗುತ್ತದೆ.

ಪ್ರೇಯಸಿಗಾಗಿ ನಿರ್ಮಾಪಕನನ್ನು ಕೊಲ್ಲಿಸಿದ!
ದಾವೂದ್ ಇಬ್ರಾಹಿಂನ ಮತ್ತೊಂದು ಪ್ರೇಯಸಿ ಅನಿತಾ ಅಯೂಬ್. ಪಾಕಿಸ್ತಾನದಿಂದ ಬಾಲಿವುಡ್‌ಗೆ ಪ್ರವೇಶಿಸಿದ ಚಿಕ್ಕ ನಟಿ ಅನಿತಾ ಅಯೂಬ್, ದಾವೂದ್ ಇಬ್ರಾಹಿಂಗೆ ತುಂಬಾ ಹತ್ತಿರವಾದಳು, ಅವಳ ಅದೃಷ್ಟ ಅಲ್ಲಿಗೆ ಖುಲಾಯಿಸಿತು. ಅವನ ಸೂಚನೆಯ ಮೇರೆಗೆ ಆಕೆಯನ್ನು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಕೂಡ ತೆಗೆದುಕೊಳ್ಳಲಾಯಿತು. ಆದರೆ 1995ರಲ್ಲಿ ನಿರ್ಮಾಪಕ ಜಾವಿದ್ ಸಿದ್ದಿಕ್ ಆಕೆಯನ್ನು ತನ್ನ ಚಿತ್ರಕ್ಕೆ ತೆಗೆದುಕೊಳ್ಳಲು ನಿರಾಕರಿಸಿದ ಮೇಲೆ ಬರ್ಬರವಾಗಿ ಹತ್ಯೆ ಗೊಳಗಾದ.

ಮೋನಿಕಾ ಬೇಡಿ ಮತ್ತು ಅಬು ಸಲೇಂ ಸಂಬಂಧ
ದಾವೂದ್ ಇಬ್ರಾಹಿಂಗೆ ಶಿಷ್ಯನಾಗಿದ್ದ ಅಬು ಸಲೇಂ ಕೂಡ ಬಾಲಿವುಡ್ ನಟಿಯರ ಜೊತೆಯಲ್ಲಿ ಸಂಬಂಧ ಹೊಂದಿದ್ದ. ನಯವಾಗಿ ಮಾತನಾಡುವ ಈ ಭೂಗತ ಪಾತಕಿ ಮಹತ್ವಾಕಾಂಕ್ಷಿ ನಟಿ ಮೋನಿಕಾ ಬೇಡಿ ಅವರೊಂದಿಗೆ ತ್ವರಿತ ಸಂಪರ್ಕವನ್ನು ಹೊಂದಿದ. ಅವಳನ್ನು ತಮ್ಮ ಚಿತ್ರಗಳಲ್ಲಿ ತೆಗೆದುಕೊಳ್ಳುವಂತೆ ಅನೇಕ ನಿರ್ದೇಶಕರ ಮೇಲೆ ಒತ್ತಡ ಹೇರಿದ ಅವಳಿಗಾಗಿಯೇ ಅವನು ಬಾಲಿವುಡ್ ಪ್ರವೇಶ ಮಾಡಿದ. ಆದರೆ ಅಬು ಸಲೇಂ ಬಂಧನದ ನಂತರ ಮೋನಿಕಾ ಬೇಡಿ ಅವನೊಂದಿಗೆ ಸಂಬಂಧ ಕಳೆದುಕೊಂಡಳು, ಸಲೇಮ್ ಇನ್ನೂ ಕಂಬಿಗಳ ಹಿಂದೆ ಇದ್ದಾನೆ.

ಹಾಜಿ ಮಸ್ತಾನ್ ಮತ್ತು ಸೋನಾ ಕಥೆ
ಇದು ದಾವೂದ್ ಶಿಷ್ಯನ ಕಥೆಯಾದರೆ ಇನ್ನು ದಾವೂದ್ ಗುರುವಿನ ಕಥೆ ಬೇರೆ ಇದೆ. ಬಾಂಬೆಯ ಮೊದಲ ಸೆಲೆಬ್ರಿಟಿ ಗ್ಯಾಂಗ್ ಸ್ಟರ್ ಹಾಜಿ ಮಸ್ತಾನ್, ಸೋನಾ ಅವರನ್ನು ವಿವಾಹವಾದರು, ಹೆಚ್ಚಾಗಿ ಅವರು ಮಧುಬಾಲಾ ಅವರಂತೆ ಕಾಣುತ್ತಾರೆ ಎಂಬ ಅಂಶವನ್ನು ಆಧರಿಸಿದೆ. ಹಾಜಿಗೆ ಮೃತ ಮಧುಬಾಲಾಳ ಬಗ್ಗೆ ವಿಶೇಷವಾದ ಒಲವು ಇತ್ತು ಮತ್ತು ನೋಡಲು ಆಕೆಯಂತೆ ಕಾಣುತ್ತಿದ್ದ ಕಾರಣದಿಂದಲೇ ಸೋನಾಳನ್ನು ಮದುವೆಯಾಗಿದ್ದರು.

ಗುಲ್ಶನ್ ಕುಮಾರ್ ಕ್ರೂರ ಹತ್ಯೆ
ಭೂಗತ ಜಗತ್ತು ಹಣದ ವಿಷಯದಲ್ಲಿ ಎಷ್ಟೊಂದು ಕಟ್ಟುನಿಟ್ಟಾಗಿ ವ್ಯವಹರಿಸುತ್ತಿತ್ತು ಎಂದರೆ ಚೂರು ಹೆಚ್ಚು ಕಮ್ಮಿ ಆದರೂ ಕೂಡ ಅಲ್ಲೊಂದು ಕೊಲೆ ನಡೆದುಹೋಗುತ್ತಿತ್ತು. ಮ್ಯೂಸಿಕ್ ಲೇಬಲ್ ಟಿ-ಸೀರೀಸ್ ಮಾಲೀಕ ಗುಲ್ಶನ್ ಕುಮಾರ್ ಅವರನ್ನು 1997 ರಲ್ಲಿ ಹಗಲು ಹೊತ್ತಿನಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಲೋಖಂಡವಾಲಾ ನಿವಾಸಿ ಗುಲ್ಶನ್ ಕುಮಾರ್ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಭೂಗತ ಜಗತ್ತಿನ ಶಕ್ತಿಗಳು ಕೊಂದು ಹಾಕಿದವು.

ಪಾಲು ನೀಡದ ರಾಕೇಶ್ ರೋಶನ್ ಮೇಲೆ ಹತ್ಯಾಯತ್ನ
2000 ಇಸವಿಯಲ್ಲಿ ಬಿಡುಗಡೆಯಾಗಿ ದೇಶದಲ್ಲೇ ದೊಡ್ಡ ಸಂಚಲನವನ್ನು ಸೃಷ್ಟಿಸಿದ ಚಿತ್ರ ಹೃತಿಕ್ ರೋಷನ್ ಅವರ ತಂದೆ ರಾಕೇಶ್ ರೋಷನ್ ನಿರ್ದೇಶನದ "ಕಹೋ ನಾ... ಪ್ಯಾರ್ ಹೈ' ದಿನ ಬೆಳಗಾಗುವುದರಲ್ಲಿ ಚಿತ್ರದ ಮೂಲಕ ಹೃತಿಕ್ ರೋಷನ್ ಸೂಪರ್ ಸ್ಟಾರ್ ಆದ. ರಾಕೇಶ್ ರೋಷನ್ ದೊಡ್ಡಮಟ್ಟದಲ್ಲಿ ಹಣ ಕೂಡ ಈ ಸಿನಿಮಾ ಮೂಲಕ ಕಂಡ. ಭೂಗತ ಜಗತ್ತಿನ ಕಣ್ಣು ರಾಕೇಶ್ ರೋಷನ್ ಹಣದ ಮೇಲೆ ಬಿತ್ತು. ವಿದೇಶಿ ಮಾರಾಟದಿಂದ ಬಂದ ಲಾಭದ ಪಾಲನ್ನು ನೀಡಲು ಒಪ್ಪದಿದ್ದಾಗ, ಭೂಗತ ಪಾತಕಿಗಳು ಅವರ ಮೇಲೆ ದಾಳಿ ಮಾಡಿದರು. ಜನವರಿ 21, 2000 ರಂದು, ರಾಕೇಶ್ ರೋಷನ್ ಮುಂಬೈನಲ್ಲಿರುವ ಅವರ ಕಚೇರಿಯ ಬಳಿ ಇಬ್ಬರು ಗ್ಯಾಂಗ್ಸ್ಟರ್ ಗಳು ತೋಳು ಮತ್ತು ಎದೆಗೆ ಗುಂಡು ಹಾರಿಸಿದರು. ಅದೃಷ್ಟವಶಾತ್ ರಾಕೇಶ್ ರೋಷನ್ ಪ್ರಾಣಾಪಾಯದಿಂದ ಪಾರಾದರು.ಆದಾಗ್ಯೂ, ಬಾಲಿವುಡ್‌ನಲ್ಲಿ ಅತ್ಯಂತ ಭೀಕರ ಅಪರಾಧವಾಗಿ ಉಳಿದಿರುವುದು ಟಿ-ಸೀರೀಸ್ ಮಾಲೀಕ ಗುಲ್ಶನ್ ಕುಮಾರ್ ಅವರನ್ನು ಭೂಗತ ಜಗತ್ತು ಕ್ರೂರವಾಗಿ ಕೊಂದದ್ದು.

ಬಾಲಿವುಡ್ ಚಿತ್ರಗಳಲ್ಲಿ ಭೂಗತಜಗತ್ತಿನ ವೈಭವಿಕರಣ
ಬಾಲಿವುಡ್‌ನ ಬಹುತೇಕ ಮಸಾಲಾ ಚಿತ್ರಗಳನ್ನು ನೀವು ನೋಡಿದರೆ ಅದರಲ್ಲಿ ಬಹುತೇಕ ಭೂಗತ ಜಗತ್ತಿನ ವೈಭವಿಕರಣವೇ ತೆರೆದಿರುತ್ತದೆ. ಈ ಚಿತ್ರಗಳು ಪದೇಪದೇ ಸಾಬೀತುಪಡಿಸಲು ಪ್ರಯತ್ನಿಸುವುದು ಏನೆಂದರೆ ಭೂಗತ ಜಗತ್ತಿನ ಶಕ್ತಿಗಳು ಅತ್ಯಂತ ಬಲಶಾಲಿ ಮತ್ತು ಪೊಲೀಸರು ಅವರನ್ನು ಏನು ಮಾಡಲು ಸಾಧ್ಯವಿಲ್ಲ ಎಂಬುದು. 'D', Raees, 'Once upon a time in Mumbai' ಇಂತಹ ಸಾಲು ಸಾಲು ಚಿತ್ರಗಳು ಭೂಗತ ಜಗತ್ತನ್ನು ವೈಭವಿಕರಿಸಿದೆ. ಅದರಲ್ಲೂ ಹಾಜಿ ಮಸ್ತಾನ್ ಮತ್ತು ದಾವೂದ್ ಇಬ್ರಾಹಿಂ ನಡುವಿನ ಸಂಬಂಧವು 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ' ಚಿತ್ರದಲ್ಲಿ ಚಿತ್ರಿತವಾಗಿದೆ.

ಬಾಲಿವುಡ್‌ಗೆ ಭೂಗತ ಜಗತ್ತಿನ ಹಣ
ಬಾಲಿವುಡ್‌ನ ಮನಮೋಹಕ ಪ್ರಪಂಚವು ಸುಂದರವಾದ ನೆರಳಿನ ಒಳಹೊಟ್ಟೆಯನ್ನು ಹೊಂದಿದೆ ಎಂಬುದು ರಹಸ್ಯವಲ್ಲ. ದೊಡ್ಡ ಪ್ರಮಾಣದ ಹಣವನ್ನು ಮಾಡುವ ಬಾಲಿವುಡ್ ಮಾಫಿಯಾದಿಂದ ಕರೆಗಳಿಗೆ ಒಳಪಟ್ಟಿರುತ್ತದೆ ಮತ್ತು 1990 ರವರೆಗೆ, ಈ ಸಂಬಂಧವು ಬಹುತೇಕ ಸಹ ಜೀವನವಾಗಿತ್ತು. ಭೂಗತ ಶಕ್ತಿಗಳು ಚಲನಚಿತ್ರಗಳಿಗೆ ಹಣಕಾಸು ಒದಗಿಸಿದರು ಮತ್ತು ನಿರ್ಮಾಪಕರು ಹಫ್ತಾ ಪಾವತಿಸಿದರು. 90 ರ ದಶಕದ ಮಧ್ಯಭಾಗದಲ್ಲಿ, ವಿಷಯಗಳು ಹುಳಿಯಾಗಲು ಪ್ರಾರಂಭಿಸಿದವು, ಮುಂಬೈ ಸ್ಫೋಟದ ನಂತರ ಚಿತ್ರಣ ಬದಲಾಗಲು ಆರಂಭವಾಯಿತು. ಬದಲಾದ ಕಾಲಘಟ್ಟದಲ್ಲಿ ಈಗ ಬಾಲಿವುಡ್ ಯಾವುದೇ ತರದ ನೇರ ಸಂಪರ್ಕವನ್ನು ಭೂಗತ ಶಕ್ತಿಗಳ ಜೊತೆ ಹೊಂದಿಲ್ಲ ಅಂತ ಹೇಳಲಾಗುತ್ತಿದೆ. ಆದರೂ ಪರೋಕ್ಷವಾಗಿ ಇನ್ನೂ ಅದರ ಕರಿನೆರಳು ಮಾತ್ರ ಹಾಗೆ ಉಳಿದುಕೊಂಡಿದೆ.


Click it and Unblock the Notifications











