ಶಿಲ್ಪಾ ಮದುವೆ ಬೇಡ ಎಂದಾಗ ಚಿತ್ರರಂಗಕ್ಕೆ ಗುಡ್‌ಬೈ ಹೇಳಲು ಮುಂದಾಗಿದ್ರಂತೆ ಗಣೇಶ್
ಚಿತ್ರರಂಗದಲ್ಲಿ ಗಾಸಿಪ್‌ಗಳಿಗೇನು ಬರವಿಲ್ಲ. ಲವ್, ಬ್ರೇಕಪ್, ಡಿವೋರ್ಸ್ ಬಗ್ಗೆ ಇವತ್ತಿಗೂ ಅಂತೆ ಕಂತೆ ಸುದ್ದಿಗಳು ಹರಿದಾಡುತ್ತಲೇ ಇರುತ್ತದೆ. ಆದರೆ ಕೆಲವೊಮ್ಮೆ ಎಲ್ಲಿಂದಲೋ ಎಲ್ಲಿಗೋ ಲಿಂಕ್ ಮಾಡಿ ಹಬ್ಬುವ ವದಂತಿಗಳು ನಾನಾ ಅನರ್ಥಗೆ ಕಾರಣವಾಗಿಬಿಡುತ್ತದೆ. ಒಂದ್ಕಾಲದಲ್ಲಿ ತಮ್ಮ ಬಗ್ಗೆ ಬಂದ ರೂಮರ್ಸ್ ಕೇಳಿ ನಟ ಗಣೇಶ್ ಚಿತ್ರರಂಗ ಬಿಡಲು ಮುಂದಾಗಿದ್ದರು.
ಖುದ್ದು ಗಣೇಶ್ 'ವೀಕೆಂಡ್ ವಿತ್ ರಮೇಶ್' ಶೋನಲ್ಲಿ ಈ ಬಗ್ಗೆ ಮಾತನಾಡಿದ್ದರು. ಆ ರೂಮರ್ಸ್ ಏನು ಎನ್ನುವುದನ್ನು ಮಾತ್ರ ಹೇಳಲಿಲ್ಲ. ಅದೆಲ್ಲ ಬುಲ್‌ಶಿಟ್ ಎಂದು ಗಣಿ ಶೋನಲ್ಲಿ ಹೇಳಿಕೊಂಡಿದ್ದರು. ಅಂದಹಾಗೆ ಅದು ಗೋಲ್ಡನ್ ಸ್ಟಾರ್ ಮದುವೆ ಸಮಯದಲ್ಲಿ ಕೇಳಿಬಂದಿದ್ದ ಗಾಸಿಪ್. ನಟ ಗಣೇಶ್ ಗಡಿಬಿಡಿಯಲ್ಲಿ ಶಿಲ್ಪಾ ಅವರನ್ನು ವರಸಿದ್ದರು. ಅಂತಹ ಹೊತ್ತಲ್ಲೇ ಒಂದಷ್ಟು ಗಾಳಿಸುದ್ದಿ ವೈರಲ್ ಆಗಿ ಸುದ್ದಿ ಆಗಿಬಿಟ್ಟಿತ್ತು.

"ನನ್ನ ಮದುವೆಯನ್ನ ಮೀಡಿಯಾದಲ್ಲಿ ಬೇರೆ ಬೇರೆ ರೀತಿ ತೋರಿಸುತ್ತಾರೆ ಅಂತ ನಾನು ಅಂದುಕೊಂಡಿರ್ಲಿಲ್ಲ. ಆಗ ತುಂಬಾ ಬೇಜಾರಾಯ್ತು. ಯಾವ ಮಟ್ಟಕ್ಕೆ ಆಯ್ತು ಅಂದ್ರೆ, ನನ್ನ ಪಾಪ್ಯುಲಾರಿಟಿ ನಾನು ಇಷ್ಟ ಪಟ್ಟ ಹುಡುಗಿಗೆ ಇಷ್ಟೊಂದು ಹರ್ಟ್ ಮಾಡುತ್ತಿದ್ಯಾ? ಅಂತ ಅನ್ನಿಸಿತ್ತು" ಎಂದು ಗಣೇಶ್ ಹೇಳಿಕೊಂಡಿದ್ದರು.
"ನಿಜ ಹೇಳಬೇಕು ಅಂದ್ರೆ ಆ ಸಮಯದಲ್ಲಿ ನನಗೆ ತುಂಬಾ ಒತ್ತಡ ಇತ್ತು. ಜನಪ್ರಿಯತೆಯೇ ನನಗೆ ಇಷ್ಟೊಂದು ನೋವು ಕೊಡ್ತಾ ಅನಿಸಿಬಿಡ್ತು. ಟಿವಿಗಳಲ್ಲಿ ಏನೇನೋ ಹಾಕಿದರು, ಏನೇನೋ ಬಂದುಬಿಡ್ತು. ಎವೆರಿಥಿಂಗ್ ವಾಸ್ ಬುಲ್ ಶಿಟ್. ಆ ತರಹ ಏನೂ ಇರಲಿಲ್ಲ. ಥ್ಯಾಂಕ್ಸ್ ಟು ಎವೆರಿಬಡಿ. ಅದೇ ಟೈಮ್ ನಾನು ಸ್ಟ್ರಾಂಗ್ ಆಗಿದ್ದು" ಎಂದು ಗಣೇಶ್ ನೆನಪಿಸಿಕೊಂಡಿದ್ದರು.
ಮದುವೆ ಸಮಯದಲ್ಲಿ ಒತ್ತಡ ಹೆಚ್ಚಾದಾಗ "ನಾನು ನಿಮ್ಮನ್ನು ಮದುವೆ ಆಗಲ್ಲ ಎಂದು ಶಿಲ್ಪಾ ಹೇಳಿದ್ದಳು. "ನನ್ನ ಪಾಪ್ಯುಲಾರಿಟಿ ನಿನಗೆ ಇಷ್ಟೊಂದು ತೊಂದರೆ ಕೊಡುತ್ತಿದೆ ಅಂದ್ರೆ ನಾನು ಸಿನಿಮಾ ಬಿಟ್ಟುಬಿಡುತ್ತೇನೆ. ನಾನು ನಿನ್ನ ತುಂಬಾ ಇಷ್ಟ ಪಡುತ್ತೇನೆ. ನಮ್ಮಿಂದ ಯಾರಿಗಾದರೂ ತೊಂದರೆ ಆಗುತ್ತಿದೆ ಅಂದ್ರೆ, ಆ ತೊಂದರೆ ಇಂದ ದೂರ ಇರಬೇಕು. ನನ್ನ ಪಾಪ್ಯುಲಾರಿಟಿ ಇಂದ ಆಕೆಗೆ ತೊಂದರೆ ಆಗುತ್ತಿತ್ತು. ಹೀಗಾಗಿ ಸಿನಿಮಾ ಬಿಡುತ್ತೇನೆ ಎಂದಿದ್ದೆ" ಎಂದು ಆ ದಿನಗಳ ಬಗ್ಗೆ ಗಣೇಶ್ ಮಾತನಾಡಿದ್ದರು.

'ಮುಂಗಾರುಮಳೆ' ಸಿನಿಮಾ ಬಿಡುಗಡೆ ಬೆನ್ನಲ್ಲೇ ನಟ ಗಣೇಶ್ ಮದುವೆ ಆಗಿದ್ದರು. ಈ ಸಿನಿಮಾ ಬಿಡುಗಡೆಗೂ ಮೊದಲೇ ಇಬ್ಬರು ಸ್ನೇಹಿತರಾಗಿದ್ದರು. ಕಾಮನ್ ಫ್ರೆಂಡ್‌ನಿಂದ ಇಬ್ಬರ ಪರಿಚಯವಾಗಿತ್ತು. ಬಳಿಕ ಆ ಸ್ನೇಹ ಪ್ರೀತಿಗೆ ತಿರುಗುತ್ತು. ಖುದ್ದು ಗಣೇಶ್‌ಗೆ ಶಿಲ್ಪಾ ಅವರಿಗೆ ಪ್ರಪೋಸ್ ಮಾಡಿದ್ದರಂತೆ. ತಮ್ಮ ಲವ್ ಸ್ಟೋರಿಯನ್ನು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ವಿವರಿಸಿದ್ದರು.
ಗಣೇಶ್- ಶಿಲ್ಪಾ ಜೋಡಿಯ 14 ವರ್ಷಗಳ ದಾಂಪತ್ಯ ಜೀವನ ಯಶಸ್ವಿಯಾಗಿ ಮುಂದುವರೆದಿದೆ. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮೊದಲು ಒಂದು ಕೋಟಿ ಸಂಭಾವನೆ ಪಡೆದಿದ್ದ ನಟ ಗಣೇಶ್ ಎನ್ನಲಾಗುತ್ತದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಗಣಿ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದರು. 'ಮುಂಗಾರುಮಳೆ' ಸಕ್ಸಸ್ ಬೆನ್ನಲ್ಲಿ ಗಣೇಶ್ ಕ್ರೇಜ್ ಆ ರೇಂಜಿಗಿತ್ತು.
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಗೋಲ್ಡನ್ ಸ್ಟಾರ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಇತ್ತೀಚೆಗೆ ಗಣಿ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ಸದ್ಯ 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











