"ಟೆನ್ನಿಸ್ ಕೃಷ್ಣ ನಟಿ ಅಂಜಲಿಯನ್ನು ಮದುವೆ ಆದ್ರಂತೆ"; ಈ ಗಾಳಿ ಸುದ್ದಿ ಹಬ್ಬಿದಾಗ ಏನಾಯ್ತು?

By ಫಿಲ್ಮಿಬೀಟ್ ಡೆಸ್ಕ್

ಕನ್ನಡ ಚಿತ್ರರಂಗ ಕಂಡ ಇಬ್ಬರು ಅದ್ಭುತ ಕಲಾವಿದರಲ್ಲಿ ಟೆನ್ನಿಸ್ ಕೃಷ್ಣ ಹಾಗೂ ಅಂಜಲಿ ಕೂಡ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಈ ಜೋಡಿ ತೆರೆಮೇಲೆ ಬಂದರೆ, ಹೊಟ್ಟೆ ಹುಣ್ಣಾಗುವಷ್ಟೇ ನಕ್ಕಿರುವ ಪ್ರೇಕ್ಷಕರಿದ್ದಾರೆ. ಈಗಲೂ ಕಿರುತೆರೆಯಲ್ಲಿ ಈ ಜೋಡಿಯ ಸಿನಿಮಾ ತೆರೆಮೇಲೆ ಬಂದರೆ ಅಷ್ಟೇ ನಗು ತರಿಸುತ್ತೆ.

ಆರಂಭದ ದಿನಗಳಲ್ಲಿ ಟೆನ್ನಿಸ್ ಕೃಷ್ಣ ಹಾಗೂ ಅಂಜಲಿ ಇಬ್ಬರ ಜೋಡಿ ತುಂಬಾನೇ ದೊಡ್ಡ ಹೆಸರು ಮಾಡಿತ್ತು. ಚಿತ್ರರಂಗದಲ್ಲಿ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಸಿನಿಮಾದಲ್ಲಿ ಈ ಜೋಡಿ ಸಾಕಷ್ಟು ಕಾಮಿಡಿ ಮಾಡಿದೆ. 'ವೀರಾ ಧೀರ' ಅನ್ನೋ ಸಿನಿಮಾದಲ್ಲಿ ಈ ಜೋಡಿ ಒಟ್ಟಿಗೆ ನಟಿಸಿ ಹೆಸರು ಮಾಡಿತ್ತು.

ಟೆನ್ನಿಸ್ ಕೃಷ್ಣ ನಾಯಕನಾಗಿ ನಟಿಸಿದ್ದ 'ಅಪ್ಪ ನಂಜಪ್ಪ, ಮಗ ಗುಂಜಪ್ಪ' ಸಿನಿಮಾದಲ್ಲಿ ಅಂಜಲಿ ಹೀರೋಯಿನ್ ಆಗಿದ್ದರು. ಬಳಿಕ ಜಗ್ಗೇಶ್ ನಾಯಕನಾಗಿ ನಟಿಸಿದ್ದ 'ತರ್ಲೆ ನನ್ ಮಗ' ಸಿನಿಮಾದಲ್ಲೂ ಇವರ ಕಾಂಬಿನೇಷನ್ ಇತ್ತು. ಇಂದಿಗೂ ಈ ಜೋಡಿ ಜೊತೆಯಾಗಿ ನಟಿಸಿದ ಸಿನಿಮಾಗಳನ್ನು ಪ್ರೇಕ್ಷಕರು ಮರೆಯೋಕೆ ಸಾಧ್ಯವೇ ಇಲ್ಲ.

When actor Tennis Krishna and actress Anjali fak marriage news created sensation do you what happend

ಈ ಹಿಟ್ ಕಾಂಬಿನೇಷನ್ ದೂರ ಆಗಿದ್ದರು. ಹಾಗಂತ ಮುನಿಸು ಅಂತೇನು ಇರಲಿಲ್ಲ. ಅಂಜಲಿ ಮದುವೆ ಬಳಿಕ ಸಿನಿಮಾದಿಂದ ದೂರ ಉಳಿದಿದ್ದರು. ಆದರೆ, ಈ ಜೋಡಿ ಸಿನಿಮಾದಲ್ಲಿ ಹಿಟ್ ಕಾಂಬಿನೇಷನ್‌ ಅಂತ ಫೇಮಸ್ ಆಗಿರುವಾಗಲೇ ಟೆನ್ನಿಸ್ ಕೃಷ್ಣಗೆ ಅಂಜಲಿಯವರನ್ನು ಮದುವೆ ಆಗಿದ್ದಿರಂತೆ ಅನ್ನುವ ಅಂತ ಕೇಳಿದ್ದರಂತೆ. ಅದಕ್ಕೆ ಚಿತ್ರಲೋಕದೊಂದಿಗೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳಿದ್ದರು.

ಈ ಸಂದರ್ಶನದಲ್ಲಿ ಟೆನ್ನಿಸ್ ಕೃಷ್ಣ ಚಿತ್ರರಂಗದಲ್ಲಿ ತಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದ ಸನ್ನಿವೇಶಗಳನ್ನು ಹೇಳುತ್ತಿದ್ದರು. ಆ ವೇಳೆ ತನ್ನ ಜೊತೆ ಜೋಡಿಯಾಗಿ ಸಿನಿಮಾದಲ್ಲಿ ನಟಿಸಿದ್ದ ಅಂಜಲಿಯವರ ಬಗ್ಗೆನೂ ಮಾತಾಡಿದ್ದರು. ಮದುವೆ ಕರೆಯಲಿಲ್ಲ. ದುಬೈಗೆ ಹೋಗಿದ್ದಾಗ ಮಂಡ್ಯ ರಮೇಶ್ ಅವರನ್ನು ಮನೆಗೆ ಕರೆದಿದ್ದರು. ತಮ್ಮನ್ನು ಕರೆದಿರಲಿಲ್ಲ ಎಂದು ಹೇಳಿದ್ದರು. ಇಷ್ಟು ದೂರ ಇಟ್ಟಿದ್ದಕ್ಕೆ ಕೆಲವರು ಟೆನ್ನಿಸ್ ಕೃಷ್ಣ ಜೊತೆ ಅಂಜಲಿ ಮದುವೆ ಆಯ್ತು ಸುಳ್ಳು ಸುದ್ದಿ ಹಬ್ಬಿಸಿದ್ದರಿಂದ ಹೀಗೆ ಮಾಡಿರಬಹುದು ಎಂದಿದ್ದರು.

"ಗೆಳೆಯರೊಬ್ಬರು ನಿನಗೂ ಅಂಜಲಿಯವರಿಗೂ ಮದುವೆ ಆಯ್ತಂತೆ ಅಂತ ಅಂದ. ಏಯ್ ಹೇಳೋಕೆ ಎಲ್ಲಾದರೂ ಹೋಗಿಬಿಟ್ಟಿಯಾ? ನನ್ನ ಹೆಂಡ್ತಿ ಬಂದು ಕಪಾಳಕ್ಕೆ ಹೊಡೆದು ಬಿಡುತ್ತಾಳೆ ಅಂತ ಹೇಳಿದ್ದೆ. ಅಣ್ಣಾವ್ರ ಕಾಲದಿಂದಲೂ ಶೂಟಿಂಗ್ ವೇಳೆ ಬಿಡುವು ಸಿಕ್ಕಾಗ ಒಂದು ಸಂಸಾರದ ಹಾಗೆ ತಮಾಷೆ ಮಾಡಿಕೊಂಡು ಇರುತ್ತಿದ್ದರು. ನಮ್ಮ ಕಾಲದಲ್ಲೂ ಅದೇ ಇತ್ತು. ನಾವು ಫ್ರೀ ಇದ್ದಾಗ ತಮಾಷೆ ಮಾಡಿ ಮಾತಾಡಿಕೊಳ್ಳುತ್ತಿದ್ದಾಗ ಅದನ್ನು ನೋಡಿ ಹೀಗೆ ಮಾತಾಡಬೇಡಿ. ಒಬ್ಬ ಹೆಣ್ಣು ಮಗಳ ಹೆಸರನ್ನು ಕೆಡಿಸಬೇಡಿ" ಅಂತ ಹೇಳಿದ್ದನ್ನು ನೆನಪಿಸಿಕೊಂಡಿದ್ದರು.

ಇದರೊಂದಿಗೆ ದುಬೈಗೆ ಕಾರ್ಯಕ್ರಮ ಕೊಡುವುದಕ್ಕೆ ಹೋಗಿದ್ದಾಗ, ಟೆನ್ನಿಸ್ ಕೃಷ್ಣ ಅವರನ್ನು ಅಂಜಲಿ ಮನೆಗೆ ಕರೆಯದೆ ಇದ್ದಿದ್ದರ ಬಗ್ಗೆನೂ ಹೇಳಿಕೊಂಡಿದ್ದರು. "ನಾವಿಬ್ಬರೂ ಸ್ನೇಹಿತರಷ್ಟೇ ಅಂತಹ ಕೆಟ್ಟ ಭಾವನೆ ಇಲ್ಲ. ನನ್ನಲ್ಲಿ ಅಂತ ಇಲ್ಲ. ಅದು ಅವರಿಗೂ ಗೊತ್ತಾಗಿತ್ತು ಅಂತ ಕಾಣುತ್ತೆ. ನಾನು ಎರಡು ದುಬೈಗೆ ಕಾರ್ಯಕ್ರಮಕ್ಕೆ ಅಂತ ಹೋದಾಗ, ಮಂಡ್ಯ ರಮೇಶ್ ಎಲ್ಲಾ ಹೋಗಿದ್ವಿ. ಅವರ ಪತಿ ಸುಧಾಕರ್ ಅಂತ ನಾವಿಬ್ಬರೂ ಅಣ್ಣ ತಮ್ಮಂದಿರ ಹಾಗೆ ಇದ್ದೀವಿ. ಅವತ್ತು ಮಂಡ್ಯ ರಮೇಶ್ ಅವರನ್ನು ಕರೆದುಕೊಂಡು ಹೋಗಿದ್ದಾರೆ. ನನ್ನನ್ನು ಕರೆದುಕೊಂಡೇ ಹೋಗಿಲ್ಲ." ಎಂದಿದ್ದರು.

More from Filmibeat

English summary
Actor Tennis Krishna reacted about fake marriage rumours with Anjali
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X