'ಗಾಳಿಪಟ'ದ ನೀತು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೇಕೆ? ಆ ಮೇಲೆ ಏನೆಲ್ಲ ತೊಂದರೆ ಆಯ್ತು?

By ಫಿಲ್ಮಿಬೀಟ್ ಡೆಸ್ಕ್

'ಗಾಳಿಪಟ' ಸಿನಿಮಾದಿಂದ ಕನ್ನಡದಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದ ನಟ ನೀತು. ಅಲ್ಲಿಂದ ನೀತು ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ನೀತು ನಾಯಕಿಯಾಗಿ ನಟಿಸಿದ್ದೇನೋ ನಿಜ. ಆದರೆ, ನಾಯಕಿ ಪಾತ್ರಕ್ಕೆ ಸ್ವಲ್ಪ ದಪ್ಪ ಆದರು ಅನ್ನೋ ಕಾಮೆಂಟ್‌ಗಳು ಬರುತ್ತಿದ್ದವು. ಸಾಕಷ್ಟು ಮಂದಿ ದಪ್ಪ ಆಗಿದ್ದೀಯಾ ಎಂದು ಹೇಳಿದ್ದರು.

ನೀತು 'ಗಾಳಿಪಟ' ಸಿನಿಮಾಗೂ ಮುನ್ನ ಸುಮಾರು 10ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಆ ಎಲ್ಲಾ ಸಿನಿಮಾಗಳಲ್ಲಿ ಸಣ್ಣಗಿದ್ದರು. 'ಪೂಜಾರಿ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ನೀತು ಸಣ್ಣಗಿದ್ದರು. ಬಳಿಕ ಕೊಂಚ ದಪ್ಪಗಾಗಿದ್ದರು. ಆ ಇಂತಹ ಕಾಮೆಂಟ್‌ಗಳು ಬಂದಿದ್ದವು. ಆಗ ಸರ್ಜರಿ ಮಾಡಿಸಿಕೊಳ್ಳುವುದಕ್ಕೆ ನಿರ್ಧರಿಸಿದ್ದರು.

When Actress Neethu Shetty who talks the plastic surgery issues and why her life was ruined

ಕನ್ನಡ ಚಿತ್ರರಂಗದ ನಟ- ನಟಿಯರು ಇಂತಹ ಸರ್ಜರಿಗಳನ್ನು ಮಾಡಿಕೊಂಡರೆ ಬಾಯಿ ಬಿಡುವುದಿಲ್ಲ. ಆದರೆ, ನೀತು ಸಣ್ಣಗಾಗಲು ಸರ್ಜರಿ ಮಾಡಿಕೊಂಡಿದ್ದನ್ನು ಓಪನ್ ಆಗಿ ಮಾತಾಡಿದ್ದರು. ಅದರಿಂದ ದೇಹದ ಮೇಲೆ ಏನೆಲ್ಲ ಎಫೆಕ್ಟ್‌ಗಳು ಆಗಿವೆ ಅನ್ನೋದನ್ನು ಓಪನ್ ಆಗಿ ಮಾತಾಡಿದ್ದರು. ಅದರ ಝಲಕ್ ಇಲ್ಲಿದೆ..

ನೀತು ಸಣ್ಣಗಾಗಲು ಸರ್ಜರಿ ಮಾಡಿಸಿಕೊಂಡಿದ್ದನ್ನು ಯೂಟ್ಯೂಬ್ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದರು. ಜನರು ಹೇಳಿದ ಮಾತನ್ನು ಕೇಳಬಾರದಿತ್ತು ಎಂದು ಪಶ್ವಾತಾಪ ಪಟ್ಟಿದ್ದರು. "ನಾನು ಬೇರೆಯವರ ಮಾತನ್ನೇ ಕೇಳಬಾರದಿತ್ತು. ನಾನು ಆರಾಮಾಗಿದ್ದೆ. ಪೂಜಾರಿ ಸಿನಿಮಾದಲ್ಲಿ ನಾನು ಚೆನ್ನಾಗಿಯೇ ಇದ್ದೆ. ಆದರೆ ಎಲ್ಲರೂ ಹೇಳೋರು ದಪ್ಪ ಇದ್ದೀಯಾ ಅಂತ. ನಾನು ದಪ್ಪ ಇರಲಿಲ್ಲ. ನಾನು ನಾರ್ಮಲ್ ಆಗಿಯೇ ಇದ್ದೆ. ನಾನು ಚೆನ್ನಾಗಿಲ್ಲ ಅಂತ ಯಾರೋ ಹೇಳಿದ್ರು ಅಂತ ಸರ್ಜರಿ ಮಾಡಿಸಿಕೊಂಡೆ. ಅದು ನನಗೆ ಸೂಟ್ ಆಗಿಲ್ಲ." ಎಂದಿದ್ದರು ನೀತು.

When Actress Neethu Shetty who talks the plastic surgery issues and why her life was ruined

ಸರ್ಜರಿ ಬಳಿಕ ಹೇಗಿತ್ತು ಅನ್ನುವುದನ್ನು ತಮ್ಮ ಅನುಭವವನ್ನೂ ಹಂಚಿಕೊಂಡಿದ್ದರು. "ಸರ್ಜರಿ ಆದ್ಮೇಲೆ ತುಂಬಾನೇ ಮೆಡಿಸಿನ್ ಕೊಡುತ್ತಾರೆ. ಕೂದಲು ಉದುರಬಾರದು, ಪ್ರೊಟೀನ್ ಬೇಕು ಅಂತ ಔಷಧಿ ಕೊಡುತ್ತಾರೆ. ನನಗೆ ಅದು ಹೊಂದಿಕೆ ಆಗಲೇ ಇಲ್ಲ. ನನಗೆ ತಲೆ ನೋವಿಗೂ ಮಾತ್ರೆ ತೆಗೆದುಕೊಳ್ಳುವುದಕ್ಕೂ ಆಗಲಿಲ್ಲ. ನಾನು ಸರ್ಜರಿ ಮಾಡಿಸಲೇ ಬಾರದಿತ್ತು. ಯಾಕಂದ್ರೆ, ನಾನು ಚೆನ್ನಾಗಿಯೇ ಇದ್ದೆ. ಅದು ನನ್ನ ಬದುಕಿನಲ್ಲಿ ಕಲಿತ ದೊಡ್ಡ ಪಾಠ" ಎಂದು ನೀತು ಯೂಟ್ಯೂಬ್ ಚಾನೆಲ್‌ನಲ್ಲಿ ಓಪನ್ ಆಗಿ ಮಾತಾಡಿದ್ದರು.

ಸರ್ಜರಿ ಬಳಿಕ ನೀತುಗೆ ತಮ್ಮ ತಪ್ಪಿನ ಅರಿವಾಗಿತ್ತು. ಸ್ವಲ್ಪ ದಪ್ಪಗಿದ್ದಿದ್ದರೆ ಏನೂ ಆಗುತ್ತಿರಲಿಲ್ಲ. ಬೇರೆಯರ ಮಾತನ್ನು ಕೇಳಬಾರದಿತ್ತು ಎಂದು ಹೇಳಿಕೊಂಡಿದ್ದರು. "ನಮ್ಮ ಬಗ್ಗೆ ನಮಗೆ ಕಾಳಜಿ ಇರಬೇಕು. ಯಾರೋ ಹೇಳಿದರು ಅಂತ ನಮ್ಮನ್ನು ನಾವೇ ದೂರ ಬಾರದು. ಈಗ ನನಗೆ ಅರ್ಥ ಆಗಿದೆ. ನನ್ನ ದೇಹಕ್ಕೆ ನನಗೆ ಮೊದಲ ಕಾಳಜಿ ಇರಬೇಕು. ಬೇರೆಯವರು ಹೇಳಿದ್ದಲ್ಲ. ನಾನು ಏನು ಅಂದುಕೊಳ್ಳುತ್ತೇನೆ. ಅದು ಮುಖ್ಯ." ಎಂದಿದ್ದಾರೆ.

ಹಾಗೇ, "ಗಾಳಿಪಟದಲ್ಲಿ ನಾನು ನಾಲ್ಕು ಕೆಜಿ ದಪ್ಪ ಇದ್ದಿದ್ದರೆ, ಇಲ್ಲ ನಾಲ್ಕು ಕೆಜಿ ಸಣ್ಣಗಿದ್ದಿದ್ದರೆ ಏನಾದರೂ ವ್ಯತ್ಯಾಸ ಆಗುತ್ತಿತ್ತಾ? ಸಣ್ಣ ಆದ ಕೂಡಲೇ ನಾನು ತುಂಬಾ ಒಳ್ಳೆಯ ಪರ್ಫಾಮೆರ್ ಆಗುತ್ತೀರಾ? ಆದರೆ, ಕೆಲವು ಪಾತ್ರಗಳಿಗೆ ನಾವು ಸೂಟ್ ಆಗಬಹುದು. ಇಲ್ಲ ಕೆಲವು ಆಗದೆ ಇರಬಹುದು. ಅಷ್ಟೆ. ಆದರೆ, ಸರ್ಜರಿ ಮಾಡಿಸಿಕೊಳ್ಳಬಾರದು ಅಂತ ಯಾವಾಗ ಓಪನ್ ಆಗಿ ಹೇಳಿದೆ. ಆಗ ನನಗೆ ಗೌರವನೂ ಜಾಸ್ತಿ ಆಯ್ತು." ಎಂದು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಬಗ್ಗೆ ಓಪನ್ ಆಗಿ ಮಾತಾಡಿದ್ದರು.

More from Filmibeat

English summary
Do you know about Neethu Shetty plastic surgery issue:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X