ನನ್ನನ್ನು ಬಳಸಿಕೊಂಡು ದೂರತಳ್ಳಿದ್ರು; ಅಕ್ಷಯ್ ಕುಮಾರ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದ ಶಿಲ್ಪಾ ಶೆಟ್ಟಿ

'ನನ್ನನ್ನು ಬಳಸಿಕೊಂಡು ಬಳಿಕ ದೂರತಳ್ಳಿದರು..', ಭಾರತೀಯ ಸಿನಿಮಾರಂಗದ ಖ್ಯಾತ ನಟ, ಅತೀ ಹೆಚ್ಚು ಸಂಭಾವನೆ ತೆಗೆದುಕೊಳ್ಳುತ್ತಾ, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಅಕ್ಷಯ್ ಕುಮಾರ್ ಬಗ್ಗೆ ವರ್ಷಗಳ ಹಿಂದೆ ಶಿಲ್ಪಾ ಶೆಟ್ಟಿ ಮಾಡಿರುವ ಆರೋಪವಿದು. ಇಂದು ಅಕ್ಷಯ್ ಸಿನಿಮಾ ಜೊತೆಗೆ ಕುಟುಂಬದ ಜೊತೆಯೂ ಹೆಚ್ಚು ಸಮಯ ಕಳೆಯುತ್ತ ಪಕ್ಕ ಫ್ಯಾಮಿಲಿ ಮ್ಯಾನ್ ಕೂಡ ಆಗಿದ್ದಾರೆ.

ಸಿನಿಮಾ, ಕುಟುಂಬ ಅಂತ ಬ್ಯುಸಿಯಾಗಿರುವ ಅಕ್ಷಯ್ ಬಗ್ಗೆ 90ರ ದಶದಲ್ಲಿ ಕೇಳಿಬಂದಿದ್ದ ಗಾಸಿಪ್ ಗಳು ಅಷ್ಟಿಷ್ಟಲ್ಲ. 90ರ ದಶಕದಲ್ಲಿ ಅಕ್ಷಯ್ ಕುಮಾರ್ ಹೆಸರು ಖ್ಯಾತ ನಟಿ ರೇಖಾಯಿಂದ ಹಿಡಿದು ರವೀನಾ ಟಂಡನ್ ವರೆಗೂ ಕೇಳಿಬಂದಿತ್ತು. ಸಾಕಷ್ಟು ನಟಿಯರ ಜೊತೆ ಅಕ್ಷಯ್ ಹೆಸರು ಥಳಕು ಹಾಕಿಕೊಂಡಿತ್ತು. ಆದರೆ ಶಿಲ್ಪಾ ಶೆಟ್ಟಿ ಜೊತೆಗಿನ ಸಂಬಂಧ ಹಾಟ್ ಟಾಪಿಕ್ ಆಗಿ ಆಗಿ ಚರ್ಚೆಯಾಗಿತ್ತು.

ಬಾಲಿವುಡ್ ನಲ್ಲಿ ಶಿಲ್ಪಾ ಮತ್ತು ಅಕ್ಷಯ್ ಕುಮಾರ್ ಸಂಬಂಧ ಇಂದಿಗೂ ಚರ್ಚೆಯಾಗುತ್ತಿರುತ್ತೆ. 1994ರಲ್ಲಿ ಬಿಡುಗಡೆಯಾಗಿದ್ದ ಮೈ ಕಿಲಾಡಿ ತು ಅನಾರಿ ಚಿತ್ರದಲ್ಲಿ ಅಕ್ಷಯ್ ಮತ್ತು ಶಿಲ್ಪಾ ಒಟ್ಟಿಗೆ ನಟಿಸಿದ್ದರು. ಅಲ್ಲಿಂದ ಪ್ರಾರಂಭವಾದ ಇಬ್ಬರ ನಡುವಿನ ಪ್ರೀತಿ, ಪ್ರೇಮ, ಡೇಟಿಂಗ್ ಎನ್ನುವ ಗುಸು ಗುಸು ಬಳಿಕ ದೊಡ್ಡದಾಗಿ ಬಿರುಗಾಳಿಯನ್ನೆ ಎಬ್ಬಿಸಿತ್ತು. ಇಬ್ಬರು ಮದುವೆಯಾಗುತ್ತಾರೆ ಅಂತಾನೇ ಎಲ್ಲರೂ ಅಂದುಕೊಂಡಿದ್ದ ಸಮಯದಲ್ಲಿ ದಿಢೀರ್ ಬೇರೆ ಬೇರೆ ಆಗುವ ಮೂಲಕ ಶಾಕ್ ನೀಡಿದರು.

ಆತ ವಿಶ್ವಾಸ ದ್ರೋಹಿ; ಶಿಲ್ಪಾ ಶೆಟ್ಟಿ

ಆತ ವಿಶ್ವಾಸ ದ್ರೋಹಿ; ಶಿಲ್ಪಾ ಶೆಟ್ಟಿ

ಇಬ್ಬರ ಬ್ರೇಕಪ್ ವಿಚಾರ ಬಿ ಟೌನ್ ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಅಕ್ಷಯ್ ಕುಮಾರ್ ಜೊತೆಗೆನ ಸಂಬಂಧ ಮತ್ತು ಬ್ರೇಕಪ್ ಬಗ್ಗೆ ಶಿಲ್ಪಾ ಶೆಟ್ಟಿ 2000ರಲ್ಲಿ ನೀಡಿದ ಸಂದರ್ಶವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ಅಕ್ಷಯ್ ಕುಮಾರ್ ಮೋಸ ಮಾಡಿರುವುದಾಗಿ ದೂರಿದ್ದಾರೆ. ಅಕ್ಷಯ್ ಕುಮಾರ್ ನನ್ನು ವಿಶ್ವಾಸ ದ್ರೋಹಿ ಎಂದು ಜರಿದಿದ್ದಾರೆ.

ಟ್ವಿಂಕಲ್ ಖನ್ನಾರನ್ನ ದೂಷಿಸುವುದರಲ್ಲಿ ಅರ್ಥವಿಲ್ಲ: ಶಿಲ್ಪಾ

ಟ್ವಿಂಕಲ್ ಖನ್ನಾರನ್ನ ದೂಷಿಸುವುದರಲ್ಲಿ ಅರ್ಥವಿಲ್ಲ: ಶಿಲ್ಪಾ

'ಅವನು ನನಗೆ ದ್ರೋಹ ಮಾಡುತ್ತಾನೆ ಎಂದು ಊಹಿಸಿರಲಿಲ್ಲ' ಎಂದು ಶಿಲ್ಪಾ ಎಂದು ಹೇಳಿದ್ದಾರೆ. 'ಟ್ವಿಂಕಲ್ ಖನ್ನಾ ಅವರ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ನಾನು ನಂಬಿದ ವ್ಯಕ್ತಿ ನನಗೆ ಮೋಸ ಮಾಡಿದರೆ ಅದರಲ್ಲಿ ಅವರ ತಪ್ಪು ಏನು ಇರುತ್ತೆ? ಇದರಲ್ಲಿ ಬೇರೆ ಮಹಿಳೆಯರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಇದು ಸಂಪೂರ್ಣ ಅಕ್ಷಯ್ ತಪ್ಪು' ಎಂದಿದ್ದಾರೆ.

ತುಂಬಾ ಕಠಿಣ ಸಮಯವಾಗಿತ್ತು

ತುಂಬಾ ಕಠಿಣ ಸಮಯವಾಗಿತ್ತು

'ಇದು ನನಗೆ ತುಂಬಾ ಕಠಿಣ ಸಮಯವಾಗಿದೆ. ಆದರೆ ಅಗ್ನಿ ಪರೀಕ್ಷೆ ಮುಗಿದಿದೆ. ಕಪ್ಪು ಮೋಡ ಸರಿದ ಬಳಿಕ ಬೆಳಕು ಬಂದೇ ಬರುತ್ತೆ. ಇಷ್ಟೆಲ್ಲ ಕಷ್ಟದ ಸಮಯದಲ್ಲಿ ನನ್ನ ವೃತ್ತಿ ಬದುಕು ಮೇಲಕ್ಕೆ ಏರುತ್ತಿತ್ತು. ಆದರೆ ವೈಯಕ್ತಿಕ ಜೀವನ ಕೆಳಗೆ ಸಾಗುತ್ತಿತ್ತು' ಎಂದಿದ್ದಾರೆ.

ಅಕ್ಷಯ್ ನನ್ನನ್ನು ಬಳಿಸಿಕೊಂಡು ದೂರತಳ್ಳಿದರು

ಅಕ್ಷಯ್ ನನ್ನನ್ನು ಬಳಿಸಿಕೊಂಡು ದೂರತಳ್ಳಿದರು

'ಅಕ್ಷಯ್ ಕುಮಾರ್ ನನ್ನನ್ನು ಬಳಿಸಿಕೊಂಡು ಬೇರೊಬ್ಬರು ಸಿಕ್ಕಿದ ಮೇಲೆ ಅಷ್ಟೆ ಸುಲಭವಾಗಿ ಕೈಬಿಟ್ಟರು. ನನಗೆ ಗೊತ್ತು ಅವನು ಎಲ್ಲವನ್ನು ಮರಳಿ ಪಡೆಯುತ್ತಾನೆ. ಹಳೆಯದೆಲ್ಲವನ್ನು ಮರೆಯುವುದು ಅಷ್ಟು ಸುಲಭವಲ್ಲ. ಇದೆಲ್ಲದರಿಂದ ಮುಂದೆ ಹೋಗಲು ನಾನು ಶಕ್ತಿ ಹೊಂದಿದ್ದೇನೆ. ಅಕ್ಷಯ್ ನನ್ನ ಪಾಲಿಗೆ ಮರೆತುಹೋದ ಅಧ್ಯಾಯ. ನಾನು ಅವರೊಂದಿಗೆ ಮತ್ತೆ ಕೆಲಸ ಮಾಡುವುದಿಲ್ಲ' ಎಂದಿದ್ದರು.

ಧಡ್ಕನ್ ಸಿನಿಮಾ ವೇಳೆ ಅಕ್ಷಯ್ ಮೋಸದ ಬಗ್ಗೆ ಗೊತ್ತಾಯಿತು

ಧಡ್ಕನ್ ಸಿನಿಮಾ ವೇಳೆ ಅಕ್ಷಯ್ ಮೋಸದ ಬಗ್ಗೆ ಗೊತ್ತಾಯಿತು

ಅಕ್ಷಯ್ ಕುಮಾರ್ ಮೋಸದ ಬಗ್ಗೆ ಕಣ್ಣಾರೆ ಕಂಡಿರುವ ಬಗ್ಗೆ ಶಿಲ್ಪಾ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. 'ಧಡ್ಕನ್ ಚಿತ್ರದ ಚಿತ್ರೀಕರಣ ವೇಳೆ ಅಕ್ಷಯ್ ಮಾಡಿದ ಮೋಸದ ಬಗ್ಗೆ ಗೊತ್ತಾಯಿತು. ಆದರೆ ನಿರ್ಮಾಪಕರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಧಡ್ಕನ್ ಮುಗಿಯುವ ವರೆಗೂ ಕಾಯಲು ನಿರ್ಧರಿಸಿದೆ' ಎಂದಿದ್ದಾರೆ. ಬ್ರೇಕಪ್ ಬಳಿಕ ಬಿಡುಗಡೆಯಾದ ಧಡ್ಕನ್ ಸಿನಿಮಾ ಸೂಪರ್ ಹಿಟ್ ಆಗಿದೆ. ಎವರ್ ಗ್ರೀನ್ ಸಿನಿಮಾಗಳಲ್ಲಿ ಒಂದಾಗಿದೆ.

ಇಬ್ಬರೂ ಸಂತೋಷದ ಜೀವನ ನಡೆಸುತ್ತಿದ್ದಾರೆ

ಇಬ್ಬರೂ ಸಂತೋಷದ ಜೀವನ ನಡೆಸುತ್ತಿದ್ದಾರೆ

ಇಬ್ಬರ ಬ್ರೇಕಪ್ ಬಳಿಕ ಶಿಲ್ಪಾ ಮತ್ತು ಅಕ್ಷಯ್ ಎಲ್ಲೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇಬ್ಬರು ದೂರ ದೂರ ಆಗಿ ಒಂದೇ ವರ್ಷದಲ್ಲಿ ಅಂದರೆ 2001ರಲ್ಲಿ ಅಕ್ಷಯ್, ನಟಿ ಟ್ವಿಂಕಲ್ ಖನ್ನಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅಕ್ಷಯ್ ಮತ್ತು ಟ್ವಿಂಕಲ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇನ್ನು ನಟಿ ಶಿಲ್ಪಾ ಶೆಟ್ಟಿ 2009ರಲ್ಲಿ ಉದ್ಯಮಿ ರಾಜ್ ಕುಂದ್ರ ಜೊತೆ ಸಪ್ತಪದಿ ತುಳಿದಿದ್ದಾರೆ. ಶಿಲ್ಪಾ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಬಣ್ಣದ ಲೋಕದಿಂದ ದೂರ ಇದ್ದರೂ ಸಾಮಾಜಿಕ ಜಾಲತಾಣದಲ್ಲಿ ಶಿಲ್ಪಾ ಸಖತ್ ಆಕ್ಟೀವ್ ಆಗಿದ್ದಾರೆ.

More from Filmibeat

English summary
When Shilpa Shetty says Akshay Kumar used me and conveniently dropped me after he found someone else.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X