Aishwarya Rai: ಜಾತಕದಲ್ಲಿ ದೋಷ, ಮೊದಲು ಮರದೊಂದಿಗೆ ಐಶ್ ಮದ್ವೆ.. ಬಹಳ ಬೇಸರವಾಗಿತ್ತು ಎಂದಿದ್ದ ನಟಿ

ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಐಶ್ 1994ರಲ್ಲಿ ವಿಶ್ವ ಸುಂದರಿ ಕಿರೀಟ ಧರಿಸಿ, ಬಳಿಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಾಲಿವುಡ್‌ನಲ್ಲೇ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಅಲ್ಲೇ ನೆಲೆಗೊಂಡರು. 2007ರಲ್ಲಿ ಅಭಿಷೇಕ್ ಬಚ್ಚನ್ ಕೈ ಹಿಡಿದು ಚಿತ್ರರಂಗದಿಂದ ಕೊಂಚ ದೂರಾದರು.

ಅಭಿಷೇಕ್ ಹಾಗೂ ಐಶ್ ದಂಪತಿಗೆ ಒಬ್ಬ ಮಗಳು ಇದ್ದಾಳೆ. ಮದುವೆ ಬಳಿಕ ಐಶ್ವರ್ಯ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಯಿಉತು. ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ನಟಿಸುತ್ತಿರುತ್ತಾರೆ. ಕೊನೆಯದಾಗಿ 'ಪೊನ್ನಿಯಿನ್ ಸೆಲ್ವನ್' ಸರಣಿ ಸಿನಿಮಾಗಳಲ್ಲಿ ನಂದಿನಿ ಪಾತ್ರದಲ್ಲಿ ಕರಾವಳಿ ಚೆಲುವೆ ಮೋಡಿ ಮಾಡಿದ್ದರು. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಐಶ್ವರ್ಯಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.

When Aishwarya Rai slams rumours about getting married to a tree before Abhishek Bachchan

ಚಿತ್ರರಂಗದಲ್ಲಿ ಸೆಲೆಬ್ರೆಟಿಗಳ ಕುರಿತು ಸಾಕಷ್ಟು ಗಾಸಿಪ್‌ಗಳು ಹರಿದಾಡುತ್ತವೆ. ಕೆಲವೊಮ್ಮೆ ಒಂದಕ್ಕೊಂದು ಸಂಬಂಧವೇ ಇರುವುದಿಲ್ಲ. ಎಲ್ಲಿಂದ ಮತ್ತೆಲ್ಲಿಗೋ ಲಿಂಕ್ ಮಾಡಿ ಸುದ್ದಿಗಳನ್ನು ತೇಲಿಬಿಡಲಾಗುತ್ತದೆ. ಅಭಿಷೇಕ್ -ಐಶ್ವರ್ಯ ಮದುವೆ ವಿಚಾರದಲ್ಲೂ ಇಂತದ್ದೇ ಒಂದು ಗಾಳಿಸುದ್ದಿ ಬಹಳ ವೈರಲ್ ಆಗಿತ್ತು. ಅದ್ಯಾವ ಮಟ್ಟಿಗೆ ಅಂದರೆ ಐಶ್ ಹೋದಲ್ಲಿ ಬಂದಲ್ಲಿ ಇದೇ ಪ್ರಶ್ನೆ ಕೇಳಿ ಕೇಳಿ ಬೇಸರ ತರಿಸಿದ್ದರು.

ಅಭಿ- ಐಶ್ 16 ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ಅದಕ್ಕೂ ಮುನ್ನ ಐಶ್ ಹೆಸರು ಬೇರೆ ನಟರ ಜೊತೆ ತಳುಕು ಹಾಕಿಕೊಂಡಿತ್ತು. ಇನ್ನು ಅಭಿಷೇಕ್ ಬಚ್ಚನ್‌ಗೆ ಕೂಡ ನಟಿ ಕರೀಷ್ಮಾ ಕಪೂರ್ ಜೊತೆ ಎಂಗೇಜ್‌ಮೆಂಟ್ ಮುರಿದುಬಿದ್ದಿತ್ತು. ಇದೆಲ್ಲದರ ಬಳಿಕ ಅಭಿ- ಐಶ್ ಹತ್ತಿರವಾಗಿದ್ದರು. 'ಧೂಮ್-2' ಸಿನಿಮಾ ಚಿತ್ರೀಕರಣದ ವೇಳೆ ಪ್ರೀತಿಲಿ ಬಿದ್ದಿದ್ದರು. ಬಳಿಕ ಪೋಷಕರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದರು.

ಐಶ್ವರ್ಯ ರೈ ಜಾತಕದಲ್ಲಿ ಸಮಸ್ಯೆ ಇದ್ದ ಕಾರಣ ಮೊದಲು ಒಂದು ಮರದ ಜೊತೆ ಆಕೆ ಮದುವೆ ಮಾಡಿಸಿದ್ದರು ಎನ್ನುವ ಗಾಳಿಸುದ್ದಿ ಆಗ ಭಾರೀ ಸದ್ದು ಮಾಡಿತ್ತು. ಇವತ್ತಿಗೂ ಅದು ನಿಜ ಎಂದೇ ನಂಬುವವರು ಇದ್ದಾರೆ. ಅದ್ಯಾವ ಗಳಿಗೆಯಲ್ಲಿ ಈ ಸುದ್ದಿ ಹಬ್ಬಿತ್ತೋ ಅಲ್ಲಿಂದ ಮುಂದೆ ಐಶ್ ಬಹಳ ಸಮಸ್ಯೆ ಎದುರಿಸುವಂತಾಯಿತು. ಆದರೆ ಮದುವೆಯಾದ ಮರು ವರ್ಷವೇ, ಎನ್‌ಡಿಟಿಗೆ ಸಂದರ್ನದಲ್ಲಿ ಈ ಬಗ್ಗೆ ಐಶ್ವರ್ಯಾ ಸ್ಪಷ್ಟನೆ ನೀಡಿದ್ದರು.

When Aishwarya Rai slams rumours about getting married to a tree before Abhishek Bachchan

ಐಶ್ವರ್ಯಾ ರೈ ಜಾತಕ ದೋಷದ ಬಗ್ಗೆ ಬೇಸರದ ಸಂಗತಿಯನ್ನು ಹೊರ ಹಾಕಿದ್ದರು. ವಿದೇಶಕ್ಕೆ ಹೋದರೂ ಅಲ್ಲಿನ ಮಾಧ್ಯಮಗಳು ಕೂಡ ನೀವು ಮರದೊಂದಿಗೆ ಮೊದಲು ಮದುವೆಯಾಗಿದ್ದರಂತೆ ಹೌದಾ? ಕೇಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು. "ನನ್ನ ಮಂಗಳಸೂತ್ರ ದೋಷ ಪರಿಹಾರಕ್ಕಾಗಿ ಅಭಿ ಫ್ಯಾಮಿಲಿ ಮರದೊಂದಿಗೆ ಮದುವೆ ಆಗುವಂತೆ ಒತ್ತಡ ಹೇರಿದ್ದರು ಎಂದು ನಂಬುವವರು ಬಹಳ ಜನ ಇದ್ದಾರೆ" ಎಂದಿದ್ದರು.

ಐಶ್ ಹೋದಲ್ಲಿ ಬಂದಲ್ಲಿ ಇದೇ ಪ್ರಶ್ನೆ ಕೇಳಿ ಕೇಳಿ ಬಹಳ ಕಿರಿಕಿರಿ ಅನುಭವಿಸಿದ್ದರು. ವಿದೇಶಿ ಮಾಧ್ಯಮಗಳು ನಿರಂತರವಾಗಿ ಐಶ್ವರ್ಯಾ ರೈ ಅವರನ್ನು" ನೀವು ಮರವನ್ನು ಮದುವೆಯಾಗಿದ್ದೀರಾ? ನಿಮಗೆ ಜಾತಕ ದೋಷವಿದೆಯೇ?" ಎಂದು ಕೇಳುತ್ತಿದ್ದರು. ಈ ಎಲ್ಲಾ ಪ್ರಶ್ನೆಗಳಿಗೆ ನಾನು ಹೇಗೆ ಉತ್ತರಿಸಲು ಸಾಧ್ಯ?" ಎಂದು ಐಶ್ವರ್ಯಾ ಹೇಳಿದ್ದರು. ಇನ್ನು ಈ ವಿವಾದದ ಬಗ್ಗೆ ಅಭಿಷೇಕ್ ಬಚ್ಚನ್ ತಂದೆ ಅಮಿತಾಬ್ ಬಚ್ಚನ್ ಕೂಡ ಪ್ರತಿಕ್ರಿಯಿಸಿದ್ದರು. ನನ್ನ ಕುಟುಂಬದಲ್ಲಿ ಯಾರಿಗೂ ಮೂಢನಂಬಿಕೆ ಇಲ್ಲ. ಐಶ್ವರ್ಯಾ ಜಾತಕವನ್ನೂ ನಾವು ನೋಡಿಲ್ಲ. ನೀವು ಹೇಳುವ ಆ ಮರ ಎಲ್ಲಿದೆ? ಎಂದು ಬಿಗ್‌ ಬಿ ಗರಂ ಆಗಿದ್ದರು.

ಇನ್ನು ಅಭಿ-ಐಶ್ ದಾಂಪತ್ಯದಲ್ಲಿ ಬಿರುಕು ಮೂಡಿದೆ, ಇಬ್ಬರೂ ಡಿವೋರ್ಸ್ ಪಡೆದು ದೂರಾಗುತ್ತಾರೆ ಎನ್ನುವ ವದಂತಿಗಳು ಆಗಿಂದಾಗ್ಗೆ ಕೇಳಿ ಬರುತ್ತಿರುತ್ತದೆ. ಅದಕ್ಕೆ ಅಭಿಷೇಕ್ ಪರೋಕ್ಷವಾಗಿ ತಿರುಗೇಟು ಕೊಡುತ್ತಾ ಬರುತ್ತಿದ್ದಾರೆ.

More from Filmibeat

English summary
Did Aishwarya Rai Really Ever Marry A Tree?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X