'ಸಿಂಗಂ' ಚಿತ್ರಕ್ಕೆ ಸಭ್ಯತೆ ಗಡಿ ಮೀರಿದ್ದ ಅನುಷ್ಕಾ ಶೆಟ್ಟಿ? ಹಾಡಿನಲ್ಲಿ ಬ್ಲರ್ ಮಾಡಿದ್ದೇಕೆ?

ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ಇತ್ತೀಚೆಗೆ ವರ್ಷಗಳಲ್ಲಿ ಹೆಚ್ಚು ಎಕ್ಸ್‌ಪೋಸ್ ಮಾಡುತ್ತಿಲ್ಲ. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ಆದರೆ ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಸಿಕ್ಕಾಪಟ್ಟೆ ಎಕ್ಸ್‌ಪೋಸ್ ಮಾಡುತ್ತಿದ್ದರು. ಯೋಗ ಟೀಚರ್ ಆಗಿದ್ದ ಸ್ವೀಟಿ ಬಣ್ಣದಲೋಕಕ್ಕೆ ಬಂದ ಹೊಸತರಲ್ಲಿ ತಮ್ಮ ಮಾದಕ ಮೈಮಾಟ ಪ್ರದರ್ಶಿಸಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದು ಸುಳ್ಳಲ್ಲ.

'ಸೂಪರ್', 'ಬಿಲ್ಲಾ', 'ಡಾನ್', 'ವಿಕ್ರಮಾರ್ಕುಡು', 'ಶೌರ್ಯಂ', 'ವೇದಂ', 'ಸಿಂಗಂ' ಹೀಗೆ ಹಲವು ಸಿನಿಮಾಗಳಲ್ಲಿ ತಮ್ಮ ಗ್ಲಾಮರ್‌ ಶೋನಿಂದಲೇ ಅನುಷ್ಕಾ ಶೆಟ್ಟಿ ಹೆಚ್ಚು ಗಮನ ಸೆಳೆದಿದ್ದರು. ಒಳ್ಳೆ ನಟಿಯಾಗಿದ್ದರೂ ಒಂದಷ್ಟು ಸಿನಿಮಾಗಳಲ್ಲಿ ಆಕೆಯನ್ನು ಗ್ಲಾಮರ್ ಬೊಂಬೆಯಂತೆಯೇ ತೋರಿಸುವ ಪ್ರಯತ್ನ ನಡೀತು. ತಮಿಳಿನ 'ಸಿಂಗಂ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 2010ರಲ್ಲಿ ಈ ಬಂದ ಚಿತ್ರಕ್ಕೆ ಹರಿ ಆಕ್ಷನ್ ಕಟ್ ಹೇಳಿದ್ದರು. ಎಸಿಪಿ ದೊರೆಸಿಂಗಂ ಆಗಿ ಸೂರ್ಯ ಅಬ್ಬರಿಸಿದ್ದರು.

When Anushka shetty goes bold in Singam film song

ದೊರೆಸಿಂಗಂ ಪ್ರೇಯಸಿ ಕಾವ್ಯಾ ಮಹಾಲಿಂಗಂ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ಕಾಣಿಸಿಕೊಂಡಿದ್ದರು. ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆಯಲ್ಲಿ 'ಸಿಂಗಂ' ಚಿತ್ರದ ಆಲ್ಬಮ್ ಹಿಟ್ ಆಗಿತ್ತು. ಅದರಲ್ಲೂ 'ಎನ್ ಇದಯಂ' ಸಾಂಗ್ ಬಹಳ ಜೋರಾಗಿ ಸದ್ದು ಮಾಡಿತ್ತು. ರೊಮ್ಯಾಂಟಿಕ್ ಸಾಂಗ್‌ಗೆ ಸೂರ್ಯ ಹಾಗೂ ಅನುಷ್ಕಾ ಶೆಟ್ಟಿ ಸಿಂಪಲ್ ಸ್ಟೆಪ್ಸ್ ಹಾಕಿ ರಂಗೇರಿಸಿದ್ದರು. ಆದರೆ ಸಾಂಗ್‌ನಲ್ಲಿ ಅನುಷ್ಕಾ ಶೆಟ್ಟಿ ಬಹಳ ಎಕ್ಸ್‌ಪೋಸ್ ಮಾಡಿದ್ದಾರೆ ಎಂದು ಆಗ ಸುದ್ದಿಯಾಗಿತ್ತು.

ಹಾಡಿನ ಉದ್ದಕ್ಕೂ ಸೂರ್ಯ, ಅನುಷ್ಕಾ ವೆರೈಟಿ ವೆರೈಟಿ ಕಾಸ್ಟ್ಯೂಮ್‌ಗಳಲ್ಲಿ ಮಿಂಚಿದ್ದರು. ಆದರೆ ಒಂದು ಕಾಸ್ಟ್ಯೂಮ್‌ನಲ್ಲಿ ಆಕೆ ಸಿಕ್ಕಾಪಟ್ಟೆ ಎಕ್ಸ್‌ಪೋಸ್ ಮಾಡಿದ್ದಾರೆ ಎನ್ನಲಾಗಿತ್ತು. ಕೆಲ ಫ್ರೇಮ್‌ಗಳಲ್ಲಿ ಸ್ವೀಟಿ ಎದೆಯ ಮೇಲೆ ಬ್ಲರ್ ಮಾಡಲಾಗಿತ್ತು. ಸೆನ್ಸಾರ್ ಮಂಡಳಿಯ ಸೂಚನೆಯಂತೆ ಈ ರೀತಿ ಚಿತ್ರತಂಡ ಈ ರೀತಿ ಬ್ಲರ್ ಮಾಡಿತ್ತು ಎನ್ನುವ ಚರ್ಚೆ ಅಂದು ನಡೆದಿತ್ತು. ಆದರೆ ಸಾಂಗ್‌ ಬಗ್ಗೆ ಹೈಪ್ ಕ್ರಿಯೇಟ್ ಮಾಡಲು ಚಿತ್ರತಂಡ ಆ ರೀತಿ ಮಾಡಿತ್ತು ಎಂದು ಕೆಲವರು ಮಾತನಾಡಿಕೊಂಡಿದ್ದರು.

When Anushka shetty goes bold in Singam film song

ಅನುಷ್ಕಾ ಶೆಟ್ಟಿ ಅದಕ್ಕಿಂತಲೂ ಹೆಚ್ಚು ಎಕ್ಸ್‌ಪೋಸ್ ಮಾಡಿರುವ ದೃಶ್ಯಗಳಿವೆ. ಬೇರೆ ನಟಿಯರು ಕೂಡ ಇದಕ್ಕಿಂತಲೂ ಬೋಲ್ಡ್ ಆಗಿ ನಟಿಸಿರುವ ಉದಾಹರಣೆಗಳಿವೆ. ಆದರೆ 'ಸಿಂಗಂ' ಚಿತ್ರದ 'ಎನ್ ಇದಯಂ' ಸಾಂಗ್‌ಗೆ ಮಾತ್ರ ಸೆನ್ಸಾರ್ ಮಂಡಳಿ ಅಭ್ಯಂತರ ವ್ಯಕ್ತಪಡಿಸಿತ್ತಾ? ಎಂದು ಆಗ ಭಾರೀ ಚರ್ಚೆ ಆಗಿತ್ತು. ಖುದ್ದು ಸ್ವೀಟಿ ಸೂಚನೆಯಂತೆ ತಂಡ ಈ ನಿರ್ಣಯ ಕೈಗೊಂಡಿತ್ತಾ? ಒಟ್ನಲ್ಲಿ ಚಿತ್ರತಂಡ ಈ ರೀತಿ ಮಾಡಿದ್ದಕ್ಕೆ ಸಾಂಗ್ ಬಗ್ಗೆ ಮತ್ತಷ್ಟು ನಿರೀಕ್ಷೆ ಮೂಡಿದ್ದು ಸುಳ್ಳಲ್ಲ. ಸಾಂಗ್ ಹಿಟ್ ಆಗಿ ಚಿತ್ರಕ್ಕೆ ಪ್ಲಸ್ ಆಗಿತ್ತು.

'ಬಾಹುಬಲಿ' ಸರಣಿ ಬಳಿಕ ಅನುಷ್ಕಾ ಶೆಟ್ಟಿ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಮಾಡಿದ್ದಾರೆ. 'ಸೈಜ್ ಜೀರೊ' ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡು ಆಕೆ ದಪ್ಪ ಆಗಿದ್ದೇ ಇದಕ್ಕೆ ಕಾರಣ ಎನ್ನುವ ವಾದವೂ ಇದೆ. ಆದರೆ ಇದೀಗ ಮತ್ತೆ ತೂಕ ಇಳಿಸಿಕೊಂಡು ಸ್ವೀಟಿ ವಾಪಸ್ ಬಂದಿದ್ದಾರೆ. ಕಳೆದ ವರ್ಷ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಚಿತ್ರದಲ್ಲಿ ಮಂಗಳೂರು ಚೆಲುವೆ ನಟಿಸಿದ್ದರು. ಇದೀಗ ತೆಲುಗಿನ 'ಘಾಟಿ' ಹಾಗೂ ಮಲಯಾಳಂನ 'ಕಥನಾರ್' ಎನ್ನುವ ಸಿನಿಮಾಗಳಲ್ಲಿ ಆಕೆ ಬಣ್ಣ ಹಚ್ಚಿದ್ದಾರೆ.

ಈ ಹಿಂದೆ ಸ್ವೀಟಿ ನಟಿಸಿದ್ದ 'ವೇದಂ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಕ್ರಿಶ್ 'ಘಾಟಿ' ಚಿತ್ರದ ನೇತೃತ್ವ ವಹಿಸಿದ್ದಾರೆ. ಅಮೇಜಾನ್ ಪ್ರೈಂ ಸಂಸ್ಥೆ ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿದೆ. ಇನ್ನು ಮಲಯಾಳಂನ 'ಕಥನಾರ್' ಚಿತ್ರದಲ್ಲಿ ಆಕೆ ನೆಗೆಟಿವ್ ರೋಲ್ ಪ್ಲೇ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
Why Singam movie team blur anushka shetty body in En Idhayam Song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X