ಪ್ರೀತಿ ಸಾಕು, ಮದುವೆ ಯಾಕೆ ಬೇಕು? 11 ನಿಮಿಷ ಹಾಸಿಗೆ ವಿಚಾರಕ್ಕಾ?: ಸುಷ್ಮಾ ವೀರ್

ಗುಬ್ಬಿ ವೀರಣ್ಣ ಮರಿ ಮೊಮ್ಮಗಳು, ಗಾಯಕಿ-ನಟಿ ಬಿ. ಜಯಶ್ರೀ ಪುತ್ರಿ ಸುಷ್ಮಾ ವೀರ್ ಕನ್ನಡ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಕನ್ನಡ 'ಬಿಗ್ ಬಾಸ್' ಸೀಸನ್‌- 3ರಲ್ಲಿ ವೈಲ್ಡ್‌ ಕಾರ್ಡ್ ಎಂಟ್ರಿ ಪಡೆದು ದೊಡ್ಮನೆ ಒಳಗೆ ಹೋಗಿದ್ದರು. ಇತ್ತೀಚೆಗೆ ನಿರ್ದೇಶಕ ರಘುರಾಮ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸುಷ್ಮಾ ಮಾತನಾಡಿದ್ದಾರೆ.

ರೆಬಲ್ ಸ್ಟಾರ್ ಅಂಬರೀಶ್ ನಟನೆಯ 'ವಸಂತ ಪೂರ್ಣಿಮಾ' ಚಿತ್ರದಲ್ಲಿ ಸುಷ್ಮಾ ನಾಯಕಿಯಾಗಿ ನಟಿಸಿದ್ದರು. ಬಳಿಕ ತಮಿಳು, ತೆಲುಗು ಸಿನಿಮಾಗಳಲ್ಲಿ ಕೂಡ ಸುಷ್ಮಾ ನಟಿಸಿದ್ದರು. 'ಶ್ರೀಗಂಧ', 'ಮಹಾಕ್ಷತ್ರಿಯ', 'ಉಲ್ಟಾ ಪಲ್ಟಾ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಗುಬ್ಬಿ ವೀರಣ್ಣ ಮೊಮ್ಮಗಳು ಬಣ್ಣ ಹಚ್ಚಿದ್ದರು. ಆದರೆ ಬಳಿಕ ಅಷ್ಟಾಗಿ ನಟಿಸಲಿಲ್ಲ.

When bigg Boss fame sushma veer revealed real reason behind not getting married

ಸುಷ್ಮಾ ವೀರ್ ಮದುವೆ ಆಗದೆಯೇ ಉಳಿದುಬಿಟ್ಟಿದ್ದಾರೆ. ಈ ಬಗ್ಗೆ ಎದುರಾದ ಪ್ರಶ್ನೆಗೆ ಆಕೆ ಉತ್ತರಿಸಿದ್ದಾರೆ. "ಮದುವೆ ಎನ್ನುವುದು ನನಗೆ ಸಿಂಹಸ್ವಪ್ನ. ನಾನು ಒಳ್ಳೆ ಸ್ನೇಹವನ್ನು, ಸ್ನೇಹಿತರನ್ನು ನಂಬುತ್ತೇನೆ. ಒಂದು ಸ್ಪರ್ಶದಲ್ಲಿ ಇರು ಒಳ್ಳೆ ಸ್ಪರ್ಶ, ಕೆಟ್ಟ ಸ್ಪರ್ಶ ಎನ್ನುವುದು ಗೊತ್ತಾಗಿಬಿಡುತ್ತದೆ. ನನಗೆ ಸಾಕಷ್ಟು ಒಳ್ಳೆ ಸ್ನೇಹಿತರಿದ್ದಾರೆ."

"ಸ್ನೇಹಿತರ ಜೊತೆ ಮಾತು, ಹರಟೆ, ವಾದ, ವಿವಾದ, ಗುದ್ದಾಟ ಚೆನ್ನಾಗಿರುತ್ತದೆ. ಮದುವೆ ಆಗಿ ಏನು ಮಾಡ್ತೀರಾ? ಅದರಲ್ಲಿ ಹೆಚ್ಚು ಏನಿದೆ? 11 ನಿಮಿಷಗಳ ಹಾಸಿಗೆ ವಿಚಾರವೇ? ಈಗ ಒಳ್ಳೆ ಕಂಪಾನಿಯನ್‌ಶಿಪ್‌ಗಾಗಿ ಜನ ಮದುವೆ ಆಗುತ್ತಿದ್ದಾರೆ ಎಂದು ಅನ್ನಿಸುತ್ತಾ? ಸೆಕ್ಯುರಿಟಿಗಾಗಿ ಮದುವೆನಾ? ಗಂಡನ ವ್ಯಕ್ತಿತ್ವ ಅಷ್ಟೇನಾ? ನಿಮ್ಮ ಇನ್‌ಸೆಕ್ಯುರಿಟಿಗಾಗಿ ಮದುವೆ ಆಗ್ತೀರಾ? ಎಂದು ಸುಷ್ಮಾ ವೀರ್ ಪ್ರಶ್ನಿಸಿದ್ದಾರೆ.

"ಪ್ರೀತಿ ಎನ್ನುವುದು ಇದ್ದರೆ ಅದಕ್ಕೆ ಮದುವೆ ಎನ್ನುವ ಬಂಧನ ಯಾಕೆ ಬೇಕು? ಅದಕ್ಕೆ ಫಿಸಿಕಲ್ ರಿಲೇಷನ್‌ಶಿಪ್‌ ಅನ್ನೋ ಟ್ಯಾಗ್‌ ಯಾಕೆ? ಹೊಂದಾಣಿಗೆ ಎನ್ನುವುದು ಇಬ್ಬರು ಸ್ನೇಹಿತರ ನಡುವೆಯೂ ಇರಬಹುದು. Me time ಅಂದ್ರೆ ಏನು? ಅದು ನನ್ನನ್ನು ನಾನು ಪ್ರೀತಿಸಬೇಕು. ಅದು ಬಿಟ್ಟು ಇನ್ನೊಬ್ಬರಿಗಾಗಿ ಕೊರಗುತ್ತಾ ಅದರಿಂದ ನನ್ನನ್ನು ನಾನು ಅಳಿಯಲು ಸಿದ್ಧಳಿಲ್ಲ. ಈಗ ಜೀವನದಲ್ಲಿ ನನಗೆ ಏನು ಕೊರತೆ ಇದೆ? ಮದುವೆಯಾದವರ ದಾಂಪತ್ಯದಲ್ಲಿ ಏನೇನು ಸಿಕ್ಕಿದೆಯೋ ಅದಕ್ಕಿಂ ಜಾಸ್ತಿ ಭಗವಂತ ನನಗೆ ಕೊಟ್ಟಿದ್ದಾನೆ" ಎಂದು ಸುಷ್ಮಾ ಹೇಳಿದ್ದಾರೆ.

When bigg Boss fame sushma veer revealed real reason behind not getting married

"ಯಾರಿಗೂ ಸಿಗದಂತಹ ಬೆಂಗಲ, ಪ್ರೀತಿಸುವವರ ದಂಡು, ಗೌರವಿಸುವವರ ಬಳಗ 50 ಕೋಟಿ ಹೃದಯಗಳು ಸಿಕ್ಕಿದೆ. ಇದಕ್ಕಿಂತ ಇನ್ನು ಎಷ್ಟು ಕೇಳಲು ಸಾಧ್ಯ. ಸಿನಿಮಾ, ಕಲೆ ನನ್ನ ಜೀವನ. ಅದು ಬದಲಾಗಲ್ಲ. ಮಾನವೀಯತೆ ನನ್ನ ಆತ್ಮ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂದೆ ರಾಜಕೀಯದಲ್ಲಿ ಮುಂದುವರೆಯುವ ಬಗ್ಗೆ ಸುಷ್ಮಾ ವೀರ್ ಮಾತನಾಡಿದ್ದಾರೆ. ಕಳೆದ ವರ್ಷ ಆಕೆ ಆಮ್ ಆದ್ಮಿ ಪಕ್ಷ ಸೇರಿದ್ದರು.

ಮದುವೆ ಜೀವನದಲ್ಲಿ ಏನೇಲ್ಲಾ ಖುಷಿ ಸಿಗುತ್ತದೆ ನನಗೆ ಮದುವೆ ಆಗದೇ ಸಿಕ್ಕಿದೆ. ಸಿನಿಮಾ ಆರ್ಟ್‌ ನನ್ನ ಜೀವನ ಅದರಲ್ಲಿ ಮಾನವೀಯತೆ ನನ್ನ ಸೋಲ್ ಆಗಿರುತ್ತದೆ' ಎಂದು ಸುಷ್ಮಾ ಹೇಳಿದ್ದಾರೆ. ಜನರಿಗೆ ಸೇವೆ ಮಾಡಲು ರಾಜಕೀಯ ಬೇಕು. ಸಿನಿಮಾರಂಗದಿಂದ ಅದು ಸಾಧ್ಯವಿಲ್ಲ. ರೀಲ್ ಲೈಫ್‌ಗೂ ರಿಯಲ್ ಲೈಫ್‌ಗೂ ವ್ಯತ್ಯಾಸವಿದೆ ಎಂದು ಸುಷ್ಮಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

More from Filmibeat

English summary
Why Actress Sushma veer Chose Not To Marry Ever;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X