ದರ್ಶನ್ ನೆಚ್ಚಿನ ಬಾಲಿವುಡ್ ನಟ ಯಾರು? ಆತನನ್ನು ಕಾಪಿ ಮಾಡುವುದು ಏಕೆ ದಾಸ?
ಕ್ಯಾಮರಾ ಅಸಿಸ್ಟೆಂಟ್ ಆಗಿ ಚಿತ್ರರಂಗಕ್ಕೆ ಬಂದು ಬಳಿಕ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿ ಇಂದು ಸೂಪರ್ ಸ್ಟಾರ್ ಆಗಿದ್ದಾರೆ ದರ್ಶನ್. ಕನ್ನಡದ ನಂಬರ್ ವನ್ ನಟರ ಸಾಲಿನಲ್ಲಿ ಚಾಲೆಂಜಿಂಗ್ ಸ್ಟಾರ್ ನಿಂತಿದ್ದಾರೆ. ಇತ್ತೀಚೆಗೆ 'ಕಾಟೇರ'ನಾಗಿ ಮತ್ತೆ ಬಾಕ್ಸಾಫೀಸ್ ಶೇಕ್ ಮಾಡಿದರು.
ದರ್ಶನ್ ಸಿನಿಜರ್ನಿಗೆ 25 ವರ್ಷ ತುಂಬಿದೆ. ಈ ಸಂಭ್ರಮವನ್ನು ದೊಡ್ಡದಾಗಿ ಆಚರಿಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. 50ಕ್ಕೂ ಅಧಿಕ ಸಿನಿಮಾಗಳಲ್ಲಿ ದರ್ಶನ್ ನಟಿಸಿದ್ದಾರೆ. ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಈ ಹಾದಿಯಲ್ಲಿ ಲವರ್ ಬಾಯ್ ಆಗಿ ರೌಡಿಯಾಗಿ ಅಣ್ಣನಾಗಿ ವಿಶೇಷ ಚೇತನನಾಗಿ ದುರ್ಯೋಧನನಾಗಿ ರಾಯಣ್ಣನಾಗಿ ನಟಿಸಿ ಗೆದ್ದಿದ್ದಾರೆ.

ತಮ್ಮ ಸಿನಿಕರಿಯರ್ ಹಾಗೂ ನಿಜ ಜೀವನದಲ್ಲಿ ದರ್ಶನ್ ಸಾಕಷ್ಟು ಏಳುಬೀಳು ಕಂಡಿದ್ದಾರೆ. ಅದನ್ನೆಲ್ಲಾ ಮೆಟ್ಟಿನಿಂತು ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ತಮ್ಮ ಸಿನಿಮಾಗಳಿಂದ ಮಾತ್ರವಲ್ಲದೇ ಪ್ರಾಣಿ ಪಕ್ಷಿ ಕಾಳಜಿ, ಸೇವೆ ಗುಣಗಳಿಂದ ಅಭಿಮಾನಿಗಳಿಗೆ ಹತ್ತರವಾಗಿದ್ದಾರೆ. ಈ ವರ್ಷ ಹುಟ್ಟುಹಬ್ಬದ ಸಂಭ್ರಮದಲ್ಲಿ ಹಲವು ಸಿನಿಮಾಗಳು ಘೋಷಣೆ ಆಗಿದೆ. ಅದರಲ್ಲಿ 'ಡೆವಿಲ್' ಟೀಸರ್ ಬಂದು ಸದ್ದು ಮಾಡ್ತಿದೆ.
ನಟ ದರ್ಶನ್ ಬರೀ ಹೀರೊ ಆಗಿ ಮಾತ್ರವಲ್ಲದೇ ನೆಗೆಟಿವ್ ಶೇಡ್ ರೋಲ್‌ಗಳಲ್ಲಿ ಸಹ ನಟಿಸಿದ್ದಾರೆ. 'ನವಗ್ರಹ' ಚಿತ್ರದಲ್ಲಿ ಮಾಡಿದ್ದ ಜಗ್ಗು ಪಾತ್ರ ಅಭಿಮಾನಿಗಳ ಫೇವರಿಟ್. ಇದೀಗ 'ಡೆವಿಲ್' ಚಿತ್ರದಲ್ಲೂ ಅಂಥದ್ದೇ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಒಂದಷ್ಟು ಸಿನಿಮಾಗಳಲ್ಲಿ ಖಳನಟರಾಗಿಯೇ ದರ್ಶನ್ ಕಾಣಿಸಿಕೊಂಡಿದ್ದರು. ಅಂದಹಾಗೆ ದರ್ಶನ್‌ಗೆ ನಟಿಸುವುದಕ್ಕೆ ಪ್ರೇರಣೆ ಯಾರು? ಯಾರ ನಟನೆಯನ್ನು ದರ್ಶನ್ ಇಷ್ಟಪಡುತ್ತಾರೆ? ಕಾಪಿ ಮಾಡುತ್ತಾರೆ ಗೊತ್ತಾ? 20 ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಈ ಬಗ್ಗೆ ದರ್ಶನ್ ಮಾತನಾಡಿದ್ದರು.
"ಗುಲ್ಷನ್ ಗ್ರೋವರ್, ಪರೇಶ್ ರಾವಲ್, ಅಂಬರೀಶ್ ಪುರಿ ಇಂತಹವರನ್ನೇ ನಾನು ಸ್ಫೂರ್ತಿಯಾಗಿಟ್ಟುಕೊಂಡು ನಟಿಸುತ್ತಿದ್ದೇನೆ. ನಾನು ಇವತ್ತು ಹೀರೊ ಆಗಿದ್ದರೂ ಗುಲ್ಷನ್ ಗ್ರೋವರ್ ಅಭಿನಯದಲ್ಲಿ ಸಾಕಷ್ಟು ವಿಚಾರಗಳನ್ನು ಪಾಲಿಸುತ್ತೇನೆ. ಕಾರಣ ಒಂದು ವಿಚಾರ ನಾನು ಓಪನ್ ಆಗಿ ಹೇಳುತ್ತೀನಿ. ನಾನು ಇನ್ನೊಬ್ಬರನ್ನು ಕಾಪಿ ಮಾಡಿಯೇ ನಟಿಸುವುದು. ಅವರ ನಟನೆ ನೋಡಿ ನಾನು ಅದನ್ನು ನನಗೆ ತಕ್ಕಂತೆ ಹೇಗೆ ಮಾಡಬಹುದು ಎಂದು ನೋಡ್ತೀನಿ"
"ಶಾರುಖ್ ಖಾನ್ ಹೇಳ್ತಾರೆ ನಾನು ಅಮಿತಾಬ್ ಬಚ್ಚನ್, ದಿಲೀಪ್ ಕುಮಾರ್ ಅವರನ್ನು ಕಾಪಿ ಮಾಡ್ತೀನಿ ಅಂತ. ತಪ್ಪೇನಿಲ್ಲ. ಒಬ್ಬರನ್ನು ನೋಡಿಯೇ ಇನ್ನೊಬ್ಬರು ಕಲಿಯುವುದು. ನಮಗೆ ಸಿನಿಮಾಗಳೇ ಸ್ಕೂಲ್ ಇದ್ದಂತೆ. ಸಿನಿಮಾಗಳನ್ನು ನೋಡಿಯೇ ಹೇಗೆ ನಟಿಸಬೇಕು ಎಂದು ಕಲಿಯುತ್ತೇವೆ"

"ಗುಲ್ಷನ್ ಗ್ರೋವರ್ ಅವರನ್ನು ನಾನು ಬಹಳ ಕಾಪಿ ಮಾಡ್ತೀನಿ. ಏಕಂದರೆ ಆತ ವಿಲನ್ ಆಗಿದ್ದರೂ ಕೂಡ ಒಂದು ಸಿನಿಮಾದಲ್ಲಿ ಮಾಡಿದಂತೆ ಇನ್ನೊಂದು ಸಿನಿಮಾದಲ್ಲಿ ಮಾಡಲ್ಲ. ಮ್ಯಾನರಿಸಂ, ಗೆಟಪ್ ಎಲ್ಲವನ್ನು ಬದಲಿಸಿಕೊಳ್ಳುತ್ತಾರೆ. ನಾನು ಹೀರೊ ಆಗಿದ್ದರೂ ಅವರನ್ನು ಕಾಪಿ ಮಾಡ್ತೀನಿ. ಒಂದು ಸಿನಿಮಾದಲ್ಲಿ ಕಾಣಿಸಿದಂತೆ ದರ್ಶನ್ ಇನ್ನೊಂದು ಸಿನಿಮಾದಲ್ಲಿ ಕಾಣುವುದಕ್ಕೆ ಇಷ್ಟಪಡಲ್ಲ. ಹೇರ್ ಸ್ಟೈಲ್, ಮ್ಯಾನರಿಸಂ ಹೀಗೆ ಏನಾದರೂ ಬದಲಿಸಿಕೊಳ್ಳುತ್ತೇನೆ" ಎಂದು ದರ್ಶನ್ ಹೇಳಿಕೊಂಡಿದ್ದರು.


Click it and Unblock the Notifications











