ನಟ ದರ್ಶನ್ ಡ್ರೀಮ್ ಕಾರು ಯಾವ್ದು? ಬೆಲೆ ಎಷ್ಟು? ಖರೀದಿಸಲು ಮೀನಾಮೇಷ ಯಾಕೆ?

ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಪುತ್ರ ದರ್ಶನ್ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಸಾಕಷ್ಟು ಅವಮಾನ, ಅಪಮಾನ ಎದುರಿಸಿ ಹಂತ ಹಂತವಾಗಿ ದರ್ಶನ್ ಹೀರೊ ಆದವರು. ದರ್ಶನ್ ಸಕ್ಸಸ್‌ಫುಲ್ ಜರ್ನಿ ಸಾಕಷ್ಟು ಜನರಿಗೆ ಸ್ಫೂರ್ತಿಯಾಗಿದೆ. ಸ್ವಂತ ಪರಿಶ್ರಮದಿಂದ ಚಿತ್ರರಂಗದಲ್ಲಿ ಗೆದ್ದವರು ಚಾಲೆಂಜಿಂಗ್ ಸ್ಟಾರ್.

ಲೈಟ್‌ಬಾಯ್ ಆಗಿ ಚಿತ್ರರಂಗಕ್ಕೆ ಬಂದ ದರ್ಶನ್ ಬಳಿಕ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದರು. ಆ ಬಳಿಕ 'ಮೆಜೆಸ್ಟಿಕ್' ಸಿನಿಮಾ ಮೂಲಕ ಹೀರೊ ಆಗಿ ಗೆದ್ದರು. ತೂಗುದೀಪ ಶ್ರೀನಿವಾಸ್ ಮಗನಾದರೂ ದರ್ಶನ್‌ಗೆ ಅಷ್ಟು ಸುಲಭವಾಗಿ ಅವಕಾಶಗಳು ಸಿಗಲಿಲ್ಲ. ಕುಟುಂಬ ನಡೆದಲು ಹಸು ಕಟ್ಟಿ ಹಾಲು ಮಾರಿದ ದಿನಗಳು ಇವೆ. ಇವತ್ತು ಕನ್ನಡ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ದರ್ಶನ್ ಒಬ್ಬರು.

When Kannada actor Darshan express a desire to buy his dream car

ಕನ್ನಡ ಚಿತ್ರರಂಗದ ಓಡುವ ಕುದುರೆ ಆಗಿರುವ ದರ್ಶನ್‌ ಇವತ್ತು ಕೋಟಿ ಕೋಟಿ ಸಂಪಾದನೆ ಪಡೆಯುತ್ತಾರೆ. ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ತಮ್ಮ ಸರಳ, ಸಜ್ಜನ ಗುಣದಿಂದಲೂ ಅಭಿಮಾನಿಗಳಿಗೆ ಇಷ್ಟವಾಗಿದ್ದಾರೆ. ಪ್ರಾಣಿ-ಪಕ್ಷಿ ಕಾಳಜಿ, ಸಹಾಯ ಗುಣದಿಂದಲೂ ಹೆಚ್ಚು ಹತ್ತಿರವಾಗಿದ್ದಾರೆ. ನಟ ದರ್ಶನ್ ಕಾರ್, ಬೈಕ್ ಕ್ರೇಜ್ ಬಗ್ಗೆ ಗೊತ್ತೇಯಿದೆ. ಸಾಕಷ್ಟು ಐಷಾರಾಮಿ ಕಾರುಗಳು ನಟ ದರ್ಶನ್ ಬಳಿಯಿದೆ. ಆದರೆ ತಂದೆ ಕೊಟ್ಟ ಲೂನಾ ಗಾಡಿಯನ್ನು ಇನ್ನು ಇಟ್ಟುಕೊಂಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳಿ ಪೋರ್ಷೆ, ಟೊಯೋಟಾ ಫಾರ್ಚೂನರ್, ರೇಂಜ್ ರೋವರ್, ಲ್ಯಾಂಬೋರ್ಗಿನಿ, ಟೊಯೋಟಾ ವೆಲ್‌ಫೈರ್, ಲಂಬೋರ್ಗಿನಿ ಉರಸ್, ಜಾಗ್ವಾರ್, ಆಡಿ ಕ್ಯೂ6, ಜೀಪ್ ರಾಂಗ್ಲರ್ ರೀತಿಯ ಐಷಾರಾಮಿ ಕಾರುಗಳಿವೆ. ಆದರೆ ದರ್ಶನ್‌ ಡ್ರೀಮ್ ಕಾರು ಯಾವುದು ಗೊತ್ತಾ? ತಮ್ಮ ನೆಚ್ಚಿನ ಕಾರ್ ಬಗ್ಗೆ ಹಿಂದೆ ಸಂದರ್ಶನವೊಂದರಲ್ಲಿ ನಟ ದರ್ಶನ್ ಮಾತನಾಡಿದ್ದರು.

ನಟ ದರ್ಶನ್‌ಗೆ ಕಾರ್ ಕ್ರೇಜ್ ಮಾತ್ರವಲ್ಲ, ಡ್ರೈವಿಂಗ್ ಅಂದ್ರೂ ಬಹಳ ಇಷ್ಟ. ಕೆಲವೊಮ್ಮೆ ಡ್ರೈವರ್ ಇದ್ದರೂ ನೂರಾರು ಕಿಲೋಮೀಟರ್ ಕಾರ್ ಡ್ರೈವ್ ಮಾಡುವುದು ಇದೆ. ಅಷ್ಟರಮಟ್ಟಿಗೆ ಡ್ರೈವಿಂಗ್ ಬಗ್ಗೆ ಒಲವಿದೆ. ಇನ್ನು ಹಿಂದೆ ಪವರ್‌ ಟಿವಿ ಸಂದರ್ಶನದಲ್ಲಿ ತಮ್ಮ ನೆಚ್ಚಿನ ಕಾರ್ ಬಗ್ಗೆ ಮಾತನಾಡಿದ್ದರು.

When Kannada actor Darshan express a desire to buy his dream car

"ಬೆಂಟ್ಲಿ ಕಾರು ಅಂದ್ರೆ ಇಷ್ಟ. ಅದನ್ನು ಕೊಂಡುಕೊಳ್ಳಬೇಕು. ಆದರೆ ಬೆಂಗಳೂರಿನಲ್ಲಿ ಅದರ ಶೋರೂಂ ಇಲ್ಲ. ಅದಕ್ಕೆ ಹಿಂದುಮುಂದು ನೋಡುತ್ತಿದ್ದೇನೆ. ಯಾಕಂದ್ರೆ ಹಮ್ಮರ್ ಕಾರ್ ತಗೊಂಡು ಬಹಳ ಸಮಸ್ಯೆ ಆಗಿತ್ತು. ಕೆಟ್ಟ ಕಾರ್ ಅದು. ಆಗ ಇಲ್ಲಿ ಆ ಕಾರ್ ಶೋರೂಂ ಇರಲಿಲ್ಲ. ದುಬೈನಿಂದ ಮೆಕಾನಿಕ್‌ ಬರಬೇಕಿತ್ತು. ಆತನನ್ನು ಕರೆಸಿ ಸಾಕಷ್ಟು ಹಣ ವ್ಯಯಿಸಬೇಕಿತ್ತು. ಆ ಕಷ್ಟ ಬೇಡ ಅಂತ ಆ ಕಾರು ಮಾರಿಬಿಟ್ಟೆ. ಹಾಗಾಗಿ ಇಲ್ಲಿ ಶೋರೂಂ ಇರುವ ಕಾರ್ ತೆಗೆದುಕೊಳ್ಳಬೇಕು. ಬೆಂಟ್ಲಿ ಶೋರೂಂ ದೆಹಲಿಯಲ್ಲಿದೆ. ಅದಕ್ಕೆ ಸುಮ್ಮನಿದ್ದೇನೆ" ಎಂದಿದ್ದರು.

ಅಂದಹಾಗೆ ಬೆಂಟ್ಲಿ ಕಾರು ಬೆಲೆ 4 ಕೋಟಿ ರೂ.ನಿಂದ ಆರಂಭವಾಗುತ್ತದೆ. ಇನ್ನು ಚಿಕ್ಕಂದಿನಿಂದ ನಟ ದರ್ಶನ್‌ಗೆ ಟಾಟಾ ಸಿಯೆರಾ ಕಾರ್ ಅಂದರೆ ಬಹಳ ಇಷ್ಟವಿತ್ತಂತೆ. ಅವರು ಮೊದಲು ಖರೀದಿಸಿದ ಕಾರ್ ಕೂಡ ಅದೇ. ಈ ಬಗ್ಗೆಯೂ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇಷ್ಟವಾದರೆ ಆಪ್ತರಿಂದಲೂ ದರ್ಶನ್ ಕಾರುಗಳನ್ನು ಕೊಂಡುಕೊಳ್ಳುತ್ತಾರೆ.

ಸದ್ಯ ನಟ ದರ್ಶನ್ 'ಡೆವಿಲ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಿಲನಾ ಪ್ರಕಾಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಮೊದಲ ಶೆಡ್ಯೂಲ್ ಚಿತ್ರೀಕರಣ ಮುಗಿದಿದೆ. ಚಿತ್ರೀಕರಣದ ವೇಳೆಗೆ ದರ್ಶನ್ ಎಡಗೈಗೆ ಪೆಟ್ಟಾಗಿತ್ತು. ಸದ್ಯ ಸರ್ಜರಿ ಆಗಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ಮತ್ತೆ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ.

More from Filmibeat

English summary
Actor Darshan once talks about own his favorite car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X