For Quick Alerts
  ALLOW NOTIFICATIONS  
  For Daily Alerts

  ಐಶ್ವರ್ಯಾ ರೈ ಜೊತೆಗಿನ ಪುತ್ರನ ಸಂಬಂಧದ ಬಗ್ಗೆ ಸಲ್ಮಾನ್ ಖಾನ್ ತಂದೆ ಹೇಳಿದ್ದೇನು?

  |

  ಬಾಲಿವುಡ್ ಬ್ಯಾಡ್ ಬಾಯ್ ಅಂತಾನೇ ಖ್ಯಾತಿಗಳಿಸಿರುವ ನಟ ಸಲ್ಮಾನ್ ಖಾನ್ ಪ್ರೀತಿ, ಪ್ರೇಮ, ಡೇಟಿಂಗ್ ವಿಚಾರವಾಗಿ ಅನೇಕ ಬಾರಿ ಸುದ್ದಿಯಾಗಿದ್ದರು. ಬಾಲಿವುಡ್ ನ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಸಲ್ಲು ಮದುವೆ ಯಾವಾಗ ಎಂದು ಅಭಿಮಾನಿಗಳು ಹೋದಲ್ಲಿ ಬಂದಲ್ಲಿ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ಆದರೆ ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದ ಸಲ್ಲು ಇಂದು ತನ್ನ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

  ಆದರೆ 90 ದಶಕದಲ್ಲಿ ಸಲ್ಮಾನ್ ಖಾನ್ ಹೆಸರು ಬಾಲಿವುಡ್ ನ ಖ್ಯಾತ ನಟಿಯರ ಜೊತೆ ಕೇಳಿಬಂದಿತ್ತು. ಐಶ್ವರ್ಯಾ ರೈ ಯಿಂದ ಕತ್ರಿನಾ ಕೈಫ್ ವರೆಗೂ ಸಲ್ಮಾನ್ ಹೆಸರು ಥಳುಕು ಹಾಕಿಕೊಂಡಿತ್ತು. 90 ದಶಕದ ಸಮಯದಲ್ಲಿ ನಟಿ ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್ ಪ್ರೀತಿ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇನ್ನೇನು ಇಬ್ಬರು ಮದುವೆ ಆಗಲಿದ್ದಾರೆ ಅಂತಾನೇ ಎಲ್ಲರೂ ಅಂದುಕೊಂಡಿದ್ದರು.

  ಸಲ್ಮಾನ್ ಕುಡಿದು ಹಿಂಸೆ ನೀಡುತ್ತಿದ್ದ ಕೆಟ್ಟ ಸಮಯದಲ್ಲೂ ಜೊತೆಗಿದ್ದೆ: ಬ್ರೇಕಪ್ ಬಗ್ಗೆ ಐಶ್ವರ್ಯಾ ಮಾತುಸಲ್ಮಾನ್ ಕುಡಿದು ಹಿಂಸೆ ನೀಡುತ್ತಿದ್ದ ಕೆಟ್ಟ ಸಮಯದಲ್ಲೂ ಜೊತೆಗಿದ್ದೆ: ಬ್ರೇಕಪ್ ಬಗ್ಗೆ ಐಶ್ವರ್ಯಾ ಮಾತು

  ಆದರೆ ಅಷ್ಟರಲ್ಲೇ ಇಬ್ಬರು ಬೇರೆ ಬೇರೆಯಾಗುವ ಮೂಲಕ ದೊಡ್ಡ ಶಾಕ್ ನೀಡಿದರು. ಐಶ್ವರ್ಯಾ ಮಾತ್ರವಲ್ಲ ಸೋಮಿ, ಸಂಗೀತಾ ಬಿಜ್ಲಾನಿ ಹೀಗೆ ಸಾಕಷ್ಟು ನಟಿಯರ ಜೊತೆ ಸಲ್ಮಾನ್ ಖಾನ್ ಡೇಟಿಂಗ್ ವಿಚಾರ ಚರ್ಚೆಯ ಕೇಂದ್ರ ಬಿಂದು ವಾಗಿತ್ತು. ಮಗನ ಪ್ರೀತಿ-ಪ್ರೇಮ ವಿಚಾರದ ಬಗ್ಗೆ ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಮಾತನಾಡಿದ್ದರು. ನಟಿಯರ ಜೊತೆಗಿನ ಸಂಬಂಧದ ಬಗ್ಗೆ ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಹೇಳಿದ್ದೇನು? ಮುಂದೆ ಓದಿ...

  ಸದಾ ಮಗನ ರಕ್ಷಣೆಗೆ ನಿಂತಿರುತ್ತಿದ್ದ ಸಲೀಮ್ ಖಾನ್

  ಸದಾ ಮಗನ ರಕ್ಷಣೆಗೆ ನಿಂತಿರುತ್ತಿದ್ದ ಸಲೀಮ್ ಖಾನ್

  ಬಾಲಿವುಡ್ ನ ಬೆಸ್ಟ್ ಅಪ್ಪ-ಮಕ್ಕಳಲ್ಲಿ ಸಲ್ಮಾನ್ ಖಾನ್ ಮತ್ತು ಸಲೀಮ್ ಖಾನ್ ಕೂಡ ಒಬ್ಬರು. ಮಗನನ್ನು ಸದಾ ಬೆಂಬಲಿಸುವ ಸಲೀಮ್ ಖಾನ್ ಪ್ರೀತಿ ವಿಚಾರದಲ್ಲೂ ಸಲ್ಮಾನ್ ಬೆನ್ನಿಗೆ ನಿಂತಿದ್ದರು. ಐಶ್ವರ್ಯಾ ರೈ, ಸಲ್ಮಾನ್ ಖಾನ್ ಮೇಲೆ ಗಂಭೀರ ಆರೋಪ ಮಾಡಿದಾಗಲೂ ಮಗನ ರಕ್ಷಣೆಗೆ ನಿಂತಿದ್ದರು ತಂದೆ ಸಲೀಮ್ ಖಾನ್.

  ಸಂಗೀತಾ-ಸೋಮಿ ಸಂಬಂಧ ಬಗ್ಗೆ ಸಲೀಮ್ ಪ್ರತಿಕ್ರಿಯೆ

  ಸಂಗೀತಾ-ಸೋಮಿ ಸಂಬಂಧ ಬಗ್ಗೆ ಸಲೀಮ್ ಪ್ರತಿಕ್ರಿಯೆ

  ಸಲ್ಮಾನ್ ಖಾನ್ ಹೆಸರು ನಟಿ ಸಂಗೀತಾ ಬಿಜ್ಲಾನಿ ಮತ್ತು ಸೋಮಿ ಅಲಿ ಜೊತೆಗೂ ಕೇಳಿಬಂದಿತ್ತು. ಈ ಬಗ್ಗೆ ಮಾತನಾಡಿದ್ದ ಸಲೀಮ್ ಖಾನ್, 'ಅವರ ಪ್ರೀತಿ ಸ್ಟ್ರಾಂಗ್ ಆಗಿಲ್ಲದಿದ್ದರೆ ಅವರು ಬೇರೆ ಬೇರೆ ಆಗುತ್ತಾರೆ. ಸಂಗೀತಾ ಬಿಜಲಾನಿ ಜೊತೆ ಸಲ್ಮಾನ್ ಸಂಬಂಧ ಏಳು ವರ್ಷಗಳ ಕಾಲ ಮುಂದುವರೆದರೂ ಸಹ ಕೊನೆಗೆ ಮುರಿದುಬಿತ್ತು. ಸೋಮಿ ಅಲಿ ಜೊತೆಗಿನ ಸಂಬಂಧ ಕೂಡ ಉಳಿಯಲಿಲ್ಲ' ಎಂದಿದ್ದರು.

  ಐಶ್ವರ್ಯಾ-ಸಲ್ಮಾನ್ ಬಗ್ಗೆ ಸಲೀಮ್ ಹೇಳಿದ್ದೇನು?

  ಐಶ್ವರ್ಯಾ-ಸಲ್ಮಾನ್ ಬಗ್ಗೆ ಸಲೀಮ್ ಹೇಳಿದ್ದೇನು?

  ಸಲ್ಮಾನ್ ಖಾನ್ ಪ್ರೀತಿ ವಿಚಾರದಲ್ಲಿ ದೊಡ್ಡ ಮಟ್ಟಕ್ಕೆ ಚರ್ಚೆಗೆ ಕಾರಣವಾಗಿದ್ದು ಐಶ್ವರ್ಯಾ ಜೊತೆಗಿನ ಸಂಬಂಧ. ಇಬ್ಬರ ಸಂಬಂಧದ ಬಗ್ಗೆ ಮಾತನಾಡಿದ್ದ ಸಲೀಮ್ ಖಾನ್, 'ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ, ಅವರು ಈಗ ದೊಡ್ಡವರಾಗಿದ್ದಾರೆ. ಅವರ ಸಂಬಂಧಕ್ಕೆ ತುಂಬಾ ಸ್ಟ್ರಾಂಗ್ ಆಗಿದೆ. ಜಗತ್ತಿನಲ್ಲಿ ಯಾವುದೂ ಅವರನ್ನು ತಡೆಯಲು ಸಾಧ್ಯವಿಲ್ಲ. ನೀವು ಅವರನ್ನು ಸಾಯಿಸಿದರೆ ಅವರು ಅಮರ ಪ್ರೇಮಿಗಳಾಗುತ್ತಾರೆ' ಎಂದು ಹೇಳಿದ್ದರು.

  ಐಶ್ವರ್ಯಾ ನನ್ನ ಮಗನ ಜೊತೆ ಬಲವಂತದಿಂದ ಇರಲಿಲ್ಲ

  ಐಶ್ವರ್ಯಾ ನನ್ನ ಮಗನ ಜೊತೆ ಬಲವಂತದಿಂದ ಇರಲಿಲ್ಲ

  ಇಬ್ಬರ ಬ್ರೇಕಪ್ ಬಳಿಕ ಮಾತನಾಡಿದ್ದ ಸಲೀಮ್ ಅಲಿ, 'ಐಶ್ವರ್ಯಾ ತನ್ನ ಮಗನ ಜೊತೆ ಬಲವಂತದಿಂದ ಇಲ್ಲ ಮತ್ತು ನನ್ನ ಮಗ ಐಶ್ವರ್ಯಾ ತನ್ನೊಂದಿಗೆ ಇರಬೇಕೆಂದು ಒತ್ತಾಯಿಸಿಲ್ಲ ಎಂದು ಹೇಳಿದ್ದರು. ಕೇವಲ ಊಹಾಪೋಹಗಳ ಆಧಾರದ ಮೇಲೆ ಸಲ್ಮಾನ್ ಖಾನ್ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು' ಎಂದಿದ್ದರು.

  ಪುತ್ರನನ್ನು ಟಾರ್ಗೆಟ್ ಮಾಡಲಾಗಿದೆ

  ಪುತ್ರನನ್ನು ಟಾರ್ಗೆಟ್ ಮಾಡಲಾಗಿದೆ

  2000ನೇ ಇಸವಿ ಸಮಯದಲ್ಲಿ ಸಲ್ಮಾನ್ ಖಾನ್, ಐಶ್ವರ್ಯ ರೈ ಅವರನ್ನು ದೈಹಿಕವಾಗಿ ಹಿಂಸೆ ನೀಡಿದ್ದರು ಎನ್ನುವ ಸುದ್ದಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಸಲ್ಮಾನ್ ನೀಡಿದ ಹಿಂಸೆಯ ಬಗ್ಗೆ ಸ್ವತಃ ಐಶ್ವರ್ಯಾ ಅವರೇ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. ಈ ಸಮಯದಲ್ಲೂ ಸಲ್ಮಾನ್ ಖಾನ್ ತಂದೆ ಮಗನ ರಕ್ಷಣೆಗೆ ನಿಂತಿದ್ದರು. 'ಸಲ್ಮಾನ್ ಖಾನ್ ನನ್ನು ಟಾರ್ಗೆಟ್ ಮಾಡಲಾಗಿದೆ. ಆತನನ್ನು ನಿಂದಿಸುವುದು ಫ್ಯಾಷನ್ ಆಗಿದೆ' ಎಂದು ಬೇಸರ ವ್ಯಕ್ತಪಡಿಸಿದ್ದರು.

  English summary
  When Salim Khan opens up about his son Salman khan's love relationship.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X