ನಟಿ ಸೋನಲ್ ಮಂಥೆರೋ ಸೆಲೆಬ್ರೆಟಿ ಕ್ರಶ್ ಯಾರು ಗೊತ್ತಾ?

By ಫಿಲ್ಮಿಬೀಟ್ ಡೆಸ್ಕ್

ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಂಥೆರೋ ಮದುವೆ ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿದೆ. ಕೆಂಗೇರಿ ಬಳಿಯ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಜೋಡಿ ಬಹಳ ಅದ್ಧೂರಿಯಾಗಿ ಹಸೆಮಣೆ ಏರಿತ್ತು. ಚಿತ್ರರಂಗದ ಗಣ್ಯರು, ಆಪ್ತರು ನವ ವಧು-ವರರನ್ನು ಆಶೀರ್ವದಿಸಿದ್ದರು.

ಖ್ಯಾತ ಖಳನಟ ಸುಧೀರ್ ಪುತ್ರ ತರುಣ್ ಮೊದಲಿಗೆ ನಟನಾಗಿ ಚಿತ್ರರಂಗಕ್ಕೆ ಬಂದಿದ್ದರು. ಬಳಿಕ ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರ್ತಿಸಿಕೊಂಡರು. 'ಚೌಕ', 'ರಾಬರ್ಟ್' ಹಾಗೂ 'ಕಾಟೇರ' ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟು ಪ್ರೇಕ್ಷಕರ ಮನಗೆದ್ದರು. ಹ್ಯಾಟ್ರಿಕ್ ನಿರ್ದೇಶಕ ಎನ್ನುವ ಪಟ್ಟ ಅಲಂಕರಿಸಿದರು. ಸದ್ಯ ಸಿಂಧೂರ ಲಕ್ಷ್ಮಣ ಜೀವನಾಧರಿತ ಚಿತ್ರಕ್ಕೆ ಸಿದ್ಧತೆ ನಡೆಸಿದ್ದಾರೆ.

When Sonal Monteiro opens up about her first crush celebrity crush and breakup

ಮಂಗಳೂರು ಮೂಲದ ನಟಿ ಸೋನಲ್ ಮಂಥೆರೊ ಮೊದಲಿಗೆ ತುಳು ಸಿನಿಮಾಗಳಲ್ಲಿ ನಟಿಸಿದ್ದರು. ಆ ನಂತರ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 'ಅಭಿಸಾರಿಕೆ' ಸೋನಲ್ ಕನ್ನಡದಲ್ಲಿ ನಟಿಸಿದ ಮೊದಲ ಸಿನಿಮಾ. ಇನ್ನು 'ಪಂಚತಂತ್ರ', 'ಡೆಮೊಪೀಸ್', 'ಬನಾರಸ್', 'ಗರಡಿ' ಹಾಗೂ 'ಶುಗರ್ ಫ್ಯಾಕ್ಟರಿ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಆಕೆ ಬಣ್ಣ ಹಚ್ಚಿದ್ದಾರೆ.

ತರುಣ್ ಸುಧೀರ್ ನಿರ್ದೇಶನದ 'ರಾಬರ್ಟ್' ಚಿತ್ರದಲ್ಲಿ ವಿನೋದ್ ಪ್ರಭಾಕರ್ ಜೋಡಿ ತನು ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದೇ ಚಿತ್ರದ ಚಿತ್ರೀಕರಣದ ವೇಳೆ ತರುಣ್- ಸೋನಲ್ ಪರಿಚಯವಾಗಿತ್ತು. ಆ ಸಮಯದಲ್ಲಿ ನಟ ದರ್ಶನ್ ಬಹಳ ರೇಗಿಸುತ್ತಿದ್ದರಂತೆ. ಹುಡುಗಿ ಚೆನ್ನಾಗಿದ್ದಾಳೆ ನೋಡು ಮದುವೆ ಮಾಡಿಸೋಣ ಎನ್ನುತ್ತಿದ್ದರಂತೆ. ಆದರೆ ಆಗ ತಮಗೆ ಅಂತಹ ಯಾವುದೇ ಆಲೋಚನೆ ಇರಲಿಲ್ಲ ಎಂದು ತರುಣ್ ಹೇಳಿದ್ದಾರೆ.

'ಕಾಟೇರ' ಸಿನಿಮಾ ಸಮಯದಲ್ಲಿ ನಾನು, ಸೋನಲ್ ಹೆಚ್ಚು ಮಾತನಾಡಲು ಆರಂಭಿಸಿದೆವು. ಆಗ ಒಬ್ಬರನ್ನು ಒಬ್ಬರು ಹೆಚ್ಚು ಅರ್ಥ ಮಾಡಿಕೊಂಡೆವು. ಬಳಿಕ ಮದುವೆ ಆಗಲು ನಿಶ್ಚಯಿಸಿದೆವು ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಇಬ್ಬರು ಹೇಳಿದ್ದರು. ಇನ್ನು ಈ ಹಿಂದೆ ಕೆಲ ಸಂದರ್ಶನಗಳಲ್ಲಿ ನಟಿ ಸೋನಲ್ ತಮ್ಮ ಕ್ರಶ್ ಹಾಗೂ ಬ್ರೇಕ್‌ಅಪ್ ಬಗ್ಗೆ ಮಾತನಾಡಿದ್ದರು. ಆ ವೀಡಿಯೋ ಈಗ ವೈರಲ್ ಆಗುತ್ತಿದೆ.

When Sonal Monteiro opens up about her first crush celebrity crush and breakup

ಶಾಲಾ ದಿನಗಳಲ್ಲೇ ತಮಗೆ ಮೊದಲ ಕ್ರಶ್ ಆಗಿದ್ದರ ಬಗ್ಗೆ ಸೋನಲ್ ಹೇಳಿದ್ದರು. "ನಮ್ಮ ಸ್ಕೂಲ್‌ ಅಲ್ಲಿ ಫ್ರೆಂಡ್ಸ್‌ ಗ್ರೂಪ್‌ ಇತ್ತು. ಅದರಲ್ಲಿ ಒಬ್ಬರು ನನ್ನ ಫ್ರಸ್ಟ್‌ ಕ್ರಶ್‌. ಈಗ ಅವರು ಬೇರೆಯವರ ಜೊತೆ ಡೇಟ್‌ ಮಾಡುತ್ತಿದ್ದಾರೆ. ಹಾಗಾಗಿ ಅವರ ಹೆಸರು ಬೇಡ" ಎಂದು ಸೋನಲ್ ಫಸ್ಟ್ ಕ್ರಶ್ ಬಗ್ಗೆ ಹೇಳಿದ್ದರು.

ಇನ್ನು ಸೆಲೆಬ್ರೆಟಿ ಕ್ರಶ್‌ ಅಂತ ಬಹಳ ಜನ ಇದ್ದಾರೆ. ಸುದೀಪ್ ಸರ್ ನನ್ನ ಸೆಲೆಬ್ರೆಟಿ ಕ್ರಶ್ ಎಂದು ಮತ್ತೊಂದು ಸಂದರ್ಶನದಲ್ಲಿ ಸೋನಲ್ ಹೇಳಿದ್ದರು. ಇನ್ನು ಹಿಂದೆ ನನಗೆ ಲವ್ ಬ್ರೇಕ್‌ಅಪ್ ಸಹ ಆಗಿತ್ತು. ಸದ್ಯಕ್ಕೆ ನಾನು ಸಿಂಗಲ್ ಆಗಿಯೇ ಹ್ಯಾಪಿಯಾಗಿ ಇದ್ದೀನಿ ಎಂದು 'ಬನಾರಸ್' ಸಿನಿಮಾ ಪ್ರಚಾರದ ವೇಳೆ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಮದುವೆ ಬಳಿಕ ಕೊಂಚ ಬ್ರೇಕ್ ಪಡೆಯಲು ಸೋನಲ್ ಮಂಥೆರೋ ನಿರ್ಧರಿಸಿದ್ದಾರೆ. ಬಳಿಕ ಮತ್ತೆ ಸಿನಿಮಾಗಳಲ್ಲಿ ಮುಂದುವರೆಯಲು ತೀರ್ಮಾನಿಸಿದ್ದಾರೆ. ಅಕ್ಕ-ಭಾವ ಸೋನಲ್ ತಂದೆ-ತಾಯಿ ಸ್ಥಾನದಲ್ಲಿ ನಿಂತು ಮದುವೆ ನಡೆಸಿಕೊಟ್ಟರು. ಚಿಕ್ಕಂದಿನಲ್ಲೇ ಸೋನಲ್ ತಂದೆಯನ್ನು ಕಳೆದುಕೊಂಡಿದ್ದಾರೆ. ಅಂದಹಾಗೆ ಸೋನಲ್ ಭಾವ ಕಿರಿತೆರೆ ನಟ ಅಮಿತ್ ರಾವ್. ಅವರೇ ತಂದೆ ಸ್ಥಾನದಲ್ಲಿ ನಿಂತು ಕನ್ಯಾದಾನ ಮಾಡಿದ್ದರು.

More from Filmibeat

English summary
Sonal Monteiro once talked about her celebrity crush
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X