For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ಮಂದಿ ಈ ನಟಿಯರನ್ನ 'ಹೀಗೆ' ಬಳಸಿಕೊಳ್ಳುವುದು ಸರಿಯೇ?

  |

  ''ನಮ್ಮ ಸಿನಿಮಾಗೆ ಆ ಹೀರೋಯಿನ್ ಕರೆಸ್ತಿದ್ದೀವಿ.. ಒನ್ ಲೈನ್ ಕಥೆ ಹೇಳಿದ್ದೀವಿ.. ಮಾತುಕತೆ ಮಾಡ್ತಿದ್ದೀವಿ... ಅವರಿಗೂ ಇಷ್ಟ ಆಗಿದೆ.. ಡೇಟ್ ಹೊಂದಾಣಿಕೆ ಆಗಬೇಕು.. ಇನ್ನು ಕೆಲವೇ ದಿನಗಳಲ್ಲಿ ಫೈನಲ್ ಆಗುತ್ತೆ...'' ಈ ರೀತಿ ಮಾತನ್ನು ಪದೇ ಪದೇ ಕನ್ನಡದ ನಿರ್ದೇಶಕರು, ನಿರ್ಮಾಪಕರು ಹೇಳುತ್ತಲೇ ಇರುತ್ತಾರೆ.

  ಬೇರೆ ಭಾಷೆಯ ಸ್ಟಾರ್ ನಟಿಯರು ಕನ್ನಡಕ್ಕೆ ಬರುತ್ತಾರೆ ಎನ್ನುವುದನ್ನು ಕೇಳಿ ಕೇಳಿ ಸಾಕಾಗಿದೆ. ಅದರಲ್ಲಿಯೂ ನಟಿ ಕಾಜಲ್ ಅಗರ್ವಾಲ್, ಅನುಷ್ಕಾ ಶೆಟ್ಟಿ, ಸಾಯಿ ಪಲ್ಲವಿ, ಕೀರ್ತಿ ಸುರೇಶ್, ಸಮಂತಾ, ಶ್ರುತಿ ಹಾಸನ್ ಹೆಸರುಗಳಂತೂ ಪದೇ ಪದೇ ಕೇಳಿ ಬರುತ್ತಿವೆ.

  'ಕಬ್ಜ' ಚಿತ್ರಕ್ಕೆ ಕಾಜಲ್ ಅಗರ್ವಾಲ್ ಬರಲ್ಲ.! ಇದು ಪಕ್ಕಾ.!'ಕಬ್ಜ' ಚಿತ್ರಕ್ಕೆ ಕಾಜಲ್ ಅಗರ್ವಾಲ್ ಬರಲ್ಲ.! ಇದು ಪಕ್ಕಾ.!

  ಈ ನಟಿಯರೆಲ್ಲ ಕನ್ನಡಕ್ಕೆ ನಿಜವಾಗಿಯೂ ಬರುತ್ತಾರಾ? ಎನ್ನುವುದಕ್ಕಿಂತ ಇಲ್ಲಿನ ನಿರ್ದೇಶಕ, ನಿರ್ಮಾಪಕರು ಅವರನ್ನು ಸಂಪರ್ಕ ಮಾಡುತ್ತಾರೆಯೇ ಎನ್ನುವ ಪ್ರಶ್ನೆ ಮೂಡುತ್ತದೆ. ಯಾಕೆ ಈ ರೀತಿ ದೊಡ್ಡ ನಟಿಯರು ಹೆಸರು ಗಾಂಧಿನಗರದಲ್ಲಿ ಸುದ್ದಿ ಆಗುತ್ತಲೇ ಇರುತ್ತದೆ ಎನ್ನುವುದರ ಹಿಂದೆ ಕೆಲಸ ಕಾರಣಗಳು ಇವೆ.

  ಇದು ಒಂದು ರೀತಿಯ ಪ್ರಚಾರ ತಂತ್ರ

  ಇದು ಒಂದು ರೀತಿಯ ಪ್ರಚಾರ ತಂತ್ರ

  ಕೆಲವು ನಿರ್ದೇಶಕ, ನಿರ್ಮಾಪಕರು ಇದನ್ನು ಒಂದು ರೀತಿಯಲ್ಲಿ ಪ್ರಚಾರದ ತಂತ್ರವಾಗಿ ಬಳಸಿಕೊಳ್ಳುವುದು ಹೆಚ್ಚಾಗುತ್ತಿದೆ. ಬೇರೆ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ ನಟಿಯರು ನಮ್ಮ ಸಿನಿಮಾ ಬರುತ್ತಾರೆ ಎಂದು ಹೇಳುವ ಮೂಲಕ ತಮ್ಮ ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದಾರೆ. ತಮಿಳು, ತೆಲುಗಿನ ದೊಡ್ಡ ನಟಿ ಕನ್ನಡಕ್ಕೆ ಕಾಲಿಡುತ್ತಾರೆ ಎಂದಾಗ ಅದು ದೊಡ್ಡ ಸುದ್ದಿ ಆಗುತ್ತದೆ. ಆ ರೀತಿ ಆದ್ರೆ, ಸಿನಿಮಾ ಹೆಚ್ಚು ಜನರಿಗೆ ತಲುಪುತ್ತದೆ ಎನ್ನುವುದು ಕೆಲವರ ಪ್ಲಾನ್.

  ಕೆಲವರು ಅವರನ್ನು ಸಂಪರ್ಕವೇ ಮಾಡಲ್ಲ

  ಕೆಲವರು ಅವರನ್ನು ಸಂಪರ್ಕವೇ ಮಾಡಲ್ಲ

  ಕೆಲವು ನಿರ್ದೇಶಕರಂತು ಪರಭಾಷೆಯ ನಟಿಯರನ್ನು ಸಂಪರ್ಕವೇ ಮಾಡಿರುವುದಿಲ್ಲ. ತಾವೇ ಅವರ ಹೆಸರನ್ನು ಸುಮ್ಮನೆ ತಮ್ಮ ಸಿನಿಮಾಗೆ ಬಳಸಿಕೊಳ್ಳುತ್ತಾರೆ. ಮೂರ್ನಾಲ್ಕು ವರ್ಷಗಳ ಹಿಂದೆ ಕಾಜಲ್ ಅಗರ್ವಾಲ್ ಕನ್ನಡದ ಒಂದು ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಇತ್ತು. ಆಗ ಅವರ ಮ್ಯಾನೇಜರ್ ಗೆ ಕರೆ ಮಾಡಿದ್ರೆ, ''ಕನ್ನಡದ ಯಾವ ನಿರ್ದೇಶಕರು ನಮ್ಮನ್ನು ಸಂಪರ್ಕ ಮಾಡಿಲ್ಲ, ಸುಮ್ಮನೆ ಸುದ್ದಿ ಮಾಡುತ್ತಿದ್ದಾರೆ ಅಷ್ಟೇ'' ಎನ್ನುವ ಉತ್ತರ ಬಂದಿತ್ತು.

  'ರಾಬರ್ಟ್' ನಾಯಕಿಯ ಪಟ್ಟಕ್ಕೆ ಕೇಳಿ ಬಂದ ಟಾಪ್ ನಟಿಯರ ಹೆಸರು.!'ರಾಬರ್ಟ್' ನಾಯಕಿಯ ಪಟ್ಟಕ್ಕೆ ಕೇಳಿ ಬಂದ ಟಾಪ್ ನಟಿಯರ ಹೆಸರು.!

  ಸಂಭಾವನೆ ಹಾಗೂ ಡೇಟ್ ಸಮಸ್ಯೆಯೂ ಇರುತ್ತದೆ

  ಸಂಭಾವನೆ ಹಾಗೂ ಡೇಟ್ ಸಮಸ್ಯೆಯೂ ಇರುತ್ತದೆ

  ಒಬ್ಬ ನಾಯಕಿ ಒಂದು ಸಿನಿಮಾಗೆ ಬರುತ್ತಾರೆ ಎಂದು ಸುದ್ದಿಯಾದ ಮೇಲೆ, ಅದು ಸಾಧ್ಯವಾಗದೆ ಇದ್ದರೆ, ಅದಕ್ಕೆ ನಿರ್ಮಾಪಕ, ನಿರ್ದೇಶಕರೇ ಹೊಣೆ ಎಂದೂ ಹೇಳಲೂ ಆಗುವುದಿಲ್ಲ. ಕೆಲವು ಬಾರಿ ನಟಿಯರನ್ನು ಕರೆತರಲು ಕೆಲವು ನಿರ್ದೇಶಕರು ನಿಜವಾಗಿಯೂ ಪ್ರಯತ್ನ ಮಾಡುತ್ತಾರೆ. ಆದರೆ, ಸಂಭಾವನೆ ಹಾಗೂ ಡೇಟ್ಸ್ ಹೊಂದಾಣಿಕೆ ವಿಚಾರಕ್ಕೆ ಸಿನಿಮಾ ಕೈ ತಪ್ಪುತ್ತವೆ.

  ಕಥೆ ಇಷ್ಟ ಆದ್ರೆ ನಟಿಸುತ್ತೇನೆ ಅಂತ್ತಾರೆ

  ಕಥೆ ಇಷ್ಟ ಆದ್ರೆ ನಟಿಸುತ್ತೇನೆ ಅಂತ್ತಾರೆ

  ಬೇರೆ ಭಾಷೆಯ ಯಾರೇ ನಟಿಯರು ಕರ್ನಾಟಕಕ್ಕೆ ಬಂದರೂ, ಅವರಿಗೆ ಮೊದಲು ಕೇಳುವ ಪ್ರಶ್ನೆ ''ನೀವು ಕನ್ನಡದಲ್ಲಿ ಯಾವಾಗ ನಟಿಸುತ್ತೀರ ?'' ಎಂದು. ಅದಕ್ಕೆ ಆ ನಟಿಯರು ''ಒಳ್ಳೆಯ ಕಥೆ ಬಂದರೆ, ಖಂಡಿತ ನಟಿಸುತ್ತೇನೆ'' ಎಂದು ಹೇಳುತ್ತಾರೆ. ಹಾಗಿದ್ದರೆ, ಇಷ್ಟು ವರ್ಷಗಳಿಂದ ಇವರಿಗೆ ಒಳ್ಳೆಯ ಕಥೆಗಳು ಸಿಕ್ಕಿಲ್ಲವೆ. ಅಥವಾ ಇದು ನಟಿಯರು ಪ್ರಶ್ನೆಯಿಂದ ಪಾರಾಗಲು ಹೇಳುವ ಕಾಮನ್ ಡೈಲಾಗಾ.

  ಪ್ರಿಯಾ ಮಾತ್ರವಲ್ಲ.. ಮಲೆಯಾಳಂ ಹುಡುಗಿಯರು ಲಕ್ಕಿನೋ ಲಕ್ಕಿ!ಪ್ರಿಯಾ ಮಾತ್ರವಲ್ಲ.. ಮಲೆಯಾಳಂ ಹುಡುಗಿಯರು ಲಕ್ಕಿನೋ ಲಕ್ಕಿ!

  ಬೇಡಿಕೆ ಕಡಿಮೆ ಆದ ಮೇಲೆ ಕನ್ನಡ ನೆನಪಾಗುತ್ತೆ

  ಬೇಡಿಕೆ ಕಡಿಮೆ ಆದ ಮೇಲೆ ಕನ್ನಡ ನೆನಪಾಗುತ್ತೆ

  ಪರಭಾಷೆಯ ನಟಿಯರು ಪೀಕ್ ನಲ್ಲಿ ಇದ್ದಾಗ ಕನ್ನಡ ಸಿನಿಮಾ ಮಾಡುವುದಿಲ್ಲ. ಆದರೆ, ಅಲ್ಲಿ ಮಾರ್ಕೆಟ್ ಕಡಿಮೆ ಆದ ಮೇಲೆ ಕನ್ನಡ ನೆನಪಿಗೆ ಬರುತ್ತದೆ. ತಮ್ಮ ಇಂಡಸ್ಟ್ರಿಯಲ್ಲಿ ಅವಕಾಶಗಳು ಸಿಗುತ್ತಿಲ್ಲ ಎಂದಾಗ ಕೆಲವು ನಟಿಯರು ಕನ್ನಡ ಸಿನಿಮಾ ಮಾಡುತ್ತಾರೆ. ಬೇರೆ ಭಾಷೆಯ ನಟಿಯರು ಕನ್ನಡಕ್ಕೆ ಬರದೆ ಇದ್ದರೂ, ಅವರ ಹೆಸರು ಪ್ರಚಾರ ಆಗುತ್ತಿದೆ.

  English summary
  When this tollywood and kollywood actress will debut in sandalwood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X