ಸನ್ನಿ ಲಿಯೋನ್ ಹೆಸರು ಕೇಳುತ್ತಿದ್ದಂತೆ ಯಶ್ ಫುಲ್ ಸೈಲೆಂಟ್; ವೀಡಿಯೋ ವೈರಲ್

By ಫಿಲ್ಮಿಬೀಟ್ ಡೆಸ್ಕ್

ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಚಿತ್ರವನ್ನು ಕಟ್ಟಿಕೊಡುತ್ತಿದ್ದಾರೆ. ಬೆಂಗಳೂರಿನಲ್ಲಿ ಚಿತ್ರದ 3ನೇ ಶೆಡ್ಯೂಲ್ ಮುಕ್ತಾಯವಾಗಿದೆ. ಇತ್ತೀಚೆಗೆ ಪತ್ನಿ ರಾಧಿಕಾ ಪಂಡಿತ್ ಜೊತೆ ಸೇರಿ ನಟ ಶಿವರಾಜ್‌ಕುಮಾರ್ ಮನೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು.

'ಟಾಕ್ಸಿಕ್' ಚಿತ್ರದಲ್ಲಿ ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೆಲಸ ಮಾಡುತ್ತಿದ್ದರು. ಚಿತ್ರದ ಭಾಗವಾಗಿರುವ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ, ನಟಿ ನಟಾಲಿ ಬರ್ನ್, ನಟ ಕೈಲ್‌ ಪಾಲ್ ಹೇಳಿಕೆಗಳು ವೈರಲ್ ಆಗುತ್ತಿದೆ. ಸಿನಿಮಾ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಹಳ ದೊಡ್ಡದಾಗಿ ಪ್ರೇಕ್ಷಕರ ಮುಂದೆ ಬರುತ್ತಿರುವುದು ಪಕ್ಕಾ ಆಗ್ತಿದೆ.

When Toxic Actor Yash Yash was shocked upon hearing Sunny Leone s name

ಇತ್ತೀಚೆಗೆ ಯಶ್ ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. 'KGF' ಚಾಪ್ಟರ್-2 ಸಿನಿಮಾ ಪ್ರಚಾರಕ್ಕಾಗಿ ಒಂದಷ್ಟು ಸಂದರ್ಶನಗಳಲ್ಲಿ ಭಾಗಿ ಆಗಿದ್ದರು. ಬಳಿಕ ಒಂದೆರಡು ಇಂಗ್ಲೀಷ್ ಸಂದರ್ಶನ ಮಾತ್ರ ನೀಡಿದರು. ನಾವು ಮಾತನಾಡಬಾರದು, ನಮ್ಮ ಕೆಲಸ ಮಾತನಾಡಬೇಕು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಇತ್ತೀಚೆಗೆ ಕೆಲ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರೂ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾಧ್ಯಮಗಳ ಎದುರು ಮಾತನಾಡಲು ಯಶ್ ನಿರಾಕರಿಸಿದ್ದರು.

ಶಿವರಾಜ್‌ಕುಮಾರ್ ಮನೆಗೆ ಭೇಟಿ ನೀಡಿದ್ದ ಸಮಯದಲ್ಲಿ ಕೂಡ ಮಾಧ್ಯಮದವರು ಮಾತನಾಡಿಸಲು ಪ್ರಯತ್ನಿಸಿದ್ದರು. ಆದರೆ ಯಶ್ ನಯವಾಗಿಯೇ ಈಗ ಏನು ಮಾತನಾಡುವುದು ಬೇಡ ಎಂದು ಕಾರ್ ಏರಿ ಹೊರಟುಬಿಟ್ಟರು. ಇದೆಲ್ಲದರ ನಡುವೆ ಯಶ್ ಹಳೇ ಸಂದರ್ಶನವೊಂದರ ಸಣ್ಣ ವೀಡಿಯೋ ತುಣುಕು ವೈರಲ್ ಆಗುತ್ತಿದೆ. ಅದರಲ್ಲಿ ನಿರೂಪಕಿ ಪ್ರಶ್ನೆಗಳನ್ನು ಕೇಳುತ್ತಾ ಮಾಜಿ ನೀಲಿತಾರೆ ಸನ್ನಿ ಲಿಯೋನ್ ಹೆಸರು ಹೇಳುತ್ತಿದ್ದಂತೆ ಯಶ್ ಒಂದು ಕ್ಷಣ ಶಾಕ್ ಆಗಿರುವುದನ್ನು ನೋಡಬಹುದು.

ಡಂಬ್ ಚರರ್ಟ್ಸ್ ರೀತಿ ರಾಪಿಡ್ ಫೈರ್ ರೌಂಡ್ ಅದು. ನಿರೂಪಕಿ ಒಂದೊಂದು ಪದ ಹೇಳುತ್ತಿದ್ದಂತೆ ಅದನ್ನು ತಮ್ಮ ಭಾವಭಿನಯದಲ್ಲಿ ಯಶ್ ಮಾಡಿ ತೋರಿಸಬೇಕಿತ್ತು. 'ಮೊಗ್ಗಿನ ಮನಸ್ಸು' ಎನ್ನುತ್ತಿದ್ದಂತೆ ನಾನು ನಟಿಸಿದ್ದ ಸಿನಿಮಾ ಎನ್ನುವಂತೆ ತೋರಿಸಿದ್ದಾರೆ. ರಾಗಿ ಮುದ್ದೆ ಬಸ್ಸಾರು ಎನ್ನುತ್ತಿದ್ದಂತೆ ಕೈಯಲ್ಲಿ ಮುದ್ದೆ ಎಂದು ತೋರಿಸಿದ್ದಾರೆ.

ಬಳಿಕ ಬಾಲಿವುಡ್ ನಟಿ ಸನ್ನಿ ಲಿಯೋನ್ ಹೆಸರನ್ನು ನಿರೂಪಕಿ ಹೇಳುತ್ತಿದ್ದಂತೆ ಯಶ್ ಒಂದು ಕ್ಷಣ ಅವಕ್ಕಾಗಿದ್ದಾರೆ. ಅದನ್ನು ಹೇಗೆ ಅಭಿನಯಿಸಿ ತೋರಿಸುವುದು, ಇದೆಲ್ಲಾ ಬೇಕಾ?ಎನ್ನುವಂತೆ ಪ್ರತಿಕ್ರಿಯಿಸಿದ್ದಾರೆ. ನಿರೂಪಕಿ ನಕ್ಕು ಸುಮ್ಮನಾಗಿದ್ದಾರೆ. ಸಿನಿಮಾ ಎಂದಾಗ ದೇವರು ಎನ್ನುವಂತೆ ಆಕಾಶ ನೋಡಿದ್ದಾರೆ. ಮದುವೆ ಎಂದರೆ ಸೂಪರ್ ಸಿಂಬಲ್ ತೋರಿಸಿದ್ದಾರೆ. ಅಣ್ಣಾವ್ರು ಎಂದಾಕ್ಷಣ ಡಾ. ರಾಜ್‌ಕುಮಾರ್ ಸಿಗ್ನೇಚರ್ ಸ್ಟೈಲ್ ತೋರಿಸಿದ್ದಾರೆ.

ಕೆಜಿಎಫ್ ಎಂದಾಕ್ಷಣ ತಮ್ಮ ಗಡ್ಡ ತೋರಿಸಿ ರಾಕಿಭಾಯ್ ನೆನಪಿಸಿದ್ದಾರೆ. ಒಟ್ಟಾರೆ ಈ ಹಳೇ ವೀಡಿಯೋವನ್ನು ಅಭಿಮಾನಿಯೊಬ್ಬರು ಟ್ವಿಟರ್‌ನಲ್ಲಿ ಈಗ ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ. ಈ ಹಿಂದೆ ಕನ್ನಡದ 'ಚಾಂಪಿಯನ್' ಸಿನಿಮಾ ಪ್ರಚಾರಕ್ಕೆ ಸನ್ನಿ ಬೆಂಗಳೂರಿಗೆ ಬಂದಿದ್ದರು. ಆಗ 'KGF'-2 ಸಿನಿಮಾ ನೋಡಿದ್ರಾ? ಎನ್ನುವ ಪ್ರಶ್ನೆ ಆಕೆಗೆ ಎದುರಾಗಿತ್ತು. ಇನ್ನು ಇಲ್ಲ, ನೋಡ್ತೀನಿ ಎಂದು ಆಕೆ ಉತ್ತರಿಸಿದ್ದರು.

ಅಂದಹಾಗೆ ಬಾಲಿವುಡ್ ಅಂಗಳದಲ್ಲಿ ನಟಿ ಸನ್ನಿ ಲಿಯೋನ್ ಕ್ರೇಜ್ ಕಮ್ಮಿ ಆಗಿದೆ. ಮೊದಲಿನ ರೀತಿ ಅವಕಾಶಗಳು ಸಿಗುತ್ತಿಲ್ಲ. ದಕ್ಷಿಣದ ಕೆಲ ಸಿನಿಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ. ಇನ್ನುಳಿದಂತೆ ಪತಿ, ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಕನ್ನಡದ ಕೆಲ ಸಿನಿಮಾ ಗೀತೆಗಳಿಗೆ ಸನ್ನಿ ಲಿಯೋನ್ ಹೆಜ್ಜೆ ಹಾಕಿ ರಂಗೇರಿಸಿದ್ದಾರೆ.

More from Filmibeat

English summary
Toxic actor Yash reacted with shock when Sunny Leone's name was mentioned in interview
Read more about: yash sunny leone
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X