ವೇದಿಕೆಯಲ್ಲೇ ನಟ ಅಕ್ಷಯ್ ಕುಮಾರ್ ಪ್ಯಾಂಟ್ ಬಟನ್ ಬಿಚ್ಚಿದ್ದ ಪತ್ನಿ ಟ್ವಿಂಕಲ್; ದೂರು ದಾಖಲಾಗಿ ಅರೆಸ್ಟ್!
ಕೆಲವೊಮ್ಮೆ ಏನೋ ಮಾಡಲು ಹೋಗಿ ಮತ್ತೇನೋ ಎಡವಟ್ಟು ಆಗುತ್ತದೆ. ಸಿನಿಮಾ ತಾರೆಯರು ಕೂಡ ಇದಕ್ಕೆ ಹೊರತಲ್ಲ. ಸಾರ್ವಜನಿಕವಾಗಿ ನಟ-ನಟಿಯರು ಮಾಡುವ ಎಡವಟ್ಟು ದೊಡ್ಡದಾಗಿ ಸುದ್ದಿ ಆಗುತ್ತದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ತೊಟ್ಟಿದ್ದ ಜೀನ್ಸ್ ಪ್ಯಾಂಟ್ ಬಟನ್ ಅನ್ನು ಸಾರ್ವಜನಿಕವಾಗಿ ಪತ್ನಿ ಟ್ವಿಂಕಲ್ ಖನ್ನಾ ತೆಗೆದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಇದು 15 ವರ್ಷಗಳ ಹಿಂದಿನ ಘಟನೆ. ಲ್ಯಾಕ್ಮೆ ಫ್ಯಾಷನ್ ಶೋ ಈವೆಂಟ್ ನಡೆದಿತ್ತು. ಅಂದು ಜೀನ್ಸ್ ಪ್ಯಾಂಟ್ ತೊಟ್ಟು ಅಕ್ಷಯ್ ಕುಮಾರ್ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದರು. ಅಷ್ಟೇ ಆಗಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ರ್ಯಾಂಪ್ ಮುಂಭಾಗದಲ್ಲಿ ಪ್ರೇಕ್ಷಕರ ರೀತಿ ಪತ್ನಿ ಟ್ವಿಂಕಲ್ ಖನ್ನಾ ಕೂಡ ಹಾಜರಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಅಕ್ಷಯ್ ಕುಮಾರ್ ತಾವು ತೊಟ್ಟಿದ್ದ ಜೀನ್ಸ್ ಪ್ಯಾಂಟ್ ಬಟನ್ ತೆಗೆಯಲು ಪತ್ನಿಗೆ ಹೇಳಿದ್ದರು.

ದಿಢೀರನೆ ಪತಿ ಅಕ್ಷಯ್ ಹೀಗೆ ಬಂದು ತಮ್ಮ ಮುಂದೆ ನಿಂತಿದ್ದು ಟ್ವಿಂಕಲ್ ಖನ್ನಾಗೆ ಅಚ್ಚರಿ ಉಂಟು ಮಾಡಿತ್ತು. ಪ್ಯಾಂಟ್ ಬಟನ್ ತೆಗೆಯಲು ಹೇಳಿದ್ದು ಕೇಳಿ ಮುಜುಗರಕ್ಕೀಡಾಗಿದ್ದರು. ಬಳಿಕ ಅಕ್ಷಯ್ ಇದು ಸ್ಕ್ರಿಪ್ಟ್ ಭಾಗ ಎಂದು ಹೇಳಿದ ಮೇಲೆ ಆಕೆ ಪ್ಯಾಂಟ್ ಬಟನ್ ತೆಗೆದಿದ್ದರು. ಇದನ್ನು ನೋಡಿ ಅಲ್ಲಿದ್ದವರು ಚಿಯರ್ ಅಪ್ ಮಾಡಿದ್ದರು. ಅಲ್ಲಿಗೆ ಎಲ್ಲಾ ಮುಗಿಯಿತು ಎಂದು ಅಂದುಕೊಂಡಿದ್ದರು. ಆದರೆ ಇದ್ದಕ್ಕಿದಂತೆ ಈ ವೀಡಿಯೋ ವೈರಲ್ ಆಗಿತ್ತು.
ಅವತ್ತಿನ ಕಾಲಕ್ಕೆ ಈ ವೀಡಿಯೋ ಭಾರೀ ಸದ್ದು ಮಾಡಿದ್ದು ಸುಳ್ಳಲ್ಲ. ಇದೇ ಕಾರಣಕ್ಕೆ ಟ್ವಿಂಕಲ್ ಖನ್ನಾ ವಿರುದ್ಧ ದೂರು ದಾಖಲಾಗಿ ಪ್ರಕರಣ ಆಕೆಯನ್ನು ಬಂಧಿಸುವ ಮಟ್ಟಕ್ಕೆ ಹೋಗಿತ್ತು. ತಮಾಷೆಯಾಗಿ ಏನೋ ಮಾಡಲು ಹೋಗಿ ಅಕ್ಕಿ- ಟ್ವಿಂಕಲ್ ಸಂಕಷ್ಟಕ್ಕೀಡಾಗುವಂತಾಗಿತ್ತು. ಈ ತಮಾಷೆಯ ಘಟನೆ ಬಗ್ಗೆ ಟ್ವಿಂಕಲ್ ತನ್ನ 'ಮಿಸೆಸ್ ಫನ್ನಿಬೋನ್ಸ್' ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಆ ಘಟನೆ ಬಗ್ಗೆ ಮಾರ್ಚ್ 30, 2009 ರಂದು ಸಾಮಾಜಿಕ ಕಾರ್ಯಕರ್ತರೊಬ್ಬರು ವಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಾಗಾಗಿ ದಂಪತಿ ಕಾನೂನು ಹೋರಾಟ ಎದುರಿಸುವಂತಾಗಿತ್ತು. ಇನ್ನು ಅಶ್ಲೀಲ ಕೃತ್ಯವನ್ನು ಸ್ಕ್ರಿಪ್ಟ್ ಮಾಡಿದ್ದಕ್ಕಾಗಿ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಕಾರ್ಯದರ್ಶಿ ಅಬಿಗೈಲ್ ರೋಸಾ ವಿರುದ್ಧವೂ ದೂರು ದಾಖಲಾಗಿತ್ತು. ಟ್ವಿಂಕಲ್ ಖನ್ನಾ ಮತ್ತು ಅಕ್ಷಯ್ ಕುಮಾರ್ ಕೂಡ ಸಾರ್ವಜನಿಕ ಸಮಾರಂಭದಲ್ಲಿ ಹೀಗೆ ನಡೆದುಕೊಂಡು ಸಮಸ್ಯೆಗೆ ಸಿಲುಕಿದ್ದರು. ಐಪಿಸಿ ಸೆಕ್ಷನ್ 294 ರ ಅಡಿಯಲ್ಲಿ ಅವರ ಮೇಲೆ ಆರೋಪ ಹೊರಿಸಲಾಯಿತು.
ಟ್ವಿಂಕಲ್ ಖನ್ನಾ ಜಾಮೀನು ಪಡೆದು ಸಂಕಷ್ಟದಿಂದ ಪಾರಾಗಿದ್ದರು. ಬಳಿಕ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಅಕ್ಷಯ್- ಟ್ವಿಂಕಲ್ ದಂಪತಿ ಕ್ಷಮೆ ಕೇಳಿದ್ದರು. ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ತಮ್ಮ ಬಂಧನ ವಿಚಾರದ ಬಗ್ಗೆ ಆಕೆ ಮಾತನಾಡಿದ್ದರು. 500 ರೂ. ನೀಡಿ ಬೇಲ್ ಪಡೆದಿದ್ದಾಗಿಯೂ ಹೇಳಿದ್ದರು. ವಕೀಲರು ಆ ಸಮಸ್ಯೆಯಿಂದ ತಮ್ಮನ್ನು ಪಾರು ಮಾಡಿದ್ದರು ಎಂದು ನೆನಪಿಸಿಕೊಂಡಿದ್ದರು.
ಅಕ್ಷಯ್ ಕುಮಾರ್ ನಟನೆಯ ಸಿನಿಮಾಗಳು ಇತ್ತೀಚೆಗೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿಲ್ಲ. ಐದಾರು ವರ್ಷಗಳ ಹಿಂದೆ ಬಾಲಿವುಡ್ ಖಿಲಾಡಿ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಾಗಿತ್ತು. ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಯಾಕೋ ಇತ್ತೀಚೆಗೆ ಅವರ ಸಿನಿಮಾಗಳು ಹೀನಾಯವಾಗಿ ಸೋಲುತ್ತಿವೆ. ಸದ್ಯ 'ಕಣ್ಣಪ್ಪ', 'ಜಾಲಿ LLB-3', 'ವೆಲ್‌ಕಮ್ ಟು ದಿ ಜಂಗಲ್', 'ಶಂಕರ', 'ಹೇರಾ ಪೇರಿ-3' ಹೀಗೆ ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











