ನಮಿತಾ ಜೊತೆ ಶರತ್ ಬಾಬು ಮದುವೆ.. ಸಹಜೀವನ..? ಪತಿ ವೀರು ಚೌಧರಿ ಅಂದು ಹೇಳಿದ್ದೇನು?

ಬಹುಭಾಷಾ ನಟ ಶರತ್ ಕುಮಾರ್ ಬಹುಅಂಗಾಗ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ. ತಮ್ಮ ಸಹಜ ನಟನೆಯಿಂದ ಅವರು ಮನೆ ಮಾತಾಗಿದ್ದರು. ತಮಿಳುನಾಡಿದಲ್ಲಿ ಹುಟ್ಟಿ ಬೆಳೆದ ಶರತ್ ಬಾಬು ಟಾಲಿವುಡ್‌ನಲ್ಲಿ ಸೆಟ್ಲ್ ಆಗಿದ್ದರು. ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದರು. ಶರತ್ ಬಾಬು ಹಾಗೂ ನಟಿ ನಮಿತಾ ಮದುವೆ ಆಗಿದ್ದಾರೆ ಅನ್ನೋ ಸುದ್ದಿ ಈ ಹಿಂದೆ ಭಾರೀ ಸದ್ದು ಮಾಡಿತ್ತು.

ನಟ ಶರತ್ ಬಾಬು 3 ಮದುವೆ ಆಗಿದ್ದರು. ತಮಗಿಂತ ವಯಸ್ಸಿನಲ್ಲಿ ದೊಡ್ಡವರಾದ ಹಾಸ್ಯ ನಟಿ ರಮಾಪ್ರಭ ಅವರನ್ನು ಮದುವೆ ಆಗಿದ್ದರು. ನಂತರ ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರು ಡಿವೋರ್ಸ್ ಪಡೆದು ದೂರಾಗಿದ್ದರು. ಆ ನಂತರ ಸ್ನೇಹ ನಂಬಿಯಾರ್ ಎಂಬುವರನ್ನು ಶರತ್ ಬಾಬು ಮದುವೆ ಆಗಿ ಆಕೆಯಿಂದಲೂ ದೂರಾಗಿದ್ದರು. ನಂತರ ಮತ್ತೊಬ್ಬರ ಜೊತೆ ವಿವಾಹವಾಗಿದ್ದರು. ಇದೆಲ್ಲದರ ನಡುವೆ ನಮಿತಾ ಜೊತೆ ಶರತ್ ಬಾಬು ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ, ಮದುವೆ ಕೂಡ ಆಗಿದ್ದಾರೆ ಎನ್ನುವ ವದಂತಿ ಹರಡಿತ್ತು.

When Veerendra Chowdary reacted to Wife Namithas rumoured Marriage with Sarath Babu

ಚಿತ್ರರಂಗದಲ್ಲಿ ಗಾಸಿಪ್‌ಗಳಿಗೇನು ಬರವಿಲ್ಲ. ಆದರೆ ಕೆಲ ಗಾಸಿಪ್‌ಗಳಿಗೆ ತಳಬುಡ ಇರೋದಿಲ್ಲ. ಎಲ್ಲಿಂದ ಮತ್ತೆಲ್ಲಿಗೋ ಲಿಂಕ್ ಮಾಡಿ ಸುದ್ದಿಗಳನ್ನು ತೇಲಿ ಬಿಡುತ್ತಾರೆ. ಇದೇ ರೀತಿ 7 ವರ್ಷಗಳ ಹಿಂದೆ ಶರತ್ ಬಾಬು- ನಮಿತಾ ಮದುವೆ ಆಗಿದ್ದಾರೆ ಅನ್ನುವ ಮಾತುಗಳು ಜೋರಾಗಿ ಕೇಳಿಬಂದಿತ್ತು. ಈ ಬಗ್ಗೆ ಶರತ್ ಬಾಬು ಸಂದರ್ಶನವೊಂದರಲ್ಲಿ ಮಾತನಾಡಿ ಬೇಸರ ವ್ಯಕ್ತಪಡಿಸಿದ್ದರು.

ಶರತ್ ಬಾಬು ಮಾತನಾಡುತ್ತಾ "ಈ ಸುದ್ದಿ ನಿಜ ಅಲ್ಲ. ನಾನು ನಮಿತಾನ ಭೇಟಿ ಮಾಡಿ 8 ವರ್ಷ ಆಗಿದೆ. ಹಾಗಿರುವಾಗ ನಮ್ಮಿಬ್ಬರ ನಡುವೆ ಏನೋ ಇದೆ ಎಂದು ಹೇಳುವುದು ಸರಿಯಲ್ಲ. ಈ ವದಂತಿ ನಂಬಿ ಕೆಲವರು ಫೋನ್ ಮಾಡಿ ಈ ವಯಸ್ಸಿನಲ್ಲಿ ರೊಮ್ಯಾಂಟಿಕ್ ಲೈಫ್ ಎಂಜಾಯ್ ಮಾಡ್ತಿದ್ದೀಯಾ ಅಂದ್ರು. ಯಾರು ಏನೇ ಅಂದುಕೊಂಡರೂ, ಏನೇ ಬರೆದರೂ ನನಗೆ ಅಭ್ಯಂತರ ಇಲ್ಲ. ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ" ಎಂದಿದ್ದರು.

When Veerendra Chowdary reacted to Wife Namithas rumoured Marriage with Sarath Babu

ನನಗೆ ಮತ್ತೆ ಮದುವೆ ಉದ್ದೇಶ ಇಲ್ಲ

"ನನಗೆ ಮತ್ತೆ ಮದುವೆ ಆಗುವ ಉದ್ದೇಶ ಇಲ್ಲ. ಒಂದು ವೇಳೆ ಅಂಥದ್ದು ಏನಾದರೂ ಇದ್ದರೆ ನಾನೇ ಹೇಳ್ತೀನಿ, ನನಗೆ ಸಂಬಂಧ ಇಲ್ಲದೇ ಇದ್ದರೂ ನನ್ನ ಹೆಸರು ಬಳಸಿ ಇಂತಹ ವದಂತಿ ಹರಡಲಾಗುತ್ತಿದೆ. ಇದರಿಂದ ನನ್ನ ಕ್ಯಾರೆಕ್ಟರ್‌ಗೆ ಪೆಟ್ಟು ಬೀಳುತ್ತಿದೆ" ಎಂದು ಶರತ್ ಬಾಬು ಬೇಸರ ವ್ಯಕ್ತಪಡಿಸಿದ್ದರು.

ನಾವು ತಲೆ ಕೆಡಿಸಿಕೊಳ್ಳಲ್ಲ

ಶರತ್‌ ಬಾಬು ಹಾಗೂ ನಿಮಿತಾ ಮದುವೆ ಆಗಿದ್ದಾರೆ ಎನ್ನುವ ಗಾಸಿಪ್ ಬಹಳ ದೊಡ್ಡದಾಗಿಯೇ ಸದ್ದು ಮಾಡಿತ್ತು. 2017ರಲ್ಲಿ ನಮಿತಾ ಉದ್ಯಮಿ ವೀರೇಂದ್ರ ಚೌಧರಿ ಎಂಬುವವರನ್ನು ಮದುವೆ ಆಗಿದ್ದರು. ಅವರ ಮದುವೆ ಸಮಯದಲ್ಲೂ ಶರತ್ ಬಾಬು ಜೊತೆಗಿನ ಮದುವೆ ಸುದ್ದಿ ಭಾರೀ ಸದ್ದು ಮಾಡಿತ್ತು. ಈ ಬಗ್ಗೆ ಸಂದರ್ಶನವೊಂದರಲ್ಲಿ ವೀರೇಂದ್ರ ಚೌಧರಿ ಮಾತನಾಡಿದ್ದರು. "ಆಕೆಯ ಬಗ್ಗೆ ಸಾಕಷ್ಟು ಗಾಸಿಪ್ ಬಂದಿದೆ. ತ್ಯ ಏನು ಎನ್ನುವುದು ನಮಗೆ ಗೊತ್ತು. ಅದನ್ನು ಕೇಳಿ ಸುಮ್ಮನಾಗುತ್ತೇವೆ. ಇಂತಹ ಗಾಸಿಪ್ ಕೇಳಿ ನಕ್ಕು ಸುಮ್ಮನಾಗುತ್ತೇವೆ"

When Veerendra Chowdary reacted to Wife Namithas rumoured Marriage with Sarath Babu

ಮದುವೆ ಸಮಯದಲ್ಲೇ ಈ ವದಂತಿ

"ಶರತ್ ಬಾಬು ಹಾಗೂ ನಮಿತಾ ಮದುವೆ ಆಗಿದ್ದಾರೆ ಅನ್ನೋದು ಬಹಳ ಕೆಟ್ಟ ಗಾಸಿಪ್. ಸರಿಯಾಗಿ ನಮ್ಮ ಮದುವೆ ಸಮಯದಲ್ಲೇ ಈಗೊಂದು ಗಾಳಿಸುದ್ದಿ ಹರಿದಾಡಿತ್ತು. ಅಸಲಿಗೆ ಆ ಗಾಸಿಪ್ ಹೇಗೆ ಹುಟ್ಟಿಕೊಳ್ತು ಅನ್ನೋದು ಕೂಡ ಗೊತ್ತಿಲ್ಲ. ಶರತ್ ಬಾಬು ಯಾರು ಅನ್ನೋದು ನಮಗೆ ಗೊತ್ತಿಲ್ಲ. ಅದನ್ನು ನಾವು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಆದರೆ ಅದು ಜೋರಾಗಿ ಸದ್ದು ಮಾಡಿತ್ತು. ನನಗೆ ಗೊತ್ತಿರುವಂತೆ ಶರತ್ ಬಾಬು ಅವರು ಕೂಡ ಈ ವಿಚಾರದಲ್ಲಿ ಬೇಸರಗೊಂಡಿರುತ್ತಾರೆ. ಅವರು ಹಿರಿಯ ನಟ. ಅವರ ಬಗ್ಗೆ ಇಂತಹ ಸುದ್ದಿ ಹರಡುವುದು ಸರಿಯಲ್ಲ ಅಂದಿದ್ದರು"

"ಗಾಸಿಪ್ ಅನ್ನೋದು ಮೆಚೂರ್ಡ್ ಪರ್ಸನ್‌ ಮೇಲೆ ಪರಿಣಾಮ ಬೀರಲ್ಲ. ಅವರು ಅದನ್ನೆಲ್ಲಾ ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಆದರೆ ಸಮಸ್ಯೆ ಆಗುತ್ತದೆ. ಕೊಂಚಮಟ್ಟಿಗೆ ಡಿಸ್ಟರ್ಬ್ ಮಾಡುತ್ತದೆ. ಮಾತನಾಡದೇ ಇರುವ ವಿಷಯಗಳು ಗಾಳಿಸುದ್ದಿಯಾಗಿ ಹುಟ್ಟಿಕೊಳ್ಳುತ್ತಿದೆ. ಅದು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ವೈರಲ್ ಆಗುತ್ತಿದೆ. ಇದರಿಂದ ಸಹಜವಾಗಿಯೇ ಬೇಸರವಾಗುತ್ತದೆ" ಎಂದು ವೀರೇಂದ್ರ ಚೌಧರಿ ವಿವರಿಸಿದ್ದರು.

More from Filmibeat

English summary
When Veerendra Chowdary reacted to Wife Namitha's rumoured Marriage with Sarath Babu. veteran actor died due to multiple organ failure at a private hospital in Hyderabad. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X